ಪ್ರಥಮ ಆಶಾಕಿರಣ

Team Udayavani, Jan 16, 2018, 2:43 PM IST

19-30.jpg

ಊಟಕ್ಕೆ ಕಾಸಿಲ್ಲವೆಂದು ಎಂಟಾಣೆ ಕಡಲೆ ತಿನ್ನುತ್ತಿದ್ದೆ!
1993 ಇರಬೇಕು. ಎಸ್ಸೆಸ್ಸೆಲ್ಸಿ ಬಳಿಕ ಕಾಲೇಜಿನ ದಿನಗಳಲ್ಲಿ ಆರ್ಥಿಕವಾಗಿ ಬಹಳ ಕಷ್ಟಕರ ಪರಿಸ್ಥಿತಿ ನನ್ನೆದುರಿಗಿತ್ತು. ಕಾಲೇಜಿಗೆ ಕನಿಷ್ಠ ಹಾಜರಾತಿ ಸರಿದೂಗಿಸಿಕೊಂಡು, ಮಿಗುವ ದಿನಗಳು ಮತ್ತು ಶನಿವಾರ- ಭಾನುವಾರಗಳನ್ನೂ ದುಡಿಮೆಗೆಂದೇ ಮೀಸಲಿಟ್ಟಿದ್ದೆ. ಹೈಸ್ಕೂಲಲ್ಲಿ ನನ್ನ ಸೀನಿಯರ್‌ ಆಗಿದ್ದಾತನೊಬ್ಬ ಮನೆಗಳಿಗೆ ಸುಣ್ಣ ಬಣ್ಣ ಬಳಿಯೋ ಪೈಂಟಿಂಗ್‌ ಕೆಲಸ ಮಾಡುತ್ತಿದ್ದ. ಅವನೊಂದಿಗೆ ಸೇರಿ ಪೈಂಟಿಂಗ್‌ ಕೆಲಸ ಮಾಡುತ್ತ ನನ್ನ ಮೊದಲ ಉದ್ಯೋಗ ಆರಂಭಿಸಿದ್ದೆ.

ಮೊದಲ ದಿನ, ನನ್ನ ಗಣಿತದ ಮೇಷ್ಟ್ರ ಮನೆಯಲ್ಲೇ ನೆಲಕ್ಕೆ ಕಾವಿ ಪಾಲಿಶ್‌ ಹಚ್ಚಿ ತೆಂಗಿನ ನಾರಿನಿಂದ ಒತ್ತಿ ತಿಕ್ಕಿ ಹೊಳಪು ಬರಿಸೋ ಕೆಲಸ. ಮತ್ತೆ ಮಣ್ಣು ಹಿಡಿದ ಕಿಟಕಿಯ ಕಂಬಿ ಜಾಲರಿಗಳನ್ನು ಸ್ಯಾಂಡ್‌ ಪೇಪರ್‌ನಿಂದ ಉಜ್ಜಿ ಸ್ವತ್ಛಗೊಳಿಸೋ ಕೆಲಸ. ಇದಕ್ಕೆ ದಿನವಹಿ ಇಪ್ಪತ್ತೈದು ರೂಪಾಯಿ ವೇತನ. ಕಾಲೇಜು ದಿನಗಳಲ್ಲಿ ಮಧ್ಯಾಹ್ನ ಊಟಕ್ಕೆ ಕಾಸಿಲ್ಲವೆಂದು ಎಂಟಾಣೆ ಕಡಲೆ ತಿಂದು ನೀರು ಕುಡಿಯುತ್ತಿದ್ದವ ಕ್ರಮೇಣ ಸ್ವಂತ ದುಡಿಮೆ ಕಾಸಲ್ಲಿ ಮೂರು ರೂಪಾಯಿಯ ಊಟಕ್ಕೆ ಹೋಗುವಷ್ಟು ಶಕ್ತನಾದೆ!

ದಿನೇಶ್‌ ಕುಕ್ಕುಜಡ್ಕ, ವ್ಯಂಗ್ಯ ಚಿತ್ರಕಾರ

ಮೊದಲ ಚೆಕ್‌ ಅನ್ನು ಜೆರಾಕ್ಸ್‌ ಮಾಡಿದ್ದೆ!
ಹೈಸ್ಕೂಲು ದಿನಗಳಲ್ಲಿ ನನಗೆ ಬರವಣಿಗೆ ಅಂದರೆ ಎಲ್ಲಿಲ್ಲದ ಆಸಕ್ತಿ. ಸದಾ ಒಂದಿಲ್ಲೊಂದು ಪತ್ರಿಕೆಗಳಿಗೆ ಬರಹಗಳನ್ನು ಬರೆದು ಕಳುಹಿಸುತ್ತಿದ್ದೆ. ಲೇಖನಗಳು ಪ್ರಕಟಗೊಂಡಾಗ ಸಂತೋಷದಿಂದ ಹಾರಾಡುತ್ತಿದ್ದೆ. ಸ್ನೇಹಿತರೆಲ್ಲರಿಗೂ ತೋರಿಸುತ್ತಾ, ಹೆಮ್ಮೆಯಿಂದ ಬೀಗುತ್ತಿದ್ದೆ.

ನಾನಾಗ ಹತ್ತನೇ ತರಗತಿಯಲ್ಲಿದ್ದೆ. ಅದೊಂದು ದಿನ ನಾನು ಕಳಿಸಿದ ಬರಹಕ್ಕೆ ಪತ್ರಿಕೆಯವರು 300 ರೂ. ಸಂಭಾವನೆಯ ಚೆಕ್‌ ಕಳುಹಿಸಿಕೊಟ್ಟಿದ್ದರು. ನನಗೆ ಸಿಕ್ಕಿದ ಮೊದಲ ಚೆಕ್‌ ಅದು. ಶಾಲೆಯಲ್ಲಿ ನನ್ನ ಅಧ್ಯಾಪಕರಿಗೆಲ್ಲರಿಗೂ ಸಂಭ್ರಮದಿಂದ ಈ ಸುದ್ದಿಯನ್ನು ತಿಳಿಸಿದೆ. ಮನೆಗೆ ತಲುಪಿದ ಕೂಡಲೇ ಅಮ್ಮನಿಗೆ ಚೆಕ್‌ ತೋರಿಸುತ್ತಾ, ಬ್ಯಾಂಕ್‌ ವ್ಯವಹಾರದ ಬಗ್ಗೆ ಪ್ರಶ್ನಿಸಿದಾಗ ಅಮ್ಮ- “ನೀನು ಬ್ಯಾಂಕ್‌ನಲ್ಲಿ ಚೆಕ್‌ ನೀಡಿದಾಗ, ಚೆಕ್ಕನ್ನು ಅವರು ಇರಿಸಿಕೊಂಡು ನಿನ್ನ ಖಾತೆಗೆ ಹಣ ಡೆಪಾಸಿಟ್‌ ಮಾಡುತ್ತಾರೆ’ ಅಂದರು. ನನ್ನ ಮೊದಲ ಚೆಕ್‌ ಅನ್ನು ಬ್ಯಾಂಕ್‌ಗೆ ಕೊಡಬೇಕಲ್ಲ? ಹಾಗಾಗಿ, ಅದರ ನೆನಪಿಗೋಸ್ಕರ ಆ ಚೆಕ್‌ನ ಪ್ರತಿಯನ್ನು ಇಟ್ಟುಕೊಳ್ಳಲು ನಿರ್ಧರಿಸಿದೆ. ಮರುದಿನ ಬ್ಯಾಂಕ್‌ಗೆ ಹೋಗುವ ಮುನ್ನ ಚೆಕ್ಕನ್ನು ಜೆರಾಕ್ಸ್‌ ಮಾಡಿಟ್ಟುಕೊಂಡೆ. ಆ ಪ್ರತಿ ಇಂದಿಗೂ ನನ್ನ ಬಳಿ ಇದೆ. ಹಳೆಯ ದಿನಗಳ ನೆನಪಾದಾಗಲೆಲ್ಲ ಅದನ್ನು ನೋಡುತ್ತಿರುತ್ತೇನೆ. ಇಂದಿಗೂ ಏನಾದರೂ ಬರೆಯುವಾಗ ಕೂಡ ಆ ಚೆಕ್‌ ಅನ್ನು ನೆನಪಿಸಿಕೊಳ್ಳುತ್ತೇನೆ. 

ಪ್ರಜ್ಞಾ ಹೆಬ್ಟಾರ್‌

ಟಾಪ್ ನ್ಯೂಸ್

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Kundapura: ಚೋರಾಡಿ; ಕರೆ ಬಂದರೆ ಬೆಟ್ಟ ಹತ್ತಬೇಕು!

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

5

Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

4

Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.