ಫೇಸ್‌ಬುಕ್ ನಾಟಕ ಶಾಲೆ, ಮುಖಪುಟದ ಮುಖವಾಡ ಕಳಚಿದಾಗ…
Team Udayavani, May 23, 2017, 9:57 AM IST
ಪದೇ ಪದೇ ಲೈಕ್ಸ್, ಕಾಮೆಂಟ್ಸ್, ಶೇರ್‌ಗಳನ್ನು ಮಾಡೋರು, ಗಂಟೆಗಟ್ಟಲೆ ಪೋನ್‌ನಲ್ಲಿ ಮಾತಾಡೋರು, ಚಾಟಿಂಗ್ ಮಾಡೋರು, ಆತ್ಮೀಯ ಎನಿಸಿಕೊಂಡ ಸ್ನೇಹಿತರು ಕೂಡ ಎದುರಿಗೆ ಸಿಕ್ಕಾಗ ನಮಗೆ ಮಾತನಾಡಲು ಪುರುಸೊತ್ತಿರುವುದಿಲ್ಲ.
ಸ್ನೇಹಿತರೆ ‘ಗೆಳೆತನ’ ಎಂಬುದಕ್ಕೆ ಅಗಾಧವಾದ ಅರ್ಥವನ್ನು ಜಗತ್ತಿನ ನಿಘಂಟುಗಳು ನೀಡಿದ್ದು,ಸರಳವಾಗಿ ಹೇಳುವದಾದರೆ ಸುಖ ದುಃಖಗಳನ್ನು ಹಂಚಿಕೊಳ್ಳುವುದಾಗಿದೆ. ಕಷ್ಟದ ಕಾಲವನ್ನು ಅರಿತು ಸಹಾಯಕ್ಕೆ ಮುಂದಾಗಬೇಕು: ಅದು ಗೆಳೆತನ. ಆದರೆ ಈಗೀನ ವಿದ್ಯಮಾನಗಳನ್ನು ಅವಲೋಕಿಸಿದಾಗ, ಗೆಳೆತನ ಕೇವಲ ಫೇಸ್‌ಬುಕ್, ವಾಟ್ಸಾಪ್, ಹ್ಯಾಂಗ್‌ಔಟ್ ಇತ್ಯಾದಿಗಳಿಗೆ ಸೀಮಿತವಾಗಿದೆಯೇ ಎಂಬ ಸಂಶಯವಾಗುತ್ತದೆ. ಲೈಕ್ಸ್, ಕಮೆಂಟ್ಸ್ ಮತ್ತು ಶೇರ್‌ಗಳಿಗಷ್ಟೇ ಗೆಳೆತನದ ಅರ್ಥ ಸಂಕುಚಿತವಾಗಿದೆಯೇ? ಎಂಬ ತಾಕಲಾಟ ಮನದಲ್ಲಿ ಮೂಡುತ್ತದೆ.
ಅದರಲ್ಲೂ ಫೇಸ್‌ಬುಕ್ ಎಂಬ ಮಾಯಾಜಿಂಕೆಯ ಕಾರುಬಾರು ಅಷ್ಟಿಷ್ಟಲ್ಲ.ಗೆಳೆತಿಯೊಬ್ಬಳ ಪ್ರಕಾರ ಫೇಸ್‌ಬುಕ್‌ನಲ್ಲಿ ಒಟ್ಟು ಸ್ನೇಹಿತರ ಸಂಖ್ಯೆಯನ್ನು ಲಿಸ್ಟ್ ಮಾಡಿಕೊಂಡು ಬೀಗುವುದೇ ಗೆಳೆತನವಾಗಿದೆ. ಸಾವಿರ ಫೇಸ್‌ಬುಕ್ ಸ್ನೇಹಿತರಲ್ಲಿ ಎಷ್ಟು ಮಂದಿಯನ್ನು ಗುರುತಿಟ್ಟುಕೊಂಡಿದ್ದೀರಿ? ಅವರಲ್ಲಿ ಎಷ್ಟು ಮಂದಿ ನಿಜಕ್ಕೂ ನಿಮ್ಮ ಸ್ನೇಹಿತರು? ಎಂಬಿತ್ಯಾದಿ ಪ್ರಶ್ನೆಗಳು ಯಾರಿಗೂ ಪ್ರಸ್ತುತವೆಂದು ಅನ್ನಿಸುವುದೇ ಇಲ್ಲ!
