ಚಿಮ್ಮು ಹಲಗೆ
Team Udayavani, Dec 24, 2019, 4:21 AM IST
ಕಣ್ಣುಕತ್ತಲು. ಏನಾಗುತ್ತಿದೆ ತಿಳಿಯುತ್ತಿಲ್ಲ. ಹಿಂದೆಯಿಂದ ಯಾವುದೋ ಸಣ್ಣ ದನಿಯ ಆರ್ಥನಾದ “ಅವಳ ಕಾಲನ್ನು ಏನಾದರು ಮಾಡಿ ಉಳಿಸಿ. ನಡೆಯುವ ಹಾಗೇ ಮಾಡಿ’ ಅಂತ ಕೇಳುತ್ತಿತ್ತು. ಆಗ ಕಿರಣ್ ಕನೋಜಿಯಾಗೆ ಖಚಿತವಾಗಿದ್ದು ನನ್ನ ಎಡಗಾಲೇ ಇಲ್ಲ ಅನ್ನೋದು.
ಕಣ್ಣಲ್ಲಿ ಧಾರಾಕಾರದ ನೀರು. ಅದರ ಹಿಂದೆ ನಿನ್ನೆ ಏನಾಯ್ತು ಅನ್ನೋದು ನೆನಪಿಗೆ ಬಂತು. ಕಿರಣ್ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಖುಷಿಯಿಂದ ಊರಿನ ಟ್ರೈನ್ ಏರಿದ್ದಳು. ಪ್ರಯಾಣ ಬೋರ್ ಆಯ್ತಲ್ಲ ಅಂತ ಮೆಟ್ಟಿಲ ಬಳಿಕೂತು ಹಾಗೇ ಲ್ಯಾಪ್‌ಟಾಪ್ ತೆರೆದು ನೋಡುತ್ತಿರಲು. ಯಾರೋ ಇಬ್ಬರು ಬೆನ್ನಿಬಂದರು. ಲ್ಯಾಪ್‌ಟಾಪ್ ಕಿತ್ತುಕೊಂಡು, ಕೈ ಚೀಲವನ್ನು ಎಗರಿಸಿ, ತಳ್ಳಿದಂತಾಯಿತು.. ಕಂಬಿಯ ನಡುವೆ ಬಿದ್ದ ಕಿರಣಗೆ ನೋವು ಹ್ಯಾಪಿ ಬರ್ತಡೇ ಅಂತ ಹೇಳಿದ್ದಷ್ಟೇ ನೆನಪು.. ಕಣ್ಣ ಕತ್ತಲೇ ಬಂದಾಗ ಹಾಸ್ಟಿಟಲ್ ಮಂಚದ ಮೇಲೆ ಮಲಗ್ಗಿದ್ದಳು.
ಮುಂದೇನು?
ಇದೇ ಬದುಕಿನ ದೊಡ್ಡ ತಿರುವಾಯಿತು. ಆಕೆ ಐಟಿ ಎಂಜಿನಿಯರ್ ಆಗಲು ತೀರ್ಮಾನಿಸಿದಳು. ಹೆತ್ತವರೇನು ಶ್ರೀಮಂತರಲ್ಲ. ಅವರಿವರ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಂಡು ಬದುಕುತ್ತಿದ್ದರು. ಆದರೆ ಕಿರಣ ಎದೆಗುಂದಲಿಲ್ಲ. ಅಕ್ಕಪಕ್ಕದ ಮನೆಯವರು ವಿದ್ಯಾಭ್ಯಾಸದ ಖರ್ಚು ನೋಡಿಕೊಂಡರು. ಸಂದರ್ಶನ ಹೇಗೆ ಎದುರಿಸಬೇಕು ಅಂತ ಹೇಳಿಕೊಟ್ಟರು. ಪದವಿ ಪೂರೈಸಿದಳು. ಇನ್ಫೋಸಿಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಳು.
ಈ ಅಖಂಡ ಧೈರ್ಯ ಹುಟ್ಟಿಕೊಂಡಿದ್ದು ಹೇಗೆ?
ಕಿರಣ ಹೇಳ್ತಾಳೆ-6 ತಿಂಗಳು ಬೆಡ್ ರಿಡನ್ ಆಗಿದ್ದೆ. ಒಂದು ದಿನ ಟಾಯ್ಲೆಟ್‌ನಲ್ಲಿ ಬಿದ್ದು ಹೋದೆ. ಪ್ರಾಣ ಹೋಗುವಷ್ಟು ನೋವು. ವೈದ್ಯರನ್ನು ಕೇಳಿದರೆ, ನೀವು ಇನ್ನು ಓಡುವುದಕ್ಕೆ ಆಗೋಲ್ಲ. ಬದುಕು ಇಷ್ಟೇ ಅಂದರು. ಆಗ ತೀರ್ಮಾನ ಮಾಡಿದೆ ನಾನು ಓಡಲೇ ಬೇಕು ಅಂತ. ಅಲ್ಲಿಂದ ಶುರುವಾಯಿತು ನೋಡಿ.. ನನ್ನ ಓಟ.. ‘
ಚಲಕ್ಕೆ ಸಾಕ್ಷಿ ಎಂಬಂತೆ ಈಗ ಕಿರಣ ದೇಶದ ಬಹುಶೃತ ಬ್ಲೇಡ್ ರನರ್.
ಅವಘಡವನ್ನೇ ಬದುಕಿನ ಚಿಮ್ಮುಗೆ ಹಲಗೆ ಮಾಡಿಕೊಳ್ಳೋದು ಹೀಗಲ್ಲವೇ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.