ಪಿತ್ರಾರ್ಜಿತ ಆಸ್ತಿ ನಿಮಗೆ ಇದೆಯೇ?
Team Udayavani, Apr 21, 2020, 1:17 PM IST
ನೀವು ಮನೆಯಲ್ಲೋ, ಆಫಿಸಲ್ಲೋ ಕೆಲಸ ಮಾಡುವಾಗ, ಆಗಾಗ ಪಿತ್ತ, ವಾಕರಿಕೆ ಬಂದ್ಹಂಗೆ ಆಗೋದು, ತಲೆನೋವು ಬಂದು ವಾಂತಿ ಮಾಡೋದು ಎಲ್ಲಾ ಆಗಿಬಿಡುತ್ತದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾದಂತೆ, ಇವೆಲ್ಲ ಮತ್ತಷ್ಟು ಹೆಚ್ಚಾಗುತ್ತವೆ. ಅಂಥ ಸಂದರ್ಭಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು, ಇಲ್ಲೊಂದಷ್ಟು ಟಿಪ್ಸ್ ಇದೆ. ಮೊದಲು ಜೀರಿಗೆಯನ್ನು ನೀರಿಗೆ ಹಾಕಿ, ಚೆನ್ನಾಗಿ ಕುದಿಸಿ.
ಅದಕ್ಕೆ ಸ್ವಲ್ಪ ಸಾವಯವ ಬೆಲ್ಲ ಹಾಕಿಕೊಂಡು, ಬಿಸಿ ಇರುವಾಗಲೇ ಒಂದು ಲೋಟ ಕುಡಿಯಿರಿ. ಪಿತ್ತಕ್ಕೆ ಜೀರಿಗೆ ರಾಮಬಾಣ. ಎಷ್ಟೇ ವಾಂತಿಯ ಲಕ್ಷಣ ಇದ್ದರೂ, ನಿಧಾನಕ್ಕೆ ಇಳಿದು ಹೋಗುತ್ತದೆ. ಪಿತ್ತದಿಂದ ಉಂಟಾಗುವ ತಲೆನೋವು ಕೂಡ, ಇದರಿಂದ ಗುಣವಾಗುತ್ತದೆ. ಈ ಪಿತ್ತದ ಇನ್ನೊಂದು ಮುಖ ಅಂದರೆ, ಹೊಟ್ಟೆ ನೋವು ಬರಿಸೋದು. ಇದಕ್ಕೆ ಜೀರಿಗೆ ಕೆಲಸ ಮಾಡೋಲ್ಲ. ಜಾಯಿಕಾಯಿ ಇರಲೇಬೇಕು. ಇದರಲ್ಲಿ ಔಷಧೀಯ ಗುಣಗಳು ಇವೆ. ಆಂಟಿ ಆಕ್ಸಿಡೆಂಟ್‌ನಿಂದಾಗಿ ಹೊಟ್ಟೆ ನೋವು ಬೇಗ ಗುಣವಾಗುತ್ತದೆ. ಹೊಟ್ಟೆ ನೋವು, ಅನಗತ್ಯವಾಗಿ ತಿಂದು ಉಂಟಾಗುವ ಅಜೀರ್ಣದಿಂದಲೂ ಬರಬಹುದು.
ಜಾಯಿಕಾಯಿಗೆ ಅಜೀರ್ಣವನ್ನು ಓಡಿಸುವ ತಾಕತ್ತು ಇದೆ. ಬಿ. ಕಾಂಪ್ಲೆಕ್ಸ್, ವಿಟಮಿನ್ “ಸಿ’ ಗುಣ ಇರುವುದರಿಂದ ಪಿತ್ತದಿಂದ ಉಂಟಾಗುವ ಸುಸ್ತು, ಹೊಟ್ಟೆನೋವಿನ ಬಳಲಿಕೆ ಯಾವುದೂ
ಆಗುವುದಿಲ್ಲ. ಪಿತ್ತದ ಇನ್ನೊಂದು ಮುಖ ಎಂದರೆ, ಕಫ ಕಟ್ಟುವುದು. ಇದು ಹೆಚ್ಚಾದರೆ, ಉಸಿರಾಡಲು ಕೂಡ ಆಗದಷ್ಟು ಕಾಡುತ್ತದೆ. ಹೀಗಾಗಿ, ಜಾಯಿಕಾಯಿ ಪೀಸ್‌ನ ಜೊತೆ, ಒಂದೇ ಒಂದು ಕಲ್ಲುಪ್ಪನ್ನು ಸೇರಿಸಿ ದವಡೆಯಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡಿದರೆ, ಕಫ ಹೋಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.