ನೀನು ಇಷ್ಟವಾಗಿದ್ದೇ ಆ ಕಾರಣಕ್ಕೆ…
Team Udayavani, Jan 7, 2020, 5:28 AM IST
ಸ್ನೇಹಿತನೊಬ್ಬ ನನ್ನನ್ನು ಕಾಲೇಜಿಗೆ ಡ್ರಾಪ್ ಮಾಡಿದ ವಿಷಯ ನಿನಗೆ ಹೇಗೆ ತಲುಪಿತ್ತೂ ಗೊತ್ತಿಲ್ಲ. ಆದರೆ, ಅದೊಂದೇ ಕಾರಣಕ್ಕೆ ಆ ದಿನ ನೀನು ಅವನನ್ನು ಎಲ್ಲರ ಮುಂದೆಯೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಾತನಾಡಿಬಿಟ್ಟಿದ್ದೆ. ನಿನ್ನ ಆ ವರ್ತನೆಯಿಂದಾಗಿ ಆ ಸ್ನೇಹಿತನಿಗಷ್ಟೇ ಅಲ್ಲ ನನಗೂ ಇರುಸುಮುರುಸಾಗಿತ್ತು.
ಆ ನಿನ್ನ Possessiveness ನಿನ್ನನ್ನು ಇನ್ನಿಲ್ಲದಂತೆ ಹಚ್ಚಿಕೊಂಡಿದ್ದ ನನ್ನನ್ನೇ ಒಮ್ಮೊಮ್ಮೆ ಬೆಚ್ಚಿಬೀಳಿಸುತ್ತಿತ್ತು. ಇವನೇನಾದರೂ ನನ್ನನ್ನು ಅನುಮಾನಿಸುತ್ತಿದ್ದಾ
ನಾ? ಅಂತ ಅನ್ನಿಸುವಷ್ಟು ಗೊಂದಲಕ್ಕೆ ಬಿದ್ದು ಬಿಡ್ತಿದ್ದೆ. ನನಗಿನ್ನೂ ನೆನಪಿದೆ; ನಿನ್ನ ಸ್ನೇಹಿತರೆದುರು ನಿಂತು ನೀನೇ ಖುದ್ದು -“ಇವಳು ನನ್ನ ಒಳ್ಳೆಯ ಗೆಳತಿ’ ಅಂತ ಪರಿಚಯಮಾಡಿಸಿದ್ದೆ. ನನ್ನನ್ನ ಏನೆಂದು ಪರಿಚಯ ಮಾಡಿಸುತ್ತಾನೋ? ಎಂದು ಬೆರಗುಗಣ್ಣುಗಳಲ್ಲಿ ಕಾಯುತ್ತಿದ್ದ ನನಗೆ, ಅಂದು ನಿಜಕ್ಕೂ ನಿರಾಸೆಯಾಗಿತ್ತು. ಕಣ್ಣಂಚಿಗೆ ಬಂದಿದ್ದ ನೀರನ್ನು ತಡೆದು ನಿಲ್ಲಿಸಿ ಅಲ್ಲಿಂದ ಹೊರಟವಳು, ನಾನು ಬರೀ ಫ್ರೆಂಡಾದ್ರೆ ಇಷ್ಟೊಂದು ಕಾಳಜಿ ಯಾಕೆ, ಗಂಟೆಗೊಂದು ಫೋನ್ ಮಾಡೋದ್ಯಾಕೆ, ಒಂದೇ ಒಂದು ದಿನ ಕಣ್ಮರೆಯಾದರೆ ಊರೆಲ್ಲಾ ಅಲೆದು ಚಡಪಡಿಸುವುದ್ಯಾಕೆ? ಎಂದು ವಾರಗಳಾಚೆಗೂ ಒಬ್ಬಳೇ ಕೂತು ಅತ್ತಿದ್ದೆ. ಕೊನೆಗೆ ನನ್ನನ್ನು ನಾನೇ ಸಂತೈಸಿಕೊಂಡಿದ್ದೆ.
