ಹೊರಟು ನಿಂತ ಹೀರೋ

ಪ್ರೀತಿಯಿಂದ ಕೆಲಸ ಬಿಟ್ಟವರ ವಿದಾಯ ಪತ್ರ!

Team Udayavani, Jun 4, 2019, 6:00 AM IST

r-11

ಸೈಕಲ್‌ ಹೊಡೆದು ಪರೀಕ್ಷೆ ಪಾಸು ಮಾಡಿ, ವಿದ್ಯಾರ್ಥಿ ಜೀವನ ಮುಗಿಸಿ, ಕೆಲಸ ಸಿಕ್ಕ ಮೇಲೆಯೇ ಲೈಫ‌ು ಸೆಟಲ್ಲು ಅಂತ ನಾವಂದುಕೊಳ್ಳುತ್ತೇವೆ. ಆದರೆ, ಒಮ್ಮೊಮ್ಮೆ ಸಾಗಬೇಕಾದ ಹಾದಿ ಇನ್ನೂ ಇರುವಂತೆಯೇ ನಾವು ಮೂಲೆಗೊತ್ತಿದ ಕನಸುಗಳು ಕಾಡುವುದುಂಟು. ಕೆಲವರು ಅದನ್ನು ಮತ್ತೆ ಬದಿಗೆ ಸರಿಸಿದರೆ, ಮತ್ತೆ ಕೆಲವರು ಹೋಗುತ್ತಿದ್ದ ವೃತ್ತಿಯ ಹಾದಿ ತೊರೆದು ಆ ಕನಸಿನ ಬೆನ್ನು ಹತ್ತಿ ಹೋಗುವ ಧೈರ್ಯ ತೋರುತ್ತಾರೆ. ಮೊನ್ನೆ ಮೊನ್ನೆ ಕೆಲಸಕ್ಕೆ ರಾಜೀನಾಮೆ ನೀಡಿದ ಪೊಲೀಸ್‌ ಅಧಿಕಾರಿ ಅಣ್ಣಾಮಲೈ ಅಂಥವರ ಸಾಲಿನಲ್ಲಿ ನಿಲ್ಲುತ್ತಾರೆ. ಆ ನೆಪದಲ್ಲಿ, ತಮ್ಮ ಕನಸುಗಳಿಗಾಗಿ ವೃತ್ತಿ ತೊರೆದವರು ಸಂಸ್ಥೆಗೆ ಬರೆದ ವಿದಾಯ ಪತ್ರಗಳನ್ನು ಇಲ್ಲಿ ಏನೀಡಿದ್ದೇವೆ. ಪ್ರತಿ ಪತ್ರವೂ ಒಂದೊಂದು ಆಶಯ ಬಿತ್ತಿ, ನಮ್ಮ ಕಣ್ತೆರೆಸುತ್ತದೆ…

ಐಎಸ್ ಚುಂಬಿಸುವ ಮುನ್ನ
ವಿಜಯಪುರದ ಈ ಟೆಕ್ಕಿ, ಕೆಲ ವರ್ಷಗಳ ಹಿಂದೆ ಸಾಫ್ಟ್ವೇರ್‌ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಅವನನ್ನು ವಿಚಿತ್ರವಾಗಿ ನೋಡಿದವರು ಹಲವರು. ರಾಜಿನಾಮೆ ಪತ್ರದಲ್ಲಿ ನೀಡಿದ್ದ ಕಾರಣ ನೋಡಿ ಆತನನ್ನು ಹುಂಬನೆಂದುಕೊಂಡವರೂ ಇದ್ದರು. ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದು ನಾಲ್ಕನೇ ಬಾರಿ 307ನೇ ರ್‍ಯಾಂಕು ಪಡೆದ ಆ ಟೆಕ್ಕಿ, ಗಿರೀಶ್‌ ಕಲಗೊಂಡ್‌. ಉನ್ನತ ಗುರಿಗಾಗಿ ಐಟಿ ಕೆಲಸ ಬಿಡುವಾಗ ಬರೆದ ರಾಜಿನಾಮೆ ಪತ್ರ ಎಂಥವರಿಗೂ ಸ್ಫೂರ್ತಿ…

