“ಸಿ’ಗಳ ಮಧ್ಯೆ ಸಿಕ್ಕಿ ಬೀಳಬೇಡಿ! ಚಾಟ್ ಎಂಬ ಲಗಾಮಿಲ್ಲದ ಕುದುರೆ…
Team Udayavani, Sep 12, 2017, 7:35 AM IST
ನಮ್ಮ ಯುವಜನತೆ ಈಗ ಎರಡು ಬಗೆಯ ಚಾಟ್ಸ್‌ನ ಹಿಂದೆ ಬಿದ್ದಿದ್ದಾರೆ. ಮಾಯಾ ಕುದುರೆಯ ರೂಪದಲ್ಲಿರುವ ಅವು ನಮ್ಮ ಯುವ ಸಮೂಹವನ್ನು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿಸುವಷ್ಟು ಪ್ರಬಲವಾಗಿವೆ. ಈ ಸರಳ ಸತ್ಯವನ್ನು ಅರ್ಥ ಮಾಡಿಕೊಳ್ಳದ ಯುವಜನತೆ, ಆ ಲಗಾಮಿಲ್ಲದ ಕುದುರೆ ಏರಲು ನಾಮುಂದು ತಾಮುಂದು ಎಂದು ಕ್ಯೂ ನಿಂತಿದ್ದಾರೆ…
ಈಗೀಗ ಎಲ್ಲದರಲ್ಲೂ ಜೋಶ್ ಹುಡುಕಿಕೊಳ್ಳುವುದೇ ಯುವ ಸಮುದಾಯದ ಹವ್ಯಾಸವಾಗಿದೆ. ಯಾಕೆಂದರೆ, ಈ ವಯಸ್ಸಿನಲ್ಲಿ ಅವರಿಗೊಂದು ಚಿಲ್ ಅನ್ನಿಸುವ ಥ್ರಿಲ್ ಬೇಕಿದೆ. ಆ ಥ್ರಿಲ್ಲನ್ನು ಪ್ರತಿಯೊಂದರಲ್ಲೂ ಹುಡುಕುವ ಚಟ, ಹಠಕ್ಕೆ ಅವರುಬಿದ್ದು ಬಿಟ್ಟಿದ್ದಾರೆ. ಇಂದಿನ ಬಹುತೇಕ ಯುವಕರು ಬಹುಮಟ್ಟಿನ ತಮ್ಮ ಥ್ರಿಲ್ ಕಂಡುಕೊಳ್ಳುತ್ತಿರುವುದು ಒಂದೇ ಹೆಸರಿನ ಎರಡು ಅರ್ಥ ಸ್ಪುರಿಸುವ ಕ್ರಿಯೆಯಲ್ಲಿ! ಅವರ ಮನಸ್ಸುಗಳು ಅವೆರಡರ ಸುತ್ತಲೇ ಗಿರಕಿ ಹೊಡೆಯುವುದೇ ಹೆಚ್ಚು. ಅದೇ ಚಾಟ್ಸ್!
ಚಾಟ್ಸ್ ಎಂಬ ಪದ ಒಂದೇ ಆದರೂ, ಅಲ್ಲಿ ಎರಡು ಕ್ರಿಯೆಗಳಿವೆ. ಒಂದು ಬಾಯಲ್ಲಿ ನೀರೂರಿಸಿಕೊಂಡು ಮುಕ್ಕುವ ಪಿಜಾj, ಬರ್ಗರ್, ಸ್ಯಾಂಡ್‌ವಿಚ್‌ಗಳಂತವುಗಳಾದರೆ, ಇನ್ನೊಂದು ಹಗಲು ರಾತ್ರಿಗಳ ಭೇದವಿಲ್ಲದೆ ಆನ್‌ಲೈನ್‌ನಲ್ಲಿ ಮುಳುಗಿ ಎಲ್ಲೊ ದೂರದಲ್ಲಿ ಇರುವವರನ್ನು, ಇವರೆಲ್ಲಾ ನನ್ನ ಸುತ್ತಮುತ್ತಲೇ ಇದ್ದಾರೆ ಎಂದು ಭಾವಿಸಿ ಅವರೊಂದಿಗೆ ಮಾತಿಗಿಳಿಯುವುದು.
