ಡಾಕ್ಟರೇಟ್ ಮುಂದೆ ಅವಕಾಶಗಳ ಬಾಗಿಲು
Team Udayavani, May 21, 2019, 6:02 AM IST
ಪಿ.ಎಚ್.ಡಿ ಎಂದರೆ ಪ್ರೊಫೆಸರ್ ಗಿರಿಗೆ ಮೆಟ್ಟಿಲು ಎಂದು ಭಾವಿಸುವವರೇ ಅಧಿಕ. ಆದರೆ ಇಂದು ಡಾಕ್ಟರೇಟ್ ಪದವಿ ಪಡೆದವರಿಗೆ ಅಧ್ಯಾಪಕ ವೃತ್ತಿಯಲ್ಲದೆ ಇತರ ಕ್ಷೇತ್ರಗಳಲ್ಲೂ ಉತ್ತಮ ಅವಕಾಶವಿದೆ. ಬರವಣಿಗೆ, ಸಂಶೋಧನೆ, ಕಾನೂನು ಕ್ಷೇತ್ರ, ಬಂಡವಾಳ ಹೂಡಿಕೆ ಕ್ಷೇತ್ರಗಳಲ್ಲಿ ಪಿ.ಎಚ್.ಡಿ ಪದವೀಧರರು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಪಿ.ಎಚ್.ಡಿ. ಎಂಬುದು ಕೇವಲ ಅಲಂಕಾರಿಕೆ, ಲಾಂಛನವಾಗದೆ ಅಧ್ಯಯನಶೀಲತೆಯನ್ನು ಬಿಂಬಿಸುವ ಕೌಶಲ್ಯಪಟ್ಟಿಯಾಗಿರಬೇಕು. ಮೂಲ ಸಮಸ್ಯೆಗಳನ್ನು ತಾರ್ಕಿಕ, ರಚನಾತ್ಮಕ ಮಾರ್ಗಗಳಿಂದ ಅವಲೋಕಿಸುವ ಮತ್ತು ಸೂಕ್ತ ಪರಿಹಾರವನ್ನು ಸೂಚಿಸುವ ಸಾಮರ್ಥ್ಯವನ್ನು ಈ ಪದವಿ ಒದಗಿಸಿಕೊಡಬೇಕು.
ಪಿ.ಎಚ್.ಡಿ.ಯ ನಂತರ ಮುಂದೇನು?
ಮೊದಲಿಗೆ ಪಿ.ಎಚ್.ಡಿ ಪದವಿಯು ಜ್ಞಾನ ಮತ್ತು ಕೌಶಲ್ಯದ ಸಂಕೇತ ಎಂಬುದನ್ನು ಅರಿಯಬೇಕು. ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಮುಂಬರಲು ಇವೆರಡೂ ನಿಮ್ಮದಾಗಿರಬೇಕು. ವಿಶ್ವದ್ಯಾಲಯಗಳ ಪ್ರೊಫೆಸರ್ ಹುದ್ದೆ, ಇತರ ಬೋಧನಾವೃತ್ತಿಗೆ ಪಿ.ಎಚ್.ಡಿ. ಪದವೀಧರರು ಮೊದಲು ಆದ್ಯತೆ ನೀಡುತ್ತಾರೆ. ಆ ಬಳಿಕ ಕೈಗಾರಿಕೆ ಆರ್ ಅÂಂಡ್ ಡಿ (ಸಂಶೋಧನಾ ಘಟಕ), ಲ್ಯಾಬ್ ಪೊ›ಫೆಷನಲ್ಸ್, ಸ್ಟಾರ್ಟಪ್‌ಗ್ಳಿಗೆ ಮಾರ್ಗದರ್ಶಕರಾಗಿ- ಹೀಗೆ ಹಲವು ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಬಹುದು. ಉದ್ಯಮ ಕ್ಷೇತ್ರದ ಸಂಶೋಧನಾ ಘಟಕಗಳಲ್ಲಿ ಸಂಶೋಧನೆಗೆಂದೇ ಮೀಸಲಾದ ತಂಡಗಳಿರುತ್ತವೆ. ಸಂಶೋಧನೆ, ಹೊಸ ಉತ್ಪನ್ನಗಳ ವಿನ್ಯಾಸ, ಪ್ರಮುಖ ಚರ್ಚೆಗಳಲ್ಲಿ ಪಾಲ್ಗೊಳ್ಳುವಿಕೆ- ಇವುಗಳಿಗೆಲ್ಲ ನುರಿತ ಬುದ್ಧಿಶಕ್ತಿಯುಳ್ಳವರು ಬೇಕು. ಕೈಗಾರಿಕೋದ್ಯಮಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯ ವಿಭಾಗದ ಹುದ್ದೆಗಳಲ್ಲಿ ಸಂಬಳ ಸವಲತ್ತು ಹೆಚ್ಚಿರುತ್ತದೆ. ಆದರೆ ಅಷ್ಟೇ ಮಟ್ಟದ ಸಮಯ ಮತ್ತು ಶ್ರಮವನ್ನು ಅದು ಬೇಡುತ್ತದೆ. ಸಾಮಾನ್ಯ ಪದವೀಧರ, ಸ್ನಾತಕೋತ್ತರ ಪದವೀಧರರ 5-6 ವರ್ಷದ ಸೇವಾ ಅನುಭವದ ಸಂಬಳಕ್ಕಿಂತ ಹೊಸದಾಗಿ ಪಿಎಚ್.ಡಿ. ಪಡೆದವರ ಸಂಬಳ ಹೆಚ್ಚಿರುತ್ತದೆ. ಈಗ ಹೇಳಿ, ಪಿ.ಎಚ್.ಡಿಯ ಅನುಕೂಲ ದೊಡ್ಡದೇ ಅಲ್ಲವೆ?
ಶೈಕ್ಷಣಿಕ ಕ್ಷೇತ್ರದಲ್ಲಿ ಪಿ.ಎಚ್.ಡಿ ಉಪಯೋಗ
ಬೋಧನಾ ಕ್ಷೇತ್ರವನ್ನು ಒಳಗೊಂಡಂತೆ ಪ್ರತಿಷ್ಠಿತ ಸಂಸ್ಥೆಗಳು ಪಿ.ಎಚ್.ಡಿ. ಪದವೀಧರರಿಗೆ ಸಂಬಳ ಸಾರಿಗೆಯ ಜೊತೆಗೆ ನಿವಾಸದ ಸೌಲಭ್ಯವನ್ನೂ ಕಲ್ಪಿಸಿಕೊಡುತ್ತವೆ. ಜೊತೆಗೆ ಪಿ.ಎಚ್.ಡಿ ಪದವೀಧರರಿಗೆ ಹೊರದೇಶಗಳಲ್ಲಿ ಕೆಲಸ ಮಾಡುವ ಅವಕಾಶವೂ ದೊರೆಯುತ್ತದೆ. ಮುಖ್ಯಾಂಶವೆಂದರೆ, ಸಂಸ್ಥೆಗಳು, ಪಿ.ಎಚ್.ಡಿ ಪದವೀಧರರಲ್ಲಿ ತಾರ್ಕಿಕ ವಿಶ್ಲೇಷಣೆ ಮತ್ತು ದತ್ತಾಂಶಗಳ ನಿಖರ ವಿಶ್ಲೇಷಣೆಯ ಸಾಮರ್ಥ್ಯವನ್ನು ನಿರೀಕ್ಷಿಸಲಾಗುತ್ತದೆ.
ಪಿ.ಎಚ್.ಡಿ. ಪಡೆದ ತಕ್ಷಣದಲ್ಲಿ ಮಾಡಬೇಕಾದ್ದೇನು?