ಸರ್‌,
ಮಾಹಿತಿ ತಂತ್ರಜ್ಞಾನ ಜಗತ್ತಿನ ಒಳ ಹೊರಗನ್ನು ನನಗೆ ಅರ್ಥ ಮಾಡಿಸಿದ್ದಕ್ಕಾಗಿ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಬಯಸುತ್ತೇನೆ. ತುಂಬಾ ಸಮಯದ ಹಿಂದೆ ನನ್ನದೊಂದು ಕನಸಿತ್ತು. ಅದರಿಂದ ತಾತ್ಕಾಲಿಕವಾಗಿ ದೂರವಿದ್ದೆ. ಈಗ ಆ ಕನಸನ್ನು ಬೆನ್ನಟ್ಟುವ ಸಮಯ ಬಂದಿದೆ. ನನ್ನ 2 ವರ್ಷಗಳ ಐಟಿ ಕ್ಷೇತ್ರದ ಅನುಭವ, ತಾಂತ್ರಿಕ ವಿಷಯಗಳನ್ನಷ್ಟೇ ಅಲ್ಲ, ಬದುಕಿಗೆ ಅಗತ್ಯವಾದ ಕೌಶಲ್ಯಗಳನ್ನೂ ಕಲಿಸಿದೆ. ಮುಂಬರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಅವು ಸಹಕಾರಿಯಾಗಲಿವೆ.

ಪತ್ರಿಕೆಗಳಲ್ಲಿ ಯುವಭಾರತದ ಸಾಮರ್ಥ್ಯದ ಕುರಿತೆಲ್ಲಾ ಓದುವಾಗ ನನ್ನಲ್ಲಿ, ನನಗೆ ನಂಬಿಕೆ ಹೆಚ್ಚುತ್ತಿತ್ತು. ಕನಸನ್ನು ತಲುಪಿಯೇ ತೀರುತ್ತೇನೆ ಎನ್ನುವ ಉತ್ಸಾಹ ಇಮ್ಮಡಿಸುತ್ತಿತ್ತು. ಆಧುನಿಕ ಭಾರತದ ಗತಿಯನ್ನು ಬದಲಾಯಿಸಿದ ಶ್ರೇಯ ಮನಮೋಹನ್‌ ಸಿಂಗ್‌ ಮತ್ತು ಪಿ.ವಿ. ನರಸಿಂಹರಾವ್‌ ಅವರುಗಳಿಗೆ ಸಲ್ಲುತ್ತದೆ. ಅದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳು. 92ರಲ್ಲಿ ಅವರು ಬಿತ್ತಿದ ಬಂಡವಾಳಶಾಹಿ ಆರ್ಥಿಕ ಸುಧಾರಣಾ ನೀತಿಗಳ ಫ‌ಲವನ್ನು ನಾವಿಂದು ಉಣ್ಣುತ್ತಿದ್ದೇವೆ. ನಮ್ಮ ದೇಶದ ಆರ್ಥಿಕತೆ ಮತ್ತು ಕೈಗಾರಿಕಾ ಕ್ಷೇತ್ರ ಎರಡೂ ಒಂದಕ್ಕೊಂದು ಪೂರಕ ಎಂದು ನಾನು ನಂಬುತ್ತೇನೆ. ಕೈಗಾರಿಕೆಗಳು ಬೆಳವಣಿಗೆ ಹೊಂದಿದರೆ ನಮ್ಮ ಆರ್ಥಿಕತೆ ಬಲಗೊಳ್ಳುತ್ತದೆ ಎನ್ನುವುದು ನನ್ನ ಅಭಿಪ್ರಾಯ. ನನ್ನೆಲ್ಲಾ ವಿಚಾರಧಾರೆಗಳ ಕೇಂದ್ರಬಿಂದು ಅದೇ. ಅವ್ಯಾವುದನ್ನೂ ವಿದ್ಯಾರ್ಥಿ ಜೀವನ ಕಲಿಸಲಿಲ್ಲ. ನಾವೆಲ್ಲರೂ ಮೆಕಾಲೆ ಶಿಕ್ಷಣ ಪದ್ಧತಿಯ ಬಲಿಪಶುಗಳಾಗಿದ್ದೇವೆ. ಅದರಿಂದ ಹೊರಬಂದು ನನ್ನ ಮುಂದಿನ ಭವಿಷ್ಯಕ್ಕೆ ಭದ್ರ ತಳಪಾಯವನ್ನು ನಾನೀಗಾಗಲೇ ಹಾಕಿಕೊಳ್ಳುತ್ತಿದ್ದೇನೆ.

