ಕೈತೋಟ ಶಾಲೆ


Team Udayavani, Oct 15, 2019, 5:40 AM IST

l-17

ಶಾಲೆ ಎಂದರೆ ಕೇವಲ ಸಿಲಬಸ್‌ ಸುತ್ತುತ್ತಲೇ ಓಡಾಡಿಕೊಂಡಿರುವ ಮೇಷ್ಟ್ರು, ವಿದ್ಯಾರ್ಥಿಗಳ ಕೂಟವಲ್ಲ.  ಇದ್ರ ‌ ಜೊತೆಗೆ, ಪಠ್ಯೇತರ ಚಟುವಟಿಕೆ ಕೂಡ ಮುಖ್ಯ. ಇದಕ್ಕೆ ಉದಾಹರಣೆ ಕುಮಟದ ಹೀರೇಗುತ್ತಿಯ ಎಣ್ಣೆಮಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಇಲ್ಲಿ ಕಾಲಿಟ್ಟರೆ , ತೋಟಕ್ಕೆ ಹೋದಂತಾಗುತ್ತದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರು ಇಲ್ಲಿಗೆ ಬರಬೇಕು. ಆಟ, ಪಾಠ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ, ಶಾಲಾ ಕೈತೋಟ, ನೀರು ನಿರ್ವಹಣೆ …ಹೀಗೆ, ಹತ್ತು ಹಲವು ಸಂಗತಿಗಳಲ್ಲಿ ಈ ಶಾಲೆ ಮುಂದಿದೆ.

ಇದೇನು ತೋಟವೋ ಶಾಲೆಯೋ?

ಉತ್ತರ ಕನ್ನಡ ಜಿಲ್ಲೆ ಕುಮಟಾದ ಹೀರೇಗುತ್ತಿ ಸಮೀಪವಿರುವ ಎಣ್ಣೆಮಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಲಿಟ್ಟರೆ ಹೀಗನಿಸುತ್ತದೆ.

ಶಾಲೆಯ ಎದುರಿಗೆ ಮೂರು ಗುಂಟೆಯಷ್ಟು ಸ್ಥಳವಿದೆ. ಇದರಲ್ಲಿ ಮೂವತ್ತಕ್ಕೂ ಅಧಿಕ ಗಿಡಗಳಿವೆ. ಕಾಂಪೌಂಡ್‌ ನಿಂದ ಸುತ್ತುವರೆದಿರುವುದರಿಂದ ಗಿಡಗಳಿಗೆ ಮಾರಕವಾಗಬಲ್ಲ ಬಾಹ್ಯ ತೊಂದರೆಗಳಿಲ್ಲ. ಹಾಗಾಗಿ, ಗಿಡಗಳ ಸರಾಗ ಬೆಳವಣಿಗೆ ಸಾಧ್ಯವಾಗಿದೆ. ಎಂಟು ತೆಂಗಿನ ಮರಗಳಿದ್ದು ಭರ್ತಿ ಫ‌ಲ ಹೊತ್ತು ನಿಂತಿವೆ. ನಾಲ್ಕು ಪಪ್ಪಾಯ ಗಿಡಗಳಿದ್ದು, ಹಣ್ಣು ಕೊಯ್ಲಿಗೆ ಬಂದಿವೆ. ಮೂರು ನುಗ್ಗೆ ಮರಗಳು ನೂರಾರು ಕಾಯಿಗಳನ್ನು ಹೊತ್ತು ನಿಂತಿವೆ. ಅಂಗಾಂಶ ಬಾಳೆ, ಸರ್ವಋತು ಮಾವು, ಚಿಕ್ಕು, ಸೀತಾಫ‌ಲ, ಪೇರಳೆ ಗಿಡಗಳು ಬೆಳೆದು ನಿಂತಿವೆ. ಬಸಳೆ, ಬದನೆ, ಮೆಣಸು, ನವಿಲುಕೋಸು, ಮೂಲಂಗಿ, ಟೊಮೆಟೊ ಗಿಡಗಳನ್ನೂ ಅಲ್ಲಲ್ಲಿ ಬೆಳೆಸಲಾಗಿದೆ. ಶಾಲೆಯ ಟೆರೇಸ್‌ ಮೇಲೆ ಬಸಳೆಯನ್ನು ಸುಂದರವಾಗಿ ಹಬ್ಬಿಸಲಾಗಿದೆ.

