ಕಣ್ಣಿನ ನಿದ್ದೆಯನೂ ಕದ್ದೆಯಾ ಗಿಣಿ…
Team Udayavani, Aug 29, 2017, 6:00 AM IST
ನನ್ನೆದೆಯಲ್ಲಿ ಗೂಡು ಕಟ್ಟಿದ ಮರಿಹಕ್ಕಿ ನೀನಾಗಿರುವೆ. ಆ ದೇವರಲ್ಲಿ ನನ್ನದಿಷ್ಟೇ ಪ್ರಾರ್ಥನೆ. ನಿನ್ನ ರೆಕ್ಕೆ ಬಲಿಯದಿರಲಿ. ಗೂಡು ಬಿಟ್ಟು ಹಾರದಂತಾಗಲಿ…
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಹೆಣ್ಣೊಬ್ಬಳಿರುತ್ತಾಳೆ ಅಂತಾರೆ. ಅದೇನೋಪ್ಪಾ, ನಿನ್ನ ಕಂಡಾಗಿನಿಂದ ನಾನು ಹಾಳಾಗಿ ಹೋಗ್ತಿದ್ದೀನೋ, ಉದ್ಧಾರ ಆಗ್ತಿದ್ದೀನೋ ಒಂದೂ ಅರ್ಥ ಆಗ್ತಿಲ್ಲ. ಯಾಕಂದ್ರೆ ನನ್ನಲ್ಲಿ ಯದ್ವಾತದ್ವಾ ಬದಲಾವಣೆ ಆಗಿಟ್ಟಿದೆ. ನೋಡೋ ಕೆಲ್ಸ ಬಿಟ್ಟು ನಿನ್ನ ಕಣ್ಣಿನೊಂದಿಗೆ ಈ ಕಣ್ಣುಗಳು ಮಾತಾಡೋಕೆ ಶುರುಮಾಡಿವೆ. ತೆಪ್ಪಗೆ ಮಲಗಿದ್ದ ಮೈಮೇಲಿನ ರೋಮಗಳು ನೀ ನಕ್ಕಾಗ ಎದ್ದು ನಿಲ್ತವೆ. ನರಗಳಲ್ಲಿ ರಕ್ತ ಕಕ್ಕಾಬಿಕ್ಕಿಯಾಗಿ ಓಡಾಡªಂಗಾಗ್ತದೆ. ಲಬ್‌ಡಬ್ ಅಂತ ಮಿಡೀತಿದ್ದ ಹೃದಯ ಬಾಯ್ ಬಡ್ಕೊಂಡಂಗಾಗ್ತದೆ. ಯಪ್ಪಾ, ಇನ್ನೂ ಏನೇನೋ ಆಗ್ತಿದೆ ನಂಗೆ!
ಬಲವಂತವಾಗಿ ಕಣ್ಣು ಮುಚ್ಚಿದ್ರೂ ನಿದ್ದೆ ಬರ್ತಿಲ್ಲ, ದಿನಪೂರ್ತಿ ಉಪವಾಸ ಇದ್ರೂ ಹಸಿವಾಗ್ತಿಲ್ಲ. ಸಮಾನತೆ, ಸ್ವಾತಂತ್ರ್ಯ, ಜಾಗತೀಕರಣ, ದೇಶದ ಭವಿಷ್ಯ… ಅಂತ ವಯಸ್ಸಲ್ಲದ ವಯಸ್ಸಲ್ಲಿ ಚಿಂತನೆ ಹಚೊಡಿದ್ದ ನಾನು ಈಗ ಬರೀ ನಿನ್ನ ಬಗ್ಗೇನೆ ಯೋಚೆ° ಮಾಡೋ ಹಂಗಾಗಿದೆ. ಹುಡ್ಗಿರ ಕಂಡ್ರೆ ಮಾರು ದೂರ ಓಡೋನು ಈಗ ನಿನ್ನ ಹಿಂದೆ ಸುತ್ತೋ ಹಾಗಾಗಿದೆ. ಆಕಡೆ ಈಕಡೆ ಕುಂತೆಡೆ ನಿಂತೆಡೆ ಎಲ್ಲೆಡೆ ನೀನೇ ಕಾಣಿಸ್ತೀಯಾ. ಚಿಕ್ಕೋನಿದ್ದಾಗ ಕನಸು ಬಿದ್ದು ಚಿಟ್ಟನೇ ಚೀರಿದ್ ಬಿಟ್ರೆ ಮತ್ತೆ ಕನಸೇ ಬೀಳದ ನಾನೀಗ ಹಗಲು ಹೊತ್ತಲ್ಲಿ ಅದೂ ಎಚ್ಚರವಾಗಿದ್ದಾಗ್ಲೆ
ಕನಸು ಕಾಣೋ ಹಾಗಾಗಿದೆ. ಅಲ್ಲಿ, ಇಲ್ಲಿ, ಎಲ್ಲೆಲ್ಲೂ ನೀನೇ, ಬರೀ ನೀನೆ!