ಕಾರ್ಪೊರೇಟ್‌ ಪ್ರಪಂಚದ ಮೆಟೀರಿಯಲಿಸ್ಟಿಕ್‌ ಪ್ರಭಾವದಿಂದಾಗಿ ಮನುಷ್ಯ ಸಹಜ ಸೂಕ್ಷ್ಮ ಪ್ರಜ್ಞೆಯನ್ನೇ ಕಳಕೊಂಡು ಬಿಟ್ಟಿದ್ದೆ. ಸಂಸ್ಥೆಯ ಬದ್ರಿ, ಮೋಹನ್‌, ಸುರೇಶ್‌ ಎಚ್‌.ಪಿ, ಅನಿಲ್‌ ಎಂ.ಎಸ್‌. ಮುಂತಾದ ಹಿರಿಯ ಸಹೋದ್ಯೋಗಿಗಳು ಅದನ್ನು ನೆನಪಿಸಿ, ನನ್ನ ಕನಸಿಗೆ ರೆಕ್ಕೆ ಮೂಡಿಸಿದರು. ಅವರಿಗೆ ನನ್ನ ಕೃತಜ್ಞತೆಗಳು.

ಎಲ್ಲಿ ಭಯ ಇರುವುದಿಲ್ಲವೋ, ತಲೆ ಎತ್ತಿ ನಡೆಯುವೆವೋ
ಎಲ್ಲಿ ಜ್ಞಾನ ಉಚಿತವೋ
ಎಲ್ಲಿ ಪ್ರಪಂಚ ಗೋಡೆಗಳಿಂದ ತುಂಡುಗಳಾಗಿ ಹಂಚಿಹೋಗಿಲ್ಲವೋ
ಎಲ್ಲಿ ಮಾತುಗಳು ಸತ್ಯದ ಗರ್ಭದಿಂದ ಹೊರಬರುವುದೋ
ಎಲ್ಲಿ ನಿಮಿತ್ತವೆಂಬ ತೊರೆ ದಾರಿತಪ್ಪದೆ ಮರುಭೂಮಿಯನ್ನು ಹಾಯುವುದೋ
ಎಲ್ಲಿ ಮನ ನಮ್ಮ ಕೈ ಹಿಡಿದು ಮುನ್ನಡೆಸುವುದೋ
ಆ ವಿಶಾಲ ಚಿಂತನೆಯತ್ತ
ಆ ಬಿಡುಗಡೆಯೆಂಬ ಸಗ್ಗದತ್ತ, ಓ ತಂದೆಯೇ ,ನನ್ನ ದೇಶ ಜಾಗೃತವಾಗಲಿ

ರವೀಂದ್ರನಾಥ ಟಾಗೋರರು ತಮ್ಮ ಮೇಲಿನ ಪದ್ಯದಲ್ಲಿ ಕಟ್ಟಿರುವ ದೇಶದ ಕುರಿತ “ಭವ್ಯ ಕನಸು’ ಮತ್ತು “ಉದಾತ್ತ ಚಿಂತನೆ’ ಮೇಲೆ ನಂಬಿಕೆ ಇಟ್ಟು, ಎಲ್ಲರೂ ತಂತಮ್ಮ ಗಮ್ಯ ಸೇರುವಂತಾಗಲಿ ಎಂದು ಹಾರೈಸುತ್ತಾ ಈ ಪತ್ರವನ್ನು ಕೊನೆಗೊಳಿಸುತ್ತಿದ್ದೇನೆ. ನೀವೆಲ್ಲರೂ ವೃತ್ತಿಬದುಕಿನಲ್ಲಿ ಕೀರ್ತಿ ಶಿಖರವನ್ನು ಏರುವಂತಾಗಲಿ. ಶಿವ ನಮ್ಮೆಲ್ಲರನ್ನೂ ಹರಸಲಿ.
ಜೈ ಹಿಂದ್‌!

