ಫ‌ುಲ್‌ ಟೈಂ ಕೃಷಿಕ, ಪಾರ್ಟ್‌ ಟೈಂ ಶಿಕ್ಷಕ….


Team Udayavani, Feb 25, 2020, 5:46 AM IST

majji-8

ನಾನು ಜಾಸ್ತಿ ಓದಿ. ಒಂದು ಶಾಲೆಯನ್ನು ತೆರೆಯಬೇಕು. ಬಡ ಬಗ್ಗರಿಗೆ ಕಡಿಮೆ ದರದಲ್ಲಿ ವಿದ್ಯಾಭ್ಯಾಸ ಕೊಡಬೇಕು ಅನ್ನೋದು ಚಿಕ್ಕ ಹುಡುಗನಾಗಿದ್ದಾಗಿನಿಂದ ನನ್ನ ಕನಸಾಗಿತ್ತು. ಎಜುಕೇಷನ್‌ ಹೆಸರಲ್ಲಿ ಹಣ ಮಾಡಬೇಕು ಅನ್ನೋ ಆಸೆ ಏನೂ ಇರಲಿಲ್ಲ. ನನ್ನ ಹೆಂಡತಿ ಮಕ್ಕಳು ಬದುಕುವಷ್ಟು ಆದಾಯ ಬಂದರೆ ಸಾಕು ಅನ್ನೋ ಮನೋಸ್ಥಿತಿ ನನ್ನದು. ಹೀಗಾಗಿಯೇ, ನಾನು 7 ತರಗತಿಯಿಂದಲೇ ಚೆನ್ನಾಗಿ ಓದಲು ಶುರು ಮಾಡಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 75ರಷ್ಟು ಅಂಕ ಪಡೆದೆ. ಆ ಕಾಲಕ್ಕೆ ಈ ಅಂಕವೇ ದೊಡ್ಡದು. ಗಣಿತ, ವಿಜ್ಞಾನದಲ್ಲಿ ಪಂಟರ್‌ ಆಗಿದ್ದೆ. ಎಲ್ಲರೂ ಹೊಗೊಳ್ಳೋರು. ಇಷ್ಟಾದರೆ ಸಾಕಲ್ಲವೇ? ಹೀಗಾಗಿ, ನನ್ನ ಶಾಲೆ ತೆರೆಯುವ ಗುರಿ ತಲುಪಲು ಇವೆಲ್ಲವೂ ಇರಬೇಕು, ಅಲ್ಲಿ ಗಣಿತ ವಿಷಯವನ್ನು ಎಲ್ಲ ವಿದ್ಯಾರ್ಥಿಗಳಿಗೆ ಪುಕ್ಕಟ್ಟೆ ಪಾಠ ಮಾಡುವ ಅನ್ನೋ ಉತ್ಸಾಹವೂ ಆಗಾಗ ಪುಟಿದೇಳುತ್ತಿತ್ತು.

