ಜೀನ್ಸ್‌ ಗೂಡಿಗೆ ಕೈ ಹಾಕಿ


Team Udayavani, Jun 26, 2018, 6:00 AM IST

t-6.jpg

ಜೀವಶಾಸ್ತ್ರೀಯ ವಿಜ್ಞಾನಿಗಳಿಗೆ ಪ್ರಾಣಿಗಳು ನಿತ್ಯ ಸಂಶೋಧನೆಯ ವಸ್ತು. ಅದರಲ್ಲೂ ಮನುಷ್ಯನ ವಿವಿಧ ಅಂಗರಚನೆ ವಿಷಯಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಲೇ ಇವೆ. ಅದರ ಜತೆಗೆ ಪೀಳಿಗೆಯಿಂದ ಪೀಳಿಗೆಗೆ ಉಂಟಾಗುವ ವಂಶವಾಹಿ ಬದಲಾವಣೆಯನ್ನು ಗಮನಿಸುವವರು ಅಥವಾ ಅದರ ಬಗ್ಗೆ ಅಧ್ಯಯನ ನಡೆಸಿ ವಂಶವಾಹಿ ಸಮಸ್ಯೆಗಳನ್ನು ನಿವಾರಿಸುವವರು ಜೆನೆಟಿಸಿಸ್ಟ್‌ಗಳು. 

ಮೊದಲು ಒಂದೇ ಆಗಿದ್ದು ಆನಂತರದಲ್ಲಿ ಟಿಸಿಲೊಡೆದು ಹಲವು ಗುಂಪು- ಪಂಗಡವೇ ಆಗಿ ಹೋಗಿರುವ ಮನುಷ್ಯನಿಗೆ, ಮೂಲಪುರುಷನಿದ್ದಾನೆ ಎಂದು ಸಂಶೋಧನೆಗಳನ್ನು ನಡೆಸಿದಾಗ ನಮಗೆ ದೊರೆತ ಮೂಲವಸ್ತುವೇ “ಬ್ರಹ್ಮಕಣ’. ಇದರಿಂದಲೇ ಮಾನವನ ಸಂತತಿ ಬೆಳೆದುಬಂದಿದೆ. ಇದು ಜಗತ್ತಿನಲ್ಲಿ ಹುಟ್ಟಿದ್ದಲ್ಲ, ಬೇರೆಲ್ಲಿಂದಲೋ ಬಂದಿರಬೇಕು ಎಂಬುದು ವಿಜ್ಞಾನಿಗಳು ತಿಳಿಸಿದ್ದು ಕೆಲವರಿಗೆ ನೆನಪಿರುತ್ತದೆ. ಆದರೆ ಈ ಮಾದರಿಯ ಸಂಶೋಧನೆಯನ್ನು ನಡೆಸಿದವರು ಯಾರು ಎಂದು ಕೇಳ ಬಯಸುವಿರಾದರೆ ಅವರೇ ಜೆನೆಟಿಸಿಸ್ಟ್‌ಗಳು.

ಮಾನವ ಅಥವಾ ಪ್ರಾಣಿಗಳ ಒಂದು ಪೀಳಿಗೆಯಿಂದ ಮತ್ತೂಂದು ಪೀಳಿಗೆಯ ವಂಶವಾಹಿ ಬದಲಾವಣೆಯ ಗುಣಲಕ್ಷಣಗಳ ಪ್ರವಹಿಸುವಿಕೆಯಿಂದ ಆದ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸುವವರು ಜೆನೆಟಿಸಿಸ್ಟ್‌ಗಳು. ಇವರು ಪ್ರಾಣಿ ಅಥವಾ ಮನುಷ್ಯನ ಡಿಎನ್‌ಎ ಮೂಲಕ ಆ ವ್ಯಕ್ತಿ ಅಥವಾ ಪ್ರಾಣಿ ಈ ಹಿಂದೆ ಎಲ್ಲೆಲ್ಲಿ ವಾಸವಾಗಿತ್ತು? ಎಂಥ ಪ್ರದೇಶದಲ್ಲಿ ನೆಲೆಸಿತ್ತು? ಅದರ ವಂಶವಾಹಿ ತಂತುಗಳು ಎಷ್ಟು ಪೀಳಿಗೆ ಅವಸ್ಥಾಂತರವನ್ನು ಕಂಡಿದೆ ಎಂಬುದನ್ನು ಸಂಶೋಧನೆ ಮಾಡಿ ತಿಳಿಸುತ್ತಾರೆ.

ಈ ಕೆಲಸದಲ್ಲಿ ಎಲೆಕ್ಟ್ರಾನ್‌ ಮೈಕ್ರೊಸ್ಕೋಪ್‌, ಸೂಪರ್‌ ಕಂಪ್ಯೂಟರ್‌ಗಳು ಮುಖ್ಯ ಪಾತ್ರ ವಹಿಸುತ್ತವೆ. ಇದಕ್ಕೆ ವರ್ಷಾಂತರ ಕಾಲ ಸಮಯವನ್ನು ಮುಡಿಪಿಟ್ಟು ವಿಜ್ಞಾನಿಗಳು, ಕಾರ್ಯ ನಿರ್ವಹಿಸುತ್ತಾರೆ. ಇವರಲ್ಲಿ ಸಸ್ಯ ಸಂಬಂಧಿತ ವಿಜ್ಞಾನಿಗಳೂ ಇದ್ದು, ಸಸ್ಯದ ತಳಿಗಳನ್ನೂ ಡಿಎನ್‌ಎಗಳನ್ನು ಬದಲಾಯಿಸಿ ಹೆಚ್ಚು ಇಳುವರಿ ತರುವ ತಳಿಗಳನ್ನು ತಯಾರಿಸಿಕೊಡುವುದುಂಟು.