ಚಾಟ್ಸ್ ರೂಪ 1 (ಆನ್‌ಲೈನ್)
ಇದರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯೇ ಇಲ್ಲವೇನೊ!? ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರೂ ಈಗ ಆನ್‌ಲೈನ್ ಚಾಟ್‌ನ ಸದಸ್ಯ. ಆ ತುದಿಯಲ್ಲಿ ಮಾತಾಡುತ್ತಿರುವವರು ಪರಿಚಿತರೊ ಅಪರಿಚಿತರೋ, ಅವರು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನೂ ಯೋಚಿಸದೆ, ಮಾತಿಗೆ ಕೂತು ಬಿಡುತ್ತಾರೆ. ನಾಲ್ಕೇ ದಿನದಲ್ಲಿ ಮಾತುಕತೆಗೆ ಮರುಳಾಗಿ ತಮ್ಮ ಪರ್ಸನಲ್ ವಿಚಾರಗಳನ್ನೆಲ್ಲ ಹೇಳಿ ಬಿಡುತ್ತಾರೆ. ಅವರ ವಯಸ್ಸು ಅದಕ್ಕೆಲ್ಲ ಸಹಕರಿಸಿ ಕುಣಿಸುತ್ತದೆ. ನೆನಪಿಡಿ, ಮೊದಮೊದಲು ಅವಶ್ಯಕತೆಗೆ, ಟೈಂಪಾಸ್‌ಗೆ ಅಂತ ಆರಂಭವಾಗುವ ಈ ಚಾಟ್, ಆನಂತರದಲ್ಲಿ ಒಂದು ಹಾಬಿ ಆಗಿಬಿಡುತ್ತದೆ. ಕೊನೆಗೆ ಅದೊಂದು ಅಡಿಕ್ಷನ್ ಆಗಿಯೇ ನಿಂತುಬಿಡುತ್ತದೆ.
ಚಾಟಿಂಗ್ ಕೊಡುವ ತಾತ್ಕಾಲಿಕ ಥ್ರಿಲ್‌ಗಾಗಿಯೇ ಜನರು ಹೆಚ್ಚಾಗಿ ಅದಕ್ಕೆ ಬಲಿಯಾಗುವುದೆಂದು ಮೊದಲೇ ಹೇಳಿದೆ. ಇಲ್ಲಿ ತೀರಾ ಅವಸರದಲ್ಲಿ ಬಾಂಧವ್ಯಗಳು ಹುಟ್ಟಿಕೊಳ್ಳುತ್ತವೆ. ಪರಿಣಾಮ,ಐದು ದಿನಗಳ ಹಿಂದೆ ಅಪರಿಚಿತರಾದವರು ಕೂಡ ಎಷ್ಟೋ ವರ್ಷದ ಹಳೆಯ ಗೆಳೆಯರೇ ಎಂಬಂತಾಗಿಬಿಡುತ್ತಾರೆ. ಗಾಬರಿ ಉಂಟುಮಾಡುವ ವಿಚಾರವೇನು ಗೊತ್ತೇ? ಚಾಟಿಂಗ್ ನೆಪದಲ್ಲಿ, ಯುವತಿಯರನ್ನು ಟಾರ್ಗೆಟ್ ಮಾಡಿ, ಅವರ ಫೋಟೊಗಳನ್ನು ಪಡೆದುಕೊಂಡು ಅವುಗಳನ್ನು ಬಳಸಿಕೊಂಡೇ ಬ್ಲಾಕ್‌ವೆುàಲ್ ಮಾಡುವ, ಲೈಂಗಿಕ ಹಿಂಸೆಕೊಡುವ ಕ್ರಿಯೆಗಳೂ ನಡೆಯುತ್ತಿವೆ. ಅಷ್ಟೇ ಅಲ್ಲದೇ ಆ ಅಡಿಕ್ಷನ್ ನಿಂದ ನಿದ್ರಾಹಿನತೆ, ಒತ್ತಡ, ಖನ್ನತೆ, ಓದುವಿಕೆಯಲ್ಲಿ ಹಿಂದಿಳಿಯುವಿಕೆ, ಕೋಪ, ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಅತೀವವಾದ ವ್ಯತ್ಯಾಸಗಳು ಕಾಣಿಸುತ್ತವೆ. ವಿವಿಧ ಕಾರಣಗಳಿಗೆ ಪ್ರಾಣಗಳು ಹೋದ ಸಂದರ್ಭಗಳೂ ಉಂಟು.
ಯಾವುದೇ ಆಗಲಿ, ಅದನ್ನು ಅವಶ್ಯಕತೆ ಎಷ್ಟಿರುತ್ತೋ ಅಷ್ಟಕ್ಕೆ ಬಳಸಿದರೆ ಮಾತ್ರ ಒಳಿತಾಗಲು ಸಾಧ್ಯ. ಆದರೆ ಈ ಚಾಟಿಂಗ್ ಎಂಬ ಲಗಾಮಿಲ್ಲದ ಕುದುರೆ ಏರಿದರೆ, ಅದು ಗೊತ್ತು ಗುರಿಯಿಲ್ಲದೆ ಓಡಿ ನಮ್ಮನ್ನು ಬೀಳಿಸುವುದು ಖಚಿತ. ಆದ್ದರಿಂದ ಚಾಟ್ಸ್ ಬಗ್ಗೆ ಎಚ್ಚರವಿರಲಿ.