ಪಿಎಚ್.ಡಿ. ಮುಗಿಸಿದ ಕೂಡಲೇ ನಿಮ್ಮ ಸಾಮರ್ಥ್ಯ ಮತ್ತು ಕ್ಷೇತ್ರಕ್ಕೆ ಪೂರಕವಾದ ಸಂಸ್ಥೆಗಳಲ್ಲಿ ಅರ್ಜಿ ಹಾಕಿ. ಸಾಮಾನ್ಯವಾಗಿ ಡಾಕ್ಟರೇಟ್ ಪದವೀಧರರಿಂದ ಈ ಕೆಳಗಿನ ಪರಿಣತಿ, ಕೌಶಲಗಳನ್ನು ನಿರೀಕ್ಷಿಸಲಾಗುತ್ತದೆ.
1) ಮಹಾಪ್ರಬಂಧ – ವಿಷಯವನ್ನು 75,000 ಪದಗಳಲ್ಲಿ ಪ್ರಸ್ತುತಪಡಿಸುವ ಸಾಮರ್ಥ್ಯ; ಯೋಜನೆ, ವಿಶ್ಲೇಷಣೆ, ಮಾಹಿತಿ ಸಂಗ್ರಹವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಾಮರ್ಥ್ಯ.
2) ದತ್ತಾಂಶ ನಿರ್ವಹಣೆ – ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಸಂಕೀರ್ಣವಾದ ದತ್ತಾಂಶಗಳನ್ನು, ಕೋಷ್ಠಕಗಳನ್ನು, ಅಂಕಿ-ಅಂಶಗಳನ್ನು ವಿಶ್ಲೇಷಿಸುವ ಸಾಮರ್ಥ್ಯ.
3) ಸಂದರ್ಶನ ನಿರ್ವಹಣೆ – ಸಂಶೋಧನಾ ದೃಷ್ಟಿಕೋನದಿಂದ, ಸಂರಚಿತ, ಸೂಕ್ಷ್ಮಮಟ್ಟದ ಮಾಪನದೊಂದಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಮರ್ಥ್ಯ.
4) ಪ್ರಯೋಗ/ ಪರೀಕ್ಷೆಗಳು – ಸಮಸ್ಯೆಯ ಪರಿಹಾರ ಮತ್ತು ಸಕಾರಾತ್ಮಕ ಧೋರಣೆ. ವರದಿ ಮತ್ತು ಪ್ರಸಂಟೇಷನ್ – ಸಂಕೀರ್ಣವಾದ ವರದಿಗಳನ್ನು ಸಾರಸಂಗ್ರಹವಾಗಿ, ಪರಿಣಾಮಕಾರಿಯಾಗಿ ಮಂಡಿಸಬಲ್ಲ ಸಾಮರ್ಥ್ಯ. ಅರ್ಥಾತ್ ಅತ್ಯುತ್ತಮ ಸಂವಹನಾ ಕೌಶಲ್ಯ.
5) ಸಕಾಲದಲ್ಲಿ ಮುಗಿಸಿದ ಪಿಎಚ್.ಡಿ. – ನಿರ್ದಿಷ್ಟ ಯೋಜನೆಗಳನ್ನು ಕ್ಲುಪ್ತ ಸಮಯದಲ್ಲಿ ಮುಗಿಸುವ ಸಾಮರ್ಥ್ಯ.
6) ಸಂಶೋಧನಾ ಕಮ್ಮಟಗಳ ನಿರ್ವಹಣೆ – ಯೋಜನೆ ಮತ್ತು ನಾಯಕತ್ವದ ಸಾಮರ್ಥ್ಯ.
ಜೊತೆಗೆ… ಪಿ.ಎಚ್.ಡಿ ಪದವೀಧರನೊಬ್ಬ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿ ಉದ್ಯಮದ ಕಡೆಗೆ ಉದ್ಯೋಗ ಅರಸಿ ಹೊರಟಿದ್ದರೆ ಆ ಹೊಸ ಪರಿಸರ, ಸಂಬಳ, ಜವಾಬ್ದಾರಿಗಳಿಗೆ ಹೊಂದಿಕೊಳ್ಳಲು ಸಿದ್ಧರಾಗಿರಬೇಕು.
– ರಘು ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.