ಅದೇನ್ ಪವಾಡವೋ ಏನೋ, ನನ್ನ ಪದಗಳಿಗೆ ನೀನೇ ಕಥೆ- ಕವನ ಎಲ್ಲಾ ಆಗಿದ್ದೀಯಾ. ನನ್ನ ಪ್ರತಿ ಬೆಳಗಿನ ಹಕ್ಕಿಗಳ ಚಿಲಿಪಿಲಿಗೆ ಹೊಸ ಇಂಪು ಬಂದಿದೆ. ಗುಂಯುಡುವ ದುಂಬಿ ಪ್ರೇಮಗೀತೆ ಹಾಡಿದಂತಿದೆ. ಮನಸ್ಸು ಗರಿಬಿಚ್ಚಿದ ನವಿಲಾಗಿದೆ. ತುಟಿಯಂಚಲಿ ಕಿಲಕಿಲ ನಗುವಿನ ಗೊಂಚಲು. ಇಡೀ ದಿನದ ಪ್ರತಿ ಕ್ಷಣವೂ ಉಲ್ಲಾಸಮಯವಾಗಿದೆ. ಏನೆಲ್ಲ ಬದಲಾವಣೆಯಾದರೂ ಒಂದಂತೂ ಸತ್ಯ, ನಿನ್ನಲ್ಲಿ ನಾನು ಕಳೆದುಹೋಗಿದ್ದೇನೆ. ನನ್ನೆದೆಯಲ್ಲಿ ಗೂಡು ಕಟ್ಟಿದ ಮರಿಹಕ್ಕಿ ನೀನಾಗಿರುವೆ. ಆ ದೇವರಲ್ಲಿ ನನ್ನದಿಷ್ಟೇ ಪ್ರಾರ್ಥನೆ. ನಿನ್ನ ರೆಕ್ಕೆ ಬಲಿಯದಿರಲಿ. ಗೂಡು ಬಿಟ್ಟು ಹಾರದಂತಾಗಲಿ. ಬೆಚ್ಚಗೆ ಅವಿತು ಕುಳಿತ ಗುಬ್ಬಚ್ಚಿ ನೀನಾಗಿ ನನ್ನೆದೆಯಲ್ಲಿ ಸದಾ ಪ್ರೀತಿಯ ಇಂಚರ ಮೊಳಗುತ್ತಿರಲಿ. ನನ್ನಲ್ಲಾದ ಈ ಬದಲಾವಣೆ ಮತ್ತೆ ಬದಲಾಗದಿರಲಿ.
ಇಂತಿ
ನಿನ್ನ ಸಾಮೀಪ್ಯದಲ್ಲಿ ಸ್ವರ್ಗವನರಸುವವ
– ಅಶೋಕ ವಿ. ಬಳ್ಳಾ ಸೂಳೇಬಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.