![9-ullala](https://www.udayavani.com/wp-content/uploads/2024/12/9-ullala-415x249.jpg)
ಫೆವಿಕ್ವಿಕ್: ಎಕ್ ಪ್ರೇಮ ಕಥಾ!
Team Udayavani, Dec 12, 2017, 12:07 PM IST
![12-20.jpg](https://www.udayavani.com/wp-content/uploads/2017/12/12/12-20.jpg)
ನಾನು ಬೇರೆ ಹುಡುಗಿಯರ ಜೊತೆ ಮಾತಾಡಿದರೆ ನೀನು ಸಿಟ್ಟು ಮಾಡಿಕೊಳ್ಳುವುದೇಕೆ? ನಿಂಗೆ ನನ್ನ ಮೇಲೆ ಪ್ರೀತಿ ಇರೋದಿಂದಲೇ ತಾನೆ?
ಆವತ್ತು ನಾನು ಬೆಳ್ಳಂ ಬೆಳಗ್ಗೆ ಚಳಿಯಲ್ಲಿ ಮೈಮುದುಡಿಕೊಂಡು ಟ್ಯೂಷನ್ ಕ್ಲಾಸ್‌ಗೆ ಹೋಗುತ್ತಿದ್ದೆ. ಎಲ್ಲೆಡೆ ಮಂಜು ಮುಸುಕಿತ್ತು. ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುತ್ತಿರಲಿಲ್ಲ. ಆಗ ನೀನು ಕಣ್ಣಿಗೆ ಬಿದ್ದೆ. ಅಬ್ಟಾ! ಮೊದಲ ನೋಟದಲ್ಲೇ ಸೌಂದರ್ಯಕ್ಕೆ ಮರುಳಾಗಿ, ಮೈಮರೆತ ನನಗೆ ಟ್ಯೂಷನ್ ಕ್ಲಾಸ್‌ಗೆ ಹೊರಟಿರುವುದೂ ಮರೆತು ಹೋಯಿತು. ನಾನು ಮೆಲ್ಲಗೆ ನಿನ್ನ ಜೊತೆ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದೆ. ಆ ನಿನ್ನ ಚೆಂದುಟಿ, ಸೌಗಂಧಿಕಾ ಪುಷ್ಪದಂಥ ಮೊಗ, ಬಳುಕುವ ಆ ನಡಿಗೆ.. ಅರ್ಧ ಗಂಟೆ ನಿನ್ನ ಜೊತೆಜೊತೆಗೇ ನಡೆದುಬಂದ ಮೇಲೆ, ಸಾಕ್ಷಾತ್ ಮಾಯಾಲೋಕದ ಸುಂದರಿ ಇವಳೇ ಇರಬೇಕು ಅಂತ ಅನಿಸಿದ್ದಂತೂ ನಿಜ.
ಹೀಗಿರುವಾಗಲೇ ನೀನು ಮುಖ ಕಿವುಚಿದ್ದು, ಸುಸ್ತಾದವಳಂತೆ ಕಾಣಿಸಿದ್ದು ಗೊತ್ತಾಯಿತು. ನನ್ನ ಸುಂದರಾಂಗಿಗೆ ಇದೇನಾಯ್ತು ಅಂದುಕೊಂಡಾಗಲೇ, ನೀನು ಕುಂಟುತ್ತ ಹೋಗುತ್ತಿದ್ದೀಯ ಎಂದೂ ಗೊತ್ತಾಯಿತು. ನೋಡಿದರೆ ನಿನ್ನ ಚಪ್ಪಲಿ ಕಿತ್ತು ಹೋಗಿದೆ. ಪಾಪ, ಅನ್ನಿಸಿತು. ಮನೆಯಿಂದ ಹೊರಡುವಾಗ ಸರಿಯಾಗಿ ನೋಡಿ ಹಾಕಿಕೊಂಡು ಬರುವುದಲ್ಲವೇ? ನಿನ್ನ ಕಷ್ಟ ನೋಡಲಾರದೆ ನಾನು ನನ್ನ ಬ್ಯಾಗ್‌ನಲ್ಲಿದ್ದ ಫೆವಿಕ್ವಿಕ್‌ನ್ನು ನಿನಗೆ ಕೊಟ್ಟೆ. ನೀನು ಮುಂಗುರುಳು ಸರಿ ಮಾಡುತ್ತಾ, ಮುಗುಳ್ನಗೆ ಬೀರಿ ಕಣ್ಣು ಮಿಟುಕಿಸುತ್ತಾ ಧನ್ಯವಾದ ಹೇಳಿದೆ. ಆ ಕ್ಷಣವೇ ನಾನು ನಿನ್ನ ಪ್ರೇಮದಾಸನಾದೆ.
