ಕಣ್ಣಲ್ಲಿ ಕಣ್ಣಿಟ್ಟು ಹೇಳು, ನೀ ಕಳ್ಳನೇ ಅಲ್ವಾ?


Team Udayavani, Oct 10, 2017, 12:08 PM IST

10-17.jpg

ನನ್ನೊಂದಿಗೆ ಬಣ್ಣ ಬಣ್ಣದ ಮಾತುಗಳನ್ನಾಡಿದವನು ನೀನು. ನನ್ನೆದೆಯಲ್ಲಿ ಕನಸುಗಳ ಕಾಮನಬಿಲ್ಲು ಬಿತ್ತಿದವನೂ ನೀನು. ಲವ್‌ ಈಸ್‌ ಲೈಫ್ ಎನ್ನುತ್ತಾ ಕೈ ಕೈ ಹಿಡಿದುಕೊಂಡು ಅಡ್ಡಾಡಿದವನೂ ನೀನು. ಅಂಥ ನೀನೇ ಮಾತಿಗೆ ಸಿಗದೆ ನಡೆದು ಹೋಗ್ತಿದೀಯ!

ಮನಸ್ಸೇಕೋ ನಿನ್ನದೇ ತನ್ಮಯತೆಯಲ್ಲಿ ತೇಲಾಡುತ್ತಿದೆ. ನಿನ್ನ ಅಭಿಲಾಷೆಯ ಆಮಂತ್ರಣಕ್ಕಾಗಿ ಎದುರು ನೋಡುತ್ತಿದೆ. ನಿನ್ನ ಮುಗಿಯದ ಮೌನ, ಯಾವಾಗ ಮಾತಾಗಿ- ಮುತ್ತಾಗಿ ಹೊರ ಬೀಳುತ್ತದೆಯೋ ಗೊತ್ತಿಲ್ಲ. ಆದರೆ, ನನ್ನ ಸಹನಾಶೀಲ ಮನಸ್ಸು ಮಾತ್ರ ಆ ಕ್ಷಣಕ್ಕಾಗಿಯೇ ಕಾಯುತ್ತಿದೆ.

ಅದೆಷ್ಟೋ ಆಸೆಗಳ ಮಹಲನ್ನು ಕಟ್ಟಿಕೊಂಡು, ನಿನ್ನಾಗಮನವನ್ನು ಬಯಸುತ್ತಿದ್ದೇನೆ. ಒಮ್ಮೆಯಾದರೂ ಈ ನೊಂದ ಹೃದಯದೆದುರಿಗೆ ಬಂದು ನಿಲ್ಲಬಾರದೇ? ಎಷ್ಟು ಬಾರಿ ನಿನ್ನನ್ನು ಕಣ್ಣಲ್ಲಿ- ಕಣ್ಣಿಟ್ಟು ನೋಡಿದರೂ ನನಗೆ ಸಂತೃಪ್ತಿ ಸಿಗದು. ಯಾವ ಮುಹೂರ್ತದಲ್ಲಿ ನೀನು ನನ್ನ ಕಣ್ಣಿಗೆ ಬಿದ್ದೆಯೋ, ಅಂದಿನಿಂದ ಕಂಗಳೂ ನಿನ್ನನ್ನೇ ಕೂಗಿ ಕರೆಯುತ್ತಿವೆ. ಕೂಗು ಕೇಳಿಸುತ್ತಲೇ ಇಲ್ಲವೇ? ಹಾಗಿದ್ದ ಮೇಲೆ ಅಂದೇಕೆ ಬಂದು ಬಣ್ಣ- ಬಣ್ಣದ ಮಾತುಗಳನ್ನಾಡಿ ನನ್ನಲ್ಲಿ ಪ್ರೀತಿಯ ಅಲೆಗಳನ್ನೆಬ್ಬಿಸಿ ಮನದಲ್ಲೇ ಸುಪ್ತವಾಗಿರುವ ಕನಸುಗಳಿಗೇಕೆ ರೆಕ್ಕೆ ಬರುವಂತೆ ಮಾಡಿದೆ. ನಿನ್ನನ್ನು ನಾನು ಅದೆಷ್ಟು ನಂಬಿದ್ದೆ ಗೊತ್ತಾ? ಕೊನೆಗೂ ನಿನ್ನ ನೀಚ ನರಿ ಬುದ್ಧಿ ತೋರಿಸಿಯೇ ಬಿಟ್ಟೆಯಲ್ಲ. ಶಭಾಷ್‌ ಕಣೋ!

