ಕನಸು ದೋಚಿದೆ, ಈಗ ಕನಸೇ ಬೀಳುತ್ತಿಲ್ಲ!
Team Udayavani, Dec 26, 2017, 7:40 AM IST
ಈಗಂತೂ ನಿನ್ನ ನೆನಪಲ್ಲಿ ನಗುತ್ತೇನೆ, ಅಳುತ್ತೇನೆ, ಕೆಲವೊಮ್ಮೆ ಮೌನದ ಮೊರೆ ಹೋಗುತ್ತೇನೆ. ಮಗದೊಮ್ಮೆ ಜೀವವಿದ್ದೂ ನಿರ್ಜೀವವಾಗುತ್ತೇನೆ. ಒಮ್ಮೊಮ್ಮೆ ನನ್ನನ್ನೇ ನಾನು ಮರೆತು ನೀನೇ ಆಗುತ್ತೇನೆ!
ಮನದಲ್ಲಿ ಸಾವಿರ ಮಾತಿದೆ, ಹೇಳ್ಳೋಕಾಗ್ತಿಲ್ಲ. ಕಣ್ಣ ತುಂಬಾ ನೀರಿದೆ, ಅಳ್ಳೋಕಾಗ್ತಿಲ್ಲ. ಹೃದಯಕ್ಕೆ ಭಾರವಾದ ನೋವಿದೆ, ತೋರಿಸ್ಕೋಳ್ಳೋಕ್ಕಾಗ್ತಿಲ್ಲ. ಯಾಕಂದ್ರೆ, ನಾನು ಅಂದುಕೊಂಡ ಹಾಗೆ ಯಾವುದೂ ನಡೆಯುತ್ತಿಲ್ಲ. ನೀನು ಜೊತೆ ಇ¨ªಾಗ ನಿನ್ನನ್ನೇ ಕೇಳ್ತಾ ಇ¨ªೆ, ಪ್ರೀತಿ ಎಂದರೆ ಏನೆಂದು? ನೀನು ನನ್ನನ್ನು ಅಗಲಿದಾಗ ನನಗನ್ನಿಸಿತು, ಅದು ನೀನೇ ಎಂದು.
ಹೇಗೆ ಮರೆಯಲಿ ನಡೆದುಹೋದ ದಾರಿ? ಹೇಗೆ ಮರೆಯಲಿ ನಾನು ನುಡಿದ, ನಲಿದ ಮಾತು? ಹೇಗೆ ಮರೆಯಲಿ ಕಳೆದ ಮಧುರ ಸಮಯ, ಹಾಡಿ ಕುಣಿದ ದಿನವ? ಹೇಗೆ ಮರೆಯಲಿ ನಾನು ನಿನ್ನ ಪ್ರೇಮವ? ನನ್ನ ಮರೆತುಬಿಡು ಎಂದು ಹೇಳುವುದು ಸುಲಭ, ಆದರೆ ಮರೆಯುವುದೇ ಕಷ್ಟ. ಯಾಕೆಂದರೆ ಪ್ರೀತಿಗೆ ನೆನೆಯುವುದು ಮಾತ್ರವೇ ಗೊತ್ತು ವಿನಹ ಮರೆಯುವುದಲ್ಲ ಕಣೋ. ಹಾಗೆಯೇ ಮರೆಯೋಕೆ ನಾನು ಕೊಟ್ಟಿರೋದು ಹಣ ಒಡವೇನಲ್ಲ, ನನ್ನ ಹೃದಯಾನಾ. ನನ್ನ ಮನಸ್ಸನ್ನೇನು ಮೆಮೊರಿ ಕಾರ್ಡ್ ಅಂತ ತಿಳ್ಕೊಂಡಿದ್ದೀಯಾ? ಬೇಕು ಅಂದಾಗ ಪ್ರೀತಿ ಡೌನ್‌ಲೋಡ್ ಮಾಡು, ಬೇಡ ಅಂದಾಗ ಡಿಲೀಟ್ ಮಾಡು ಅಂತ ಹೇಳ್ಳೋಕೆ?
ನೀನು ಬಿಟ್ಟು ಹೋಗಿರುವ ಈ ನನ್ನ ಜೀವ ಅದೆಷ್ಟು ದಿನ ಅಂತ ಜೀವಿಸುವುದು ಗೆಳೆಯ? ನಿನ್ನ ಕಣ್ಣುಗಳನ್ನು ನಕ್ಷತ್ರಗಳಿಗೆ ಹೋಲಿಸಿ ಸಂಭ್ರಮಿಸಿದ್ದೆ ನಾನು. ಆದರೆ ನನ್ನ ಕತ್ತಲೆಗೆ ಒಂದಿಷ್ಟು ಬೆಳಕು ನೀಡದೆ ಹೋಗಿದ್ದು ನೀನು. ಇನ್ನಾದರು ನಗು ಗೆಳೆಯ. ಈಗ ನಾನಿಲ್ಲ ನಿನ್ನ ಬಾಳಿನಲಿ. ಹೋಗುವೆ ಬಲುದೂರ ಅದೆÇÉೊ ಮೋಡಗಳ ಸಾಲಿನಲಿ. ನಾ ಇರಬೇಕಿತ್ತು ನಿನ್ನೊಂದಿಗೆ ಎಂದೆನಿಸಿದರೆ ಕೈಚಾಚು, ಮಳೆಯಾಗಿ ಆವರಿಸುವೆ, ನಿನ್ನಯ ತೋಳಿನಲಿ.
