ನಿರ್ಜನ ರಸ್ತೆಯಲ್ಲೊಂದು ಗೆಜ್ಜೆನಾದ ಕೇಳುತಿದೆ; ಅದು ನಿಂದೇನಾ..?

Team Udayavani, Jan 16, 2018, 3:01 PM IST

19-32.jpg

ವಿರಹ ಯಾತನೆ ಎಂಬುದು ಬದುಕಿನ ಎಲ್ಲ ನೋವುಗಳ ಮೊತ್ತ ಎಂಬುದನ್ನು ನೆನಪಿಡು. ಕಾಡಿ-ಬೇಡಿಯಾದರೂ ಕರೆಯ ರಿಂಗಣಿಸುತ್ತಿದ್ದ ನೀನು ಈಗ ನನ್ನ ಸಂತ್ರಸ್ತ ಹೃದಯದ ಕರೆಯನ್ನು ಕೇಳಿಸಿಕೊಳ್ಳದಷ್ಟು ನಿರ್ದಯಿಯಾದೆಯಾ?

ಪರೀಕ್ಷಾ ದಿನ ಹತ್ತಿರವಾಗಿ ನಮ್ಮ ಕಾಲೇಜು ಮುಗಿಯುವ ದಿನಗಳು ಸಮೀಪಿಸುತ್ತಿವೆ. ಮನದೊಳಗೆ ಏನೋ ಒಂದು ರೀತಿಯ ತಲ್ಲಣ, ಕಂಪನ, ಇನ್ನೂ ಏನೇನೋ. ನನ್ನೀ ಬದುಕಿನಲ್ಲಿ ಪ್ರೀತಿ-ಪ್ರೇಮಗಳ ಪಾತ್ರ, ಬಾಳ ಸಂಗಾತಿಯ ಆಯ್ಕೆಯ ಗೊಂದಲ, ವಿರಹ, ನೋವು, ಪರಿತಾಪ, ಮುನಿಸು, ಜಗಳ ಇವೆಲ್ಲವುಗಳನ್ನೂ ಉಣಬಡಿಸಿದವಳು ನೀನು. ನೋವು-ನಲಿವುಗಳ ಸಮ್ಮಿಶ್ರಣವೇ ಸುಂದರ ಬದುಕಿನ ಸಾರವೆಂಬುದನ್ನು ನನಗೆ ಕಲಿಸಿಕೊಟ್ಟವಳು ನೀನು. ಸೆಲ್ಫಿ ತೆಗೆದುಕೊಳ್ಳುವಾಗಲೂ ಪರದೆಯ ಮೇಲೆ ನಾನೇ ಮಾಯವಾಗಿ ನಿನ್ನದೇ ಚಿತ್ರ ಮಾತ್ರ ಕಾಣುತ್ತಿದ್ದ ದಿನಗಳೀಗ ಇತಿಹಾಸ ಪುಟದ ವಶವಾಗಬಹುದೆಂಬ ಭಯ ಆವರಿಸಿದೆ. 

ಕಾರಣವ ಹೇಳದೇ ದೂರವಾಗಬಯಸಿದ ನೀನು ನನಗೆ ನೋವು ಕೊಡುವ ಇಚ್ಛೆಯಿದ್ದರೆ ಅದು ದಯವಿಟ್ಟು ಪ್ರೀತಿಯಲ್ಲಿ ಬೇಡ ಕಣೇ. ವಿರಹ ಯಾತನೆ ಎಂಬುದು ಬದುಕಿನ ಎಲ್ಲ ನೋವುಗಳ ಮೊತ್ತ ಎಂಬುದನ್ನು ನೆನಪಿಡು. ಕಾಡಿ-ಬೇಡಿಯಾದರೂ ಕರೆಯ ರಿಂಗಣಿಸುತ್ತಿದ್ದ ನೀನು ಈಗ ನನ್ನ ಸಂತ್ರಸ್ತ ಹೃದಯದ ಕರೆಯನ್ನು ಕೇಳಿಸಿಕೊಳ್ಳದಷ್ಟು ನಿರ್ದಯಿಯಾದೆಯಾ? ದಿನಚರಿಯ ಬಹು ಪಾಲು ಸಮಯವನ್ನೆಲ್ಲ ನಿನ್ನದೇ ಹೆಸರಿಗೆ ಮೀಸಲಿಡುತ್ತಿದ್ದವನು ನಾನು. ಇಂದೇಕೋ ಮೌನದ ವಶವಾಗಿದ್ದೇನೆ. ನಿನ್ನ ಹೆಸರೇ ಮಾಯವಾಗಿದೆ. ನೀ ಬರೆದ ಬಣ್ಣ ಬಣ್ಣದ ಪ್ರೇಮಪತ್ರಗಳೆಲ್ಲ ಬಣ್ಣ ಕಳೆದುಕೊಂಡು ನಮ್ಮಿಬ್ಬರ ಪ್ರೀತಿಗೆ ಮರಣ ಶಾಸನವಾಗುತ್ತವೆಯೇನೋ ಎಂಬ ಸಣ್ಣ ಸುಳಿವೊಂದು ತನ್ನ ಇರುವಿಕೆಯನ್ನು ಸೂಚಿಸುತ್ತಿದೆ. 

