ಸೋಲಿಸಬೇಡ, ಗೆಲ್ಲಿಸೇ ಗೆಳತಿ…


Team Udayavani, Sep 26, 2017, 11:44 AM IST

26-ZZ-6.jpg

ಮುಂದೊಂದು ದಿನ ಸಂತೋಷ, ಸಮೃದ್ಧ, ಸಂತೃಪ್ತ ಮನುಷ್ಯನಾಗಿ ಬದಲಾಗಬಲ್ಲೆ ಎಂಬ ನಂಬಿಕೆ ನನ್ನಲ್ಲಿದೆ. ಗಳಿಸುವ ಜ್ಞಾನ, ಸಂಪತ್ತು, ಹೆಸರು ಎಲ್ಸವೂ ನಿನ್ನ ಪ್ರೀತಿ ಸಿಗದೆ ನೊಂದ ಹೃದಯಕ್ಕೆ ಸಿಗುವ ಉಡುಗೊರೆ ಎಂದು ಭಾವಿಸಿ ಬದುಕುವೆ…

ಪ್ರೀತಿಯ ಮಾಜಿ ಹೃದಯದೊಡತಿಗೆ…
ಇಂದಿಗೆ ಒಂದು ವರ್ಷವಾಯಿತು ನೀ ನನಗೆ ಆತ್ಮೀಯಳಾಗಿ. ನೀ ಮೊದಲೇ ಪರಿಚಯವಿದ್ದರೂ ಹೃದಯಕ್ಕೆ ಹತ್ತಿರವಾಗಿದ್ದು, ಕೆಲ ತಿಂಗಳ ಹಿಂದಷ್ಟೆ. ಮಿಂಚಿನ ವೇಗದಲ್ಲಿ ಬೆಳೆದ ನಮ್ಮಿಬ್ಬರ ಸಂಬಂಧ ಅಷ್ಟೇ ವೇಗದಲ್ಲಿ ಒಡೆದು ಚೂರಾಯಿತು.

ನಿನ್ನ ಜೊತೆಗೆ ಮೂಡಿದ ಸಲುಗೆ, ಪ್ರೀತಿಗೆ ಜಾಗ ಮಾಡಿಕೊಟ್ಟಿತ್ತು. ದಿನ ಕಳೆದಂತೆ ಜೀವನಕ್ಕೆ ಆಸರೆ ಎಂಬಂತೆ ನೀ ಕಂಡೆ. ಪ್ರಾಣಕ್ಕಿಂತ ಹೆಚ್ಚಾಗಿ ನಾನು ನಿನ್ನ ಪ್ರೀತಿಸಿದೆ, ಬದುಕು ಸಾಗಿದರೆ ನಿನ್ನೊಂದಿಗೆ ಎಂದು ದೃಢ ಸಂಕಲ್ಪ ಮಾಡಿದೆ. ನಿನಗಾಗಿ ಹುಚ್ಚು ಕನಸು ಕಟ್ಟಿ, ಬೆಟ್ಟದಷ್ಟು ಆಸೆ ಹೊತ್ತು ಸಾಗುತ್ತಿದ್ದೆ. ಪ್ರತಿದಿನ, ಪ್ರತಿಕ್ಷಣ ನಿನ್ನ ನೆನಪಲ್ಲೇ ಕಾಲ ಕಳೆಯುತ್ತಿದ್ದೆ. ಅದೆಷ್ಟೂ ಸಾರಿ ನಿನ್ನ ಬಳಿ ಪ್ರೀತಿಯ ವಿಷಯ ಹೇಳಿಕೊಂಡೆ, ಕಣ್ಣೀರಿಟ್ಟು ಬೇಡಿಕೊಂಡೆ. ನೀ ಮಾತ್ರ ಮರು ಮಾತಾಡಲಿಲ್ಲ, ನನ್ನ ಭಾವನೆಗೆ ಸ್ಪಂದಿಸಲಿಲ್ಲ. ಮುಂದೊಂದಿನ ನನ್ನ ಪ್ರೀತಿ ಒಪ್ಪಿ ಬಂದು ನನ್ನ ಸೇರುತ್ತೀಯಾ ಅಂತ ಕಾದೆ, ನಿನ್ನ ಬರುವಿಕೆಗಾಗಿ ಹಾತೊರೆದೆ. ಆದರೆ, ನೀನು ಬರಲೇ ಇಲ್ಲ, ಪ್ರೀತಿಯ ಬಗ್ಗೆ ಹೇಳಲೇ ಇಲ್ಲ.

