ಫೇಲಾಗೋದು ಪಾರ್ಟ್ ಆಫ್ ಲೈಫ್
ಡುಮ್ಕಿ ಹೇಳುವ ಗೆಲುವಿನ ಫಿಲಾಸಫಿ
Team Udayavani, Jul 14, 2020, 3:59 PM IST
ಸಾಂದರ್ಭಿಕ ಚಿತ್ರ
ನಾನು ಫೇಲ್ ಆದೆನೆಂದು ಗೊತ್ತಾದಾಗ, ಮನೇಲಿ ಒತ್ತಡ ಹಾಕಲಿಲ್ಲ. ಮುಂದೆ ಚೆನ್ನಾಗಿ ಓದಬೇಕು ಅಂತೆಲ್ಲ ಹೇಳಿ, ನನ್ನನ್ನು ಚಿಕ್ಕಮ್ಮನ ಮನೆಗೆ ಬಿಟ್ಟರು. ಚಿಕ್ಕಮ್ಮ, ಚೆನ್ನಾಗಿ ಪಾಠ ಹೇಳಿಕೊಟ್ಟರು.
ಪರೀಕ್ಷೆ ಅಂದರೆ ನಮ್ಮಕ್ಕನ ಪಟ ಕಣ್ಣ ಮುಂದೆ ಬರ್ತದೆ. ನನ್ನ ಮಾರ್ಕು, ರಿಮಾರ್ಕುಗಳನ್ನು ಪರೀಕ್ಷೆ ಮಾಡುತ್ತಿದ್ದದ್ದೇ ಅವಳು. ನಾನೇನು ಸುಮ್ಮನೆ ಅಂದುಕೊಳ್ಳಬೇಡಿ. ಮೇಷ್ಟ್ರು, ಅಕ್ಕನ ಕಣ್ಗಾವಲಿನ ನಡುವೆಯೂ ಕ್ಲಾಸ್ ಬಂಕ್ ಮಾಡಿಬಿಡುತ್ತಿದ್ದೆ. ಕುಂದಾಪುರದಲ್ಲಿ ಆಗ ಗಡ್‌ಬಡ್ ಬಹಳ ಫೇಮಸ್ಸು. ಅದನ್ನು ತಿಂದುಕೊಂಡು ಮಜಾ ಉಡಾಯಿಸ್ತಾ ಇದ್ದೆ. ಶಾಲೆ ಸಮಯದಲ್ಲಿ ಕ್ರಿಕೆಟ್ ಆಡ್ತಿದ್ದೆ. ಅಕ್ಕನಿಗೆ ಇದೆಎಲ್ಲಾ ಮಾಹಿತಿ ಹೋದಾಗ, ಸರಿಯಾಗಿ ಭಾರಿಸ್ತಾ ಇದ್ದಳು. ಇವತ್ತೇನಾದರೂ ಸ್ವಲ್ಪ ಸರಿಯಾಗಿ ಬದುಕುತ್ತಿದ್ದೀನಿ ಅಂದರೆ ಅಕ್ಕ ಮತ್ತು ಅವಳು ಕೊಟ್ಟ ಏಟುಗಳೇ ಕಾರಣ. ಥ್ಯಾಂಕ್ಸು ಟು ಅಕ್ಕ.
