ಆಣೆ ಮಾಡಿ ಇಲ್ಲ ಅನ್ನು ನೋಡೋಣ?
Team Udayavani, Jul 9, 2019, 5:30 AM IST
ಯಾಕೋ ಆಗ ಧೈರ್ಯ ಸಾಲಲಿಲ್ಲ. ಹೋಗ್ಲಿ ನೀನಾದ್ರೂ ಧೈರ್ಯವಾಗಿ ನನ್ನ ಕಾಲೇಜ್ ಹತ್ರ ಬಂದು “ಹಲೋ’ ಹೇಳಬಾರದಿತ್ತಾ ? ನೀನೂ ಯಾಕೋ ಹಿಂದೇಟು ಹೊಡೆದೆ.
ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು ನನ್ನ ಕಣ್ಣ ನಾನೇ ನಂಬದಾದೆನು
ಯಾಕೋ ಈ ಹಾಡು ಮತ್ತೆ, ಮತ್ತೆ ಕೇಳಬೇಕು ಅನ್ನಿಸ್ತಿದೆ. ನನಗೆ ನೆನಪಿದೆ, ಅಂದು ನನ್ನನ್ನು ಕಾಣೋಕೆ ಎಷ್ಟು ಆಸೆಯಿಂದ ನಮ್ಮ ಮನೆಗೆ ಬಂದೆ, ನೀನೇನು ಅಪರಿಚಿತ ಅಲ್ಲ , ಆದರೂ ನಮ್ಮ ಮನೆಯವರಿಗೆ ಯಾಕೋ ನಿನ್ನ ಕಂಡರೆ ಅಷ್ಟಕ್ಕಷ್ಟೇ. ಕಾರಣ ಬೇರೆ ಏನಿರುತ್ತೆ ? ಆಸ್ತಿ,ವಿದ್ಯೆಯಲ್ಲಿ ನನಗೆ ನೀನು ತೂಗೋಲ್ಲ ಅನ್ನೋದು. ನಿನ್ನ ಪ್ರೀತಿಯ ಆಳವನ್ನು ಗುರುತಿಸದೆ, ನಿನ್ನನ್ನು ಎಷ್ಟು ನಿಕೃಷ್ಟವಾಗಿ ಕಂಡರು ? ನನಗೂ ನಿನ್ನ ಜೊತೆ ಊರೆಲ್ಲ ಒಂದು ಸುತ್ತು ಅಡ್ಡಾಡುವ ಆಸೆ; ದಾರಿಯುದ್ದಕ್ಕೂ ನಿನ್ನೊಂದಿಗೆ ಮನಸಾರೆ ಹರಟಿ ನನ್ನ ಮನದಾಳದ ಭಾವನೆಗಳನ್ನೆಲ್ಲ ಹಂಚಿಕೊಂಡು ಸಂಭ್ರಮಿಸಬೇಕು ಅನ್ನೋ ಕನಸೆಲ್ಲ ಕರಗಿಹೋಗಿತ್ತು.
ಮನೆಯವರನ್ನು ಎದುರಿಸಿ ನಿನ್ನ ಕೈ ಹಿಡಿಯಲು ಓಡಿ ಬರಬೇಕೆಂಬ ತುಡಿತ ಇದ್ದರೂ, ಯಾಕೋ ಆಗ ಧೈರ್ಯ ಸಾಲಲಿಲ್ಲ. ಹೋಗ್ಲಿ ನೀನಾದ್ರೂ ಧೈರ್ಯವಾಗಿ ನನ್ನ ಕಾಲೇಜ್ ಹತ್ರ ಬಂದು “ಹಲೋ’ ಹೇಳಬಾರದಿತ್ತಾ ? ನೀನೂ ಯಾಕೋ ಹಿಂದೇಟು ಹೊಡೆದೆ.
ನನ್ನ ಆಸೆಗಳೆಲ್ಲ ಹಾಗೆಯೇ ಇಂಗಿಹೋಯಿತು. ಆದರೆ, ನೀನಂತೂ ನನ್ನಪೆಹಲಾ ಪೆಹಲಾ ಪಾರ್ ಹೈ ಆಗಿಯೇ ಉಳಿದುಬಿಟ್ಟೆ. ಐದು ವರ್ಷದ ಮೇಲೆ ಮೊನ್ನೆನೇ ಅಲ್ವಾ ನಿನ್ನ ಭೇಟಿಯಾದದ್ದು ? ಅದೂ ನಿನ್ನ ಗೆಳೆಯನ ಮದುವೆಯಲ್ಲಿ! ಅಲ್ಲಿ ನನ್ನ ನೋಡುತ್ತಲೇ ಅದೆಷ್ಟು ಸಂತಸ ನಿನ್ನ ಕಂಗಳಲ್ಲಿ? ನೀನು ನಾಲ್ಕು ಹೆಜ್ಜೆ ಮುಂದೆಯಿಟ್ಟೆ ನನ್ನೆಡೆಗೆ… ಈ ಬಾರಿ ನಾನೂ ಹಿಂಜರಿಯಲ್ಲಿಲ್ಲ. ಕೈ ಕುಲುಕಿ “ಕೊನೆಗೂ ಸಿಕ್ಕೆಯಲ್ಲ ‘ ಎಂದಾಗ ರೋಮಾಂಚನ ! ಆ ಕ್ಷಣವೇ ಪಾಣಿಗ್ರಹಣವಾದಂತೆ ಅನ್ನಿಸಿಬಿಡು¤.
ಇನ್ನೆಂದಿಗೂ ಹಿಡಿದ ನಿನ್ನ ಕೈಗಳನ್ನು ಬಿಡುವ ಮಾತೇ ಇಲ್ಲ ಎಂಬ ಭರವಸೆ ನಿನ್ನ ಕಂಗಳಲ್ಲಿ ಕಂಡೆ. ಥ್ಯಾಂಕ್ಸ್ ಕಣೋ ಹುಡುಗಾ, ನನಗೂ ಬಿಡಿಸಿಕೊಳ್ಳುವ ತವಕವಿಲ್ಲ,ಉಳಿಸಿಕೊಳ್ಳುವ ಛಲವಿದೆ. ಗೆಳತಿಯ ಮದುವೆ ಮಂಟಪದಲ್ಲಿ ನಮ್ಮಿರ್ವರನ್ನೇ ಕಲ್ಪಿಸಿಕೊಂಡಾಗಿನ ಮುದ ನನಗೆ ಮಾತ್ರ ಗೊತ್ತು. ಅದು ಸಾಕಾರವಾಗುತ್ತೆ ಎನ್ನುವ ವಿಶ್ವಾಸವಿದೆ.
“ತು ಮಿಲೇ ದಿಲ್ ಖೀಲೇ ಔì ಜೀನೇ ಕೋ ಕ್ಯಾ ಚಾಹಿಯೇ’ ನೀನು ಸಣ್ಣಗೆ ಗುನುಗಿದ್ದು ನನಗೆ ಕೇಳಿಸಿತ್ತು. ನನ್ನ ಕಣ್ಣಲ್ಲಿ ಕಣ್ಣಿಟ್ಟು ಇಲ್ಲ ಅನ್ನು ನೋಡೋಣ ?
-ಕೆ.ವಿ.ರಾಜ ಲಕ್ಷ್ಮೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.