ರೆಂಬ್ರಾಂಡ್ಜ್ ಲೈಟಿಂಗ್‌ ಬಗ್ಗೆ ಗೊತ್ತಾ?


Team Udayavani, Feb 4, 2020, 6:09 AM IST

pro-3

ಫೋಟೋಗ್ರಫಿ 180 ವರ್ಷಗಳ ಇತಿಹಾಸವುಳ್ಳ ತಾಂತ್ರಿಕ ಆವಿಷ್ಕಾರ. 18-19 ನೇ ಶತಮಾನದಲ್ಲಿ ಫೋಟೋಗ್ರಫಿಯ ಸಾದ್ಯತೆಗಳ ಬಗ್ಗೆ ಸಂಶೋಧನೆಗಳು ಸಾಗಿ ಬಂದವು. ಅಂತೂ 1839 ರಲ್ಲಿ ಡ್ಯಾಗುರೇ ಎಂಬ ಫ್ರಾನ್ಸ್‌ನ ವಿಜ್ಞಾನಿ ಅಲ್ಲಿನ ಅಕಾಡೆಮಿ ಆಫ್ ಸೈನ್ಸಸ್‌ ಮೂಲಕ ಡ್ಯಾಗುರೇ ಪ್ರೋಸೆಸ್‌ ಬಿಡುಗಡೆಮಾಡಿ ಫೋಟೋಗ್ರಫಿಯ ಹುಟ್ಟಿಗೆ ಕಾರಣನಾದ. ಕಣ್ಣಿಗೆ ಕಾಣುವ ದೃಶ್ಯದ ರಚನೆಯನ್ನು ಕುಂಚ- ವರ್ಣಗಳ ಸಹಾಯವಿಲ್ಲದೇ ಶೀಘ್ರಗತಿಯಲ್ಲಿ ಕ್ಯಾಮೆರಾ ಯಥಾವತ್ತು ದಾಖಲಿಸಿಬಿಡುವುದರಿಂದ ಪ್ರಾರಂಭದಲ್ಲಿ ಅಷ್ಟಕ್ಕೇ ಅದು ಸೀಮಿತವಾತ್ತು, ದೊಡ್ಡ ಪೆಟ್ಟಿಗೆಯ ಒಂದು ಮುಖದಲ್ಲಿ ಚಿಕ್ಕ ರಂದ್ರ ಕೊರೆದು, ಚಿತ್ರ ರಚನೆಯಲ್ಲಿ ಬಳಸಬಹುದಾದ ಲೆನ್ಸ್ ರಹಿತ ಕ್ಯಾಮೆರಾ ಅಬ್ಸ್ ಕೂರಾ ಕ್ರಿ.ಪೂ. 4ನೇ ಶತಮಾನದ ಚೈನಾದಲ್ಲಿ ಪ್ರಚಲಿತವಾದ್ದು ಇತಿಹಾಸ. 1600ದ ಆಜುಬಾಜುವಿನಲ್ಲಿ ಯುರೋಪಿನಲ್ಲಿ ಅದರ ಸುಧಾರಿತ ಮಾದರಿಗಳು ಬಳಕೆಗೆ ಬಂದದ್ದು ಚಿತ್ರಕಲಾವಿದರಿಗೆ ತ್ವರಿತವಾಗಿ ಕೃತಿ ರಚನೆ ಮಾಡುವಲ್ಲಿ ಸ್ಫೂರ್ತಿ ನೀಡಿತ್ತು, ನಂತರದ ದಿನಗಳಲ್ಲಿ ದೊಡ್ಡ ಕತ್ತಲು ಕೋಣೆಯ ರೀತಿಯ ಅದರ ಒಂದು ಗೋಡೆಗೆ ಲೆನ್ಸ್‌ ಜೋಡಿಸಿಟ್ಟು, ಹೊರಗಿನ ದೃಶ್ಯವನ್ನು ಮೇಲು ಕೆಳಗಾಗಿ ಒಳಗಡೆಯ ಎದುರು ಗೋಡೆಗೆ ಅಂಟಿಸಿದ ಬಿಳಿ ಕ್ಯಾನ್ವಾಸ್‌ ಮೇಲೆ ಪ್ರತಿಬಿಂಬಿಸಿ, ಕಲಾಕೃತಿಗಳನ್ನು ರಚಿಸುವುದು ರೂಢಿಗೆ ಬಂದಿತ್ತು.