ನಿಮ್ಮವ

ಗಿರೀಶ್‌ ಕಲಗೊಂಡ್‌

ಆ್ಯಪಲ್‌ ಭವಿಷ್ಯ ಉಜ್ವಲವಾಗಿದೆ
ಆ್ಯಪಲ್‌ ಎಂಬ ಜಗತ್ಪ್ರಸಿದ್ಧ ಸಂಸ್ಥೆಯನ್ನು ಸ್ಥಾಪಿಸಿದ ಸ್ಟೀವ್‌ ಜಾಬ್ಸ್ ಅನ್ನು 1985ರಲ್ಲಿ ಆಡಳಿತ ಮಂಡಳಿ ಕೆಲಸದಿಂದ ಹೊರಹಾಕಿತ್ತು. ಆದರೆ, ಹೊರಹಾಕಿದವರೇ ಆರತಿ ಎತ್ತಿ ಸ್ವಾಗತಿಸುವ ಪರಿಸ್ಥಿತಿ ಬಂದಿತ್ತು. ಇಲ್ಲಿರುವುದು ಅನಾರೋಗ್ಯದ ಕಾರಣದಿಂದ ನಿವೃತ್ತಿ ಪಡೆಯಬೇಕಾಗಿ ಬಂದಾಗ ಸ್ಟೀವ್‌ ಜಾಬ್ಸ್, ಸಂಸ್ಥೆಗೆ ಬರೆದ ಎರಡನೇ ರಾಜೀನಾಮೆ ಪತ್ರ…

ನಿರ್ದೇಶಕ ಮಂಡಳಿ ಮತ್ತು ಆ್ಯಪಲ್‌ ಸಮುದಾಯದವರಿಗೆ ನಮಸ್ಕಾರ,
ನಾನು ಯಾವತ್ತಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಆ್ಯಪಲ್‌ ಸಂಸ್ಥೆಯ ಸಿಇಓ ಆಗಿ ಕರ್ತವ್ಯಗಳನ್ನು, ನಿರೀಕ್ಷೆಗಳನ್ನು ನಿರ್ವಹಿಸಲು ಸಾಧ್ಯವಾಗದ ದಿನ ಯಾವಾಗ ಬರುತ್ತದೆಯೋ, ಆವತ್ತು ಖುದ್ದು ನಾನೇ ನಿಮ್ಮಲ್ಲಿ ಅದನ್ನು ಹೇಳಿಬಿಡುತ್ತೇನೆಂದು. ದುರಾದೃಷ್ಟವೆಂದರೆ ಆ ದಿನ ಬಂದಿದೆ.

ಆ್ಯಪಲ್‌ ಸಂಸ್ಥೆಯ ಸಿಇಓ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಸಂಸ್ಥೆಯ ಆಡಳಿತ ಮಂಡಳಿ ಇಷ್ಟಪಟ್ಟಲ್ಲಿ, ನಾನು ಕೆಲಸ ಮಾಡಲು ಸಮರ್ಥನಾಗಿದ್ದೇನೆಂದು ಅನ್ನಿಸಿದರೆ ಮಂಡಳಿಯ ಕಾರ್ಯದರ್ಶಿಯಾಗಿ, ನಿರ್ದೇಶಕನಾಗಿ, ಸಂಸ್ಥೆಯ ನೌಕರನಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ.

ನನ್ನ ಉತ್ತರಾಧಿಕಾರಿ ಯಾರಾಗಬಹುದು ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಏಳುವುದು ಸಹಜ. ನಾನು, ಆ್ಯಪಲ್‌ ಸಂಸ್ಥೆಯ ಸಿಐಓ ಹುದ್ದೆಗೆ ಸಹೋದ್ಯೋಗಿ ಟಿಮ್‌ ಕುಕ್‌ ಅವರನ್ನು ಬಲವಾಗಿ ಶಿಫಾರಸ್ಸು ಮಾಡಲು ಬಯಸುತ್ತೇನೆ.

