ಇನ್ನಷ್ಟು, ಮತ್ತಷ್ಟು ಕಲಿಸುವ ಇಂಟರ್ನ್ ಶಿಪ್


Team Udayavani, Apr 18, 2017, 3:45 AM IST

internship.jpg

ಇದು, ಕೆಲಸ ಹುಡುಕುವವರಿಗೆ ಕೈದೀವಿಗೆ

ನೀವು, ಈ ಹಿಂದೆ ಎಲ್ಲಿ ಕೆಲಸ ಮಾಡುತ್ತಿದ್ದಿರಿ? ನಿಮಗೆ ಎಷ್ಟು ವರ್ಷಗಳ ಕೆಲಸದ ಅನುಭವವಿದೆ?
ನಿಮ್ಮ ಕೆಲಸದ ಅನುಭವದ ಬಗ್ಗೆ ಯಾರದಾದರೂ ರೆಫೆರೆನ್ಸ್‌ ಇದೆಯೇ?
ನೀವು ಪದವಿಯನ್ನು ಮುಗಿಸಿ ಕೆಲವೇ ತಿಂಗಳುಗಳಾಗಿವೆ. ನಮ್ಮ ಕಂಪನಿ ಕನಿಷ್ಟ 2 ವರ್ಷ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮುಖ್ಯತೆಯನ್ನು ನೀಡುತ್ತದೆ.

ಹೀಗೆ, ಇನ್ನೂ ಹಲವಾರು ರೀತಿಯ ಪ್ರಶ್ನೆಗಳನ್ನು ಮತ್ತು ಅನಿಸಿಕೆಗಳನ್ನು ಉದ್ಯೋಗಕ್ಕಾಗಿ ಹುಡುಕಾಟ ನಡೆಸಿರುವ ಯುವಕರು ಎದುರಿಸುತ್ತಲೇ ಇರುತ್ತಾರೆ. ಬಹುತೇಕ ಕಂಪನಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಥವಾ ತಕ್ಕಮಟ್ಟಿನ ಕೆಲಸದ ಅನುಭವವನ್ನು ಹೊಂದಿದ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಪ್ರಾಮುಖ್ಯತೆ ನೀಡುವುದು ಸಹಜ. ಈ ಎರಡೂ ಅರ್ಹತೆಗಳು ಅಭ್ಯರ್ಥಿಗಳಲ್ಲಿ ಇಲ್ಲವಾದರೆ ಕೆಲಸಕ್ಕಾಗಿ ಸ್ವಲ್ಪ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಇದಲ್ಲದೆ, ಎಷ್ಟೋ ಬಾರಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ವೇಳೆ ರೆಫೆರೆನ್ಸ್‌ಗಳನ್ನು ನೀಡಬೇಕಾಗುತ್ತದೆ. ಇದು ಶೈಕ್ಷಣಿಕ ಸಂಸ್ಥೆಗಳಿಂದಾದರೂ ಆಗಿರಬಹುದು ಅಥವಾ ಈ ಹಿಂದೆ ಕೆಲಸ ಮಾಡಿದ ಸಂಸ್ಥೆಯಿಂದಾದರೂ ಆಗಿರಬಹುದು. ಆದರೆ, ಯಾವುದೇ ಕೆಲಸದ ಅನುಭವ ಇಲ್ಲದ ಅಭ್ಯರ್ಥಿಗಳು ರೆಫೆರೆನ್ಸ್‌ಗಳನ್ನು ಒದಗಿಸಲಾಗದೆ ಅರ್ಜಿ ಸಲ್ಲಿಸಲು ಅನರ್ಹರಾಗುತ್ತಾರೆ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಮತ್ತು ಉದ್ಯೋಗದ ಉತ್ತಮ ಅವಕಾಶಗಳನ್ನು ಪಡೆಯಲು “ಇಂಟರ್ನ್ಶಿಪ್‌’ಗಳು ಸಹಾಯ ಮಾಡುತ್ತವೆ. 