ಇತ್ತೀಚಿಗೆ ಗೆಳೆತಿಯೊಬ್ಬಳು ಹೇಳಿದ್ದಳು: “ನನಗೆ ಇಷ್ಟವಿಲ್ಲದಿದ್ದರೂ ಹಲವರ ಪೋಸ್ಟ್‌ಗಳಿಗೆ ಲೈಕ್ ಒತ್ತುತ್ತಿರುತ್ತೇನೆ. ಯಾಕೆ ಅಂದ್ರೆ ಅವರು ಈ ಮೊದಲು ಬಹಳಷ್ಟು ಸಲ ನನ್ನ ಪೋಸ್ಟ್‌ಗಳಿಗೆ ಲೈಕ್ ಒತ್ತಿರುತ್ತಾರೆ. ಇದು ಒಂಥರಾ ಸೆಲ್ಫ್ ಆಬ್ಲಿಗೇಷನ್, ಕಮಿಟ್‌ಮೆಂಟ್ ಥರ. ನೀವು ಲೈಕ್ ಒತ್ತದಿದ್ದರೆ ನಿಮ್ಮ ಪೋಸ್ಟ್‌ಗಳಿಗೆ ಅವರು ಲೈಕ್ ಒತ್ತುವುದನ್ನು ನಿಲ್ಲಿಸಿಬಿಡುತ್ತಾರೆ. ಇದೊಂಥರಾ ಮೈಂಡ್‌ಗೆàಮ್’.
ಗೆಳತಿ ಹೇಳಿದ್ದನ್ನು ಕೇಳಿ ಶಾಕ್ ಆಯಿತು. ಅವಳು ಹೇಳಿದ್ದರಲ್ಲಿ ಸತ್ಯವಿತ್ತು. ಪರಿಸ್ಥಿತಿ ಹೀಗಿರುವಾಗ ನಮ್ಮೆದುರಿಗಿರುವ ವ್ಯಕ್ತಿ ನಮ್ಮನ್ನು ಹೊಗಳುತ್ತಿದ್ದರೆ ಅವರನ್ನು ಹೇಗೆ ನಂಬುವುದು ಎಂಬ ಸಂಧಿಗ್ಧತೆಯೂ ಶುರುವಾಯಿತು. ಬರೀ ಉಬ್ಬಿಸಲಿಕ್ಕೆ ಹೀಗೆ ಮಾಡುತ್ತಾರಾ ಎಂಬ ಅನುಮಾನ.
ಕೆಲವರಂತೂ ತಮ್ಮೆಲ್ಲ ಖಾಸಗಿ ವಿಚಾರಗಳನ್ನು ಹಾಗು ಫೋಟೋಗಳನ್ನು ಸಾರ್ವಜನಿಕವಾಗಿ ಹಂಚುತ್ತಾರೆ. ಇಲ್ಲಿ ಎಷ್ಟು ಅತಿಶಯೋಕ್ತಿಯಿರುತ್ತದೆಂದರೆ ಉದಾಹರಣೆಗೆ ಗಂಡ- ಹೆಂಡತಿ, ತಾವು ವೈಯಕ್ತಿಕವಾಗಿ ಮಾತನಾಡಬೇಕಾದ್ದನ್ನೆÇÉಾ ಬಹಿರಂಗವಾಗಿ ಎಲ್ಲರೆದುರಿಗೆ ಕಾಮೆಂಟು, ಪೋಸ್ಟುಗಳ ಮೂಲಕ ಮಾತಾಡುವುದು. ಇದು ಹೇಗೆನಿಸುತ್ತದೆಂದರೆ ಸಂಬಂಧಗಳು ಗಟ್ಟಿಯಾಗಿರದಿದ್ದರೂ, ಜನರ ತೋರಿಕೆಗಾಗಿ ಈ ರೀತಿ ಮಾಡುತ್ತಾರೇನೋ ಎಂದೆನಿಸುವಷ್ಟು ಕೃತಕವಾಗಿರುತ್ತವೆ.
