ನಾನೂ ಸೈಕಲ್‌ ಬಿಟ್ಟೆ…

Team Udayavani, Mar 28, 2017, 3:50 AM IST

28-JOSH-8.jpg

ಚಿಕ್ಕವರಿದ್ದಾಗ ನಾವು ಏನೇ ಮಾಡಿದರೂ ನಮಗೆ ಇಷ್ಟವಾಗುತ್ತಿತ್ತು. ನಾನು ಅಜ್ಜಿ ಮನೆಯಲ್ಲಿಯೇ ಇರುತ್ತಿದ್ದೆ. ನಾನು ಜಾಸ್ತಿ ಆಟವಾಡಿರುವುದಾಗಲಿ, ಏನೇ ಆಗಲಿ ನನಗೆ ಈಗಲೂ ನೆನಪಿವೆ. ಅದರಲ್ಲಿಯೂ ನಾನು ಸೈಕಲ್‌ ಕಲಿತ ಅನುಭವ ನೆನಸಿಕೊಂಡರೆ ಈಗಲೂ ನಗೆಯುಕ್ಕುತ್ತದೆ. ಅಪ್ಪ ಕೊಡಿಸಿದ ಸೈಕಲ್‌ ಮೇಲೆ ತುಂಬಾ ಓಡಾಡುತ್ತಿದ್ದೆ. ನನಗೆ ನನ್ನ ಸೈಕಲ್‌ ಬಿಟ್ಟಿರೋಕೇ ಆಗುತ್ತಿರಲಿಲ್ಲ. ರಾತ್ರಿಯೂ ಮಲಗುವಾಗ ಕೋಣಿಯೊಳಗೆ ತಂದು ಇಟ್ಟುಕೊಳ್ಳುತ್ತಿದ್ದೆ. ಸೈಕಲ್‌ ಬೆಲ್‌ ಬಾರಿಸಲು ತುಂಬಾ ಇಷ್ಟವಾಗುತ್ತಿತ್ತು. ರಸ್ತೆಯಲ್ಲಿ ಯಾರೂ ಇಲ್ಲದಿದ್ದರೂ ಟಿಂಗ್‌ ಟಿಂಗ್‌ ಅಂತಾ ಬೆಲ್‌ ಹಾಕುತ್ತಿದ್ದೆ. ಸೈಕಲ್‌ ಕಲಿತ ಕತೆ ಹೇಳುತ್ತೇನೆ.

ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ಅಪ್ಪ ಮಧ್ಯಾಹ್ನ ನಿದ್ದೆ ಹೋದ ನಂತರ ಅವರಿಗೆ ಗೊತ್ತಿಲ್ಲದಂತೆ ಸೈಕಲ್‌ ಕಲೀತಾ ಇದ್ದೆ. ಆಗೆಲ್ಲಾ ಸೈಕಲ್‌ ಬಾಡಿಗೆಗೆ ಸಿಗುತ್ತಿದ್ದವು. ಅರ್ಧ ತಾಸಿಗೆ ಒಂದು ರುಪಾಯಿ, ಒಂದು ತಾಸಿಗೆ ಎರಡು ರುಪಾಯಿಯಂತೆ ಸೈಕಲ್‌ ಬಾಡಿಗೆಗೆ ಸಿಗುತ್ತಿದ್ದವು. ಅವು ಚಿಕ್ಕ ಚಿಕ್ಕ ಸೈಕಲ್‌ಗ‌ಳು. ಅಜ್ಜಿ ಮನೆಯ ಹತ್ತಿರ ನನಗೆ ಕೆಲವು ಜನ ಸ್ನೇಹಿತರಿದ್ದರು. ಅವರಲ್ಲಿಗೆ ಹೋಗಿ, ಒಂದು ಸಲ ಸೈಕಲ್‌ ಬಿಡುವುದನ್ನು ಕಲಿಸಿಕೊಡಿ ಅಂತ ಕೇಳಿದೆ. ಅವರು ಹೂಂ ಎಂದು ನನ್ನನ್ನು ಕರೆದುಕೊಂಡು ಹೋದರು.