ಅಪ್ಪ ಕೃಷಿಕ. ಮೂರು ಜನ ಅಣ್ತಮ್ಮಂದಿರು. ನಾನು ಮಧ್ಯದವನು. ಆರ್ಥಿಕ ಸಂಕಷ್ಟದಲ್ಲೇ ಪಿಯುಸಿ ಮುಗಿಸಿದೆ. ಡಿಗ್ರಿಯಲ್ಲಿ ಇದೇ ಉತ್ಸಾಹದಲ್ಲಿ ಬಿಎಸ್‌ಸಿ ತೆಗೆದುಕೊಂಡೆನಾದರೂ, ನಾನು ಅಂದುಕೊಂಡಂತೆ ಆಗಲೇ ಇಲ್ಲ. ಮೂರು ವರ್ಷದ ಪರೀಕ್ಷೆಯನ್ನು ನಾಲ್ಕು ವರ್ಷ ಬರೆಯುವ ಹಾಗೆ ಆಯಿತು. ಹಾಗಂತ ಸುಮ್ಮನೆ ಕೂತಿರಲಿಲ್ಲ. ಮನೆಯಲ್ಲಿ ರೇಷ್ಮೆ ಸಾಕಾಣಿ ಮಾಡಲು ಮುಂದಾದೆ. ಇದೇ ನನ್ನ ಮೊದಲ ಪ್ರೊಫೆಷನ್‌. ಯಾವಾಗ, ಡಿಗ್ರಿಯಲ್ಲಿ ಡುಮ್ಕಿ ಹೊಡೆಯುವ ಸಂಖ್ಯೆ ಏರುತ್ತಾ ಹೋಯಿತೋ, ನಿಧಾನಕ್ಕೆ ಶಾಲೆ ತೆರೆಯುವುದಕ್ಕಿಂತ ಕೃಷಿ ಮಾಡುವುದೇ ಲೇಸು ಅನಿಸತೊಡಗಿತು. ಏಕೆಂದರೆ, ರೇಷ್ಮೆ ಎರಡು ತಿಂಗಳಿಗೆ ಒಂದು ಬೆಳೆ. ಪ್ರತಿ ತಿಂಗಳು ಹುಳು ಮೇಯಿಸುವುದರಿಂದ ಪಗಾರ ಹೆಚ್ಚು ಬರುತ್ತಿತ್ತು. ಇದರಿಂದ ಮನೆ ಕಟ್ಟಿದ್ದೆ. ಬೋರ್‌ವೆಲ್‌ ಕೊರೆಸಿದ್ದೆ. ಅಣ್ಣನಿಗೆ ಮದುವೆ ಮಾಡಿದ್ದೆ. ಒಂದು ಪಕ್ಷ ಶಾಲೆ ತೆರೆಯುವ ಯೋಜನೆ ಕೈ ಕೊಟ್ಟರೆ, ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜಮೀನಿನಲ್ಲಿ ಇನ್ನೊಂದು ಬೋರ್‌ವೆಲ್‌ ಕೊರೆಸಿ, ಚೆನ್ನಾಗಿರುವ ಹುಳು ಮನೆ ಕಟ್ಟಿ, ಈಗಿನದಕ್ಕಿಂತ ಎರಡು ಪಟ್ಟು ಆದಾಯ ಬರುವ ಹಾಗೆ ಮಾಡೋಣ ಅನ್ನೋ ಆಸೆಯೂ ಚಿಗುರೊಡೆಯಿತು.