ಇಷ್ಟಕ್ಕೂ ಇದು ಯಾವ ತರಹದ ಹುಚ್ಚು ಎನ್ನುವುದು ಅರ್ಥವಾಗುವುದಿಲ್ಲ. ಎಲ್ಲವನ್ನೂ ಬಹಿರಂಗ ಪಡಿಸಿದಾಗಲೇ ಖುಷಿ ಸಿಗುತ್ತಾ? ಎಲ್ಲಿ ಹೋದ್ವಿ, ಬಂದ್ವಿ, ಕುಂತ್ವಿ, ಯಾರೊಟ್ಟಿಗೆ ಮಾತಾಡಿದ್ವಿ ಇವನ್ನೆಲ್ಲ ಹೇಳ್ಳೋದು ಅನಿವಾರ್ಯವೇ? ಅವಶ್ಯವೇ? ನಮ್ಮ ಜೀವನದ ಪ್ರತಿ ಸೆಕೆಂಡುಗಳನ್ನು ಸಾರ್ವಜನಿಕವಾಗಿ ಎಲ್ಲರೊಂದಿಗೆ ಹಂಚಿಕೊಳ್ಳೋದು ಸರಿಯೇ? ಫೇಸ್‌ಬುಕ್ ಅನ್ನು ದ್ವೇಷಿಸುವುದು ಬೇಡ, ಅದನ್ನು ಸಂಪೂರ್ಣವಾಗಿ ತ್ಯಜಿಸುವುದೂ ಬೇಡ. ಆದರೆ ಪ್ರಮುಖ ಘಟನೆಗಳನ್ನು ಮಾತ್ರವೆ ಹತ್ತಿರದವರೊಂದಿಗೆ ಹಂಚಿಕೊಂಡರೆ ಸಾಕಲ್ಲವೆ? ನಮ್ಮ ನಡವಳಿಕೆಗಳು ಯಾರಿಗೂ ನೋವುಂಟು ಮಾಡದಿದ್ದರೆ ಸಾಕಲ್ಲವೆ?
ಪದೇ ಪದೇ ಲೈಕ್ಸ್, ಕಾಮೆಂಟ್ಸ್, ಶೇರ್‌ಗಳನ್ನು ಮಾಡೋರು, ಗಂಟೆಗಟ್ಟಲೆ ಪೋನ್‌ನಲ್ಲಿ ಮಾತಾಡೋರು, ಚಾಟಿಂಗ್ ಮಾಡೋರು, ಆತ್ಮೀಯ ಎನಿಸಿಕೊಂಡ ಸ್ನೇಹಿತರು ಕೂಡ ಎದುರಿಗೆ ಸಿಕ್ಕಾಗ ನಮಗೆ ಮಾತನಾಡಲು ಪುರುಸೊತ್ತಿರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ಹೊತ್ತಿನ ಒಂದಂಶವನ್ನಾದರೂ ನಿಜಜೀವನದಲ್ಲಿ ಜೊತೆಗೆ ಕಳೆಯಲಾಗದಿದ್ದರೆ ಅದೆಂಥ ಗೆಳೆತನ?