ಪ್ರತಿ ದಿವಸ ತರಕಾರಿಯನ್ನು ಮಧ್ಯಾಹ್ನದ ಬಿಸಿ ಯೂಟಕ್ಕೆ ಬಳಸುತ್ತಾರೆ. ಇದನ್ನು ಕತ್ತರಿಸಿ ಕೊಡುವುದೂ ವಿದ್ಯಾರ್ಥಿಗಳೇ. ತರಕಾರಿ ಕೊಯ್ಲು ಮಾಡುವುದು ಹೇಗೆ ಅನ್ನೋದನ್ನು ತಿಳಿಸುವ ಉದ್ದೇಶವೂ ಇದರ ಹಿಂದಿದೆ.

ತುಂಬೆ, ನೆಲನೆಲ್ಲಿ, ಮುಡಿಹುಲ್ಲು, ಶುಂಠಿ, ಅರಿಶಿನ, ಲಿಂಬೆ, ಅಲೋವೆರಾ, ಮಾರಿಗೋಲ್ಡ್‌, ಜಿರಾಫೆಕಡ್ಡಿ, ಮಜ್ಜಿಗೆ ಹುಲ್ಲು, ಥಂಡಿಸೊಪ್ಪು ಹೀಗೆ, ಹಲವು ಔಷಧೀಯ ಸಸ್ಯಗಳು ಕೂಡ ಹುಡುಗರ ಕೈಯ್ಯಿಂದಲೇ ಆರೈಕೆ ಪಡೆಯುತ್ತಿವೆ. ಇಷ್ಟೇ ಅಲ್ಲ, ಬೆಳೆಸಿದ ಮೇಲೆ ಯಾವ ಗಿಡಗಳು ಯಾವ ಔಷಧಿಯಾಗಿ ಬಳಸಲ್ಪಡುತ್ತವೆ ಎನ್ನುವ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಪಾಠಮಾಡಲಾಗುತ್ತದೆ. ಹೀಗಾಗಿ, ಮೌಲ್ಯಯುತ ಗಿಡಗಳನ್ನು ಮಕ್ಕಳು ಬಲು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಗಿಡಗಳಿಗೆ ಅಗತ್ಯವಿರುವ ಗೊಬ್ಬರ ತಯಾರಿಸುವ ಪ್ರಯತ್ನವೂ ನಡೆಯುತ್ತಿದೆ. ಇದಕ್ಕಾಗಿ ಐದು ಅಡಿ ಉದ್ದ, ಎರಡು ಅಡಿ ಅಗಲದ ಎರೆಗೊಬ್ಬರದ ತೊಟ್ಟಿ ರಚಿಸಿದ್ದಾರೆ. ಕಸ, ಕಡ್ಡಿ, ಸೊಪ್ಪು ಸದೆಗಳು ಗುಂಡಿಗೆ ಸೇರಿ ಎರೆಗೊಬ್ಬರ ತಯಾರಾಗುತ್ತದೆ. ಇಲ್ಲಿನ ಗಿಡರಾಶಿಗಳಿಗೆ ಎರೆಗೊಬ್ಬರ, ಸುಡುಮಣ್ಣು ಮಾತ್ರ ಆಹಾರ. ನೀರಿನ ಸಂರಕ್ಷಣೆಯ ಮಹತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ವಿವರಿಸಿ ಹೇಳಲಾಗುತ್ತದೆ. ಹೀಗಾಗಿ, ಊಟ ಮಾಡಿ ಕೈ ತೊಳೆದ ನೀರು, ಕುಡಿದು ಉಳಿಕೆ ಚೆಲ್ಲಿದ ನೀರು ವ್ಯರ್ಥವಾಗದೇ ಇಂಗು ಗುಂಡಿಗೆ ಸೇರುತ್ತಿದೆ. ಇದರ ಜೊತೆಗೆ ಆರು ಅಡಿ ಉದ್ದ, ನಾಲ್ಕು ಅಡಿ ಅಗಲದ ಆಳವಾದ ಗುಂಡಿ ತೋಡಿದ್ದಾರೆ. ಶಾಲೆಯ ಹೆಂಚಿನ ಹೊದಿಕೆಯ ಮೇಲೆ ಸುರಿವ ನೀರು ಈ ಇಂಗು ಗುಂಡಿಯೆಡೆಗೆ ಹರಿದು ಬರುತ್ತದೆ. ಇದಕ್ಕಾಗಿ ಅರ್ಧ ಸೀಳಿದ ಪೈಪ್‌ ಅಳವಡಿಸಲಾಗಿದೆ. ನೆಲಕ್ಕೆ ಬಿದ್ದ ನೀರು ಸೋಸಿ ಗುಂಡಿಗೆ ತಲುಪುವಂತೆ ಜಾಗ್ರತೆಯಿಂದ ವಹಿಸಲಾಗಿದೆ.