ಪ್ರತಿ ವರ್ಷ ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಅದಕ್ಕೆ ತಕ್ಕ ಹಾಗೆ ಉದ್ಯೋಗ ಮಾರುಕಟ್ಟೆ ಬೆಳೆಯುತ್ತಿಲ್ಲ. ಹಾಗಾಗಿ ನಿರುದ್ಯೋಗಿಗಳ ಸಂಖ್ಯೆ ಕೂಡ ಹೆಚ್ಚಿದೆ. ಜೊತೆಗೆ, ಉದ್ಯೋಗ ಮಾರುಕಟ್ಟೆ¿åಲ್ಲಿ ಹೆಚ್ಚಿನ ಸ್ಪರ್ಧೆಯಿಂದಾಗಿ ಕೆಲಸದ ಅವಕಾಶಗಳು ಇನ್ನೂ ಕಡಿಮೆಯಾಗಿವೆ. ಪದವಿ ಓದುತ್ತಿದ್ದ ಸಮಯದಲ್ಲಿ ಅಥವಾ ಪದವಿಯ ನಂತರದಲ್ಲಿ ತಮ್ಮ ಕ್ಷೇತ್ರಕ್ಕೆ ಸೂಕ್ತವಾದ ಯಾವುದಾದರೂ ವಿಷಯದಲ್ಲಿ ಅಥವಾ ಉದ್ಯಮದಲ್ಲಿ ವಿದ್ಯಾರ್ಥಿಗಳು “ಇಂಟರ್ನ್ಶಿಪ್‌’ ಮಾಡಿಕೊಂಡರೆ ಕೆಲಸದ ಅವಕಾಶಗಳನ್ನು ಹೆಚ್ಚಿಸಬಹದು. ಜೊತೆಗೆ, ವಿಷಯವನ್ನು ಆಳವಾಗಿ ಹಾಗೂ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಅನುಕೂಲವಾಗುತ್ತದೆ. 

“ಇಂಟರ್ನ್ಶಿಪ್‌’ ಅವಧಿ ಸಾಮಾನ್ಯವಾಗಿ 1 ತಿಂಗಳಿನಿಂದ 1 ವರ್ಷದವರೆಗೂ ಇರಬಹುದು. ಇದನ್ನು ನೀವು ಆಯ್ದುಕೊಂಡ ಕ್ಷೇತ್ರ ಮತ್ತು ಅವಶ್ಯಕತೆಗೆ ಅನುಗುಣವಾಗಿ ನಿರ್ಧಾರ ಮಾಡಲಾಗುತ್ತದೆ. ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ “ಇಂಟರ್ನ್ಶಿಪ್‌’ಗಳನ್ನು ಕಡ್ಡಾಯಗೊಳಿಸಲಾಗಿದೆ. ಎರಡು ಸೆಮಿಸ್ಟರ್‌ಗಳ ನಡುವಿನ ಸಮಯವನ್ನು ವಿದ್ಯಾರ್ಥಿಗಳು ಯಾವುದಾದರೂ “ಇಂಟರ್ನ್ಶಿಪ್‌’ಗಳಲ್ಲಿ ಸೇರಿಕೊಳ್ಳುವ ಮೂಲಕ ಕಳೆಯಬೇಕು.

“ಇಂಟರ್ನ್ಶಿಪ್‌’ನಲ್ಲಿ ಪಡೆದ ಅಂಕಗಳನ್ನು ಮತ್ತು ಅನುಭವವನ್ನು ವಿದ್ಯಾರ್ಥಿಗಳ ಕಡೆಯ ಅಂಕಪಟ್ಟಿಯಲ್ಲಿ ಜೋಡಿಸಲಾಗುತ್ತದೆ. ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮತ್ತು ಕಂಪನಿಗಳಲ್ಲಿ “ಇಂಟರ್ನ್ಶಿಪ್‌’ ಅವಧಿಯಲ್ಲಿ ವೇತನವನ್ನು ಕೂಡ ನೀಡಲಾಗುತ್ತದೆ. ಇದರ ಜೊತೆಗೆ ಕಂಪನಿಯ ಇನ್ನಿತರ ಸವಲತ್ತುಗಳಾದ ಗ್ರಂಥಾಲಯ, ಇಂಟರ್‌ನೆಟ್‌ ಇತ್ಯಾದಿಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದು. 