ಅಂತೆಯೇ, 1860ರ ಸುಮಾರಿಗೆ ಚಿತ್ರಕಲಾವಿದರು ಫೋಟೋಗ್ರಫಿಯನ್ನು ತಮ್ಮ ನೈಪುಣ್ಯತೆಯ ಕೃತಿ ರಚನೆಗಳಲ್ಲೂ ಬಳಸಲು ಅನೇಕ ಅವಕಾಶಗಳನ್ನು ಕಂಡುಕೊಂಡರು. ಕೆಲವು ಛಾಯಾಗ್ರಾಹಕರೂ ವ್ಯಕ್ತಿಯನ್ನು, ಉತ್ತಮ ಬೆಳಕಿನ ವ್ಯವಸ್ಥೆಯಲ್ಲಿ ಕಲಾಕೃತಿಯಂತೆ ಸೆರೆಹಿಡಿಯುವ ಮಹತ್ವದೆಡೆ ಪರಿಶ್ರಮಿಸಿ ಖ್ಯಾತರಾದರು. ಅವುಗಳಲ್ಲಿ ಮುಖ್ಯವಾದದ್ದೊಂದು , 1630-35 ರಲ್ಲಿ ಮುಂಚೂಣಿಯಲ್ಲಿದ್ದ ಡಚ್‌- ಚಿತ್ರ ಕಲಾವಿದ ರೆಂಬ್ರಾಂಡ್ಜ್ ಉಪಯೋಗಿಸುತ್ತಿದ್ದ ಬೆಳಕಿನ ಮಾದರಿ. ಪ್ರಖರವಾದ ಬೆಳಕು-ನೆರಳಿನ ಕಾಂತಿಭೇದವನ್ನು ( Contrast) ಉಂಟುಮಾಡಿ, ಆಳವಾದ ಗಾಢ-ಭಾವದ (Low Key) ಗಂಭೀರ ಪರಿಣಾಮವನ್ನು ಹೊಮ್ಮಿಸುವುದು ಇದರ ಮೂಲ ಗುಣ. ಕತ್ತಲು ತುಂಬಿದ ಒಳಾಂಗಣದಲ್ಲಿ ಸಹಜವಾದ ಎತ್ತರದ ಕಿಟಕಿಯ ಬೆಳಕನ್ನೇ ಪ್ರಧಾನ ಬೆಳಕಾಗಿ ( Key Light) ಮಾಡಿಕೊಳ್ಳುವುದು . ಕಿಟಕಿಯ ಎತ್ತರದಿಂದ ತುಸು ದೂರದಲ್ಲಿ 45 ಡಿಗ್ರಿ ಯಷ್ಟು ಕೆಳಗೆ ಕುಳ್ಳರಿಸಿದ ವ್ಯಕ್ತಿಯ ಭಂಗಿಯನ್ನು ಮೊದಲು ಸ್ವಲ್ಪ ಅಡ್ಡತಿರುಗಿಸಿ, ಮೂಗಿನ ನೇರಕ್ಕೆ 45 ಡಿಗ್ರಿ ಯಿಂದ ಕಿಟಕಿ ಬದಿಯ ಮುಖ, ಮೈ-ಕೈ ಭಾಗಗಳನ್ನು ಹೆಚ್ಚು