ಗೇಮ್ ಡಿಸೈನರ್
Team Udayavani, Feb 5, 2019, 12:30 AM IST
ಊರಿಗೆ ಸೈಬರ್ ಕೆಫೆ ಕಾಲಿಟ್ಟ ಸಂದರ್ಭದಲ್ಲಿ ಮಕ್ಕಳಿಂದ ದೊಡ್ಡವರ ತನಕ ಅಲ್ಲಿಗೆ ನುಗ್ಗುತ್ತಿದ್ದಿದ್ದು ಕಂಪ್ಯೂಟರ್ ಗೇಮ್ಸ್ ಆಡಲು. ಮಾರಿಯೋ, ಡೇವ್ ಮುಂತಾದ ಕಂಪ್ಯೂಟರ್ ಆಟಗಳು ಇಂದಿನ ಸುಧಾರಿತ ಗೇಮ್‌ಗಳಿಗೆ ಹೋಲಿಸಿದರೆ ಕ್ಷುಲ್ಲಕ ಎನ್ನಿಸುತ್ತವೆ. ಆದರೆ ಆಗಿನ ಕಾಲಕ್ಕೆ ಅದುವೇ ದೊಡ್ಡದು. ಇಂದು ಆಟಕ್ಕೇ ಮೀಸಲಾದ ಪ್ರತ್ಯೇಕ ಕಂಪ್ಯೂಟರ್ ಸಿಸ್ಟಮ್‌ಗಳು(ಗೇಮಿಂಗ್ ಕನ್ಸೋಲ್) ಮಾರುಕಟ್ಟೆಯಲ್ಲಿವೆ. ಅಲ್ಲದೆ ಇತ್ತ ಇನ್ನೊಂದೆಡೆ ಟೆಂಪಲ್ ರನ್, ಕ್ಯಾಂಡಿ ಕ್ರಶ್, ಆ್ಯಂಗ್ರಿ ಬರ್ಡ್ಸ್‌ನಂಥ ಮೊಬೈಲ್ ಗೇಮ್‌ಗಳೂ ಕೋಟಿಗಟ್ಟಲೆ ಜನರನ್ನು ಆಕರ್ಷಿಸಿ ಅದರದ್ದೇ ಆದ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಕಂಪ್ಯೂಟರ್ ಗೇಮ್ಸ್ ಇರಬಹುದು, ಆಂಡ್ರಾಯ್ಡ್ ಗೇಮ್ಸ್ ಇರಬಹುದು ಇವೆಲ್ಲವಕ್ಕೂ ಸೂತ್ರಧಾರನೇ ಗೇಮ್ ಡಿಸೈನರ್.
ಕತೆಗಾರನಾಗಿರಬೇಕು
ಗೇಮ್ ಡಿಸೈನರ್ ಪುಟಗಟ್ಟಲೆ ಪ್ರೋಗ್ರಾಮ್ ಕೋಡ್‌ಗಳನ್ನು ಬರೆಯುವುದಿಲ್ಲ. ಅಥವಾ ಗೇಮ್‌ಗೆ ಮುಖ್ಯವಾದ ಆರ್ಟ್‌ವರ್ಕನ್ನೂ ಆತ ಮಾಡುವುದಿಲ್ಲ. ಗೇಮ್ ಡಿಸೈನರ್ ಗೇಮ್‌ನ ಪೂರ್ತಿ ರೂಪುರೇಷೆಯನ್ನು ಸಿದ್ಧಪಡಿಸುತ್ತಾನೆ. ಗೇಮ್ ಯಾವ ರೀತಿ ಇರಬೇಕೆಂಬುದರ ಬಗ್ಗೆ ಅಧ್ಯಯನ ನಡೆಸುತ್ತಾನೆ. ಕಥೆ, ಪಾತ್ರಗಳು, ಅಂತ್ಯ, ಸಂಗೀತ, ಗೇಮ್ ನೀಡುವ ಅನುಭವ ಇವೆಲ್ಲದರ ಕುರಿತು ಆತ ವಕೌìಟ್ ಮಾಡುತ್ತಾನೆ. ಗೇಮ್ ಡಿಸೈನರ್‌ಗೆ ಇರಬೇಕಾದ ಬಹುಮುಖ್ಯ ಗುಣವೆಂದರೆ ಆತ ಕತೆಗಾರನಾಗಿರಬೇಕು. ಗೇಮ್ ಸಾಫ್ಟ್ವೇರ್ ಮತ್ತು ಹಾರ್ಡ್‌ವೇರ್‌ಗಳ ಸಮ್ಮಿಲನದಿಂದ ಕೂಡಿದ, ಅಸಂಖ್ಯ ಕಂಪ್ಯೂಟರ್ ಕೋಡ್ ಸಾಲುಗಳಾಗಿದ್ದರೂ ಅದರ ಆಂತರ್ಯದಲ್ಲಿ ಇರುವುದು ಕಥನ ಕಲೆ. ಎಷ್ಟೇ ಒಳ್ಳೆಯ ಗ್ರಾಫಿಕ್ಸ್ ಇರಬಹುದು, ರೋಚಕತೆ ತುಂಬಿರಬಹುದು, ವೇಗ ಹೆಚ್ಚಿದ್ದಿರಬಹುದು ಆದರೆ ಅವೆಲ್ಲಾ ಒಂದೊಳ್ಳೆ ಕಥೆಯನ್ನು ಹೇಳಲು ಇರುವ ಮಾಧ್ಯಮವಷ್ಟೇ.