ಪೇಸ್‌ಬುಕ್ಕಿಗರಿಗೆ ಇನ್ನೊಂದು ರೋಗವಿದೆ. ಸಿಕ್ಕ ಸಿಕ್ಕ ಪೋಸ್ಟ್‌ಗಳಿಗೆ, ಫೋಟೋಗಳಿಗೆ ಸಂಬಂಧವಿಲ್ಲದವರನ್ನು ಟ್ಯಾಗ್ ಮಾಡೋದು! ನಾವು ಟ್ಯಾಗ್ ಮಾಡುತ್ತಿರುವ ವ್ಯಕ್ತಿಗೆ ಆ ಪೋಸ್ಟ್ ಇಷ್ಟವಾಗದೆಯೂ ಹೋಗಬಹುದು ಎನ್ನುವ ಕನಿಷ್ಠ ಜ್ಞಾನವೂ ಇಲ್ಲದೆ ಹೋಗುತ್ತಿರುವುದು ದುರಂತ. ಬಹಳಷ್ಟು ಸಲ ಟ್ಯಾಗ್ ಮಾಡಲ್ಪಟ್ಟ ವ್ಯಕ್ತಿಗೆ ಕಿರಿಕಿರಿಯಾಗಿದ್ದರೂ ಸಹ ನೀವು ಸ್ನೇಹಿತ ಎಂಬ ಒಂದೇ ಕಾರಣಕ್ಕೆ ಮೌನ ತಾಳಿರಬಹುದು. ಅದನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಕೆಲಸ.
ಈಗಿನ ಕಾಲದಲ್ಲಿ ನಮ್ಮ ಸ್ಮಾರ್ಟ್ ಉಪಕರಣಗಳಿಗೆ ಹೊಸ ಹೊಸ ಆ್ಯಪ್‌ಗ್ಳು ಬೇಕು. ಅದರ ಅಗತ್ಯ ನಮಗೆ ಅಷ್ಟಾಗಿ ಇಲ್ಲದಿದ್ದರೂ ಅದು ನಮಗೆ ಬೇಕು ಎನ್ನುವ ಮನಸ್ಥಿತಿ ದಿಗಿಲು ತರುತ್ತದೆ. ಒಮ್ಮೆ ಯೋಚಿಸಿದರೆ, ಇವೆಲ್ಲ ಇರದಿ¨ªಾಗಲೂ ಜೀವನ ನಡೆದಿತ್ತÇÉಾ ಎಂಬ ಪ್ರಶ್ನೆ ಕಾಡುತ್ತದೆ. ಹೊಸ ಹೊಸ ಉಪಕರಣ, ತಂತ್ರಜ್ಞಾನಗಳನ್ನು ಬಳಸಬೇಕು. ಆದರೆ, ಅದೇ ಸರ್ವಸ್ವವೂ ಆಗಬಾರದು. ನಮ್ಮ ಜೀವನದ ಪ್ರತಿಯೊಂದು ವಿವರಗಳನ್ನು ಫೇಸ್‌ಬುಕ್ಕಿನಲ್ಲಿ ಹಂಚಿಕೊಳ್ಳುವುದರಿಂದ ಅಪಾಯವೇ ಹೆಚ್ಚು. ನೀವು ಪ್ರವಾಸ ಹೋಗಿರುವ ಪೋಸ್ಟನ್ನು ಓದಿ ವಿಷಯ ತಿಳಿದು ಕಳ್ಳರು ಮನೆಗೆ ಕನ್ನಹಾಕಬಹುದಲ್ಲವೆ? ಆ ರೀತಿಯ ಘಟನೆಗಳು ಎಷ್ಟೋ ನಡೆದಿವೆ. ಅತಿಯಾದರೆ ಅಮೃತವೂ ವಿಷ ಎಂದಿದ್ದಾರೆ ತಿಳಿದವರು. ಆದ್ದರಿಂದ ಫೇಸ್‌ಬುಕ್ಕನ್ನು ನಮ್ಮ ಜ್ಞಾನಾಭಿವೃದ್ಧಿ, ಸ್ಫೂರ್ತಿ ಪಡೆಯಲು ಮಾತ್ರ ಮಿತವಾಗಿ ಬಳಸಿದರೆ ಸಾಕು.
– ಮಾಲಾ ಮ ಅಕ್ಕಿಶೆಟ್ಟಿ, ಬೆಳಗಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.