ದಾರಿ ತಪ್ಪಿಸು ದೇವರೇ!


Team Udayavani, Feb 6, 2018, 3:15 PM IST

dari.jpg

“ಹತ್ತಾರು, ನೂರಾರು ದಾರಿಗಳಿವೆ ನಿಜ; ಸಾಗಿ ಸವೆದ ದಾರಿಯನ್ನೇ ಮತ್ತೆ ಮತ್ತೆ ಸವೆಸಿದರೆ ಸಿಗುವುದೇನು?’ - ಯುವ ಲೇಖಕ, ಉಪನ್ಯಾಸಕ ಮಂಜುನಾಥ ಕಾಮತ್‌ರ ಒಳಗೆ ಹೀಗೊಂದು ಪ್ರಶ್ನೆ ಸದಾ ಎಚ್ಚರಾಗಿರುತ್ತದೆ. ನಿಟ್ಟೆ ಸಮೀಪದ ಬೋರ್ಗಲ್‌ಗ‌ುಡ್ಡೆಯ ಇವರು “ಕಾಳಿಂಗ’ ಎಂಬ ಬೈಕಿನಲ್ಲಿ ಊರೂರು ಸುತ್ತುತ್ತಲೇ ಕತೆಯನ್ನು ಬೇಟೆಯಾಡುವವರು. ಹಾಗೆ ಬೈಕಿನಲ್ಲಿ ತೇಲಿ ಹೋಗುವಾಗ “ದಾರಿ ತಪ್ಪಿಸು ದೇವರೇ…’ ಅಂತಲೇ ಪ್ರಾರ್ಥಿಸುತ್ತಾರಂತೆ. ಈ ಶೀರ್ಷಿಕೆಯ ಕೃತಿ ಶೀಘ್ರವೇ “ಬಿಳಿಕಲ್ಲು ಪ್ರಕಾಶನ’ದಿಂದ ಓದುಗರ ಕೈಸೇರಲಿದೆ. ಹಾಗೆ ದಾರಿ ತಪ್ಪಿದಾಗಲೇ ಸಿಕ್ಕವನು ಈ ಮಿಂಜಿರ ಎಂಬ ವಂಡರ್‌ ಕಣ್ಣಿನ ಆಸಾಮಿ! 

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ವರಂಗ ಕೆರೆ ಬಸದಿ ನನ್ನ ಮೆಚ್ಚಿನ ತಾಣ. ಅದೊಂದು ಮುಂಜಾನೆ ಕೆರೆಯ ಎಡ ಅಂಚಿನಲ್ಲಿ ಕೂತು ಫೋಟೋ ತೆಗೀತಿದ್ದೆ. ಹಿಂದೆ ಯಾರೋ ನಿಂತಿದ್ದಂತೆ ಅನ್ನಿಸಿ, ಹಿಂತಿರುಗಿದೆ. ಹೌದು ಮಿಂಜಿರ. ಹಿಂದಿನಿಂದ ಬಗ್ಗಿ ನಿಂತು ನನ್ನ ಮೊಬೈಲ್‌ ಸ್ಕ್ರೀನ್‌ ನೋಡಲು ಯತ್ನಿಸುತ್ತಿದ್ದ.

   ಕಣ್ಣಿಗೆ ಕಣ್ಣು ತಾಗಿತು. ಒಡೆದ ಕಪ್ಪು ತುಟಿಯನ್ನು ತೆರೆದು “ಪಿಚ್ಚರ್‌ ದೆಪ್ಪುನಾ’ ಕೇಳಿದ. “ಅಲ್ಲ, ಫೋಟೋ’ ಅಂದೆ. ವಾಕ್ಯವನ್ನು ಮುಂದುವರಿಸಬೇಕೆಂದಿದ್ದವನನ್ನು ತಡೆದು, “ಇವತ್ತು ಎಂಥ ಚೆಂದಾನೂ ಇಲ್ಲ. ಮೋಡ ಬಂತು ಮಾರ್ರೆ. ನಿನ್ನೆ ಬಬೇìಕಿತ್ತು, ಎಷ್ಟು ಚೆಂದ ಇತ್ತು ಗೊತ್ತಾ?’ ಅಂತ ಆಸೆ ಹುಟ್ಟಿಸಿದ.

   ಮಿಂಜಿರನ ಮನೆ ಅಲ್ಲೇ ಕೆರೆಯ ಪಕ್ಕವೇ ಇದೆ. ಬೆಳಗ್ಗೆ ಬೇಗನೇ ಎದ್ದು, ಕೆರೆಯಲ್ಲಿ ಎರಡು ಮುಳುಗು ಹಾಕಿ, ವರಂಗ ಪೇಟೆ, ಬಸದಿ ಮಾರ್ಗದಲ್ಲಿ ಸುತ್ತಾಡಿ ಮನೆಗೆ ಮರಳಿ, ತಿಂಡಿ ತೀರ್ಥ ಮುಗಿಸಿ ಬೇರೆಯವರ ತೋಟದ ಕೆಲಸಕ್ಕೆ ಹೋಗೋದು ಅವನ ದಿನಚರಿಯಂತೆ. ರಾತ್ರಿ ಎಣ್ಣೆ ಸ್ನಾನವೂ ಇದ್ದಿರಬೇಕು. ತೆಗೆದಿದ್ದ ಫೋಟೋ ತೋರಿಸೆಂದು ಹತ್ತಿರ ಹತ್ತಿರ ಬಂದಾಗ ಸೂಸಿದ ವಾಸನೆ ಅದನ್ನು ಸಾರುತ್ತಿತ್ತು.

