ಭಾವನೆಗಳ ವಿನಿಮಯ

Team Udayavani, Oct 22, 2019, 4:01 AM IST

bhavanegala

ನಾವು ಪತ್ರಿಕೋದ್ಯಮದ ವಿದ್ಯಾರ್ಥಿನಿಯರು. ಹಾಸ್ಟೆಲ್‌ನಲ್ಲಿ, ಎಲ್ಲರಿಗಿಂತ ಮುಂಚೆ ಕಾಲೇಜ್‌ಗೆ ಹೋದರೆ, ಬರುವುದು ಎಲ್ಲರಿಗಿಂತ ಲೇಟಾಗಿ. ಅಂದರೆ ರಾತ್ರಿಯೇ. ಎಷ್ಟೋ ಸಲ, ಮನಸಿಗೆ ಬೇಜಾರಾದಾಗ ಅಥವಾ ಕೆಲಸದ ಒತ್ತಡ ಇದ್ದಾಗ ನಮ್ಮಲ್ಲಿ ಏನೋ ಒಂದು ತರಹದ ದುಗುಡ ಮನೆ ಮಾಡುತ್ತಿತ್ತು.

ಸದಾ ನಮ್ಮ ತೋರುಬೆರಳು, ಮೊಬೈಲ್‌ ಸವರುತ್ತಾ, ಅತ್ತ ಲ್ಯಾಪ್‌ಟಾಪ್‌ ಕೂಡ ಮ್ಯಾನೇಜ್‌ ಮಾಡುತ್ತಾ, ಇತ್ತ ಕ್ಲಾಸ್‌ ಮುಗಿಸುತ್ತಾ ಒಂದು ವರ್ಷದ ಜೀವನಸಾಗಿ ಬಿಟ್ಟಿದ್ದು ತಿಳಿಯಲೇ ಇಲ್ಲ. ಮಾಹಿತಿಗಾಗಿ ಹಲವು ವ್ಯಾಟ್ಸಾಪ್‌ ಗ್ರೂಪ್‌ನಲ್ಲಿ ಇದ್ದೆ. ಇದರ ಮಧ್ಯೆ ನನ್ನ ಆಪ್ತ ಗೆಳೆತಿಯರೊಂದಿಗೆ ಮಾತಕತೆ ನಡೆಸಲೆಂದೇ ಶುರುಮಾಡಿದ್ದು ಈ ತಾಜಾಬ್ರೆಡ್‌ ಅನ್ನೋ ವ್ಯಾಟ್ಸಾಪ್‌ ಗ್ರೂಪ್‌.

ಇದೇ ಮೊದಲ ಬಾರಿ ನಾನು ಗ್ರೂಪ್‌ ಅಡ್ಮಿನ್‌ ಆದೆ. ಇದರ ಮೂಲ ಉದ್ದೇಶ ಮನರಂಜನೆ. ಯಾವಾಗಲೂ ಓದು, ಬರಿ ಅನ್ನೋದು ಇದ್ದದ್ದೇ. ಇದರ ಮಧ್ಯೆ, ನಮಗೆ ಮನರಂಜನೆ ಇರಲಿ ಅಂತ ಸಮಾನ ಮನಸ್ಕರನ್ನು ಸೇರಿಸಿಕೊಂಡೆ. ಇದಕ್ಕೆ ಯಾವ ರೀತಿ ಹೆಸರಿಡಬೇಕು ಎಂಬ ಯಕ್ಷಪ್ರಶ್ನೆ ಮೂಡಿದಾಗ ಥಟ್‌ ಎಂದು ನೆನಪಿಗೆ ಬಂದ ಹೆಸರು ತಾಜಾ ಬ್ರೆಡ್‌. ಅಂದರೆ, ಹೊಸ ಹೊಸ ಕಾಮಿಡಿ ವಿಚಾರಗಳ ಬಿಸಿ ಬಿಸಿ ಚರ್ಚೆ ಮಾಡೋದು.

ಈ ಗ್ರೂಪ್‌ ನಲ್ಲಿ ಹತ್ತಾರು ಜನರಿಲ್ಲ. ನೂರಾರು ಪ್ರಶ್ನೆ ಕೇಳುವವರಿಲ್ಲ, ನಾನು ಮತ್ತೆ ನನ್ನಿಬ್ಬರು ಆಪ್ತ ಸ್ನೇಹಿತೆಯರು ಮಾತ್ರ ಇದ್ದೀವಿ. ಗ್ರೂಪ್‌ ಅಂದಮೇಲೆ, ಹಾಯ್‌,ಬಾಯ್‌ ಮೆಸೇಜ್‌ ಕಾಮನ್‌ ಅಲ್ವಾ? ಹೀಗಾಗಿ, ಅದೂ ನಡೆಯುತ್ತಿರುತ್ತದೆ. ಈ ಗ್ರೂಪ್‌ನ ಇನ್ನೊಂದು ವಿಶೇಷ ಅಂದರೆ, ಇರುವ ಮೂವರಲ್ಲಿ ಯಾರಿಗೆ ಬೇಜಾರ್‌ ಆದರೂ ಅರೆಕ್ಷಣದಲ್ಲಿ ಮೂಡ್‌ ಬದಲಿಸಲು ಉಳಿದ ಸದಸ್ಯರು ಪ್ರಯತ್ನಿಸುತ್ತಾರೆ.

ಕ್ಲಾಸ್‌ ರೂಂನ ಕಿತ್ತಾಟದಿಂದ ಹಿಡಿದು, ನಮ್ಮ ನಮ್ಮ ಸೆಲ್ಫಿಗಳ ತನಕ ಎಲ್ಲ ರೀತಿಯ ಫೋಟೋಗಳು ಹರಿದಾಡುತ್ತವೆ. ಅದಕ್ಕೆ ವೈವಿಧ್ಯಮಯವಾದ ಕಾಮೆಂಟ್‌ಗಳೂ ಬರುತ್ತವೆ. ಚಿನ್ನಿ, ಬಂಗಾರ, ಮುದ್ದು ಎಂದು ಮನಸಿಗೆ ಮುದ ನೀಡುವ ಸ್ನೇಹಿತೆಯರನ್ನು ಈ ತಾಜಾ ಬ್ರೆಡ್‌ ಎಂಬ ಸಂಬಂಧಗಳ ಸಂಕೋಲೆಯಲ್ಲಿ ಸೆರೆ ಹಿಡಿದಿದೆ. ಎಷ್ಟೇ ಬ್ಯುಸಿ ಇದ್ದರೂ, ಇದಕ್ಕಾಗಿ ಸ್ವಲ್ಪ ಸಮಯವಾದರೂ ಮೀಸಲಿಡುವಂತೆ ಮಾಡಿದೆ. ದೂರ, ದೂರವಾದ ನಮ್ಮ ಸ್ನೇಹಕ್ಕೆ ಹೊಸ ಆಯಾಮವನ್ನು ನೀಡಿದೆ.

ಗ್ರೂಪ್‌: ತಾಜಾ ಬ್ರೆಡ್‌
ಅಡ್ಮಿನ್‌: ಸವಿತಾ ಆರ್‌. ವಾಸನದ
ಸದಸ್ಯರು:
ಪಲ್ಲ (ಗುಂಡಮ್ಮ), ಶ್ವೇತಾ ಜಂಗಳಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.