ವಿದ್ಯಾಭ್ಯಾಸ ಹೀಗಿರಲಿ
ಜೆನೆಟಿಸಿಸ್ಟ್‌ ಆಗಲು ವಿಜ್ಞಾನ ವಿಷಯ ಕುರಿತ ಪಿಯುಸಿ ಬಳಿಕ ಜೆನೆಟಿಕ್‌/ಅಗ್ರಿಕಲ್ಚರ್‌/ ಹ್ಯೂಮನ್‌ ಬಯಾಲಜಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಪಡೆದು, ಸ್ನಾತಕೋತ್ತರ ಪದವಿಯಲ್ಲಿ ಎಂಎಸ್ಸಿ ಜೆನೆಟಿಕ್ಸ್‌ ಮತ್ತು ಪಿಎಚ್‌ಡಿ ಮಾಡಿದರೆ ಜೆನೆಟಿಸಿಸ್ಟ್‌ ಆಗಬಹುದು. ಇನ್ನೊಂದು ವಿಧಾನದಲ್ಲಿ ಪಿಯು ಬಳಿಕ ಹ್ಯೂಮನ್‌ ಬಯಾಲಜಿ ಪದವಿ ಪೂರೈಸಿ, ಜೆನೆಟಿಕ್ಸ್‌ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಮಾಡಿಯೂ ಗುರಿ ಸಾಧಿಸಬಹುದು. ಇದರಲ್ಲಿ ಪಾಪ್ಯುಲೇಷನ್‌ ಜೆನೆಟಿಸಿಸ್ಟ್‌, ಬಯೋ ಜೆನೆಟಿಸಿಸ್ಟ್‌, ಮೊಲಾಕ್ಯುಲರ್‌ ಜೆನೆಟಿಸಿಸ್ಟ್‌, ಸೈಟೋ ಜೆನೆಟಿಸಿಸ್ಟ್‌ ವಿವಿಧ ಮಾದರಿಗಳಿವೆ.

ಕೌಶಲಗಳೂ ಅಗತ್ಯ
ಮಾನವ ಅಥವಾ ಪ್ರಾಣಿವರ್ಗದ ಹುಟ್ಟು ಬೆಳವಣಿಗೆ ಇತಿಹಾಸದ ಅರಿವು ಜೈವಿಕ ಅವಸ್ಥಾಂತರದ ಬಗ್ಗೆ ತಿಳಿವಳಿಕೆ, ಆ ಕ್ಷೇತ್ರದ ಬಗ್ಗೆ ಹೆಚ್ಚಿನ ಅಧ್ಯಯನ ಉತ್ತಮ ಗಣಿತ ಜ್ಞಾನ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯ, ಸಂಶೋಧನೆಯಲ್ಲಿ ಕಾರ್ಯಕ್ಷಮತೆ ಮತ್ತು ಸಹನೆ ತಂಡದೊಂದಿಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಜವಾಬ್ದಾರಿ ಹೊರುವ ಮತ್ತು ಸವಾಲನ್ನು ಸ್ವೀಕರಿಸುವ ನಾಯಕತ್ವ ಪ್ರವೃತ್ತಿ ಅಗತ್ಯ

ಅವಕಾಶಗಳು
ಮೆಡಿಕಲ್‌ ಸೈನ್ಸ್‌ ಮತ್ತು ಅಗ್ರಿಕಲ್ಚರ್‌ ಸೈನ್ಸ್‌ ಇನ್ಸ್‌ಟಿಟ್ಯೂಟ್‌ ಪ್ರಯೋಗಾಲಯಗಳು
ರಾಷ್ಟ್ರೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳ ಸಂಶೋಧನಾ ವಿಭಾಗ
ಜೆನೆಟಿಕ್‌ ಟೆಸ್ಟಿಂಗ್‌ ಲ್ಯಾಬ್‌ಗಳು
ಇಂಡಿಯನ್‌ ಕೌನ್ಸಿಲ್‌ ಆಫ್ ಮೆಡಿಕಲ್‌ ರೀಸರ್ಚ್‌

ಓದಲು ಕಾಲೇಜುಗಳು
ಆಕ್ಸ್‌ಫ‌ರ್ಡ್‌ ಕಾಲೇಜ್‌ ಆಫ್ ಸೈನ್ಸ್‌, ಎಚ್‌ಎಸ್‌ಆರ್‌ ಲೇಔಟ್‌, ಬೆಂಗಳೂರು
ಇಂಡಿಯನ್‌ ಅಕಾಡೆಮಿ ಡಿಗ್ರಿ ಕಾಲೇಜು, ಕಲ್ಯಾಣ ನಗರ, ಬೆಂಗಳೂರು
ಎಂ.ಎಸ್‌ ರಾಮಯ್ಯ ಕಾಲೇಜ್‌ ಆಫ್ ಆರ್ಟ್ಸ್, ಸೈನ್ಸ್‌ ಮತ್ತು ಕಾಮರ್ಸ್‌
ಬೆಂಗಳೂರು ಸಿಟಿ ಕಾಲೇಜು, ಕಲ್ಯಾಣ ನಗರ, ಬೆಂಗಳೂರು
ಸೆಂಟ್‌ ಜಾರ್ಜ್‌ ಕಾಲೇಜ್‌ ಆಫ್ ಮ್ಯಾನೇಜ್‌ಮೆಂಟ್‌, ಸೈನ್ಸ್‌ ಅಂಡ್‌ ನರ್ಸಿಂಗ್‌, ಬಾಣಸವಾಡಿ, ಬೆಂಗಳೂರು
ಆಲ್‌ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌, ನವದೆಹಲಿ

ಎನ್ ಅನಂತನಾಗ್

ಟಾಪ್ ನ್ಯೂಸ್

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.