“ಡಯೆಟ್‌’ ದುಡಿಮೆ!


Team Udayavani, Oct 3, 2017, 1:11 PM IST

jo6.jpg

ನಿಲುವುಗನ್ನಡಿ ಮುಂದೆ ನಿಂತು ತಮ್ಮ ದೇಹ ದರ್ಶನ ಮಾಡಿಕೊಳ್ಳುತ್ತಾ, ನಾನು ಎಷ್ಟೊಂದು ದಪ್ಪಗಿದ್ದೇನೆ. ಅಥವಾ ಎಷ್ಟೊಂದು ತೆಳ್ಳಗಿದ್ದೇನೆ ಇದಕ್ಕೆ ಏನಾದರೂ ಮಾಡಲೇಬೇಕು ಎಂದು ಯೋಚಿಸುವ ಹಲವು ಯುವಕರು ಸ್ನೇಹಿತರಿಂದ ಹಿಡಿದು ತಮ್ಮಿಷ್ಟದ ಸಿನಿ ನಟರ ಫಿಟ್ನೆಸ್‌ ಮಂತ್ರವನ್ನು ಜಪಿಸಲು ಮುಂದಾಗುತ್ತಾರೆ. ಆದರೆ, ಅವರ ದೇಹಕ್ಕನುಗುಣವಾಗಿ ಆಹಾರ, ವ್ಯಾಯಾಮ, ಪರಿಹಾರವನ್ನು ನೀಡುವ ವೈದ್ಯವೃತ್ತಿಯೇ ಒಂದಿದೆ. ಅವರನ್ನು ಡಯೆಟಿಷಿಯನ್‌ ಎನ್ನುತ್ತಾರೆ. ನೀವೂ ಡಯೆಟಿಷಿಯನ್‌ ಆಗಬೇಕಾದರೆ…

“ಬಜ್ಜಿ, ಬೋಂಡಾ ತಿನ್ನಲ್ವಾ? ಏನು ಡಯೆಟ್ಟಾ?’, “ಇನ್ಮೆàಲೆ ನೀನು ರಾತ್ರಿ ಎರಡೇ ಚಪಾತಿ ತಿನ್ನು’, ” ತುಂಬಾ ದಪ್ಪ ಕಾಣಿಸ್ತಿದೀಯ ಸ್ವಲ್ಪ ದೇಹ ಕರಗಿಸು’, “ನಿಮ್ಮ ಮಗನಿಗೆ ಸ್ವಲ್ಪ ಹಾಲು, ಹಣ್ಣು ಚೆನ್ನಾಗಿ ಕೊಡಿ ಎಷ್ಟೊಂದು ವೀಕಾಗಿ ಬಿಟ್ಟಿದಾನೆ’ ಎಂಬ ಮಾತುಗಳನ್ನು ನೀವೆಲ್ಲಾ ಆಗಾಗ್ಗೆ ಆಪ್ತ ವಲಯದಲ್ಲಿ ಕೇಳಿರಬಹುದು. ಸ್ನೇಹಿತರಂತೂ ಡುಮ್ಮಣ್ಣ ನಿಂದ ಹಿಡಿದು ದಡಿಯನವರೆಗೆ, ಶಿಳ್ಳೆಕ್ಯಾತನಿಂದ ಹಿಡಿದು ನರಪೇತಲು ನಾರಾಯಣನವರೆಗೆ ಎಲ್ಲರನ್ನೂ ಹಂಗಿಸಿ, ಚುಡಾಯಿಸಿ ಅಣಕವಾಡುತ್ತಾರೆ.

ಹೀಗಾಗಿ ಅಣಕಗಳಿಂದ ತಪ್ಪಿಸಿಕೊಳ್ಳಲಾದರೂ ಕಸರತ್ತುಗಳನ್ನು ಮಾಡಿ, ದೇಹ ದಂಡಿಸಿ ಫಿಟ್‌ ಆಗಲು ನಾವು ಪ್ರಯತ್ನಿಸುತ್ತೇವೆ. ದೇಹವನ್ನು, ಆರೋಗ್ಯವನ್ನು ಫಿಟ್‌ ಆಗಿರಿಸಿಕೊಳ್ಳಲು ಸಹಾಯ ಮಾಡುವ ವೈದ್ಯರನ್ನು ಡಯಟೀಶಿಯನ್‌ ಎನ್ನುತ್ತಾರೆ. ವಂಶವಾಹಿಯಾಗಿ ಬರುವ ದಪ್ಪ, ಸಣ್ಣ ದೇಹಗಾತ್ರದ ಅಸಮತೋಲನವನ್ನು ಸುಧಾರಿಸಿ, ಹಿತ ಮಿತ ಆಹಾರ, ವ್ಯಾಯಾಮ, ಯೋಗ ಇತ್ಯಾದಿ ಸಲಹೆ ನೀಡಿ ಕೆಲವೇ ತಿಂಗಳುಗಳಲ್ಲಿ ದೇಹವನ್ನು ಫಿಟ್‌ ಆಗುವಂತೆ ಮಾರ್ಗದರ್ಶನ ಮಾಡುವವರು ಇವರೇ…

