ಡಿಗ್ರಿ ಹುಡ್ಗಿಯ ರೊಮ್ಯಾಂಟಿಕ್‌ ಎಸ್ಸೇ


Team Udayavani, Jan 10, 2017, 3:45 AM IST

Babydoll-Movie-Stills-1.jpg

ಮೋಡಗಳು ಅಂದ ತಕ್ಷಣ ಬಿಳಿಯಾಗಸದ ನೆನಪಾಗುತ್ತದೆ. ಮಳೆಯ ಮುನ್ಸೂಚನೆ ಅಂತ ಭಾವಿಸೋದು ಕೂಡ ಸಹಜ. ಆದರೆ ನಿಜವಾಗಿಯೂ ಮೋಡಗಳು ಹೇಗೆಲ್ಲಾ ನನ್ನನ್ನು ಆಕರ್ಷಿಸುತ್ತದೆ ಎಂದರೆ ನನಗೆ ಅದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಾಗದ ಸಂಗತಿ ಅಂತಲೇ ಹೇಳಬಹುದು. ಆದರೂ ಇಲ್ಲಿ ಮೋಡಗಳ ಆಕರ್ಷಣೆಗೆ ಮಾರುಹೋದ ನಾನು ಅದರ ಬಗ್ಗೆ ಕೆಲವು ಸಂಗತಿಗಳನ್ನು ಹಂಚಿಕೊಳ್ಳ ಬಯಸುತ್ತೇನೆ.

ನನಗೆ ಮೋಡ ಅಂದ್ರೆ ಅದೇನೋ ಆನಂದ. ಹೇಳತೀರದ ಸಂತೋಷ. ರಜಾ ದಿನಗಳಲ್ಲಿ ಸಂಜೆ ಯಾವಾಗ ಆಗುವುದೋ ಎಂದು ಕಾದಿರುತ್ತೇನೆ. ಏಕೆಂದರೆ ಆ ಸಂದರ್ಭದಲ್ಲಿ ಮೋಡಗಳನ್ನ, ಆಕಾಶವನ್ನ ನೋಡೋ ಮಜಾನೇ ಬೇರೆ. ಅದನ್ನ ಅನುಭವಿಸಿದವರಿಗೆ ಮಾತ್ರ ಗೊತ್ತು. ಅದು ಎಷ್ಟು ಮಾದಕ ಅಂತ. ಸೂರ್ಯೋದಯದ ಸಂದರ್ಭದಲ್ಲೂ ಈ ರೀತಿಯ ಸವಿಯನ್ನ ಸವಿಯಬಹುದು. ಆದರೆ ಇದನ್ನು ಕೈಗೊಳ್ಳಲು ಮಹಾನ್‌ ಧ್ಯೇಯದ ಅಗತ್ಯವಿರುತ್ತದೆ. ಏಕೆಂದರೆ ನಿದ್ದೆಗೆಡುವಂತಹ ದೊಡ್ಡ ಸಾಹಸಿ ಕೆಲಸದ ಅಗತ್ಯವಿರುತ್ತದೆ. (ಎಲ್ಲರಿಗಲ್ಲದಿದ್ದರೂ ನನ್ನ ಪಾಲಿಗಂತೂ ಅದು ಮಹಾನ್‌ ಸಾಹಸ) 

ನಾನು ನಿಜವಾಗಿಯೂ ಸೂರ್ಯೋದಯಕ್ಕೆ ಮುಂಚೆಯೇ ಎದ್ದಿದ್ದೇನೆ ಎಂದರೆ, ಒಂದಾ ನನಗೆ ಯಾವುದೋ ಪರೀಕ್ಷೆ ಇರಬಹುದು. ಇಲ್ಲಾ ಯಾವುದೋ ಅಸೈನ್‌ಮೆಂಟ್‌ ಅಂದೇ ಕೊಡಬೇಕಾಗಿರಬೇಕು. ಇಲ್ಲದ್ದಿದ್ದರೆ ಹಾಗೆಲ್ಲ ಸುಮ್ಮನೆ ನಿದ್ದೆಗೆಡಿಸಿಕೊಳ್ಳುವವರ ಸಾಲಿಗೆ ಸೇರಿದವಳಲ್ಲ ನಾನು. ಮೋಡಗಳಿಗಿಂತಲೂ ಮುಖ್ಯ ನನ್ನ ಪಾಲಿಗೆ ನಿದ್ದೆ!