ನೀನು ದೂರವಾದಷ್ಟೂ ನನ್ನ ಹೃದಯದ ಬಡಿತ ಶತಕ ಬಾರಿಸುವ ತವಕದಲ್ಲಿ ವೇಗ ಪಡೆದುಕೊಳ್ಳುತ್ತಿದೆ. ನಿರ್ಜನ ರಸ್ತೆಯಲ್ಲಿ ಏಕಾಂಗಿಯಾಗಿ ನಡೆಯುವಾಗ ಎಲ್ಲಿಂದಲೋ ಕೇಳಿ ಬರುವ ಆ ಗೆಜ್ಜೆನಾದ ನಿನ್ನ ನೆನಪನ್ನೇ ಕಣ್ಮುಂದೆ ತಂದು ನಿಲ್ಲಿಸುತ್ತಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ನನ್ನ ಮನದ ಬಾಗಿಲನ್ನು ನಿನಗಾಗಿ ತೆರೆದಿಡಲು ಸಿದ್ಧನಾಗಿದ್ದೇನೆ. ನೀನು ದೂರವಾದ ನೆನಪುಗಳೆಲ್ಲ ಕೇವಲ ಕನಸಿನ ಪುಟದ ವಶವಾಗುವಂತೆ ನೀ ಬಂದು ಸೇರು ಗೆಳತಿ. ನಮ್ಮಿಬ್ಬರ ಪ್ರೀತಿಯ ನೆನಪಿಗಾಗಿ ನೆಟ್ಟ ಈ ಸಸಿ ಬೆಳೆದು ದೊಡ್ಡದಾಗಿ ಇದೇ ರಸ್ತೆಯ ಮೇಲೆ ಚೆಲ್ಲುವ ನೆರಳಿನಲ್ಲಿ ಕುಳಿತು ನಾವಿಬ್ಬರೂ ತಮಾಷೆಯ ಗಳಿಗೆಗಳನ್ನು ಕಳೆಯಬೇಕೆಂಬ ಕನಸು ಕಮರಿ ಹೋಗದಿರಲಿ. 

ನಮ್ಮಿಬ್ಬರ ಪ್ರೀತಿಯ ಜೀವವೇ ನಿನ್ನ ಸಮ್ಮತಿಯನ್ನವಲಂಬಿಸಿದೆ. ಅಸಮ್ಮತಿಯ ಅಸ್ತ್ರ ಬಳಸಿ ಮುಗ್ಧ ಪ್ರೀತಿಯ ಕೊಲ್ಲದೇ ಸಮ್ಮತಿಯ ಧಾರೆಯೆರೆದು ಪ್ರೀತಿಯನ್ನು ಪೋಷಿಸು. ಕೈ ಜಾರುವ ಪ್ರೀತಿಯನ್ನು ಮರಳಿ ಪಡೆದು ಜಗತ್ತನ್ನೇ ಗೆದ್ದಷ್ಟು ಸಂತಸ ನನ್ನದಾಗಲಿ. 

ಇಂತಿ ನಿನ್ನ ಪ್ರೀತಿಯ ಆಕಾಂಕ್ಷಿ,
ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ

ಟಾಪ್ ನ್ಯೂಸ್

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.