ಖುಷಿ ಕೊಡುವ ಕೃಷಿ ಎಂಜಿನಿಯರಿಂಗ್
Team Udayavani, Jan 14, 2020, 5:31 AM IST
ಕೈ ಕೆಸರು ಮಾಡಿಕೊಂಡು, ಬಾಯಿಗೆ ಮೊಸರು ಹಾಕಿಕೊಳ್ಳುವುದು ಇವತ್ತು ಎಂಜಿನಿಯರಿಂಗ್ ಆಗಿದೆ. ಕೃಷಿ ಎಂದರೆ, ಅಪ್ಪ ಹಾಕಿದ ಆಲದ ಮರದಂತಲ್ಲ. ಅದರ ಸುತ್ತಲೂ ನಮ್ಮ ತಂತ್ರಜ್ಞಾನದ ಮೂಲಕ ವಿಶೇಷ ಬೆಳೆಗಳನ್ನು ತೆಗೆಯಬಹುದು. ಕೃಷಿಗೆ ತಂತ್ರಜ್ಞಾನವನ್ನು ಜೋಡಿಸುವವನು ಕೃಷಿ ಎಂಜಿನಿಯರ್. ಈಗ ಈ ಕೋರ್ಸ್‌ಗೆ, ಅದನ್ನು ಪೂರೈಸಿದೆ ಎಂಜಿನಿಯರ್‌ಗೆ ಒಳ್ಳೊಳ್ಳೆ ಕಂಪೆನಿಗಳಲ್ಲಿ ಉದ್ಯೋಗ ದೊರೆಯುತ್ತಿದೆ.
ಎಂಜಿನಿಯರಿಂಗ್ ವಿಭಾಗಗಳಲ್ಲಿ ಅತ್ಯಂತ ಆಕರ್ಷಕವಾಗಿ ಕಾಣುವುದು ಕೃಷಿ ಇಂಜಿನಿಯರಿಂಗ್ ಪದವಿ. ಕೃಷಿಗೆ ಸಂಬಂಧಿಸಿದ ಕಾಮಗಾರಿ, ಕೃಷಿ ಉಪಕರಣಗಳ ವಿನ್ಯಾಸ, ನಿರ್ಮಾಣ; ಕೃಷಿ ಯಂತ್ರಗಳ ಆವಿಷ್ಕಾರ-ಇವೆಲ್ಲವೂ ಕೃಷಿ ಇಂಜಿನಿಯರಿಂಗ್‌ನ ಕೊಡುಗೆ. ತಂತ್ರಜ್ಞಾನವನ್ನು ಕೃಷಿಯೊಂದಿಗೆ ಮೇಳೈಸುವುದೇ ಕೃಷಿ ಇಂಜಿನಿಯರಿಂಗ್. ಸಾಂಪ್ರದಾಯಿಕ ಕೃಷಿ, ಉಪಕರಣಗಳ ಬಳಕೆಯಿಂದ ಆಧುನಿಕ ಜಗತ್ತಿನ ಆಹಾರ ಬೇಡಿಕೆಗಳನ್ನು ಪೂರೈಸಲಾಗುವುದಿಲ್ಲ. ಹೊಸ ಮಾದರಿಯಲ್ಲಿ ನೀರಿನ ಸಂಗ್ರಹವಾಗಬೇಕು, ಜಲಸಂರಕ್ಷಣೆಯಾಗಬೇಕು. ಹೊಸಕಾಲದ ಸಂಗ್ರಹಕೋಠಿಗಳು, ಅಣೆಕಟ್ಟುಗಳು ಮತ್ತಿತರ ಸೌಕರ್ಯಗಳನ್ನು ಸೃಜಿಸುವುದರ ಅಗತ್ಯವಿದೆ. ಈ ಅಗತ್ಯವನ್ನು ಪೂರೈಸುವುದೇ ಕೃಷಿ ಇಂಜಿನಿಯರಿಂಗ್. ಕೇವಲ ಸೌಕರ್ಯಗಳನ್ನಷ್ಟೇ ಅಲ್ಲದೆ ಹೊಸ ಕಾಲದ ಸವಾಲುಗಳನ್ನು ಕೂಡ ಅದು ಸ್ವೀಕರಿಸುತ್ತದೆ. ಕೃಷಿ ತ್ಯಾಜ್ಯದ ಸಂಸ್ಕರಣ, ಕೃಷಿಯ ಕಾರಣದಿಂದ ಉಂಟಾಗಬಹುದಾದ ಮಾಲಿನ್ಯ ನಿವಾರಣೆ, ನಿಯಂತ್ರಣ ಇವೆಲ್ಲವೂ ಕೂಡ ಈ ಕಲಿಕೆಗೆ ಸಂಬಂಧಿಸಿದ್ದೇ ಪಾಚಿ, ಕೃಷಿ ತ್ಯಾಜ್ಯದ ಸಂಸ್ಕರಣಗಳಿಂದ ಹೊಸ ಬಗೆಯ ಜೈವಿಕ ಇಂಧನಗಳನ್ನು ಕೆಲವು ಕೃಷಿ ಇಂಜಿನಿಯರ್‌ಗಳು ಉತ್ಪಾದಿಸುವ ಪ್ರಯತ್ನಕ್ಕೂ ಕೈ ಹಾಕಿದ್ದಾರೆ.
ಕೃಷಿ ಇಂಜಿನಿಯರಿಂಗ್ ಸೇರುವುದು ಹೇಗೆ?
ಕೃಷಿ ಇಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆಯಲು ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನವನ್ನು ಐಚ್ಛಿಕವಾಗಿ ಓದಿದವರು, ಅದರಲ್ಲಿ ಕನಿಷ್ಠ ಶೇ. 50 ಅಂಕ ಗಳಿಸಿರುವವರು ಅರ್ಹರು. ಇದರಲ್ಲೇ ಸ್ನಾತಕೋತ್ತರ ಪದವಿ ಪಡೆಯಲು ಕೃಷಿ ಇಂಜಿನಿಯರಿಂಗ್ ಪದವೀಧರರಾಗಿದ್ದು, ವಿ.ವಿ. ವಿಧಿಸುವ ಇತರ ಮಾನದಂಡಗಳನ್ನು ಹೊಂದಿರಬೇಕು.ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಕೆಲವು ಪ್ರವೇಶ ಪರೀಕ್ಷೆಗಳಿರುತ್ತವೆ. ಆಯಾ ರಾಜ್ಯದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುವ ಈ ಪರೀಕ್ಷೆಗಳಲ್ಲಿ ಮುಖ್ಯವಾದವೆಂದರೆ- ICAR (Indian Council of Agricultural Research), AIEEE, JAT, UPSEAT, NERIST, GAT, IIT-JAM. ಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ, ಸಾಯಿಲ್ ಸೈನ್ಸ್, ಹೈಡ್ರಾಲಜಿ, ಸಾಯಿಲ್ ಆಂಡ್ ವಾಟರ್ ಕನ್ಸ್‌ರ್ವೆಷನ್ ಇಂಜಿನಿಯರಿಂಗ್, ಇರಿಗೇಷನ್ ಇಂಜಿನಿಯರಿಂಗ್, ಗ್ರೌಂಡ್ ವಾಟರ್ ಅಂಡ್ ವೆಲ್ ಇಂಜಿನಿಯರಿಂಗ್, ಪಂಪ್ಸ್ ಎಂಜಿನಿಯರಿಂಗ್ ಅಂಡ್ ಹೈಡ್ರಾಲಿಕ್ ಕಂಟ್ರೋಲ್ ಮುಂತಾದ ವಿಷಯಗಳನ್ನು ಕಲಿಯಬಹುದು.