ಹೀಗೆ ಶುರುವಾಯ್ತು ನಮ್ಮಿಬ್ಬರ ಪರಿಚಯ, ಸ್ನೇಹ. ನಂತರ ಇಬ್ಬರೂ ಒಟ್ಟಿಗೆ ಟ್ಯೂಷನ್ ಕ್ಲಾಸ್‌ಗೆ ಹೋಗತೊಡಗಿದೆವು. ಭಟ್ಟರ ಕಾಫಿ ಅಡ್ಡದಲ್ಲಿ ಬೈಟು ಕಾಫಿ ಹೀರಿದೆವು. ನೀನು ನನಗೋಸ್ಕರ ನನ್ನಿಷ್ಟದ ಹಲ್ವಾ ಮಾಡಿಸಿಕೊಂಡು ತಂದುಕೊಡುತ್ತಿದ್ದೆ. ಇವ್ಯಾವುದನ್ನೂ ನಾನು ಮರೆತಿಲ್ಲ. ಆ ನೆನಪುಗಳೆಲ್ಲ ಪುಟ್ಟ ಹೃದಯದಲ್ಲಿ ಹಚ್ಚ ಹಸಿರಾಗಿ ಉಳಿದಿವೆ.
ಅದೆಲ್ಲಾ ಸರಿ, ನಾನು ಬೇರೆ ಹುಡುಗಿಯರ ಜೊತೆ ಮಾತಾಡಿದರೆ ನೀನು ಕೋಪ ಮಾಡಿಕೊಳ್ಳುವುದ್ಯಾಕೆ? ಹೇ ಹುಡುಗಿ, ನಿನ್ನ ಕಣ್ಣಲ್ಲಿನ ಕಾಳಜಿ, ಕೋಪ, ಮುನಿಸು, ಪ್ರೀತಿಯನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖನಲ್ಲ ನಾನು. ಏನೂ ಅರಿಯದ ಮುದ್ದು ಕಂದಮ್ಮನ ಹಾಗೆ ನಟಿಸಬೇಡ ಗೆಳತಿ. ನೀನೇ ಹೇಳು, ಇದು ಸ್ನೇಹಾನಾ? ಪ್ರೀತೀನಾ?
ಇಂತಿ ನಿನ್ನ ಫೆವಿಕ್ವಿಕ್ ಗೆಳೆಯ
ಎಆರ್
ಟಾಪ್ ನ್ಯೂಸ್
![9-ullala](https://www.udayavani.com/wp-content/uploads/2024/12/9-ullala-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![7(1](https://www.udayavani.com/wp-content/uploads/2024/12/71-4-150x80.jpg)
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
![9-ullala](https://www.udayavani.com/wp-content/uploads/2024/12/9-ullala-150x90.jpg)
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
![BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ](https://www.udayavani.com/wp-content/uploads/2024/12/virat-150x87.jpg)
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
![6](https://www.udayavani.com/wp-content/uploads/2024/12/6-36-150x80.jpg)
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
![8-belthangady](https://www.udayavani.com/wp-content/uploads/2024/12/8-belthangady-150x90.jpg)
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.