ಬೆಳಗಿಸಿಕೊಳ್ಳುವುದು. ಮೂಗಿನ ಆಚೆ ಬದಿಯಲ್ಲಿ ವ್ಯಕ್ತಿಯ ಕಣ್ಣು ಮತ್ತು ಅದಕ್ಕೆ ತಾಗಿದ ಕೆಳ ಕೆನ್ನೆಯನ್ನು ತ್ರಿಕೋಣಾಕೃತಿಯಲ್ಲಿ ( Triangle) ಮಾತ್ರ ಬೆಳಗಿಸುವಂತೆ ವ್ಯಕ್ತಿಯ ಭಂಗಿಯನ್ನು ಮತ್ತು ಮುಖವನ್ನು ಸರಿಹೊಂದಿಸುವುದು. ತ್ರಿಕೋನವಾಗಿ ಬೆಳಗಿದ ಕೆನ್ನೆಯನ್ನು ಬಿಟ್ಟು, ಮುಖದ ಆಚೆ ಬದಿ ಉಂಟಾಗುವ ಕಡು ನೆರಳಿನ ಭಾಗಗಳನ್ನು ಅದೇ ಕಿಟಕಿಯಿಂದ ಬೀಳುತ್ತಿರುವ ಬೆಳಕನ್ನೇ 45 ಡಿಗ್ರಿಯಲ್ಲಿ ಪ್ರತಿಫ‌ಲನದ ಸಹಾಯದಿಂದ ವ್ಯಕ್ತಿಯ ಕುತ್ತಿಗೆ, ಭುಜ, ತಲೆಕೂದಲು ಭಾಗಗಳನ್ನು ಕಣ್ಣಿಗೆ ಅಲ್ಪ- ಸ್ವಲ್ಪ ಕಾಣಿಸುವಷ್ಟು ಮಾಡಿ, ರೂಪದರ್ಶಿಯನ್ನು ಸಜ್ಜುಗೊಳಿಸಿಕೊಳ್ಳುವುದು ರೆಂಬ್ರಾಂಡ್ಜ್ನ ಬೆಳಕಿನ ವೈಶಿಷ್ಟ್ಯ. ಆ ಬೆಳಕಿನ ವಿಶೇಷತೆಯನ್ನು 19ನೇ ಶತಮಾನದ ಮಧ್ಯದ ಮತ್ತು ನಂತರದ ಛಾಯಾಗ್ರಾಹಕರು ವಿದ್ಯುತ್‌ ದೀಪ, ಅಂಬ್ರೆಲ್ಲಾ ಫ್ಲಾಶ್‌, ಸಾಫ್ಟ್ ಬಾಕ್ಸ್‌, ಇತರ ಬೆಳಕಿನ ಅಳವಡಿಕೆಯಿಂದ ರೆಂಬ್ರಾಂಡ್ಜ್ ಲೈಟಿಂಗ್‌ ಗೆ ಸುಧಾರಣೆಗಳನ್ನು ತಂದರು. ಉದಾ: ಕೂದಲುಗಳ ಅಂಚನ್ನು, ತಲೆ,ಭುಜ , ಇನ್ನಿತರ ಭಾಗವನ್ನು ಹಿಂಬದಿಯ ಬೆಳಕಿನಿಂದ (backlighting) ಮಿಂಚಿಸುವುದು.