ಕೃಷಿ ಇಂಜಿನಿಯರಿಂಗ್ ಕೆರಿಯರ್
ಕೃಷಿ ಎಂಜಿನಿಯರ್‌ಗಳು ಫಾರ್ಮಿಂಗ್, ಫಾರೆಸ್ಟ್ರಿ, ಆಹಾರ ಸಂಸ್ಕರಣ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಬಹುದು. ಉದಾಹರಣೆ-ಪಶುಸಂಗೋಪನೆಗೆ ಸಂಬಂಧಿಸಿದಂತೆ ಕೊಟ್ಟಿಗೆಯ ತಾಪಮಾನ ನಿಯಂತ್ರಿಸುವ ಉಪಕರಣದ ಮೂಲಕ ಪಶುಸಂವರ್ಧನೆಗೆ ಅವರು ನೆರವಾಗಬಹುದು. ಭೂಮಿಯ ಫಲವತ್ತತೆಯನ್ನು ಅಳೆಯುವ ಆಧುನಿಕ ತಂತ್ರಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ನ ಬಳಕೆ ಕೂಡ ಇಲ್ಲಿ ಉಂಟು. ಅಗ್ರಿಕಲ್ಚರಲ್ ಇಂಜಿನಿಯರ್, ಪ್ಲಾಂಟ್ ಫಿಸಿಯಾಲಜಿಸ್ಟ್, ಎನ್ವಿರಾನ್‌ಮೆಂಟಲ್ ಕಂಟ್ರೋಲ್ಸ್ ಎಂಜಿನಿಯರ್, ಫುಡ್ ಸೂಪರ್‌ವೈಸರ್, ಫಾರ್ಮ್ಶಾಪ್ ಮ್ಯಾನೇಜರ್, ಅಗ್ರಿಕಲ್ಚರಲ್ ಕ್ರಾಪ್ ಎಂಜಿನಿಯರ್ ಮೊದಲಾದ ಹುದ್ದೆಗಳಿಗೆ ಇವರು ಸೇರಬಹುದು. ಅಂಕಿ ಅಂಶಗಳ ಪ್ರಕಾರ, ಕೃಷಿ ಎಂಜಿನಿಯರಿಂಗ್ ಮುಗಿಸಿದ ಪದವೀಧರರಲ್ಲಿ ಶೇ.17ರಷ್ಟು ಅಗ್ರಿಕಲ್ಚರಲ್ ಎಂಜಿನಿಯರ್‌ಗಳಾಗಿ, ಶೇ.16ರಷ್ಟು ಮಂದಿ ಸರ್ಕಾರಿ ಇಲಾಖೆಗಳಲ್ಲಿ, ಶೇ.14ರಷ್ಟು ಜನ ಆಹಾರ ತಯಾರಿಕಾ ಘಟಕಗಳಲ್ಲಿ, ಶೇ.13ರಷ್ಟು ಅಗ್ರಿಕಲ್ಚರಲ್ ಕನ್ಸ್‌ಟ್ರಕ್ಷನ್ ಮತ್ತು ಮೈನಿಂಗ್ ಯಂತ್ರಗಳ ಉತ್ಪಾದನೆಗಳಲ್ಲಿ ಮತ್ತು ಶೇ.6ರಷ್ಟು ಜನ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮುಲ್, ನೆಸ್ಲೆ, ಐಟಿಸಿ, ಎಸ್ಕಾರ್ಟ್ಸ್, ಪೊ› ಆಗ್ರೋಸೀಡ್ಸ್ ಮೊದಲಾದ ಕಂಪೆನಿಗಳಲ್ಲಿ ಕೃಷಿ ಇಂಜಿನಿಯರ್‌ಗಳ ನೇಮಕಾತಿ ನಡೆಯುತ್ತಿರುತ್ತದೆ. ಆರಂಭದಲ್ಲಿ ಮಾಸಿಕ ಪಗಾರ 30-40 ಸಾವಿರಗಳಷ್ಟಿದ್ದು, ಕ್ರಮೇಣ ಹೆಚ್ಚುತ್ತದೆ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎನ್ನುವುದು ಈ ಕೃಷಿ ಎಂಜಿಯರಿಂಗ್ ಮಟ್ಟಿಗೆ ನಿಜ!
ಪ್ರೊ. ರಘು. ವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.