ನೀಲಾ ನನ್ನ ಸ್ನೇಹಿತೆ. ಅವಳಿಗೆ ಸೈಕಲ್‌ ಹೊಡೆದು ಅನುಭವವಿತ್ತು. ಅವಳು ಸೈಕಲ್‌ ಬಿಡುವುದನ್ನು ನೋಡುತ್ತಾ ನಿಂತಿದ್ದೆ. ಅವಳು ಹೊಡೆಯುತ್ತ ಹೊಡೆಯುತ್ತ ತನ್ನ ಎರಡೂ ಕೈಗಳನ್ನು ಬಿಟ್ಟು ಸಾಹಸ ಪ್ರದರ್ಶನ ಮಾಡತೊಡಗಿದಳು. ಅದನ್ನು ನೋಡಿದ ಮೇಲಂತೂ ನನಗೆ ಸೈಕಲ್‌ ಕಲಿಯದಿದ್ದರೂ ಚಿಂತೆಯಿಲ್ಲ, ಅದರ ಮೇಲೆ ಕುಳಿತುಕೊಳ್ಳುವ ಹಂಬಲ ಆಕಾಶ ಮುಟ್ಟಿತು. ನೀಲಾಳನ್ನು ಸೈಕಲ್‌ ಕೊಡೆಂದು ಕೇಳಿದೆ. ಅವಳು ಕೊಟ್ಟಳು. ಸೈಕಲ್‌ ಹಿಂದೆ ಕೈ ಹಿಡಿದು ಸೈಕಲ್‌ ಓಡಿಸು ಎಂದಳು. ನಾನು, ಹೇಗೂ ಅವಳು ಹಿಡಿದಿರುತ್ತಾಳಲ್ಲಾ ಅಂತ ಮೊದಲ ಸಾಹಸ ಪ್ರದರ್ಶನಕ್ಕೆ ಅಣಿಯಾದೆ. ಪೆಡಲ್‌ ತುಳಿಯುತ್ತಿದ್ದಂತೆ ಹ್ಯಾಂಡಲ್‌ ಅಲುಗಾಡತೊಡಗಿತು, ನಡುಗತೊಡಗಿತು. ಪೆಡಲ್‌ ತುಳಿಯುತ್ತಾ ಮುಂದೆ ಹೋದಂತೆ, ಎರಡು ಕೈಗಳನ್ನು ಬಿಟ್ಟೆ. ಹಾಗೂ ಹೀಗೂ ಸೈಕಲ್‌ ಮುಂದಕ್ಕೆ ಹೋಗುತ್ತಿತ್ತು. ಎಲ್ಲವೂ ಸರಿಯಾಗುತ್ತಿತ್ತು, ನಾನು ಹಿಂದಿರುಗಿ ನೋಡದಿದ್ದರೆ. ನಾನು ಆತ್ಮವಿಶ್ವಾಸದಿಂದ ಸೈಕಲ್‌ ಬಿಡುವುದನ್ನು ಕಂಡು ನೀಲಾ ತನ್ನ ಸಹಾಯಹಸ್ತ ಬಿಟ್ಟಿದ್ದಳು. ನಾನೊಬ್ಬಳೇ ಸೈಕಲ್‌ ತುಳಿದುಕೊಂಡು ಮುಂದಕ್ಕೆ ದೂರ ಬಂದುಬಿಟ್ಟಿದ್ದೆ. ಹಿಂದಿರುಗಿ ನೋಡಿದ ಕ್ಷಣದಲ್ಲೇ, ಅವಳು ಹಿಡಿದಿದ್ದಾಳೆಂಬ ಧೈರ್ಯದಲ್ಲಿದ್ದ ನನ್ನ ಜಂಘಾಬಲ ಉಡುಗಿತು. ಆಮೇಲೆ ಏನಾಗಬೇಕಿತ್ತೋ ಅದಾಯಿತು. ನಾನು ಸೀದಾ ಹೋಗಿ ಬಿದ್ದಿದ್ದು ಮುಳ್ಳಿನ ಕಂಟಿಯೊಳಗೆ. ಕೈ ಕಾಲಲ್ಲೆಲ್ಲ ತರಚಿದ ಗಾಯಗಳಾದವು. ಅಪ್ಪನಿಂದ ಗಾಯವನ್ನೂ, ಬಿದ್ದ ವಿಷಯವನ್ನೂ ಮುಚ್ಚಿಟ್ಟೆ.

ಸೌಮ್ಯ ಆರ್‌. ನಾಯಕೋಡಿ, ವಿಜಯಪುರ

ಟಾಪ್ ನ್ಯೂಸ್

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.