ರೆಂಬ್ರಾಂಡ್ಜ್ ಲೈಟಿಂಗ್‌ ಮಾದರಿಯಲ್ಲಿ ಒಂದು ಸೆಟಪ್‌

ಇಲ್ಲಿರುವ ಒಂದು ಚಿತ್ರ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಪ್ರದರ್ಶಕ ಸಾಗರದ ಜಿ.ಆರ್‌.ಪಂಡಿತ್‌ ರೆಂಬ್ರಾಂಡ್ಜ್ ಲೈಟಿಂಗ್‌ ನಲ್ಲಿ ಸೆರೆಹಿಡಿದಿರುವ ರೂಪದರ್ಶಿಯ ಗಂಭೀರ ಅಭಿವ್ಯಕ್ತಿ ಹೊಮ್ಮಿಸುವ ಭಾವಚಿತ್ರ . ಆಕೆಯ ಮುಖದಲ್ಲಿ ನಗುವೋ, ಇನ್ನಿತರ ಭಾವನೆಗಳ್ಳೋ ಚಿಮ್ಮಿದ್ದರೆ, ರೆಂಬ್ರಾಂಡ್ಜ್ ಬೆಳಕಿನ ಮಹತ್ವ ಸ್ಪುಟಿಸುತ್ತಿರಲಿಲ್ಲ. ಛಾಯಾಗ್ರಾಹಕರ ಬೆಳಕಿನ ವ್ಯವಸ್ಥೆ , ತ್ರಿಕೋಣಾಕೃತಿಯಲ್ಲಿ ಬೆಳಗಿದ ಒಂದು ಬದಿಯ ಕೆನ್ನೆ, ಅದಕ್ಕಂಟಿದ ಕಡು ನೆರಳು ಮೈ ಭಾಗಗಳು , ಹಿನ್ನೆಲೆಯ ಕಾಂತಿಭೇದ-ವೈದೃಶ್ಯ ಉತ್ತಮವಾಗಿವೆ. ಇದಕ್ಕೆ ಪ್ರಧಾನ ಬೆಳಕಿನೊಂದಿಗೆ ರಿಫ್ಲೆಕ್ಟರ್‌ ಅನ್ನೂ ಉಪಯೋಗಿಸಲಾಗಿದೆ.

ಇನ್ನೊಂದು ಚಿತ್ರ ನೀನಾಸಂ ಹೆಗ್ಗೋಡಿನಲ್ಲಿ ಅಭಿನೇತ್ರಿಯೊಬ್ಬಳ ಅಂತರ್ಭಾವನೆಗಳನ್ನು ಉಕ್ಕಿಸುವ ಪ್ರಯತ್ನ ಮಾಡಿದ್ದೆ. ಆಕೆಯನ್ನು ದೂರ, ಹತ್ತಿರದಿಂದ ಗಮನಿಸಿ. ಒಡನಾಡಿ ಮತ್ತು ಮಾತನಾಡಿದಾಗ ಈ ಭಂಗಿಯೇ ಆಕೆಯ ವ್ಯಕ್ತಿತ್ವನಿರೂಪಣೆಗೆ (Portraiture) ಸೂಕ್ತವೆನ್ನಿಸಿತ್ತು. ರಂಗಮಂದಿರದ ಮಹಡಿಯ ದೊಡ್ಡ ಕಿಟಕಿಯೊಂದನ್ನೇ ಪ್ರಮುಖ ಬೆಳಕಿನ ಮೂಲವಾಗಿಸಿ ರೆಂಬ್ರಾಂಡ್ಜ್ ಲೈಟಿಂಗ್‌ ಗೆ ಸರಿಹೊಂದಿಸಿ ಸೆರೆಹಿಡಿದಾಯಿತು.

ಅಭಿನೇತ್ರಿ ಸ್ಮಿತಾಳ ಭಾವುಕ ನೋಟ… ಜೂಂ ಲೆನ್ಸ್‌ ನ 90 ಎಂ.ಎಂ. ಫೋಕಲ್‌ ಲೆಂಗ್ತ್, ಅಪರ್ಚರ್‌ ಎಫ್ 4.5, ಕವಾಟ ವೇಗ 1/60 ಸೆಕೆಂಡ್‌, ಐ.ಎಸ್‌.ಒ. 800

ಕೆ.ಎಸ್‌.ರಾಜಾರಾಮ್‌

ಟಾಪ್ ನ್ಯೂಸ್

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

1-skk

Cricket; ವೇಗಿ ಸಿದ್ದಾರ್ಥ್ ಕೌಲ್‌ ನಿವೃತ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.