ನಿನ್ನ ಪ್ರತಿಯೊಂದು ವಿಷಯದ ಬಗ್ಗೆ ವಿಚಾರಿಸುತ್ತಿದ್ದೆ, ಹಗಲಿರುಳು ನಿನ್ನ ನೆನೆದು ಖುಷಿ ಪಡುತ್ತಿದ್ದೆ. ನಿನಗೆ ಯಾವುದೇ ತೊಂದರೆ ಆಗಬಾರದು, ಸಂತೋಷದಿಂದ ಬಾಳಬೇಕು, ನನ್ನ ಪ್ರೀತಿಯನ್ನು ಒಪ್ಪಿಕೊಳ್ಳಬೇಕು ಎಂದು ಸದಾ ಆ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ನಿನಗಾಗಿ ಈ ಜನ್ಮವನ್ನೇ ಮೀಸಲಿಟ್ಟಿದ್ದೆ. ಆದರೆ, ನೀನು ನನ್ನ ಬಗ್ಗೆ ಕೊಂಚವೂ ದಯೆ ತೋರಲಿಲ್ಲ, ಅಲ್ಪವೂ ವಿಚಾರಿಸಲಿಲ್ಲ, ನನ್ನೆಲ್ಲಾ ಭಾವನೆಗಳಿಗೆ ಅಸಹಾಯಕತೆ ತೋರಿಸಿದೆ, ಭವಿಷ್ಯದ ಕನಸುಗಳಿಗೆ ಸಹಕಾರ ನೀಡಲಿಲ್ಲ. ಕರುಳು ಕಿತ್ತುಬಂದರೂ, ಕಣ್ಣೀರು ಧರೆಗಿಳಿದರೂ ನನ್ನ ಕಡೆ ಮುಖ ನೋಡಲಿಲ್ಲ.

ಈಗಲಾದರೂ ಹೇಳು ಗೆಳತಿ? ನನ್ನ ಪ್ರೀತಿಯನ್ನೇಕೆ ಒಪ್ಪಲಿಲ್ಲ? ನನ್ನ ಭಾವನೆಗಳಿಗೇಕೆ ಸ್ಪಂದಿಸಲಿಲ್ಲ? ನಿನ್ನನ್ನು ಸುಖವಾಗಿ ನೊಡಿಕೊಳ್ಳಲು ನನಗಾಗಲ್ವ? ನಿನ್ನ ಕನಸುಗಳಿಗೆ ಸ್ಪಂದಿಸಲು ನನ್ನಿಂದ ಸಾಧ್ಯವಿಲ್ಲವಾ? ಅದೇನೇ ಕಾರಣವಿರಲಿ, ನಿನ್ನ ಪಡೆಯಲಾಗದೆ ಹೃದಯ ಚೂರಾಗಿ ಹೋಯ್ತು. ನಿನಿಲ್ಲದೇ ಬದುಕೋದು ಕಷ್ಟವಾದರೂ ಭವಿಷ್ಯದ ಸಾಧನೆ ಕಣ್ಮುಂದೆ ಕಾಣುತ್ತಿದೆ. ನಾನಂದುಕೊಂಡಿರುವ ಕಾರ್ಯ ಸಾಧಿಸುವ ಅನಿವಾರ್ಯವಿದೆ, ಗುರಿ ತಲುಪಬೇಕಾದರೆ ಕಠಿಣ ಪರಿಶ್ರಮ ಪಡಬೇಕಾಗಿದೆ. ನಿನ್ನ ತಿರಸ್ಕಾರದ ಭಾವ ನನ್ನ°ನ್ನು ಚುಚ್ಚಿ ಕೊಲ್ಲುತ್ತಿದ್ದರೂ ಅನಿವಾರ್ಯವಾಗಿ ಮುನ್ನುಗ್ಗಬೇಕಾಗಿದೆ.

ನೀನೇ ಜಗತ್ತು, ನಿನ್ನಿಂದಾನೇ ನನ್ನ ಬದುಕು ಎಂದವನಿಗೆ, ಅರಗಿಸಿಕೊಳ್ಳಲಾಗದ ಘಟನೆ ನಡೆದು ಹೋಗಿದೆ. ನಿನ್ನ ಪಡೆಯಲು ಸೋತು ಹೋದ ನಾನು ಭವಿಷ್ಯದಲ್ಲಿ ಸೋಲಬಾರದು. ಮುಂದೊಂದು ದಿನ ಸಂತೋಷ, ಸಮೃದ್ಧ, ಸಂತೃಪ್ತ ಮನುಷ್ಯನಾಗಿ ಬದಲಾಗಬಲ್ಲೆ ಎಂಬ ನಂಬಿಕೆ ನನ್ನಲ್ಲಿದೆ. ಗಳಿಸುವ ಜ್ಞಾನ, ಸಂಪತ್ತು, ಹೆಸರು ಎಲ್ಲವೂ ನಿನ್ನ ಪ್ರೀತಿ ಸಿಗದೇ ನೊಂದ ಹೃದಯಕ್ಕೆ ಸಿಗುವ ಉಡುಗೊರೆ ಎಂದು ಭಾವಿಸಿ ಬದುಕುವೆ. ಕನಸಲ್ಲಿಯೂ, ಮನಸಲ್ಲಿಯೂ, ಮತ್ತೆ ಮರಳಿ ಬರಬೇಡ. ನನ್ನ ಬದುಕಿನಲ್ಲಿ ನಿನ್ನ ಸ್ಥಾನ ಸಾಧನೆಯಾಗಿ ಮಾರ್ಪಾಡಾಗಲಿ. ಜೀವನಕ್ಕೆ ಬೆಲೆ ಸಿಗುವಂತಾಗಲಿ. ನೀ ದೂರವಿದ್ದೇ, ನನ್ನನ್ನು ಗೆಲ್ಲಿಸು…

ವೀರೇಶ ದೊಡಮನಿ, ಬಾದಾಮಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.