ಈಗ, ನನ್ನ ಫೇಲಿನ ಕತೆಯನ್ನು ನಿಮಗೆ ಹೇಳಬೇಕು. ಮೊದಲಿಂದಲೂ ನಾನು ವಿಪರೀತ ತರಲೆ. ವರ್ಷವಿಡೀ ಓದುತ್ತಿರಲಿಲ್ಲ. ಮನೆಯಲ್ಲಿ ಟ್ಯೂಷನ್‌ಗೆ ಕಳಿಸುತ್ತಿದ್ದರು. ಪರೀಕ್ಷೆಗೂ ಮುನ್ನ ಒಂದು ತಿಂಗಳು, ಅಕ್ಕ ಕುತ್ತಿಗೆ ಹಿಡಿದು ಓದಿಸ್ತಿದ್ದಳು. ಎಕ್ಸಾಂ ಬರೆದು ಮನೆಗೆ ಬಂದರೆ, ಪ್ರಶ್ನೆ ಪತ್ರಿಕೆ ಹಿಡಿದು ಪ್ರಶ್ನೆ ಕೇಳ್ಳೋಳು. ಏನೇನು ಬರೆದಿದ್ದೀಯ ಹೇಳು ಅಂತ. ಹಾಗಾಗಿ, ಎಕ್ಸಾಂ ಮುಗೀತಿದ್ದಂತೆಯೇ, ಟೆಕ್ಸ್ಟ್ ಬುಕ್ ಹಿಡಿದು, ಪ್ರಶ್ನೆಗಳಿಗೆಎಲ್ಲಾ ಉತ್ತರ ಹುಡುಕಿಕೊಂಡು, ಅಕ್ಕ ಕೇಳುವ ಪ್ರಶ್ನೆಗೆ 35 ಮಾರ್ಕ್ ಬರೋ ಹಾಗೆ ನೋಡಿಕೊಂಡು ಹೋಗೋದೇ ನನ್ನ ಪಾಲಿಗೆ ದೊಡ್ಡ ಕೆಲಸ ಆಗಿತ್ತು. ಎಷ್ಟೋ ಸಲ ಅಲ್ಲೂ ತಪ್ಪು ತಪ್ಪು ಹೇಳಿ,ಚೆನ್ನಾಗಿ ಒದೆ ತಿಂದದ್ದೂ ಇದೆ. ಒಂದು ಸಲ ಐದನೇ ಕ್ಲಾಸಲ್ಲಿ ಫೇಲಾಗಿದ್ದೆ. ಮನೆಗೆ ಹೋದರೆ ಹೊಡೀತಾರೆ ಅಂತ, ಅಲ್ಲೇ ಸ್ಕೂಲ್ ಸುತ್ತಮುತ್ತ ಓಡಾಡ್ತಾ ಇದ್ದೆ. ಅದನ್ನು ನೋಡಿದ ಮೇಷ್ಟ್ರು, ಏನಾಯ್ತು ಅಂದರು.
“ಸಾರ್, ಫೇಲಾಗೋಗಿದ್ದೀನಿ. ಮನೆಗೆ ಹೋಗಲ್ಲ, ಹೊಡೀತಾರೆ’ ಅಂದೆ. ಸರಿ, ನೀನು ಪಾಸ್ ಆಗಿದ್ದೀಯಾ ಹೋಗೋ, ಅಂದರು. ಮನೆಗೆ ಹೋಗಿ, ಪಾಸಾಗಿದ್ದೀನಿ ಅಂತ ಹೇಳಿದ್ದೆ . ಮುಂದಿನ ವರ್ಷ ಶುರುವಾಯಿತು. “ನಾವು ಹೆಸರು ಓದುತ್ತೀವಿ. ಎಲ್ಲರೂ ಈ ಕ್ಲಾಸಲ್ಲಿ ಬಂದು ಕೂತ್ಕೊಳಿ’ ಅಂದರು ಮೇಷ್ಟ್ರು. ಎಷ್ಟು ಕಾದರೂ ನನ್ನ ಹೆಸರನ್ನು ಕೂಗಲೇ ಇಲ್ಲ.