ಆ ದಿನ ನನ್ನ ಎದೆಯ ಮೇಲೆ ಕಿವಿಯಿಟ್ಟು ನನ್ನ ಹೃದಯ ಬಡಿತ ಕೇಳಿದೆಯಲ್ಲ… ನನ್ನ ಹೃದಯ ಬಡಿತ ಹೇಳಿದ್ದು ನಿನ್ನ ಹೆಸರನ್ನೇ ಕಣೋ. ಒಡೆದರೂ ನನ್ನೆದೆ ಮಿಡಿಯುತ್ತಿದೆ ನಿನಗಾಗಿ. ಕನಸುಗಳನ್ನೆಲ್ಲ ದೋಚಿಕೊಂಡೆ, ಈಗ ಕನಸುಗಳೇ ಬೀಳುತ್ತಿಲ್ಲ. ಕಂಬನಿಯನ್ನೂ ನೀನೇ ದೋಚಿಕೊಂಡೆ, ಆದರೆ ಕಂಬನಿಯೇಕೋ ನಿಲ್ಲುತ್ತಿಲ್ಲ ನಿನ್ನ ನೆನಪಲ್ಲಿ. ಕಳೆದು ಹೋದ ಪ್ರೀತಿಯನ್ನು ಮತ್ತೆ ಮತ್ತೆ ಬಯಸುತ್ತಿದ್ದೇನೆ ಅಂದರೆ ಬೇರೆ ಪ್ರೀತಿ ಸಿಗಲ್ಲ ಅಂತ ಅಲ್ಲ ಕಣೊ. ಈ ಜೀವಕ್ಕೆ ನಿನ್ನಷ್ಟು ಪ್ರೀತಿಸುವ ಇನ್ನೊಂದು ಜೀವ ಸಿಗಲ್ಲ ಅಂತ. ನೆನಪಿನ ತೀರದಲ್ಲಿ ನೀನೆಂದೂ ನನ್ನವನು. ಕಾರಣ, ನಿನ್ನ ನೆನಪÇÉೇ ನಾನು ಜೀವಿಸುತ್ತೇನೆ ಅಂತಲ್ಲ. ನೀ ನೆನಪಾಗೋ ವೇಳೆ ಮಾತ್ರ ನಾನು ಜೀವಿಸುತ್ತೇನೆ.
ನನ್ನ ಆಯಸ್ಸು ಇರುವವರೆಗೆ ನನಗೆ ನಿನ್ನ ಪ್ರೀತಿ ಬೇಕು. ಇಲ್ಲದಿದ್ದರೆ ನಿನ್ನ ಪ್ರೀತಿ ಇರೋವರೆಗೂ ನನಗೆ ಆಯಸ್ಸು ಸಾಕು. ಈಗಂತೂ ನಿನ್ನ ನೆನಪಲ್ಲಿ ನಗುತ್ತೇನೆ, ಅಳುತ್ತೇನೆ, ಕೆಲವೊಮ್ಮೆ ಮೌನದ ಮೊರೆ ಹೊಗುತ್ತೇನೆ. ಮಗದೊಮ್ಮೆ ಜೀವವಿದ್ದೂ ನಿರ್ಜೀವವಾಗುತ್ತೇನೆ. ಒಮ್ಮೊಮ್ಮೆ ನನ್ನನ್ನೇ ನಾನು ಮರೆತು ನೀನೇ ಆಗುತ್ತೇನೆ!
ಕಡೇ ಪಕ್ಷ ಬಯ್ಯೋದಕ್ಕಾದ್ರು ಒಮ್ಮೆ ಮಾತನಾಡು ಗೆಳೆಯ. ನಿನ್ನ ಧ್ವನಿ ಕೇಳಲು ತವಕಿಸುತ್ತಿದೆ ಈ ನನ್ನ ಬಡಪಾಯಿ ಹೃದಯ..
-ಇಂತಿ ನಿನ್ನ ಹೃದಯವಾಸಿ
ಚಿನ್ನಿ.
ಉಮ್ಮೆ ಅಸ್ಮ ಕೆ.ಎಸ್.