“ಇಂಟರ್ನ್ಶಿಪ್‌’ನ ಇತರೆ ಲಾಭಗಳು:
1. ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ:

ಪುಸ್ತಕದಲ್ಲಿನ ಜಾnನಕ್ಕೂ, ಪ್ರಾಯೋಗಿಕ ಜಾnನಕ್ಕೂ ಬಹಳ ಅಂತರವಿದೆ. ವಿಷಯಗಳನ್ನು ಆಳವಾಗಿ ತಿಳಿದುಕೊಳ್ಳಲು ಪ್ರಾಯೋಗಿಕ ಜಾnನ ಬಹಳ ಅವಶ್ಯಕ. ವಿದ್ಯಾರ್ಥಿಗಳು ಪುಸ್ತಕದ ಮೂಲಕ ತಾವು ಕಲಿತ ವಿಷಯಗಳನ್ನು ಪ್ರಾಯೋಗಿಕವಾಗಿ ‘ಇಂಟರ್ನ್ಶಿಪ್‌’ ಸಮಯದಲ್ಲಿ ತಿಳಿಯಬಹುದು. ಇದರಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚುವುದರ ಜೊತೆಜೊತೆಗೆ ಕೌಶಲಗಳನ್ನು ಕೂಡ ಹೆಚ್ಚಿಸಿಕೊಳ್ಳಬಹುದು. 

2. ಉದ್ಯೋಗ ಮಾರುಕಟ್ಟೆಯಲ್ಲಿ ಸಂಪರ್ಕವನ್ನು ಸಾಧಿಸಬಹುದು:
ಪ್ರತಿಷ್ಠಿತ ಕಂಪನಿಗಳಲ್ಲಿ ಹಾಗು ಸಂಸ್ಥೆಗಳಲ್ಲಿ “ಇಂಟರ್ನ್ಶಿಪ್‌’ ಮಾಡುವುದರಿಂದ ನೀವು ಆ ಕ್ಷೇತ್ರದಲ್ಲಿನ ಯಶಸ್ವಿ ವ್ಯಕ್ತಿಗಳ ಜೊತೆಗೆ ಮತ್ತು ಪರಿಣಿತರ ಜೊತೆಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಜೊತೆಗೆ, ಅಂತಹ ವ್ಯಕ್ತಿಗಳೊಂದಿಗಿನ ಒಡನಾಟದಿಂದ ನಿಮ್ಮ ಅನುಭವವನ್ನು ಇನ್ನೂ ಹೆಚ್ಚಿಸಿಕೊಳ್ಳಬಹುದು. ಕೆಲವೊಮ್ಮೆ ಕೆಲಸಕ್ಕೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಇಂತಹ ವ್ಯಕ್ತಿಗಳ ರೆಫೆರೆನ್ಸ್‌ ಬಹಳ ಅವಶ್ಯಕವಾಗಿರುತ್ತದೆ. 

3. ನಿಮ್ಮ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳಬಹುದು:
ಯಾವುದೇ ವ್ಯಕ್ತಿಯೂ ಪರಿಪೂರ್ಣನಾಗಿರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ನ್ಯೂನತೆಗಳು ಇದ್ದೇ ಇರುತ್ತವೆ. ವಿದ್ಯಾರ್ಥಿಗಳು “ಇಂಟರ್ನ್ಶಿಪ್‌’ ಸಮಯದಲ್ಲಿ ತಮ್ಮನ್ನು ತಾವು ಹೆಚ್ಚು ತಿಳಿದುಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ. ವ್ಯಕ್ತಿತ್ವ ವಿಕಸನಕ್ಕೆ “ಇಂಟರ್ನ್ಶಿಪ್‌’ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ. 

