ಅದು ಬೇಡ ಎಂದಿದ್ದಕ್ಕೆ ಎಕ್ಸಿಟ್
Team Udayavani, Nov 19, 2019, 4:48 AM IST
ಗ್ರೂಪ್‌ನ ಹೆಸರು: ಸಿರಿಗನ್ನಡ ವೇದಿಕೆ ಕುಕನೂರು
ಅಡ್ಮಿನ್: ಭೋಜರಾಜ ಸೊಪ್ಪಿಮಠ
ಸಿರಿಗನ್ನಡ ವೇದಿಕೆ ಎಂಬುದೊಂದು ರಾಜ್ಯ ಮಟ್ಟದ ಸಂಘಟನೆ. ನಾನು ಅದರ ಕುಕನೂರು ತಾಲ್ಲೂಕು ಅಧ್ಯಕ್ಷ. ಆ ವೇದಿಕೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರನ್ನು ವಿವಿಧ ಪದಾಧಿಕಾರಿಗಳೆಂದು ಆಯ್ಕೆ ಮಾಡಿಕೊಂಡೆವು.
ಕಾರ್ಯ ಚಟುವಟಿಕೆ ಹಾಗೂ ಮುಂದಿನ ರೂಪು ರೇಷೆಗಳ ಕುರಿತಾಗಿ ಚರ್ಚಿಸಲು ಸಹಜವಾಗಿಯೇ ಒಂದು ವ್ಯಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡೆವು. ನಾನೊಬ್ಬನೇ ಅದರ ಅಡ್ಮಿನ್. ಆರಂಭದಲ್ಲಿ ಒಳ್ಳೆಯ ಪ್ರತಿಕ್ರಿಯೆ ಬರತೊಡಗಿದ್ದವು. ಉತ್ತಮವಾದ ಸಂಘಟನೆಗೆ ವೇದಿಕೆಯಾಗಬಲ್ಲದು ಎಂದು ನಿರೀಕ್ಷಿಸಿದ್ದೆವು ಕೂಡ. ಬರೀ ಕನ್ನಡದ ಸಂಸ್ಕೃತಿ ಹಾಗೂ ಸಾಹಿತ್ಯಿಕ ವಿಷಯಗಳೇ ಚರ್ಚೆಗೆ ಬರುತ್ತಿದ್ದವು. ದಿನಗಳೆದಂತೆ ಕೆಲವರು ತೀರಾ ಅನಾವಶ್ಯಕ ಎನ್ನಿಸುವ, ಸಂಬಂಧವೇ ಇಲ್ಲದ ವಿಷಯ, ವಿಡಿಯೋಗಳನ್ನು ಪೋಸ್ಟ್ ಮಾಡತೊಡಗಿದ್ದರು. ಮೌಖೀಕವಾಗಿ ಇದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಆದರೆ ನಮ್ಮ ಸಹನೆಯ ಪರೀಕ್ಷೆಯೇನೋ ಎಂಬಂತೆ ರಾಜಕೀಯವಾಗಿ ಎತ್ತಿಕಟ್ಟುವ, ಮತ್ತೆ ಕೆಲವರನ್ನು ಕೇವಲವಾಗಿ ಬಿಂಬಿಸುವ ವಿಡಿಯೋ, ಸುದ್ದಿಗಳು ಬರತೊಡಗಿದ್ದವು. ಸಹನೆ ಕಳೆದುಕೊಂಡ ಒಬ್ಬ ಸದಸ್ಯ, “ರಾಜಕೀಯ ವಿಷಯಗಳಿಗೆ ಇದು ವೇದಿಕೆಯಲ್ಲ. ದಯವಿಟ್ಟು ಅವುಗಳನ್ನು ಇಲ್ಲಿ ಚರ್ಚಿಸಬೇಡಿ’ ಅಂದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, “ಗ್ರೂಪ್‌ನ ಅಡ್ಮಿನ್ ಸುಮ್ಮನಿರುವಾಗ ನಿಮ್ಮದೇನು ಕಿರಿಕಿರಿ? ಬೇಕಾದರೆ ಅಡ್ಮಿನ್ ಹೇಳಲಿ’ ಎಂದರು. ಮುಂದುವರಿದ ಭಾಗವಾಗಿ ಒಬ್ಬರಿಗೊಬ್ಬರು ದೂಷಿಸತೊಡಗಿದರು. ಕೊನೆಗೆ, ಇದು ಯಾವ ಮಟ್ಟಿನ ತಾರಕಕ್ಕೆ ಹೋಯಿತೆಂದರೆ ಅಡ್ಮಿನ್ ಅವರು ಸ್ಪಷ್ಟೀಕರಣ ನೀಡಲಿ ಎಂದರು. ಅಲ್ಲಿಯವರೆಗೆ ಸುಮ್ಮನಿದ್ದ ನಾನು ಈಗ ಅನಿವಾರ್ಯವಾಗಿ ಅವರ ಜಗಳದಲ್ಲಿ ಭಾಗಿಯಾಗಬೇಕಾಯಿತು. ನಾನು ಕೂಡ ರಾಜಕೀಯ ಚರ್ಚೆ ಬೇಡ ಅಂದಿದ್ದೇ ತಡ ಪೋಸ್ಟ್ ಮಾಡುತಿದ್ದಾತ ನನ್ನ ಮೇಲೆ ಕೋಪಗೊಂಡು, “ನೀವು ಆತನನ್ನು ಸಪೋರ್ಟ್ ಮಾಡುತ್ತಿದ್ದೀರಿ. ನನಗೆ ಅವಮಾನ ಮಾಡಲೆಂದೇ ಅವರನ್ನು ನನ್ನ ವಿರುದ್ಧ ಎತ್ತಿ ಕಟ್ಟಿದ್ದೀರಿ. ನಿಮ್ಮ ಯಾವ ಸಂಘಟನೆಯೂ ನನಗೆ ಬೇಡ ಎಂದು ಹೇಳಿ ಗ್ರೂಪ್‌ನಿಂದ ಎಕ್ಸಿಟ್ ಆದ. ಒಂಥರದಲ್ಲಿ ಆ ವ್ಯಕ್ತಿ ಗ್ರೂಪ್‌ನಿಂದ ಹೊರಗೆ ಹೋದದ್ದು ಒಳ್ಳೆಯದೇ ಆಯಿತು. ಅಂದಿನಿಂದ ಈ ಗ್ರೂಪ್‌ನಲ್ಲಿ ರಾಜಕೀಯ ಚರ್ಚೆ ನಡೆಯುತ್ತಿಲ್ಲ.
ಭೋಜರಾಜ ಸೊಪ್ಪಿಮಠ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.