ಆದ್ದರಿಂದ 5 ಗಂಟೆಯ ತನಕ ಕಾಯುತ್ತಿರುತ್ತೇನೆ. ನಾಲ್ಕೈದು ಗಂಟೆಗೆ ಮಹಡಿಯಲ್ಲಿ ಹೋಗಿ ಕುಳಿತರೆ ಆಹಾ! ಸ್ವರ್ಗವೇ ಧರೆಗಿಳಿದಂತೆ. ಅಲ್ಲಿ ಹೋಗಿ ಆಕಾಶವನ್ನು ನೋಡುತ್ತಿದ್ದರೆ ಪ್ರಪಂಚದ ಪರಿವೆಯೇ ಇರುವುದಿಲ್ಲ. ಯಾವುದೋ ಹೊಸಲೋಕದಲ್ಲಿ, ಹಾಗೆಯೇ ಆಕಾಶವೆಂಬ ಸಮುದ್ರದಲ್ಲಿ ತೇಲಾಡುವಂತೆ ಭಾಸವಾಗುತ್ತದೆ. ಹಕ್ಕಿಗಳಿಗೂ ನಮಗೂ ಯಾವುದೇ ರೀತಿಯಲ್ಲಿ ವ್ಯತ್ಯಾಸವಿರುವುದಿಲ್ಲ. ಬಹುಶಃ ಅದರ ಜೀವನ ಎಷ್ಟು ಚೆಂದ ಎಂಬುದು ನಮಗೆ ಅರ್ಥವಾಗುತ್ತದೆ. ನಾವು ಸ್ವತ್ಛಂದತೆಯ ಒಂದಂಶದ ಬಗ್ಗೆ ತಿಳಿಯಬಹುದು ಮತ್ತು ಅಷ್ಟೂ ಹೊತ್ತು ಅದರಒಂದು ತುಣುಕನ್ನು ಸವಿಯಬಹುದು.

ಮೋಡಗಳನ್ನು ಸದಾ ಗಮನಿಸುವ ನನ್ನ ಮನಸ್ಸಿಗೆ ಹಲವಾರು ರೀತಿಯ ಆಕೃತಿಗಳು ಅದರಲ್ಲಿ ಕಾಣಸಿಗುತ್ತದೆ. ಪ್ರತಿಬಾರಿ ನಾನು ಅದನ್ನು ಗಮನಿಸಿದಾಗಲೂ ನಾನು ಯಾವುದೋ ವಸ್ತುಗೋ ಅಥವಾ ವ್ಯಕ್ತಿಗೋ ಹೊಲಿಸುವುದು ವಾಡಿಕೆ. ಅದು ನನ್ನ ಬದುಕನ್ನು ನಾನೇ ಪರಾಮರ್ಶಿಸಲು ಅನುವು ಮಾಡಿಕೊಡುತ್ತದೆ. ಎಷ್ಟೋ ಬಾರಿ ಆತ್ಮಾವಲೋಕನ ಮಾಡಿಕೊಂಡಾಗ ನಾವು ಮಾಡಿದ ಸರಿತಪ್ಪುಗಳನ್ನ ತಿದ್ದಿಕೊಂಡು ಬದುಕು ಸಾಗಿಸಲು ಅದು ಸಹಾಯಕವಾಗುತ್ತದೆ.

ಮೋಡಗಳು ನನಗೆ‌ ಕಂಡಂತೆ ನನ್ನ ಪಕ್ಕದಲ್ಲಿದ್ದವರಿಗೆ ಕಾಣಬೇಕೆಂಬುವ ಕಟ್ಟುಪಾಡೇನೂ ಇಲ್ಲ. ಎಲ್ಲವೂ ಅವರವರ ಭಾವಭಕುತಿಗೆ ಬಿಟ್ಟದ್ದು. ಆದರೂ ದೃಷ್ಟಿಕೋನವೂ ಜೀವನದಲ್ಲಿ ಒಂದು ಮಹತ್ವದ ಪಾಠವನ್ನು ಕಲಿಸುತ್ತದೆ. ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಹಳದಿ ಎನ್ನುವ ಹಾಗೇ. ಮೇಘ ಸಂದೇಶ ಎಂಬುವ ಕಲ್ಪನೆಯೂ ಬಹುಶಃ ಇಂತಹದ್ದೇ ಒಂದು ದೃಷ್ಟಿಕೋನದ ಕಾಣಿಕೆ ಎಂದೆನಿಸುತ್ತದೆ.