4. ನಿಮ್ಮ “ರೆಸ್ಯೂಮೆ’ಯನ್ನು (Rಛಿsuಞಛಿ) ಬಲಪಡಿಸಿಕೊಳ್ಳಿ:
“ಇಂಟರ್ನ್ಶಿಪ್‌’ ಸಮಯದಲ್ಲಿ ಪಡೆದ ಅನುಭವ, ಉದ್ಯೋಗವನ್ನು ಪಡೆಯುವ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತದೆ. ಬಹಳಷ್ಟು ಕಂಪನಿಗಳು ನಿಮ್ಮ “ರೆಸ್ಯೂಮೆ’ಯಲ್ಲಿ ಒದಗಿಸಿದ ‘ಇಂಟರ್ನ್ಶಿಪ್‌’ ಬಗೆಗಿನ ಮಾಹಿತಿಯ ಆಧಾರದ ಮೇಲೆಯೆ ಕೆಲಸಕ್ಕೆ ಅಥವಾ ಮುಂದಿನ ಹಂತದ ಆಯ್ಕೆಗೆ ಅಭ್ಯರ್ಥಿಗಳನ್ನು ಕರೆಯುತ್ತವೆ. ಒಂದು ವೇಳೆ ನೀವು ಉನ್ನತ ಶಿಕ್ಷಣಕ್ಕಾಗಿ ಯೋಚಿಸುತ್ತಿದ್ದರೆ ನಿಮ್ಮ “ಇಂಟರ್ನ್ಶಿಪ್‌’ ಅನುಭವವನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳು ಖಂಡಿತ ಪರಿಗಣಿಸುತ್ತವೆ. 

ಎಷ್ಟೋ ಬಾರಿ ನೀವು “ಇಂಟರ್ನ್ಶಿಪ್‌’ ಮಾಡುತ್ತಿರುವ ಕಂಪನಿಗಳೇ ನಿಮ್ಮ ಕಾರ್ಯವನ್ನು ಮೆಚ್ಚಿ ಅದೇ ಕಂಪನಿಯಲ್ಲಿ ಉದ್ಯೋಗವನ್ನು ಒದಗಿಸಿದರೂ ಒದಗಿಸಬಹುದು. 

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೆಲಸವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಯುವಕರು ಹೆಚ್ಚಿನ ಪರಿಶ್ರಮವನ್ನು ಪಡಬೇಕು. “ಇಂಟರ್ನ್ಶಿಪ್‌’ಗಳು, ನೌಕರಿಯ ಹುಡುಕಾಟದಲ್ಲಿರುವ ಯುವಕರಿಗೆ ಒಂದು ರೀತಿಯಲ್ಲಿ ದಾರಿದೀಪವಾಗಿವೆ. 

– ಪ್ರಶಾಂತ್‌ ಎಸ್‌. ಚಿನ್ನಪ್ಪನವರ್‌, ಚಿತ್ರದುರ್ಗ 

ಟಾಪ್ ನ್ಯೂಸ್

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಾರ್ನಾಡಿನಲ್ಲಿ ನಡೆದ ಕೊ*ಲೆ ಪ್ರಕರಣ ಇಬ್ಬರಿಗೆ ಜೀವಾವಧಿ ಶಿಕ್ಷೆ

Mangaluru: ಕಾರ್ನಾಡಿನಲ್ಲಿ ನಡೆದ ಕೊ*ಲೆ ಪ್ರಕರಣ ಇಬ್ಬರಿಗೆ ಜೀವಾವಧಿ ಶಿಕ್ಷೆ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.