ದಿವ್ಯಾಂಗರೇ, ಬನ್ನಿ ಜಗವ ಸುತ್ತೋಣ…
Team Udayavani, Oct 10, 2017, 11:19 AM IST
ಪ್ರವಾಸ ಹೋಗುವ ಕನಸು ಹೊಂದಿರುವ ದಿವ್ಯಾಂಗರ ಕನಸಿಗೆ ರೆಕ್ಕೆಯಾಗಲು, ಅವರನ್ನು ಜತನದಿಂದ ಊರು ಸುತ್ತಿಸಲು ಮುಂಬೈ ನ ಡೆಬೋಲಿನ್ ಸೇನ್ ಎಂಬವರು ಸ್ಟಾರ್ಟ್‌ಅಪ್ ಕಂಪನಿ ಆರಂಭಿಸಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಜೈಪುರ, ಕೊಚ್ಚಿ ಮತ್ತು ದೆಹಲಿ ಈ ಕಂಪನಿಯ ಟೂರ್ ಪ್ಯಾಕೇಜ್‌ನಲ್ಲಿರುವ ಸ್ಥಳಗಳು. ಹೊಸದಾಗಿ ಕಂಪನಿ ತೆರೆಯುವವರು ಯಾವ್ಯಾವ ವಿನೂತನ ಐಡಿಯಾ ಮಾಡುತ್ತಾರೆಂಬುದಕ್ಕೆ ಇದೊಂದು ನಿದರ್ಶನ ಮತ್ತು ಸ್ಪೂರ್ತಿಯಾಗಬಲ್ಲುದು.
ಇಳಿವಯಸ್ಸಿನ ಅಂಧ ತಂದೆ- ತಾಯಿಗಳನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆಗೆ ಕರೆದುಕೊಂಡು ಹೋದ ಶ್ರವಣಕುಮಾರನ ಕಥೆ ಎಲ್ಲರಿಗೂ ಗೊತ್ತು. ಅದು ತ್ರೇತಾಯುಗದ ಕಥೆಯಾಯ್ತು, ಕಲಿಯುಗದಲ್ಲಿ ಅಂಥವರು ಇರಲಿಕ್ಕಿಲ್ಲ. ಆದರೆ, ಈಗ ಶ್ರವಣಕುಮಾರನ ಕೆಲಸವನ್ನು ಸ್ಟಾರ್ಟ್‌ಅಪ್ ಕಂಪನಿಯೊಂದು ತನ್ನ ಹೆಗಲಿಗೇರಿಸಿಕೊಂಡಿದೆ.
ಪ್ರವಾಸ ಹೋಗುವ ಕನಸು ಹೊಂದಿರುವ ದಿವ್ಯಾಂಗರ ಕನಸಿಗೆ ರೆಕ್ಕೆಯಾಗಲು, ಅವರನ್ನು ಜತನದಿಂದ ಊರು ಸುತ್ತಿಸಲು ಮುಂಬೈ ನ ಡೆಬೋಲಿನ್ ಸೇನ್ ಎಂಬವರು ಸ್ಟಾರ್ಟ್‌ಅಪ್ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಕಾಕ್ಸ್ ಆ್ಯಂಡ್ ಕಿಂಗ್ ಕಂಪನಿಯ ಸಹಭಾಗಿತ್ವದ “ ಎನೇಬಲ್ ಟ್ರಾವೆಲ್’ ಹೆಸರಿನ ಈ ಕಂಪನಿ ದಿವ್ಯಾಂಗರ ಟೂರ್ ಪ್ಯಾಕೇಜ್ ಅನ್ನು ಎ-ಝೆಡ್ ಪ್ಲಾನ್ ಮಾಡುತ್ತದೆ. ಪ್ರವಾಸದಲ್ಲಿ ಏನೆಲ್ಲ ನೋಡಬೇಕು, ಎಲ್ಲಿ ಉಳಿದುಕೊಳ್ಳಬೇಕು, ಎಲ್ಲಿ ತಿನ್ನಬೇಕು, ಹೇಗೆ ಹೋಗಬೇಕು ಎಂಬೆಲ್ಲಾ ಮಾಹಿತಿಗಳನ್ನು ತನ್ನ ಗ್ರಾಹಕರಿಗೆ ನೀಡುತ್ತದೆ.