ಸಾಮಾನ್ಯವಾಗಿ ಸೆಲಬ್ರಿಟಿಗಳು, ಸಿನಿಮಾ ಕ್ಷೇತ್ರದಲ್ಲಿರುವವರು, ಕ್ರೀಡಾಪಟುಗಳು ಖಾಸಗಿ ಡಯೇಟಿಶಿಯನ್ನರನ್ನು ನೇಮಕ ಮಾಡಿಕೊಂಡಿರುತ್ತಾರೆ. ಅಲ್ಲದೆ ಡಯೇಟಿಷಿಯನ್ನರು ಜಿಮ್‌ ಮತ್ತು ಆಸ್ಪತ್ರೆಗಳಲ್ಲಿಯೂ ಕೆಲಸ ನಿರ್ವಹಿಸುತ್ತಿರುತ್ತಾರೆ. ಇದನ್ನು ವೃತ್ತಿಯಾಗಿ ಆರಿಸಿಕೊಳ್ಳುವ ಇಚ್ಛೆ ನಿಮಗಿದ್ದರೆ, ಇಲ್ಲಿದೆ ಮಾಹಿತಿ.

ವಿದ್ಯಾಭ್ಯಾಸ ಹೀಗಿರಲಿ
ಡಯೆಟೀಶಿಯನ್‌ ಆಗಬಯಸುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಬಳಿಕ ಪಿಯುಸಿ ಸೈನ್ಸ್‌ನಲ್ಲಿ ಪಿ.ಸಿ.ಬಿ ವಿಷಯಗಳನ್ನು ಆಯ್ದುಕೊಳ್ಳಿ. ಡಿಗ್ರಿಯಲ್ಲಿಯೂ ಇವೇ ವಿಷಯಗಳಿರಲಿ. ಸ್ನಾತಕೋತ್ತರ ಪದವಿ ತರಗತಿಯಲ್ಲಿ ನ್ಯೂಟ್ರಿಶಿಯನ್‌ ಮತ್ತು ಡಯೆಟಿಕ್ಸ್ ವಿಷಯಗಳನ್ನು ಅಭ್ಯಸಿಸಿದರೆ ಡಯಟೀಶಿಯನ್‌ ಆಗಲು ಅರ್ಹತೆ ದೊರಕಿದಂತೆ. ಈಚೆಗೆ, ಪದವಿ ತರಗತಿಗಳಲ್ಲೂ ನ್ಯೂಟ್ರೀಶಿಯನ್‌, ಡಯೆಟಿಕ್ಸ್ ವಿಷಯಗಳ ಅಧ್ಯಯನದ ಅವಕಾಶ ಮಾಡಿಕೊಡಲಾಗಿದೆ. ಪದವಿಯಲ್ಲಿ ಮೈಕ್ರೋಬಯಾಲಜಿ, ಕೆಮಿಸ್ಟ್ರಿ, ಆಹಾರ ಸಂಬಂಧಿತ ವಿಷಯಗಳನ್ನು ಓದಿದವರೂ ಸ್ನಾತಕೋತ್ತರ ಪದವಿಯಲ್ಲಿ ಡಯೆಟಿಕ್ಸ್ ವಿಷಯದಲ್ಲಿ ಪದವಿ ಪಡೆದು ಡಯಟೀಶಿಯನ್‌ ಆಗಬಹುದು.

ಕೌಶಲ್ಯಗಳೂ ಇರಲಿ
– ಮಾನವನ ಜೈವಿಕ ಸಂತುಲನೆ ಬಗ್ಗೆ ಪರಿಪೂರ್ಣ ಜ್ಞಾನ
– ಆಹಾರ ಸಂಬಂಧಿತ ವಿವಿಧ ವಯೋಮಾನದವರಿಗೆ ಎಷ್ಟೆಷ್ಟು ಕ್ಯಾಲೊರಿ, ನ್ಯೂಟ್ರಿನ್‌, ಪೌಷ್ಠಿಕಾಂಶ ಪದಾರ್ಥಗಳ ಕುರಿತು ಅರಿವು.
– ದೇಹಗುಣಕ್ಕನುಸಾರವಾಗಿ ಆಹಾರ ಪದ್ಧತಿ ಸೂಚಿಸುವ ತಿಳಿವಳಿಕೆ.
– ಆಸ್ಪತ್ರೆಗಳು, ಹೋಟೆಲ್‌ಗ‌ಳಿಗಾಗಿ ಡಯೆಟ… ಪ್ಲಾನ್‌ ರೂಪಿಸುವುದು
– ಹೊಸ ಆಹಾರ ಪದ್ಧತಿ ಯೋಜನೆ ರೂಪಿಸುವ ಜ್ಞಾನ
– ಡಯೆಟಿಕ್‌, ನ್ಯೂಟ್ರಿಕ್‌ ವಿವಿಧ ತಾಂತ್ರಿಕ ಸಲಕರಣೆಗಳ ಬಳಕೆ ತಿಳಿದಿರಬೇಕು