ಗೇಮ್ ಡಿಸೈನ್
ಒಂದು ಗೇಮ್ ಹುಟ್ಟಿ ಬೆಳೆಯುವ ವಿವಿಧ ಹಂತಗಳಲ್ಲಿ ಬಳಸುವ ಸಾಫ್ಟ್ವೇರ್- ಹಾರ್ಡ್‌ವೇರ್ ತಂತ್ರಜ್ಞಾನ. ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ಲೇಟೆಸ್ಟ್ ತಂತ್ರಜ್ಞಾನಗಳ ಕುರಿತೆಲ್ಲಾ ಗೇಮ್‌ಡಿಸೈನರ್ ತಿಳಿದುಕೊಂಡಿರಬೇಕಾಗುತ್ತದೆ. ಒಂದು ಸಿನಿಮಾಗೆ ನಿರ್ದೇಶಕನಿದ್ದಂತೆ, ಗೇಮ್‌ಗೆ ಗೇಮ್ ಡಿಸೈನರ್. ಅದರ ಸೋಲು ಗೆಲುವು ಸಂಪೂರ್ಣವಾಗಿ ಅವನ ಮೇಲೇ ನಿಂತಿರುತ್ತದೆ. ಮತ್ತೂಂದು ಮುಖ್ಯ ಅಂಶವೆಂದರೆ ಗೇಮ್ ಡಿಸೈನಿಂಗ್ ಎಂದರೆ ಕೇವಲ ಕಂಪ್ಯೂಟರ್/ ಮೊಬೈಲ್/ ಗೇಮಿಂಗ್ ಕನ್ಸೋಲ್‌ಗಳಿಗಾಗಿ ಮಾತ್ರವೇ ಅಲ್ಲ, ಅದರ ಕ್ಷೇತ್ರ ವ್ಯಾಪ್ತಿ ಇನ್ನೂ ವಿಸ್ತಾರವಾದುದು. ಹಾವು- ಏಣಿ, ಲೂಡೋ ಥರದ ಬೋರ್ಡ್ ಗೇಮ್‌ಗಳು, ಕಾರ್ಡ್ ಗೇಮ್‌ಗಳು ಅಥವಾ ಲೈವ್ ಆ್ಯಕ್ಷನ್ ಗೇಮುಗಳಿಗೂ(ಉದಾಹರಣೆಗೆ ರಿಯಾಲಿಟಿ ಶೋಗಳು) ಡಿಸೈನರ್‌ಗಳ ಅವಶ್ಯಕತೆಯಿದೆ. ಮಕ್ಕಳನ್ನು ಮತ್ತು ಕಾರ್ಪೊರೇಟ್ ಉದ್ಯೋಗಿಗಳನ್ನು ಕ್ರಿಯಾಶೀಲರನ್ನಾಗಿಸುವ ಮನರಂಜನಾತ್ಮಕ ಆಟಗಳ ತರಗತಿಯನ್ನೂ ಇವರು ಮಾಡಬಲ್ಲರು.