ಇಲ್ಲಿನ ಮಕ್ಕಳಿಗೆ ಪಕ್ಷಿಗಳ ಬಗ್ಗೆ ಪಾಠವೂ ನಡೆಯುತ್ತದೆ. ಅದು ಹೇಗೆಂದರೆ, ಉದ್ದನೆಯ ಗೂಟಕ್ಕೆ ಪ್ಲಾಸ್ಟಿಕ್‌ ಬುಟ್ಟಿಯನ್ನು ಮೇಲ್ಮುಖವಾಗಿ ಹೊಂದಿಸಿ ನೆಲಕ್ಕೆ ಹುಗಿಯಲಾಗಿದೆ. ಈ ಬುಟ್ಟಿಯಲ್ಲಿ ನಿತ್ಯವೂ ಕಾಳು ಕಡಿ, ಧಾನ್ಯಗಳನ್ನು ಹಾಕಲಾಗುತ್ತದೆ. ಪಕ್ಷಿಗಳು ಧಾನ್ಯಗಳನ್ನು ತಿನ್ನಲೆಂದೇ ಶಾಲೆಯೆಡೆಗೆ ಧಾವಿಸುತ್ತವೆ. ಚಿಲಿಪಿಲಿ ಗುಟ್ಟಿ, ವಿದ್ಯಾರ್ಥಿಗಳ ಕುತೂಹಲದ ಕಣ್ಣುಗಳಿಗೆ ಮುದ ನೀಡುತ್ತವೆ.

ಶಾಲೆಯ ವರಾಂಡದ ಅಂಚಿನಲ್ಲಿ ಮೂರು ಹಂತಗಳಲ್ಲಿ ಕಟ್ಟಿಗೆಯನ್ನು ಜೋಡಿಸಿ ತಯಾರಿಸಿದ, ಗಿಡ ಬೆಳೆಸುವ ವ್ಯವಸ್ಥೆ ಮಕ್ಕಳ ಆಸಕ್ತಿಯಿಂದಲೇ ರೂಪುಗೊಂಡಿದೆ. ಗಿಡಗಳಿಗೆ ಮಣ್ಣು ಏರಿಸುವುದು, ಗೊಬ್ಬರ ಹಾಕುವುದು, ನೀರುಣಿಸುವುದು, ಬಿದ್ದ ಎಲೆಗಳನ್ನು ಕಾಂಪೋಸ್ಟ್‌ ಗುಂಡಿಗೆ ಸೇರಿಸುವುದನ್ನು ವಿದ್ಯಾರ್ಥಿಗಳು ಮಾಡುತ್ತಾರೆ. ವಾರದಲ್ಲಿ ಎರಡು ದಿನ ಒಂದು ಅಥವಾ ಎರಡು ಗಂಟೆಯ ಅವಧಿಯನ್ನು ಕೈ ತೋಟ ನಿರ್ವಹಣೆಗೆ ಮೀಸಲಿಟ್ಟಿದ್ದಾರೆ.

