ವ್ಹಾ ಮೇರೆ ಷೇರು!
Team Udayavani, Jan 2, 2018, 9:27 AM IST
ಪರಿಸ್ಥಿತಿಯ ಕೈಗೊಂಬೆಯಾಗಿ ನನ್ನದಲ್ಲದ ತಪ್ಪಿಗೆ ವಿದ್ಯಾಭ್ಯಾಸ ಹಳಿತಪ್ಪಿ, ಭವಿಷ್ಯದ ತಲ್ಲಣಗಳು ಅಧೀರಗೊಳಿಸಿ ಹೈರಾಣಾಗಿದ್ದೆ. ಮಗ ಕೈ ಬಿಟ್ಟು ಹೋದಾನು ಎಂದೆಣಿಸಿದ ಅಪ್ಪ, ವಾತಾವರಣ ಬದಲಾದಲ್ಲಿ ಸರಿಯಾದಾನು ಎಂದು ನನ್ನನ್ನು ತಲುಪಿಸಿದ್ದು ಬೆಂಗಳೂರಿನ ನನ್ನಣ್ಣನ ಮನೆಗೆ.
ಹೆಚ್ಚೇನೂ ಓದಿಲ್ಲದ ನನ್ನನ್ನು ಷೇರು ದಲ್ಲಾಳಿಯ ಬಳಿ ಕೆಲಸಕ್ಕೆ ಸೇರಿಸಲಾಯಿತು. ಹಳ್ಳಿಯಿಂದ ಬಂದ ನನಗೆ ಇಂಗ್ಲಿಷ್ ಮೇಲೆ ಹಿಡಿತವಿರಲಿಲ್ಲ. ಹಾಗಾಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಬಹಳ ತ್ರಾಸವಾಯಿತು. ನನ್ನ ಇತಿಮಿತಿಗಳನ್ನು ಅರಿತಿದ್ದ ಸಹೋದ್ಯೋಗಿಗಳು ಕನ್ನಡಿಗರಾಗಿದ್ದರೂ, ಇಂಗ್ಲಿಷನ್ನೇ ಮುಂದಿಟ್ಟುಕೊಂಡು ಬಹಳವೇ ಶೋಷಣೆ ಮಾಡಿದ್ರು. ಕೆಲಸವಿಲ್ಲದಿದ್ದರೂ ಹೆಚ್ಚಿನ ಸಮಯ ಆಫೀಸಿನಲ್ಲಿ ಉಳಿಯುವಂತೆ ಮಾಡ್ತಿದ್ರು. ನಾನಲ್ಲಿ ಸೇರಿಕೊಂಡದ್ದು ಲೆಕ್ಕಿಗನ ಸಹಾಯಕನಾಗಿಯಾದ್ರೂ, ಕಚೇರಿಯ ಪರಿಚಾರಕ ರಜೆಯಲ್ಲಿದ್ದಾಗ ನನ್ನಿಂದಲೇ ಕಾಫಿ ಕಪ್ಪುಗಳು ಶುಚಿಗೊಳಿಸಲ್ಪಡುತ್ತಿದುÌ.
ಪ್ರತಿಕೂಲ ವಾತಾವರಣದ ಹೊರತಾಗಿಯೂ ನನಗೆ ಸಿಕ್ಕಿರೋ ಕೊನೆಯ ಅವಕಾಶವೆಂಬಂತೆ ಅದಕ್ಕೇ ಆತುಕೊಂಡ ನಾನು ಅಲ್ಲಿನ ಕೆಲಸಕಾರ್ಯಗಳನ್ನು ಬೇಗನೆ ಗ್ರಹಿಸಿಕೊಂಡೆ. ಕಾಲಕ್ರಮೇಣದಲ್ಲಿ ನನ್ನ ಕಾರ್ಯಕ್ಷಮತೆಯನ್ನು ಮನಗಂಡ ಸಹೋದ್ಯೋಗಿಗಳಿಂದ ಗೌರವವೂ ಸಿಕ್ಕಿತು. ಇನ್ನೇನು ಮುಗಿದೇಹೋಯ್ತು ಎಂದುಕೊಂಡ ಬದುಕಿಗೆ ಲಂಗರು ಹಾಕಲು ಸಾಧ್ಯವಾಗಿದ್ದು ಹಾಗೂ ಅವನತಿಯತ್ತ ಸಾಗಿದ್ದ ವಿಶ್ವಾಸ ಮರುಸ್ಥಾಪಿತಗೊಳ್ಳಲು ಸಾಧ್ಯವಾಗಿದ್ದು ಶ್ರದ್ಧೆ ಹಾಗೂ ಪರಿಶ್ರಮದಿಂದಲೇ.
ನೆಲೆಗೊಂಡ ವಿಶ್ವಾಸ ನನ್ನ ಓದು ಮುಂದುವರಿಕೆಗೆ ಸಹಕಾರಿಯಾಗಿದ್ದಲ್ಲದೆ, ಪೂರ್ವಾಶ್ರಮದಲ್ಲಿ ಪ್ರಾಪ್ತಿಯಾದ ಅರಿವಿನಿಂದಾಗಿ ನಂತರದಲ್ಲಿ ಸ್ವಂತದ “ಬಂಡವಾಳ ನಿರ್ವಹಣೆ ಸೇವಾ’ ಸಂಸ್ಥೆ ಪ್ರಾರಂಭಿಸಲು ಪ್ರೇರಕವಾಯ್ತು. ಸ್ವಸಾಮರ್ಥ್ಯದ ಬಗ್ಗೆ ನೆಚ್ಚಿಕೆಯಿಟ್ಟು, ಮಾಡೋ ಕೆಲಸದಲ್ಲಿ ತನ್ಮಯತೆಯಿಂದ ಸಮರ್ಪಿಸಿಕೊಂಡಲ್ಲಿ ತಡವಾಗಿಯಾದ್ರೂ ಫಲ ಸಿಗುತ್ತೆ ಅನ್ನೋದು ನನ್ನ ನಂಬಿಕೆ.
ಬಿ.ಸಿ. ನಾಗೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.