ಅವಕಾಶಗಳು ಎಲ್ಲೆಲ್ಲಿ?
– ಕೃಷಿ, ಔಷಧ, ಸಾರ್ವಜನಿಕ ಆರೋಗ್ಯ ಸಂಶೋಧನಾ ಕೇಂದ್ರ
– ವಿಜ್ಞಾನ ವಿಶ್ವವಿದ್ಯಾನಿಲಯ
– ಆಸ್ಪತ್ರೆಗಳು
– ಸಶಸ್ತ್ರ ಪಡೆ
– ರೇಲ್ವೆ ಇಲಾಖೆ
– ಮಲ್ಟಿಸ್ಟಾರ್‌ ಹೋಟೆಲ್
– ಆಹಾರ ಉತ್ಪಾದನಾ ಕಂಪನಿಗಳು
– ಫ‌ುಡ್‌ ಇಂಡಸ್ಟ್ರಿಯಲ್ ಹೌಸ್‌
– ಹೆಲ್ತ್ ಅಂಡ್‌ ಫಿಟ್ನೆಸ್‌ ಕ್ಲಬ್‌
– ಹೆಲ್ತ್ ಕೇರ್‌ ಸೆಂಟರ್‌ ತೆರೆಯಬಹುದು

ಗಳಿಕೆ ಹೇಗೆ?
ಡಯೆಟಿಷಿಯನ್‌ಗಳು ಜಾಗತಿಕವಾಗಿ ಮಾನ್ಯತೆ ಪಡೆಯುತ್ತಿ¨ªಾರೆ. ಸಾಮಾನ್ಯವಾಗಿ ವೈದ್ಯವೃತ್ತಿಯಲ್ಲಿರುವವರೇ ಡಯೆಟ್‌ ಸಲಹೆಗಳನ್ನು ನೀಡುವುದುಂಟು. ಅದರೂ ಪ್ರತ್ಯೇಕ ತರಬೇತಿಯನ್ನು ಪಡೆದು ಪ್ರಾವೀಣ್ಯತೆ ಹೊಂದಿರುವ ವೈದ್ಯರು ವರ್ಷಕ್ಕೆ 3 ಲಕ್ಷ ರೂ. ಯಿಂದ 10 ಲಕ್ಷದವರೆಗೆ ಗಳಿಕೆ ಮಾಡುತ್ತಾರೆ. ಅವರ ಪ್ರಾವೀಣ್ಯತೆ, ಅವಕಾಶಗಳಿಗೆ ಅನುಗುಣವಾಗಿ ಗಳಿಕೆ ನಿರ್ಧರಿತವಾಗಿರುತ್ತದೆ.

ಕಾಲೇಜುಗಳು
– ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
– ದೆಹಲಿ ವಿಶ್ವವಿದ್ಯಾನಿಲಯ, ದೆಹಲಿ
– ಮುಂಬೈ ವಿಶ್ವವಿದ್ಯಾನಿಲಯ, ಫೋರ್ಟ್‌ ಕ್ಯಾಂಪಸ್‌
– ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್‌, ಹರಿಯಾಣ
– ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್‌ ಆಫ್ ಹೈಜೀನ್‌, ಪಶ್ಚಿಮ ಬಂಗಾಳ, ಪಬ್ಲಿಕ್‌ ಹೆಲ್ತ್ ಸೋಫಿಯಾ ಕಾಲೇಜು, ಮುಂಬೈ
– ಎಸ್‌ಎನ್‌ಡಿಟಿ ವಿಮೆನ್ಸ್‌ ಯೂನಿವರ್ಸಿಟಿ, ಮಹಾರಾಷ್ಟ್ರ

* ಎನ್‌. ಅನಂತನಾಗ್‌

ಟಾಪ್ ನ್ಯೂಸ್

1-modi

Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Bhavani Revanna

SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

IPL 2025: Vikram Rathour joined Rahul Dravid again in Rajastan Royals

IPL 2025: ಮತ್ತೆ ರಾಹುಲ್‌ ದ್ರಾವಿಡ್‌ ಜತೆ ಸೇರಿದ ವಿಕ್ರಮ್‌ ರಾಥೋರ್‌

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

1-frr

Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-modi

Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Bhavani Revanna

SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

Recipe: ಫಾಸ್ಟ್‌ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…

IPL 2025: Vikram Rathour joined Rahul Dravid again in Rajastan Royals

IPL 2025: ಮತ್ತೆ ರಾಹುಲ್‌ ದ್ರಾವಿಡ್‌ ಜತೆ ಸೇರಿದ ವಿಕ್ರಮ್‌ ರಾಥೋರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.