  ಮಿಂಜಿರನಿಗೆ ವಯಸ್ಸೆಷ್ಟು ಕೇಳಿದೆ. “ನೀವೇ ಹೇಳಿ…’ ಎಂದ. ಕೂದಲು ಬೆಳ್ಳಗಾಗಿರಲಿಲ್ಲ. ಆದರೆ, ಮುಖದ ಸುಕ್ಕು ಇಳಿವಯಸ್ಸನ್ನು ಸೂಚಿಸುವಂತಿತ್ತು. “ನನಗೆ ಗೊತ್ತಾಗಲ್ಲ ಮಂಜಿರ, ನೀನೇ ಹೇಳು…’ ಅಂದೆ.

   ನೇರವಾಗಿ ವಯಸ್ಸು ಹೇಳ್ಳೋದು ಬಿಟ್ಟು, ಊರ ಹಿರಿಯರ ಹೆಸರು ಹೇಳಿ “ಅವರಿಗಿಂತ 2 ವರುಷ ದೊಡ್ಡವನು. ಇವರಿಗಿಂತ 4 ವರುಷ ಸಣ್ಣವನು. ಮತ್ತೆ ಆ ಅಂಗಡಿಯವರಿಗಿಂತ…’ ಅಂತ ರಾಗ ಎಳೆದು ತನ್ನ ವಯಸ್ಸನ್ನು ಒಗಟಾಗಿಸಿಯೇ ಅಡಗಿಸಿಟ್ಟ. ಆ ಒಗಟಿನಿಂದಾಗಿಯೇ ಮಿಂಜಿರ ನನ್ನವನಾದ. ಸಲುಗೆಯಿಂದ ಮತ್ತಷ್ಟು ಮಾತು ಮತ್ತು ಕಥೆಯಾಯಿತು. ಆದರೆ, ಒಮ್ಮಿಂದೊಮ್ಮೆಲೆ ಮಿಂಜಿರನ ಏರು ಧ್ವನಿ ಪಾತಾಳಕ್ಕಿಳಿಯಿತು. ಅವನ ಕಣ್ಣು ನನ್ನ ಮೊಬೈಲನ್ನೇ ಇಣುಕಿತು.

   “ನಾನೊಂದು ಪಿಚ್ಚರ್‌ ತೆಗೀಲಾ?’ ಅಂತ ಕೈ ಮುಂಚಾಚಿದ. “ತಮ್ಮನ ಮಕ್ಳತ್ರ ಮೊಬೈಲ್‌ ಇದೆ. ಆದ್ರೆ ನನಗದು ಗೊತ್ತಾಗಲ್ಲ. ಒಂದು ಪಿಚ್ಚರ್‌ ತೆಗೀತೇನೆ. ಕಲಿಸಿಕೊಡ್ತೀರಾ?’ ಅಂದಾಗ ನನಗೆ ತಪ್ಪಿಸಿಕೊಳ್ಳಲು ಮನಸ್ಸಾಗಲಿಲ್ಲ. ಕೊಟ್ಟೆ. ಕ್ಲಿಕ್‌ ಮಾಡೋದನ್ನು ಕಲಿಸಿದೆ. “ಮೋಡ ತುಂಬಾ ಇದೆ. ಎಲ್ಲಾ ಕಪ್ಪು ಕಪ್ಪು ಕಾಣಿ¤ದೆ’ ಅಂತ ದೂರಿದ. ಲೆನ್ಸ್‌ಗೆ ಅಡ್ಡಹಿಡಿದ ಬೆರಳನ್ನು ಸರಿಸಿ, ಮೊಬೈಲ್‌ ಹಿಡಿಯುವುದು ಕಲಿಸಿದೆ. “ಈಗ ಲಾಯಕ್‌ ಕಾಣಿಸ್ತಾ ಉಂಟು ಮಾರ್ರೆ’ ಎಂದು ಉತ್ಸಾಹಗೊಂಡ.