ಕಂಪನಿಯ ಸ್ಥಾಪಕ ಡೆಬೋಲಿನ್ ಸೇನ್ ಸ್ವತಃ ಪ್ರವಾಸಪ್ರಿಯರು. ಆದರೆ, ಪ್ರವಾಸದ ಸಮಯದಲ್ಲಿ ದಿವ್ಯಾಂಗರು ಎದುರಿಸುವ ಅನನುಕೂಲಗಳನ್ನು ಊಹಿಸುವುದು ಅವರಿಗೂ ಕಷ್ಟವಾಯ್ತು. ಹಾಗಾಗಿ ದಿವ್ಯಾಂಗರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಪರಿಣತರ ಒಂದು ತಂಡವನ್ನು ರಚಿಸಿ, ಅವರ ನೆರವನ್ನು ಪಡೆದರು. ಬೇರೆ ಬೇರೆ ರೀತಿಯ ಊನ ಹೊಂದಿರುವವರ ಅನುಕೂಲಕ್ಕೆ ತಕ್ಕಂತೆ ಪ್ಯಾಕೇಜ್ ರೂಪಿಸಲು ಈ ತಂಡ ಬಹಳ ಶ್ರಮ ವಹಿಸಿದೆ. ಬೇರೆ ಬೇರೆ ಪ್ರವಾಸಿ ತಾಣಗಳಿಗೆ, ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಖುದ್ದಾಗಿ ಭೇಟಿ ನೀಡಿ, ಅಲ್ಲಿ ಇರುವ ಅನುಕೂಲ, ಅನನುಕೂಲಗಳ ಬಗ್ಗೆ ಈ ತಂಡ ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ವ್ಹೀಲ್‌ಚೇರ್ ಪ್ರವಾಸಿಗರಿಗೆ, ಅಂಧರಿಗೆ, ಮಾತು ಬಾರದವರು, ಶ್ರವಣ ದೋಷವುಳ್ಳವರು- ಹೀಗೆ ಎಲ್ಲರಿಗೂ ಬೇರೆ ಬೇರೆ ಪ್ಯಾಕೇಜ್ ರೂಪಿಸಲಾಗಿದೆ.
ಹೀಗೊಂದು ಕಂಪನಿ ಶುರುಮಾಡುವ ಮುನ್ನ ಸೇನ್ ಬಹಳಷ್ಟು ಲೆಕ್ಕಾಚಾರ ಹಾಕಿದ್ದಾರೆ. ಕಳೆದ ವರ್ಷ ದ ಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 27 ಮಿಲಿಯನ್ (2.7 ಕೋಟಿ ) ದಿವ್ಯಾಂಗರಿದ್ದಾರೆ. ಅದರಲ್ಲಿ ಶೇ.1 ಮಂದಿಗೆ ಪ್ರವಾಸದ ಕನಸು ಇದ್ದರೂ 2 ಲಕ್ಷದ 70 ಸಾವಿರ ಜನರನ್ನು ಟಾರ್ಗೆಟ್ ಮಾಡಬಹುದು. ಮುಂದೆ ಈ ಸಂಖ್ಯೆ ಹೆ ಚ್ಚು ವ ಸಾಧ್ಯ ತೆ ಯೂ ಇದೆ. ದಿವ್ಯಾಂಗರು ಯಾವತ್ತೂ ಏಕಾಂಗಿಯಾಗಿ ಪ್ರವಾಸಕ್ಕೆ ಹೊರಡುವುದಿಲ್ಲ. ಅವರ ಜೊತೆಗೆ ಯಾರಾದರೊಬ್ಬರು ಇರುತ್ತಾರೆ. ಅದು ಕೂಡ ಕಂಪನಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಸದ್ಯಕ್ಕೆ ಬೆಂಗಳೂರು, ಮೈಸೂರು, ಕೊಡಗು, ಜೈಪುರ, ಕೊಚ್ಚಿ ಮತ್ತು ದೆಹಲಿ ಈ ಕಂಪನಿಯ ಟೂರ್ ಪ್ಯಾಕೇಜ್‌ನಲ್ಲಿರುವ ಸ್ಥಳಗಳು. 30 ಹೊಸ ಸ್ಥಳಗಳನ್ನು ತನ್ನ ಪ್ಯಾಕೇಜ್‌ಗೆ ಸೇರಿಸಿಕೊಳ್ಳುವ ಯೋಜನೆಯಿದೆ. ಹಾಗೆಯೇ ಸಂಜ್ಞಾಭಾಷೆ ಬಲ್ಲವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗು ತ್ತಿದೆ. ವ್ಹೀಲ್‌ಚೇರ್‌ನವರಿಗೆ ಟ್ರೆಕ್ಕಿಂಗ್, ಶಾರ್ಟ್ ಹೈಕ್ಸ್, ಡೈವಿಂಗ್ ಸೌಲಭ್ಯ ಕಲ್ಪಿಸಿಕೊಡುವ ಸೇನ್ ಅವರದ್ದು. Fireflyworld.org ಎಂಬ ವೆಬ್‌ಸೈಟ್ ಮೂಲಕ ಪ್ರವಾಸಿಗರ ಒಂದು ನೆಟ್‌ವರ್ಕ್ ಅನ್ನು ರೂಪಿಸಲಾಗಿದೆ. ಇಲ್ಲಿಯವರೆಗೆ 110 ಪ್ರವಾಸಿಗರನ್ನು ಪ್ರವಾಸಕ್ಕೆ ಕಳುಹಿಸಲಾಗಿದ್ದು, ಅಕ್ಟೋಬರ್- ನವೆಂಬರ್‌ನಲ್ಲಿ ಇನ್ನೂ 68 ಜನರು ಪ್ರವಾಸ ಹೊರಡಲಿದ್ದಾರೆ.
ನೋಡಿ, ಈ ಜಗತ್ತಿನಲ್ಲಿ ಸ್ಟಾರ್ಟ್ ಅಪ್‌ಗೆ ಏನೆಲ್ಲಾ ಐಡಿಯಾ ಇದೆ ಅಂತ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.