ವರ್ಷಕ್ಕೊಂದು ಗಿಫ್ಟ್ ಸಾಕು ವರ್ಷವಿಡೀ ಪ್ರೀತಿ ಬೇಕು!
Team Udayavani, Dec 11, 2018, 11:55 AM IST
ನಿನ್ನಿಂದ ದೂರ ಇದ್ದೀನಿ, ಆದ್ರೆ ನನ್ನ ಎದೆಗೂಡಿನ ಪ್ರತಿ ಉಸಿರಲ್ಲೂ ಕೇಳಿಸೋ ಹೆಸರು ನಿಂದು ಅನ್ನೋದು ಮಾತ್ರ ನೆನಪಿರಲಿ. ಪ್ಲೀಸ್, ನಾನೊಪ್ಪದೇ ಇದ್ರೂ, ಸ್ವಲ್ಪ ಒತ್ತಾಯ ಮಾಡಿ ನನ್ನ ಕರ್ಕೊಂಡು ಹೋಗೋಕೆ ಬಾರೋ. ಪ್ಲೀಸ್…
ಹಾಯ್ ಮುದ್ದು, ಹೇಗಿದ್ದೀಯಾ? ಅಲ್ಲಾ, ಹೇಗಿದ್ದೀಯಾ ಅಂತ ಕೇಳಲೂ ಇಲ್ಲ ಅಂತ ಅಷ್ಟೊಂದ್ ಕೋಪ ಮಾಡ್ಕೊತೀಯಲ್ಲ, ನಿಂಗೇನ್ ಹೇಳ್ಳೋದ್ ಹೇಳು? ಹೇಗಿದ್ದೀಯಾ ಅಂತ ಕೇಳಲಿಲ್ಲ ಅಂದ್ರೆ ನಿನ್ಮೆಲೆ ಪ್ರೀತಿ ಇಲ್ಲ, ನಿನ್ ಬಗ್ಗೆ ಯೋಚೆನೇ ಮಾಡಲ್ಲ ಅಂತೇನಲ್ಲ. ನಿನ್ ಮನ್ಸು ಒಂದ್ಸಲ ನೋವಲ್ಲಿ ನರಳಿದ್ರೂ, ಇಲ್ಲಿ ನನ್ನೆದೆ ಬಡಿತ ಏರುಪೇರಾಗುತ್ತೆ. ಆಗ್ಲೆ ತಿಳಿಯುತ್ತೆ ನಿಂಗೇನೋ ಆಗಿದೆ ಅಂತ!
ನೀನು ನನಗದೆಲ್ಲಿಂದ ಸಿಕ್ಕಿದ್ಯೋ, ನನ್ನನ್ನು ತುಂಬಾ ಕಾಳಜಿಯಿಂದ ನೋಡ್ಕೊಂಡೆ. ಯಾರಲ್ಲೂ ಸಿಗ್ದೆ ಇರೋವಷ್ಟು ಗೌರವ, ಪ್ರೀತೀನ ನಿನ್ನ ಮಡಿಲಲ್ಲಿ ತಗೊಂಡೆ. ನನ್ನ ಯಾರೂ ಅರ್ಥ ಮಾಡ್ಕೊಳೆ ಇರೋವಷ್ಟು ನೀನು ಅರ್ಥ ಮಾಡ್ಕೊಂಡೆ. ನಾನ್ ಅತ್ತಾಗ ಕಣ್ಣೀರೊರೆಸಿದೆ, ಖುಷಿ ಪಟ್ಟಾಗ ನೀನೂ ನನ್ನ ಜೊತೇನೆ ಖುಷಿಪಟ್ಟೆ. ಯಾರಿಗೂ ಅರ್ಥ ಆಗದ ನನ್ನೊಳಗಿನ ಭಾವನೆಗಳು ನಿಂಗೆ ಸಲೀಸಾಗಿ ಅರ್ಥ ಆಗ್ತಿತ್ತಲ್ವಾ?