  ಒಂದೆರಡು ಕ್ಲಿಕ್‌ ಆದ ಮೇಲೆ ಮತ್ತಷ್ಟು ಹುರುಪುಗೊಂಡು, ನನ್ನ ಫೋಟೋ ತೆಗೀತೇನೆ ಅಂತ ಬೆನ್ನುಬಿದ್ದ. ದೂರದಲ್ಲಿದ್ದ ದೋಣಿಯ ಹತ್ತಿರ ಓಡಿಸಿದ. ದೋಣಿ ಹತ್ತಿಸಿದ. ಕೂತ ನನ್ನನ್ನು ದೋಣಿಯ ತುದಿಗೆ ಹೋಗಿ ನಿಲ್ಲಲು ಆಜ್ಞೆ ಕೊಟ್ಟ.
  ಮಿಂಜಿರನ ಉತ್ಸಾಹಕ್ಕೆ ಬೆರಗಾದೆ. ಆದರೆ, ಆತನ ಬೆರಳುಗಳು ಮಾತ್ರ ಮತ್ತೆ ಮತ್ತೆ ಲೆನ್ಸ್‌ಗಳನ್ನು ಮುಚ್ಚುತ್ತಲೇ ಇದ್ದವು.
   ಹೊತ್ತು ಮೀರಿತು. “ಕಾಲೇಜಿಗೆ ಲೇಟ್‌ ಆದ್ರೆ ಕಷ್ಟ. ಇನ್ನೊಮ್ಮೆ ಸಿಗೋಣ. ಇಂದಿಗೆ ಸಾಕು’ ಎಂದೆ. ಅವನಿಗೆ ನಿರಾಸೆಯಾಯಿತು. ಆದರೇನು ಮಾಡೋದು? ಎಕ್ಸಾಂ ಡ್ನೂಟಿ ಬೇರೆ. ಹೊತ್ತು ಆಚೀಚೆ ಆಗುವಂತಿಲ್ಲ. “ಇನ್ನು ಹೊರಡ್ತೇನೆ’ ಅಂದೆ.

    “ಆಯ್ತು’ ಅಂದವ ಮೊಬೈಲ್‌ ಕೊಟ್ಟ. ಧನ್ಯವಾದ ಹೇಳಿ ಹತ್ತು ಹೆಜ್ಜೆ ಇಟ್ಟೆನಷ್ಟೆ. ನನ್ನ ಬೆನ್ನ ಹಿಂದೆಯೇ ಬೀಸಿ ಬಂದ. ಕಾಸುಗೀಸೇನಾದರೂ ಕೇಳುತ್ತಾನಾ? ಪರ್ಸು ಅಕ್ಕನ ಮನೆಯಲ್ಲಿತ್ತು. ಕೊಡೋಣವೆಂದರೆ ಬಿಡಿಗಾಸೂ ಆಗ ಇರಲಿಲ್ಲ.
   ಆದರೆ, ಆತ ಬಂದದ್ದು ಹಣಕ್ಕಲ್ಲ. “ಇಲ್ಲೇ ಮುಂದೆ, ದಾರಿಯಲ್ಲೇ, ಗದ್ದೆಯ ಅಂಚಿನಲ್ಲಿ ಸಣ್ಣ ಮೀನುಗಳು ತುಂಬಾ ಇವೆ. ಅದ್ರದೊಂದು ಪಿಚ್ಚರ್‌ ತೆಗೀರಿ’ ಅಂತ ಹೇಳಲು.

  “ನಂಗೆ ಲೇಟ್‌ ಆಗುತ್ತಲ್ಲಾ ಮಂಜಿರಾ, ಇನ್ನೊಮ್ಮೆ…’
   “ಅಯ್ಯೋ, ನೀವು ಇನ್ನೊಮ್ಮೆ ಬರೋವಾಗ ಮೀನುಗಳು ಇರುತ್ತೋ ಯಾರಿಗೊತ್ತು? ಮಳೆ ಬೇರೆ ಬರ್ತಿಲ್ಲ. ಗದ್ದೆ ಒಣಗುತ್ತಿದೆ. ಎಂಥ ಬರಗಾಲ ಕಾದಿದೆಯೋ? ಈಗ್ಲೆà ತೆಗೆದು ಬಿಡಿ’ ಎಂದು ಹಠ ಹಿಡಿದ.
   ಆತ ಹೇಳಿದ್ದು ಸತ್ಯ ಅನಿಸಿತು. ಅವಸರವಿದ್ದರೂ ಮೀನಗುಂಪಿನ ಫೋಟೋ ತೆಗೆದೆ. ತೋರಿಸಿದೆ. ಬಿಳಿ ಹಲ್ಲುಗಳು ಮಿನುಗಿದವು. ಮಿಂಜಿರ ತೆಗೆದ ನನ್ನ ಫೋಟೋಗಳನ್ನು ಎಡಿಟ್‌ ಮಾಡದೇ ಇಲ್ಲಿ ಕೊಟ್ಟಿದ್ದೇನೆ. ಚಂದ ತೋರಿದರೆ ವರಂಗಕ್ಕೆ ನೀವೂ ಬಂದಾಗ ಅವನಿಂದ ಒಂದು ಕ್ಲಿಕ್‌ ಮಾಡಿಸಿಕೊಳ್ಳಿ.

– ಮಂಜುನಾಥ ಕಾಮತ್‌

ಟಾಪ್ ನ್ಯೂಸ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.