ಚಾಟ್ಸ್ ರೂಪ – 2 (ಆನ್ ರೋಡ್ ಸೈಡ್)
ರಸ್ತೆ ಬದಿಯ ಚಾಟ್ಸ್ ಸೆಂಟರ್‌ಗಳು, ಮಾಲ್‌ಗಳಲ್ಲಿನ ಚೈನೀಸ್ ತಿನಿಸುಗಳು ನಮ್ಮ ಯುವಕರಿಗೆ ಹೆಚ್ಚು ಇಷ್ಟ. ಕಾಲೇಜಿಗೆ ಮನೆಯಿಂದ ಊಟದ ಬಾಕ್ಸ್ ತೆಗೆದುಕೊಂಡು ಹೋಗುವ ಸಂಸ್ಕೃತಿ ಕಳೆದು ಹೋಗಿದೆ. ಪಾಪ, ಮಕ್ಕಳು ಹಸಿದಿರುತ್ತವೆ ಎಂಬ ಕಾರಣಕ್ಕೆ ತಂದೆ ತಾಯಿಯರು ಕೊಡುವ ಹಣ ಚಾಟ್ಸ್ ಸೆಂಟರ್ ಸೇರುತ್ತದೆ. ಬಾಯಿಗಿಷ್ಟು ರುಚಿ ಎನಿಸುವ ಚಾಟ್ಸ್ ಮುಂತಾದವುಗಳನ್ನು ಮುಕ್ಕುವ ಮಕ್ಕಳು ಆರೋಗ್ಯ ಕೆಡಿಸಿಕೊಂಡು ಆಚೆ ಬರುತ್ತಾರೆ. ಇದೊಂದು ಸೈಲೆಂಟ್ ಕಿಲ್ಲರ್ ಎಂಬುದು ಬಹುತೇಕರಿಗೆ ಈಗಲೂ ಅರ್ಥವಾಗಿಲ್ಲ.
ಪಿಜಾj, ಬರ್ಗರ್, ನೂಡಲ್ಸ್, ಸ್ಯಾಂಡ್‌ವಿಚ್, ಹೆಸರೇ ಗೊತ್ತಿಲ್ಲದ ಹಾಳು ಮೂಳು ತಿನಿಸುಗಳಿಂದ ಹಸಿವು ಇಂಗಿ ಹೋಗಿ ಊಟಕ್ಕೆ ಅವಕಾಶವಿಲ್ಲದಂತೆ ಮಾಡುತ್ತದೆ. ಅದರಲ್ಲಿ ಬೆರೆಸುವ ಅನೇಕ ವಸ್ತುಗಳು ನರಮಂಡಲದ ಮೇಲೆ ನೇರವಾದ ಪ್ರಭಾವ ಬೀರುತ್ತವೆ. ಇಂದಿನ ಯುವಕರಲ್ಲಿ ಕಂಡು ಬರುವ ಸ್ಥೂಲ ಕಾಯ, ಖನ್ನತೆ, ಅಜೀರ್ಣ, ಕ್ಯಾಲ್ಸಿಯಂನ ಕೊರತೆ, ರಕ್ತಹೀನತೆ, ರಕ್ತದೊತ್ತಡ, ಕಡಿಮೆ ವಯಸ್ಸಿಗೇ ಒಕ್ಕರಿಸುವ ಮಧುಮೇಹ… ಇವಕ್ಕೆಲ್ಲ ಬಹಳಷ್ಟು ಸಂದರ್ಭಗಳಲ್ಲಿ ಅವರು ತಿನ್ನುವ ಈ ಚಾಟ್ಸ್‌ಗಳ ಪ್ರಭಾವವೇ ಕಾರಣವಾಗಿರುತ್ತದೆ.
ಈ ಎರಡು “ಸಿ’ಗಳ ಮಧ್ಯೆ ಇಂದು ಯುವ ಜನತೆ ಸಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿಯಾದ ನಡಿಗೆ. ಯುವ ಜನತೆ ಸಂಪೂರ್ಣ ಹಾಳಾಗಲು ಈ ಎರಡು ಐಟಮ್ ಸಾಕು. ಒಂದು ಮಾನಸಿಕವಾಗಿ ಕುಗ್ಗಿಸಿದರೆ ಇನ್ನೊಂದು ದೈಹಿಕವಾಗಿ ಕುಗ್ಗಿಸುತ್ತದೆ. ಅಪಾಯವನ್ನು ಮೊದಲೇ ಅರ್ಥ ಮಾಡಿಕೊಂಡು ಹೊರ ಬರದೇ ಇದ್ದಲ್ಲಿ ಅಪಾಯ ಖಂಡಿತ. ಒಂದು ನೆನಪಿರಲಿ: ಎಲ್ಲವೂ ಹದವಾಗಿರಬೇಕು. ಇಲ್ಲವಾದರೆ ಎಲ್ಲವೂ ಮಾರಕವೇ. ಗೊತ್ತಲ್ಲ…ಅತಿಯಾದರೆ ಅಮೃತವೂ ವಿಷವೇ!
-ಸದಾಶಿವ್ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು
Asia Cup Hockey: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 11-0 ಅಂತರದ ಜಯ
Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ
Singapore: ವಿಶ್ವ ಚೆಸ್ ಚಾಂಪಿಯನ್‌ಶಿಪ್: ಮೂರನೇ ಪಂದ್ಯದಲ್ಲಿ ಗುಕೇಶ್ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.