ಇದೇನು ದೊಡ್ಡ ಶಾಲೆಯಲ್ಲ. ಒಂದರಿಂದ ಐದನೇ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಾಲೆ. ಸುಮಾರು 61 ವಿದ್ಯಾರ್ಥಿಗಳು, ನಾಲ್ಕು ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೈತೋಟ ಶಾಲೆ ಆಗಲಿಕ್ಕೆ ಮುಖ್ಯ ಪ್ರೇರಕರು ಶಾಲೆಯ ಮುಖ್ಯ ಶಿಕ್ಷಕರಾದ ತುಳಸು ಗೌಡರು. ಕೈ ತೋಟಕ್ಕೆ ಅಗತ್ಯ ಬೀಳುವ ಖರ್ಚನ್ನು ತಾವೇ ಕೈಯಿಂದ ಹಾಕುತ್ತಾರೆ. ಸಹ ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ಕೈ ತೋಟದ ಹಸಿರು ಮಾಸದಂತೆ ಜೋಪಾನ ಮಾಡುತ್ತಿದ್ದಾರೆ.

ಪರಿಸರ ದಿನಾಚರಣೆಯಂಥ ವಿಶೇಷ ಸಂದರ್ಭಗಳು ಬಂದರೆ, ಬದನೆ, ಟೊಮೆಟೊ, ನುಗ್ಗೆಯಂಥ‌ ಗಿಡಗಳನ್ನು ಶಿಕ್ಷಕರು ಗೋಕರ್ಣದಿಂದ ತಮ್ಮದೇ ಖರ್ಚಿನಲ್ಲಿ ಖರೀದಿಸಿ ತಂದು ವಿದ್ಯಾರ್ಥಿಗಳಿಗೆ ವಿತರಿಸುತ್ತಾರೆ. ಮನೆಯಲ್ಲಿಯೇ, ಗಿಡಗಳನ್ನು ಬೆಳೆಸುವ ಪರಿಪಾಟ ರೂಢಿಸಿಕೊಳ್ಳಲು ಅವಕಾಶ ಕಲ್ಪಿಸುತ್ತಾರೆ. ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಕೃಷಿ ಪಾಠ ಕಲಿಯುತ್ತಿರುವ ಇಲ್ಲಿನ ವಿದ್ಯಾರ್ಥಿಗಳಿಗೆ ಶಾಲೆಯ ಹಿತಕರ ವಾತಾವರಣ ಹೆಚ್ಚಿನ ಆಸಕ್ತಿ ಮೂಡಿಸುತ್ತಿದೆ. ಗ್ರಾಮಸ್ಥರೂ ಸ್ವ ಪ್ರೇರಿತರಾಗಿ ಗಿಡಗಳಿಗೆ ಅಗತ್ಯವಿರುವ ಕಾಂಪೋಸ್ಟ್‌ ಗೊಬ್ಬರವನ್ನು ತಂದುಕೊಡುವುದೂ ಇದೆ. ನಕ್ಕು ನಲಿದು ಶಿಕ್ಷಣದೊಂದಿಗೆ ಕೃಷಿ ಪಾಠ, ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುತ್ತಿರುವ ಕಿರಿಯ ಪ್ರಾಥಮಿಕ ಶಾಲೆಗೆ ಹಸಿರು ಮಿತ್ರ, ಪರಿಸರ ಮಿತ್ರ ಪ್ರಶಸ್ತಿಗಳು ಸಂದಿವೆ.

ಕೋಡಕಣಿ ಜೈವಂತ ಪಟಗಾರ

ಟಾಪ್ ನ್ಯೂಸ್

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.