ಇರಲಿ ಬಿಡು. ಪ್ರಪಂಚ ವಿಶಾಲವಾಗಿದೆ. ಹೇಗೋ ನನ್ನನ್ನು ನಾನು ಸಂಭಾಳಿಸಿಕೊಂಡು ಬದುಕುತ್ತೇನೆ. ಆದರೆ, ದಯವಿಟ್ಟು ಮತ್ತೆ ಮೊದಲಿನಂತೆಯೇ ಬಂದು ಮನ ಕಲಕದಿರು. ಮೊದಲೇ ಚೂರಾದ ಹೃದಯವಿದು. ಚೂರೇ-ಚೂರು ನೋವಾದರೂ ಸಹಿಸಲಾರದು. ನಿನ್ನನ್ನು ಸಂಪೂರ್ಣ ಮರೆಯುತ್ತಿದ್ದೇನೆ. ನಿನ್ನ ಚಹರೆಯ ನೆನಪೂ ಬರದಂತೆ! ಕೊನೆಯದಾಗಿ ಒಂದು ಮಾತು ಹೇಳುತ್ತೇನೆ ಕೇಳು: ನಿನಗೇನಾದರೂ ಮಾನವೀಯತೆಯೆನ್ನುವುದಿದ್ದರೆ ನನ್ನೊಡನೆ ಆಟವಾಡಿದಂತೇ ಮತ್ಯಾರ ಜೊತೆಯೂ ಆಟದ ಅಂಕಣಕ್ಕಿಳಿಯದಿರು. ಹೃದಯಕ್ಕೆ ಮಾಯದ ದುಃಖವಾಗುತ್ತದೆ. ನಿಜ, ಅರಿಯದ  ಮನಸ್ಸು ಏನೇನೋ ತಪ್ಪು ಮಾಡುತ್ತದೆ. ಅದು ತಪ್ಪು ಎಂದೂ ಗೊತ್ತಾದ ಮೇಲೂ ಮತ್ತದೇ ತಪ್ಪು ಮಾಡಲು ಹೋಗಿ  ತಪ್ಪಿತಸ್ಥನಾಗದಿರು.

ಒಂದನ್ನಂತೂ ಮರೆಯದಿರು, ಜಗತ್ತಿನಲ್ಲಿ ಉಸಿರಾಡುತ್ತಿರುವ ಪ್ರತಿಯೊಂದು ಜೀವಿಗೂ ಒಂದು ಮನಸ್ಸಿದೆ. ಪಾಪ! ಸ್ವಲ್ಪ ನೋವಾದರೂ ನೊಂದುಕೊಳ್ಳುತ್ತದೆ. ಹೀಗೆಲ್ಲಾ ಹೇಳಲು ಕಾರಣವೇನು ಗೊತ್ತಾ? ನನಗೆಲ್ಲಾ ಗೊತ್ತಿದೆ, ನೀನು ಅದ್ಯಾರೋ ಒಬ್ಬಳೊಡನೆ ತಿರುಗಾಡುತ್ತಿದ್ದುದು, ಅವಳೊಡನೆ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದುದು ಎಲ್ಲವೂ ತುಸು ಚೆನ್ನಾಗಿಯೇ ಗೊತ್ತು. ಇದನ್ನೆಲ್ಲಾ ತಪ್ಪು ಎಂದು ಹೇಳುತ್ತಿಲ್ಲ. ಹಾಗೆ ಹೇಳುವ ಅಧಿಕಾರವೂ ನನಗಿಲ್ಲ. ಆದರೆ ನನ್ನ ಬಿಟ್ಟು ಹೋದಂತೆ, ಅವಳನ್ನು ಮಾತ್ರ ಬಿಟ್ಟು ಹೋಗದಿರು. ಯಾಕೆಂದರೆ, ಯಾರಾದರೂ ಬಂದು ಕೈ ಹಿಡಿದಾಗ ಪ್ರಪಂಚವೇ ನಮ್ಮದೆನಿಸುತ್ತದೆ. ಅದೇ ಕೈ ಬಿಟ್ಟುಹೋದಾಗ ನಾವು ನಂಬಿದ ಪ್ರಪಂಚ ನಮ್ಮ ತಲೆಯ ಮೇಲೇ ಬಿದ್ದಂತೆನಿಸುತ್ತದೆ. ನಾನು ಇಷ್ಟೆಲ್ಲಾ ಹೇಳಿದ್ದನ್ನು ಓದಿಕೊಂಡ ನಂತರವಾದ್ರೂ ಪ್ಲೀಸ್‌ ಬದಲಾಗು…

ಜಯಶ್ರೀ ಎಸ್‌.ಕಾನಸೂರ್‌

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.