ಗೇಮ್ ಡಿಸೈನರ್‌ಗಳ ಕಾರ್ಯಶೈಲಿ
ಒಂದು ಗೇಮ್ ಪ್ರಾಜೆಕ್ಟ್ ಆರಂಭವಾದಾಗ ಗೇಮ್ ಕಾನ್ಸೆಪ್ಟ್ ಅಥವಾ ಪಿಚ್ ಡಾಕ್ಯುಮೆಂಟ್ ತಯಾರಿರಬೇಕಾಗುತ್ತದೆ. ಪಿಚ್ ಡಾಕ್ಯುಮೆಂಟ್ ಎಂದರೆ ಮಾಡಲು ಹೊರಟಿರುವ ಗೇಮ್ ಯಾವ ರೀತಿ ಕಾಣುತ್ತದೆ ಎನ್ನುವುದರ ನೀಲ ನಕ್ಷೆ. ಸಹವರ್ತಿಗಳಿಗೆ ಮತ್ತು ಕಂಪನಿಯ ಹೂಡಿಕೆದಾರರಿಗೆ ಪರಿಣಾಮಕಾರಿಯಾಗಿ ಮತ್ತು ಸುಲಭವಾಗಿ ವಿವರಿಸಲು ಇದರಿಂದ ಸುಲಭವಾಗುತ್ತದೆ. ಪಿಚ್ ಡಾಕ್ಯುಮೆಂಟನ್ನು ನೋಡಿದ ಕೆಲವೇ ನಿಮಿಷಗಳಲ್ಲಿ ಗೇಮ್ ಯಶಸ್ವಿಯಾಗುವುದೋ ಇಲ್ಲವೋ ಎನ್ನುವುದನ್ನು ಮೇಲಧಿಕಾರಿಗಳು, ಹೂಡಿಕೆದಾರರು ಊಹಿಸಬಲ್ಲರು. ಈ ಕ್ಷೇತ್ರದಲ್ಲಿ ಅವರು ವರ್ಷಗಳ ಅನುಭವ ಪಡೆದಿರುವುದರಿಂದ ಇದು ಸಾಧ್ಯವಾಗುತ್ತದೆ. ಹೀಗಾಗಿ ಈ ಡಾಕ್ಯುಮೆಂಟನ್ನು ಎಚ್ಚರಿಕೆಯಿಂದ ರೂಪಿಸಬೇಕಾಗುತ್ತದೆ. ಏನನ್ನು ಹೇಳಬೇಕು, ಏನನ್ನು ಹೇಳಬಾರದು ಎಂಬುದರಲ್ಲೇ ಗೇಮ್ ಡಿಸೈನರ್‌ನ ಜಾಣ್ಮೆ ಅಡಗಿರುತ್ತದೆ.
ಕಲಿಕೆಯ ಕ್ರಮ
ಗೇಮಿಂಗ್ ಕ್ಷೇತ್ರಕ್ಕೆ ಕಾಲಿಡಲು ಇಂಥದ್ದೇ ಪದವಿಯನ್ನು ಹೊಂದಿರಬೇಕೆಂಬ ಯಾವುದೇ ನಿಯಮಾವಳಿಗಳಿಲ್ಲ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನವರು ಕಂಪ್ಯೂಟರ್ ಸೈನ್ಸ್ ಪದವೀಧರರು, ಫೈನ್ ಆರ್ಟ್ಸ್ ಇನ್ ಡಿಸೈನ್ ಅÂಂಡ್ ಟೆಕ್ನಾಲಜಿ ಪದವೀಧರರು. ಬಿ.ಎಸ್ ಇನ್ ಗೇಮ್ ಡಿಸೈನ್ ಆ್ಯಂಡ್ ಡೆವಲೆಪ್‌ಮೆಂಟ್ ಎಂಬ ಪದವಿ ಇದೆ. ಮುಂಚಿನಿಂದಲೇ ಗೇಮಿಂಗ್ ಬಗ್ಗೆ ಒಲವು ಬೆಳೆಸಿಕೊಂಡವರು ಈ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬಹುದು. ಬಿ.ಎಸ್. ಇನ್ ಕಂಪ್ಯೂಟರ್ ಸೈನ್ಸ್ ನಾಲ್ಕು ವರ್ಷ ಅವಧಿಯ ಕೋರ್ಸುಗಳು. ಅಲ್ಲಿ ಕಂಪ್ಯೂಟರ್ ಗೇಮ್ ಡಿಸೈನ್, ಸಮಾಜದಲ್ಲಿ ಅವುಗಳ ಅಳವಡಿಕೆ ಹೇಗೆ ಎಂಬುದನ್ನು ಕಲಿಸಲಾಗುತ್ತದೆ. ಜೊತೆಗೆ ಈ ವಿದ್ಯಾರ್ಥಿಗಳು ಜಾವಾ ಪ್ರೋಗ್ರಾಮಿಂಗ್, ಡಾಟಾ ಸ್ಟ್ರಕ್ಚರ್, ಡಿಸೈನ್ ಹಿಸ್ಟರಿ, ಪ್ರೋಗ್ರಾಮಿಂಗ್ ಫಾರ್ ಇಂಟರಾಕ್ಟಿವ್ ಆ್ಯಂಡ್ ಡಿಜಿಟಲ್ ಮೀಡಿಯಾ, ಹ್ಯೂಮನ್ ಕಂಪ್ಯೂಟರ್ ಇಂಟರಾಕ್ಷನ್ ಮುಂತಾದ ವಿಷಯಗಳ ಬಗ್ಗೆ ಕಲಿಯುತ್ತಾರೆ.
ರಘು ವಿ., ಪ್ರಾಂಶುಪಾಲರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.