ಅದೊಂದು ದಿನ ದಾರಿಯ ಮಧ್ಯೆ ಸಿಕ್ಕ ನಿನ್ನ, ಸ್ನೇಹಿತನೊಬ್ಬ ನನ್ನನ್ನು ಕಾಲೇಜಿಗೆ ಡ್ರಾಪ್ ಮಾಡಿದ ವಿಷಯ ನಿನಗೆ ಹೇಗೆ ತಲುಪಿತ್ತೂ ಗೊತ್ತಿಲ್ಲ. ಅದು ಇಂದಿಗೂ ನಿಗೂಢ ಬಿಡು. ಆದರೆ, ಅದೊಂದೇ ಕಾರಣಕ್ಕೆ ಆ ದಿನ ನೀನು ಅವನನ್ನು ಎಲ್ಲರ ಮುಂದೆಯೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಾತನಾಡಿಬಿಟ್ಟಿದ್ದೆ. ನಿನ್ನ ಆ ವರ್ತನೆಯಿಂದಾಗಿ ಆ ಸ್ನೇಹಿತನಿಗಷ್ಟೇ ಅಲ್ಲ, ನನಗೂ ಇರುಸುಮುರುಸಾಗಿತ್ತು. ನೀನು ಆಕ್ರೋಶದಲ್ಲಿ ಮಾತಿನ ಮಧ್ಯೆShe is Mine, She is Mine ಎಂದು ನೂರಾರು ಬಾರಿ ಒದರಿಬಿಟ್ಟಿದ್ದೆಯಲ್ಲ, ನಿನಗೆ ಆದಿನ ಅದ್ಯಾವ ಮೋಹಿನಿಯ ಆವಾಹನೆಯಾಗಿತ್ತೋ ಗೊತ್ತಿಲ್ಲ. ಅದೇ ಕೊನೆ: ನಿನ್ನ ಕಾಟದಿಂದ ಮತ್ಯಾರಿಗೂ ನನ್ನನ್ನು ಡ್ರಾಪ್ ಮಾಡುವುದಿರಲಿ, ಮಾತನಾಡಿಸಲೂ ಮನಸ್ಸುಬಾರದಷ್ಟು ಬೇಸರವಾಗಿಬಿಟ್ಟಿತ್ತು.
ಮನಸ್ಸಿಗೆ ಅದೊಂಥರಾ ಖುಷಿ ಕೊಡುತ್ತಿತ್ತಾದರೂ ಅದಕ್ಕಿಂತ ಜಾಸ್ತಿ ಮುಜುಗರವಾಗುತ್ತಿತ್ತು. ನನಗೆ ಎಲ್ಲವೂ ನೀನೇ ಆಗಿರಬೇಕು ಅನ್ನೋದು ನಿನ್ನ ತುಡಿತವೆಂಬುದು ನನ್ನರಿವಿಗೆ ಬಂದಿದ್ದರೂ ನನಗೆ ನನ್ನದೇ ಆದ ಗುರುತುಬೇಕಿತ್ತು. ನಾನೂ ನನ್ನಂತೆಯೇ ನನ್ನನ್ನು ಜಗತ್ತಿಗೆ ಪರಿಚಯಿಸಿಕೊಳ್ಳಬೇಕಿತ್ತು. ಜಗತ್ತಲ್ಲಿ ಉಳಿದವರ್ಯಾರೂ ನಿನ್ನಂತೆ ಪ್ರೀತಿಸಲಾರರು ಎಂಬುದನ್ನು ನಿನ್ನ ನೋಡಿದ ದಿನವೇ ಹೃದಯದ ಗೋಡೆಯ ಮೇಲೆ ಬರೆದುಕೊಂಡವಳು ನಾನು. ಆದರೆ, ನಿನ್ನ ಪ್ರೀತಿ ಅರಗಿಸಿಕೊಳ್ಳಲಾಗದ ತುತ್ತಾಗಿಬಿಟ್ಟಿತ್ತು ಎಂಬುದನ್ನು ಅವತ್ತೇ ನಿನಗೆ ತಿಳಿಸಿಬಿಡಬೇಕೆಂದು ಹರಸಾಹಸಪಟ್ಟೆ, ಅದು ನನ್ನಿಂದಾಗಲೇ ಇಲ್ಲ. ಆ ಕ್ಷಣ ನಾನು ಕೋಪದಲ್ಲೋ, ಒತ್ತಡದಲ್ಲೋಅದನ್ನೆಲ್ಲಾ ನಿನ್ನ ಮುಂದೆ ಒದರಿಬಿಟ್ಟಿದ್ದರೆ ಇಂದು ಹೀಗೆ ನಗುನಗುತ್ತಾ ಹಾಳೆಗಳ ಮೇಲೆ ಸುರಿಯಲು ಯಾವ ಸಿಹಿ ನೆನಪುಗಳೂ ನನ್ನ ಪಾಲಿಗುಳಿಯುತ್ತಿರಲಿಲ್ಲ.
ಅದ್ಯಾವ ದೇವರು ಆ ಕ್ಷಣಕ್ಕೆ ನನ್ನ ಬುದ್ಧಿಯನ್ನು ತಿದ್ದಿದನೋ, ಕಾಣೆ ನಿನ್ನಷ್ಟೇ ನಿನ್ನ ಪೋಸ್ಸೆಸ್ಸಿವೆ°ಸ್ಸನ್ನೂ ಪ್ರೀತಿಸಿಬಿಟ್ಟೆ.ಈ ಕ್ಷಣಕ್ಕೂ I Love your Possessiveness than you
-ಸತ್ಯ ಗಿರೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.