ನಾನು ಪಾಸಾಗಿಲ್ಲ ಅಂತ ಆಗ ತಿಳೀತು. ಫೇಲಾಗಿದ್ದು ಏಕೆ ಅಂತಲೂ ಆಮೇಲೆ ಗೊತ್ತಾಯ್ತು. ನಮ್ಮಣ್ಣ ಪ್ರವೀಣ ಅಂತ. ಅವನು ನನಗಿಂತ ದಡ್ಡ. ಸುಮಾರು ಕ್ಲಾಸಲ್ಲಿ ಡುಮ್ಕಿ ಹೊಡೆದಿದ್ದ. ನಮ್ಮ ತಂದೆ ಜ್ಯೋತಿಷ್ಯ ಹೇಳ್ಳೋರು. ಒಂದು ಸಲ ಊರಲ್ಲಿ ಅಪ್ಪನಿಗೆ ಹೆಡ್ ಮಾಸ್ಟರ್ ಸಿದ್ದಾರೆ. ಅಪ್ಪ, ಅವರಿಗೆ- “ದೊಡ್ಡ ಮನುಷ್ಯರ ಮಕ್ಕಳು ಅಂತ ನೀವು ಎಲ್ಲರನ್ನೂ ಪಾಸ್ ಮಾಡುತ್ತಿದ್ದೀರ. ಹೀಗೆ ಮಾಡಿದರೆ ಆ ಮಕ್ಕಳಿಗೆ ಫ್ಯೂಚರ್ ಇರೋಲ್ಲ. ಶೇ.50ಕ್ಕಿಂತ ಕಡಿಮೆ ಅಂಕ ತೆಗೆದರೆ ಫೇಲ್ ಮಾಡಬೇಕು. ನನ್ನ ಮಾತು ಮೀರಿ ಪಾಸ್ ಮಾಡಿದರೆ ನಿಮ್ಮ ಕೆಲಸಕ್ಕೆ ಕುತ್ತು ಬರುತ್ತದೆ’ ಅಂತ ತಮಾಷೆಗೆ ಹೇಳಿದ್ದಾರೆ. ಈ ಮಾತನ್ನು ಸೀರಿಯಸ್ಸಾಗಿ ತಗೊಂಡಿದ್ದ ಮೇಷ್ಟ್ರು, ಕಡಿಮೆ ಅಂಕ ಪಡೆದಿದ್ದ ನನ್ನನ್ನೇ ಫೇಲ್ ಮಾಡಿಬಿಟ್ಟಿದ್ದರು. ಈಗೇನಿಗಾದೆ ಅಂದರೆ, ಓದೇ ಜೀವನ, ಓದದಿದ್ದರೆ- ರ್‍ಯಾಂಕ್, ಡಿಸ್ಟಿಂಕ್ಷನ್, ಬರದಿದ್ದರೆ ಭವಿಷ್ಯವಿಲ್ಲ ಎಂದು ಹೆದರಿಸಲಾಗುತ್ತಿದೆ. ಇದು ಖಂಡಿತ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ಟಾಪರ್, ಡಿಸ್ಟಿಂಕ್ಷನ್ ಬರೋದೇ ಈಗ ಐಡೆಂಟಿಟಿ. ನಮ್ಮ ಕಾಲದಲ್ಲಿ ಹೆತ್ತವರು ಒತ್ತಡ ಹಾಕುತ್ತಿರಲಿಲ್ಲ.
ಬಿಡುವಿನಲ್ಲಿ ಯಕ್ಷಗಾನ ನೋಡೋದು, ಆಟ ಆಡೋದು… ಹೀಗೆ, ಮಕ್ಕಳು ಮಕ್ಕಳಾಗಿರುತ್ತಿದ್ದೆವು. ಈಗ ಒತ್ತಡ ಜಾಸ್ತಿ ಹಾಕಿ, ಮೆಚ್ಯುರಿಟಿ ಬೇಗ ಬರ್ತಿದೆ. ಬದುಕು ರಾಂಗ್ ವೇನಲ್ಲಿ ಹೋಗ್ತಿದೆ. ನಾನು ಫೇಲ್ ಆದೆನೆಂದು ಗೊತ್ತಾದಾಗ, ಮನೇಲಿ ಒತ್ತಡ ಹಾಕಲಿಲ್ಲ. ಮುಂದೆ ಚೆನ್ನಾಗಿ ಓದಬೇಕು ಅಂತೆಲ್ಲ ಹೇಳಿ, ನನ್ನನ್ನು ಚಿಕ್ಕಮ್ಮನ ಮನೆಗೆ ಬಿಟ್ಟರು. ಚಿಕ್ಕಮ್ಮ, ಚೆನ್ನಾಗಿ ಪಾಠ ಹೇಳಿಕೊಟ್ಟರು. ನಮಗೆ ಯಾವುದೇ ಟಾರ್ಗೆಟ್ ಇರಲಿಲ್ಲ. ಪಾಸಾದರೆ ಸಾಕಿತ್ತು. ಮಾಥ್ಸ್, ಇಂಗ್ಲಿಷ್ ಕಷ್ಟ ಆಗ್ತಿತ್ತು.