ಆದ್ರೆ ಈಗ? ನಾನು ನಿನ್ನಿಂದ ಸ್ವಲ್ಪ ದೂರಾಗಿದ್ದೀನಿ. ಮೊದ್ಲು ದಿನಾ ನೋಡೋಕೆ ಸಿಗ್ತಿಧ್ದೋಳು, ಈಗ ತಿಂಗಳಿಗೆರಡು ಸಲ ಮಾತ್ರ ಸಿಗ್ತಿದ್ದೀನಿ. ಮೊದ್ಲು ಫೋನ್ ಮಾಡಿ ಗಂಟೆಗೂ ಬೆಲೆ ಕೊಡದೆ ಮಾತಾಡ್ತಿಧ್ದೋಳು, ಈಗ ನಿಮಿಷಗಳನ್ನ ಲೆಕ್ಕ ಹಾಕಿ, ಬೇರೇನೂ ಮಾತೋಡೋಕೆ ಇಲ್ಲ ಅನ್ನೋ ಥರ ಮಾಡ್ತೀನಿ. ಮೊದ್ಲು ದಿನಕ್ಕೆರಡು ಫೋಟೋ ತೆಗ್ದು ನಿಂಗೆ ಕಳ್ಸಿ ಖುಷಿ ಪಡ್ತಿಧ್ದೋಳು, ಈಗ ವಾರಕ್ಕೊಮ್ಮೆ ನೀನೇ ಕಾಡಿ, ಬೇಡಿದ್ಮೇಲೆ ಒಂದು ಸೆಲ್ಫಿ ಕಳಿಸ್ತೀನಿ.
ನಿಜ, ನೀನು ಹೇಳ್ಳೋ ಹಾಗೆ ನಾನು ಬದಲಾಗಿದ್ದೀನಿ. ಅದು ನಂಗೂ ಗೊತ್ತು. ಆದ್ರೆ… ಒಂದು ಪುಟ್ಟ ಮಗು ಬೇರೆ ಯಾರೋ ತಮಾಷೆ ಮಾಡಿದ್ರೆ ನಗುತ್ತೆ, ಆಟ ಆಡ್ಸಿದ್ರೆ ಆಡುತ್ತೆ ನಿಜ. ಆದ್ರೆ ಅದು ಸುಖನಿದ್ದೆ ಅಂತ ಮಾಡೋದು ತನ್ನ ಅಪ್ಪನ ಮಡಿಲಲ್ಲಿ ಮಾತ್ರ. ನೀನೂ ನಂಗೆ ಎರಡನೇ ಅಪ್ಪನ ಥರ! ನಾನು ಸಾಕಷ್ಟು ಜನರ ಜೊತೆ ಮಾತಾಡೊದು, ನಗಬೋದು, ಖುಷಿಪಡಬೋದು. ಆದ್ರೆ, ನೋವಾದಾಗ ನಿನ್ನ ಮಡಿಲನ್ನೇ ಅರಸ್ಕೊಂಡು ಬರ್ತೀನಿ. ಆದ್ರಿಂದ ನೀನು ಕೊಡೋ ಬೆಚ್ಚಗಿನ ಭಾವವನ್ನ ನಂಗೆ ಬೇರ್ಯಾರೂ ಕೊಡೋಕೆ ಸಾಧ್ಯಾನೇ ಇಲ್ಲ.
ನಂಗೆ ನೀನು ಕೊಡೋ ಯಾವ ವಸ್ತೂನೂ ಬೇಡ. ಬರ್ತ್‌ಡೇಗೆ ಒಂದು ಗಿಫ್ಟ್ ಅಂತ ಕೊಡು ಸಾಕು. ಆದ್ರೆ, ವರ್ಷಪೂರ್ತಿ ನನ್ಮೆಲೆ ಪ್ರೀತಿಯ ಮಳೆ ಸುರಿಸು. ಯಾಕೇಂದ್ರೆ ನಾನು ಅದಿಲ್ಲದೆ ಬಳಲಿ ಹೋಗಿದ್ದೀನಿ. ನಿನ್ನಿಂದ ದೂರ ಇದ್ದೀನಿ, ಆದ್ರೆ ನನ್ನ ಎದೆಗೂಡಿನ ಪ್ರತಿ ಉಸಿರಲ್ಲೂ ಕೇಳಿಸೋ ಹೆಸರು ನಿಂದು ಅನ್ನೋದು ಮಾತ್ರ ನೆನಪಿರಲಿ. ಇಲ್ಲೊಂದು ಜೀವ ನಿನ್ನ ಜೊತೆ ಸಮಯ ಕಳೆಯೋಕೆ ಕಾಯ್ತಾ ಇದೆ. ಪ್ಲೀಸ್, ನಾನೊಪ್ಪದೇ ಇದ್ರೂ, ಸ್ವಲ್ಪ ಒತ್ತಾಯ ಮಾಡಿ ನನ್ನ ಕರ್ಕೊಂಡು ಹೋಗೋಕೆ ಬಾರೋ. ಪ್ಲೀಸ್…
* ಸಂಗೀತಾ ಜಿ., ನಿಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.