ನಾನು ನನಗೆ ಕಾಣುವ ಆ ಮೋಡಗಳ ಚಿತ್ತಾರವನ್ನು ನನ್ನ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತೇನೆ. ಆದರೆ ಪ್ರತಿ ಬಾರಿಯೂ ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರಕ್ಕೂ ನನ್ನ ಮೊಬೈಲ್‌ನಲ್ಲಿ ಸೆರೆಯಾದ ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸ. ಎಷ್ಟೇ ಟೆಕ್ನಾಲಜಿ ಮುಂದುವರೆದಿದ್ದರೂ ಪ್ರಕೃತಿಯನ್ನು ಹಿಮ್ಮೆಟ್ಟಿಸಲು ಯಾವುದಕ್ಕೂ ಸಾಧ್ಯವಿಲ್ಲ. ಆದರೂ ಆ ಹುಚ್ಚು ಮಾತ್ರ ನನ್ನನ್ನು ಬಿಟ್ಟಿಲ್ಲ. ಈಗಲೂ ಯಾವಾಗಲಾರದೂ ಸಮಯ ಸಿಕ್ಕಾಗ ಮೋಡಗಳನ್ನು ನೋಡಲು ಹೋದಾಗ ನನ್ನ ಫೋನ್‌ ನನ್ನಜೊತೆಯಲ್ಲಿದ್ದೇ ಇರುತ್ತದೆ. 

ಇನ್ನೊಂದು ಕಿವಿ ಮಾತಿದೆ. ಮೋಡಗಳನ್ನ ಅಥವ ಆಕಾಶವನ್ನ ಕಾಣುವಾಗ ನಮ್ಮಲ್ಲಿನ ಮುಗ್ಧತೆ ಹೆಚ್ಚಿ ಮನಸ್ಸನ್ನು ತಿಳಿಯಾಗಿಸುತ್ತದೆ. ಅದು ಒಂದು ರೀತಿ ನಮ್ಮಲ್ಲಿನ ಗೊಂದಲಗಳಿಗೆ ಪರಿಹಾರದಂತೆ. ಕೆಲವು ನಿಮಿಷಗಳ ಕಾಲ ನಮ್ಮ ತೊಂದರೆಯ ಬುತ್ತಿಯ ನೆನಪೇ ಆಗುವುದಿಲ್ಲ. ತುಂಬಾ ಬೇಜಾರಾದ ಸಂದರ್ಭದಲ್ಲಿ ಹಲವಾರು ಮಂದಿ ಆಕಾಶವನ್ನು ನೋಡಿ ತಿಳಿಯಾಗುತ್ತಾರೆ. ಮನಸ್ಸಿನ ಭಾವಗಳನ್ನು ಪ್ರಕೃತಿಯ ಹೊರತು ಬೇರಾವುದು ತಿಳಿಯಾಗಿಸಲು ಸಾಧ್ಯವಿಲ್ಲ. ಹಾಗೆಯೇ ಖುಷಿಯಾದಾಗ ಮೋಡಗಳೊಂದಿಗೆ ಹಂಚಿಕೊಂಡು ಸಂತೋಷವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಎಲ್ಲಕ್ಕಿಂತಲೂ ಭಾವಗಳ ಗೆಳತಿ ನಮ್ಮ ಪ್ರಕೃತಿ ಎಂಬುದು ನಮಗೆ ಈ ಮೂಲಕ ಅರ್ಥವಾಗುತ್ತದೆ. ಎಲ್ಲವೂ ಜಗತ್ತಿನ ಸೋಜಿಗ ಎಂದೆನಿಸುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೆ ಒಂದು ಸಲಹೆಯಿದೆ. ಆಧುನಿಕ ಬದುಕಿನ ಒಡಲಲ್ಲಿ ಬೇಯುತ್ತಿರುವ ನೀವೂ ಕೂಡ ಒಮ್ಮೆ ಮನಸ್ಸನ್ನು ಎಲ್ಲಾ ಗೊಂದಲಗಳಿಂದ ಮುಕ್ತಗೊಳಿಸಿಕೊಂಡು ಇಳಿಸಂಜೆಯ ಮೋಡಗಳನ್ನು ಕಂಡು ಸವೆಯಿರಿ. ಒಮ್ಮೆ ಕಂಡು ಮತ್ತೆ ಕಾಣದಾದಾಗ ಬಹಳ ಬೇಸರವಾಗುತ್ತದೆ ಎಚ್ಚರ!

– ಆಶಾ ಅನಂತರಾಮ್‌
ವಿಜ್ಞಾನ ವಿಭಾಗ,
ಸೈಂಟ್‌ ಜೋಸೆಫ್ ಕಾಲೇಜು,
ಬೆಂಗಳೂರು.

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.