ಡಿಗ್ರಿ ವಿದ್ಯಾಭ್ಯಾಸ ಯಾವಾಗ ಏಳು ಬೀಳು ಕಂಡಿತೋ ನಾನು ಮೆಲ್ಲಗೆ ಸ್ಥಳೀಯ ಖಾಸಗಿ ಶಾಲೆಯಲ್ಲಿ ಮೇಷ್ಟ್ರು ಕೆಲಸ ಮಾಡೋಕೆ ಶುರು ಮಾಡಿದೆ. ಆ ಶಾಲೆ ಕೂಡ ಆಗ ತಾನೇ ಶುರುವಾಗಿದ್ದರಿಂದ ನನಗೂ ಪಾಠ ಮಾಡುವ ಅವಕಾಶ ದೊರೆಯಿತು. ಇಲ್ಲಿ ಪಾಠ ಮಾಡುತ್ತಲೇ ಅಲ್ಲಿ ಪರೀಕ್ಷೆ ಬರೆದು ಪದವಿ ಪೂರೈಸಿದೆ. ಹಾಗೆಯೇ, ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ ಮೈಸೂರು ಮುಕ್ತ ವಿವಿಯಲ್ಲಿ ಪರೀಕ್ಷೆ ಬರೆದೆ. ಆದರೆ, ಪಾಸು ಮಾತ್ರ ಆಗಲಿಲ್ಲ. ಅಷ್ಟೊತ್ತಿಗೆ, ಬೆಳಗ್ಗೆ ಶಾಲೆಯಲ್ಲಿ ಪಾಠ, ಸಂಜೆ ಹೊತ್ತು ಖಾಸಗಿ ಟೂಷನ್‌ ಶುರುಮಾಡಿದ್ದೂ ಆಗಿತ್ತು. ಗಣಿತ, ವಿಜ್ಞಾನಕ್ಕೆ ಡಿಮ್ಯಾಂಡ್‌ ಹೆಚ್ಚಾಯಿತು. ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲೀಷ್‌ ಭೂತದ ರೀತಿ ಕಾಡುತ್ತಿತ್ತು. ನಾನು ನ್ಪೋಕನ್‌ ಇಂಗ್ಲೀಷ್‌ ಶಾಲೆ ತೆರೆದೆ. ಕಡಿಮೆ ದರದಲ್ಲಿ ಮಕ್ಕಳಿಗೆ ಇಂಗ್ಲೀಷ್‌ ಹೇಳಿಕೊಡುವ ಪ್ರಯತ್ನ ಪಟ್ಟೆ. ಬೆಳಗ್ಗೆ 8ರಿಂದ 10 ಗಂಟೆ, ಸಂಜೆ 4ರಿಂದ 8 ಗಂಟೆ ವರಗೆ ಟ್ಯೂಷನ್‌ ಮಾಡತೊಡಗಿದೆ. ಹೀಗೆ, 10 ವರ್ಷ ದುಡಿದೆ. ಯಾಕೋ ನಾನೇ ಶಾಲೆ ಆರಂಭಿಸುವ ಕನಸು ಮಾತ್ರ ಈಡೇರುವ ಲಕ್ಷಣ ಕಾಣಲಿಲ್ಲ. ಜೊತೆಗೆ, ಶಾಲೆಯಲ್ಲಿ ಪಾಠ ಮಾಡುವುದು ಒಂದು ರೀತಿ ಏಕತಾನತೆಯ ವೃತ್ತಿ ಅನಿಸೋಕೆ ಶುರುವಾಯಿತು. ನಿಧಾನಕ್ಕೆ ಅದರಿಂದ ಹೊರಬರಲು ಮತ್ತೆ ಕೃಷಿಯನ್ನು ಫ‌ುಲ್‌ ಟೈಂ ವೃತ್ತಿಯಾಗಿ ಸ್ವೀಕರಿಸಿದೆ. ಆದರೆ, ಟ್ಯೂಷನ್‌ ಮಾತ್ರ ನಿಲ್ಲಿಸಲಿಲ್ಲ.

ಇವತ್ತು ನಾನು ಪಾರ್ಟ್‌ ಟೈಂ ಶಿಕ್ಷಕ, ಫ‌ುಲ್‌ ಟೈಂ ಕೃಷಿಕ. ರೇಷ್ಮೆ ಜೊತೆಗೆ, ತರಕಾರಿ ಬೆಳೆಯುತ್ತಿದ್ದೇನೆ. ಮನೆ ನಡೆಸಲು ಕೃಷಿಯ ಆದಾಯ ಸಾಕು. ಸುತ್ತ ಮುತ್ತಲ ಹಳ್ಳಿಯ ಮಕ್ಕಳು, ರೈತರ ಮಕ್ಕಳು, ಆರ್ಥಿಕವಾಗಿ ಹಿಂದುಳಿದವರ ಜ್ಞಾನ ಹೆಚ್ಚಿಸಲು ಟ್ಯೂಷನ್‌ ಇದೆ. ಎಲ್ಲರೂ ಹುಡುಕಿಕೊಂಡು ಬಂದು ನನ್ನ ಪಾಠ ಕೇಳುತ್ತಾರೆ. ಹೆಚ್ಚಿಗೆ ಫೀ ತೆಗೆದುಕೊಳ್ಳೊಲ್ಲ ಅನ್ನೋದು ಒಂದೇ ಕಾರಣವಲ್ಲ. ಈ ಟ್ಯೂಷನ್‌ ನನ್ನ ಮನಃ ಸಂತೋಷಕ್ಕೆ. ನಾನು ಕಡಿಮೆ ದರದಲ್ಲಿ ಶಾಲೆ ನಡೆಸಬೇಕು ಅನ್ನೋ ಆಸೆ ಈಡೇರಿಲ್ಲವಾದರೂ, ಟ್ಯೂಷನ್‌ ಮೂಲಕ ಅದನ್ನು ಪೂರೈಸಿಕೊಳ್ಳುತ್ತಿದ್ದೇನೆ.

ಚಂದ್ರು ಚಿಕ್ಕನಹಳ್ಳಿ

ಟಾಪ್ ನ್ಯೂಸ್

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.