ಕಾರಂತಜ್ಜ ಅಂತ ಮಾಸ್ತರ್ ಇದ್ದರು. ಅವರು ಅದ್ಭುತವಾಗಿ ಪಾಠ ಮಾಡೋರು. ಪಾಸ್ ಆಗುವುದು ಹೇಗೆ ಅಂತ ಹೇಳಿಕೊಡ್ತಿದ್ದರು. ಹತ್ತನೇ ತರಗತಿಯಲ್ಲಿ ಶೇ.47ರಷ್ಟು ಅಂಕ ಬಂತು. ನಿಜ ಹೇಳ್ತೀನಿ, ನನಗೆ ಅನ್ನಿಸೋದು ಏನು ಗೊತ್ತಾ? ಮಾರ್ಕ್ಸ್ ಎಷ್ಟೇ ತೆಗೀರಿ, ಅದು ಸರ್ಟಿಫಿಕೇಟ್‌ನಲ್ಲಿ ಉಳಿಯುತ್ತೆ. ನೀವು ಫಿಲ್ಡಿಗಿಳಿದು ಪ್ರಾಕ್ಟೀಸ್ ಮಾಡಿದರೆ, ಪ್ರಾಕ್ಟಿಕಲ್ ನಾಲೆಡ್ಜ್ ಬರುತ್ತೆ. ನಾನು ಎಷ್ಟೋ ಜನ ಆವರೇಜ್ ಮಾರ್ಕ್ಸ್ ತೆಗೆದ ಸಿವಿಲ್ ಎಂಜಿನಿಯರ್‌ಗಳು, ಲಾಯರ್‌ಗಳನ್ನು ನೋಡಿದ್ದೀನಿ. ಆನ್‌ಗ್ರೌಂಡ್‌ನಲ್ಲಿ ಅವರೆಎಲ್ಲಾ ತುಂಬಾ ಬ್ರಿಲಿಯಂಟ್ ಆಗಿರ್ತಾರೆ.
ನನ್ನ ಬದುಕಿನ ಹೈಯಸ್ಟ್ ಪರ್ಸೆಂಟೇಜ್ ಶೇ.51. ಅದೂ ಪಿಯೂಸಿಯಲ್ಲಿ. ಇದನ್ನು ನೋಡಿ ನಮ್ಮಪ್ಪ ಖುಷಿಯಾಗಿ ಬೆಂಗಳೂರಿಗೆ ಎತ್ತಾಕ್ಕೊಂಡು ಬಂದು ಬಿಟ್ಟರು. ಊರಲ್ಲಿದ್ರೆ ಹಾಳಾಗಿ ಹೋಗ್ತಿನಿ ಅಂತ. ಮುಂದೆ ಎಂಬಿಎ ಸೇರಿದೆ. ಅದು ಅರ್ಧಕ್ಕೇ ನಿಂತಿತು. ಸಿನಿಮಾ ಶುರುವಾಯ್ತು. ಬದುಕು ಈಗ ಕಲರ್ ಕಲರ್ ಆಗಿದೆ. ಫೇಲ್ಯೂರ್‌ನಲ್ಲಿ ಸುತ್ತಾಡಿದ ಅನುಭವವೇ, ಜೀವನದ ಬಹುದೊಡ್ಡ ಆತ್ಮವಿಶ್ವಾಸ ಅಂತ ತಿಳಿದಿದೆ.
ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.