ಸಂಸ್ಥೆಯ ಭವಿಷ್ಯದ ದಿನಗಳು ಇನ್ನಷ್ಟು ಉಜ್ವಲವಾಗಿವೆ ಎಂದು ನಾನು ನಂಬಿದ್ದೇನೆ. ಅದನ್ನು ನೋಡಲು ಇಷ್ಟಪಡುತ್ತೇನೆ. ಆ ಯಶಸ್ಸಿನಲ್ಲಿ ನನ್ನದೇ ರೀತಿಯಲ್ಲಿ, ನನ್ನ ಕೈಲಾದಷ್ಟು ಕಾಣಿಕೆ ಸಲ್ಲಿಸುವ ಇರಾದೆ ಇದೆ.

ಸಂಸ್ಥೆ ಜೊತೆಗಿನ ಈ ಪಯಣದಲ್ಲಿ ಹಲವು ಆಪ್ತ ಸ್ನೇಹಿತರು ನನಗೆ ಸಿಕ್ಕಿದ್ದಾರೆ. ಇಷ್ಟು ವರ್ಷಗಳ ಕಾಲ ನಿಮ್ಮೊಡನೆ ಕೆಲಸ ಮಾಡಲು ಸಾಧ್ಯವಾಗಿದ್ದರೆ ಅದಕ್ಕೆ ನೀವೇ ಕಾರಣಕರ್ತರು. ನಿಮಗೆಲ್ಲರಿಗೂ ಧನ್ಯವಾದಗಳು.

ನಿಮ್ಮವ

ಸ್ಟೀವ್‌ ಜಾಬ್ಸ್

ಪಾಠ ಮತ್ತು ಆಟಕ್ಕಾಗಿ
ಮೈಕ್ರೋಸಾಫ್ಟ್ ಸಂಸ್ಥೆಯನ್ನು ಬಿಲ್‌ ಗೇಟ್ಸ್‌ ಜೊತೆ ಸೇರಿ ಹುಟ್ಟುಹಾಕಿದ, ಗೇಟ್ಸ್‌ ನಂತರ ಸಿಇಓ ಪದವಿ ವಹಿಸಿಕೊಂಡ, ಒಟ್ಟು 34 ವರ್ಷಗಳನ್ನು ಅಲ್ಲಿ ಸವೆಸಿದ ಸ್ಟೀವ್‌ ಬಾಲ್ಮರ್‌ ಬಾಸ್ಕೆಟ್‌ಬಾಲ್‌ ತಂಡವನ್ನು ಪೋಷಿಸಲು ಮತ್ತು ಶಿಕ್ಷಕನಾಗಲು ಹೊರಟಾಗ ಬರೆದ ವಿದಾಯ ಪತ್ರ ಇಲ್ಲಿದೆ… ಇದು ಸಂಸ್ಥೆಯ ಹಾಲಿ ಸಿಇಓ, ಭಾರತೀಯ ಸತ್ಯ ನಾದೆಲ್ಲಾ ಅವರಿಗೆ ಬರೆದದ್ದು…

ಡಿಯರ್‌ ಸತ್ಯ,
ನನ್ನ ಬದುಕಿನ ಪುಟಗಳನ್ನು ತಿರುವಿ ನೋಡುವ ಸಮಯ ಸನ್ನಿಹಿತವಾಗಿದೆ.. ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿರುವ ನನ್ನ ಶೇರುಗಳು, ಸಂಸ್ಥೆ ಜೊತೆಗಿನ ಭಾಗಿದಾರಿಕೆ ಮತ್ತಿತರ ಸಂಗತಿಗಳತ್ತ ನಾನು ಗಮನ ಹರಿಸಬೇಕಾಗಿ ಬಂದಿದೆ. ಈ ಕುರಿತಾಗಿ ನಾನು ನಿರ್ಧಾರವೊಂದಕ್ಕೆ ಬಂದಿದ್ದೇನೆ. ಅದನ್ನು ನಿನ್ನಲ್ಲಿ ಹಂಚಿಕೊಳ್ಳಬಯಸುತ್ತೇನೆ. ಆಗಸ್ಟ್‌ ತಿಂಗಳು ಕಂಪನಿಗೆ ಬಹಳ ತುರ್ತು ಸಮಯ. ಆಡಳಿತ ಮಂಡಳಿ ಬಹಳ ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವ ತಿಂಗಳಿದು. ನಾನು ಹೇಳಬೇಕೆಂದಿರುವ ವಿಚಾರವನ್ನು ಹಂಚಿಕೊಳ್ಳಲು ಇದೇ ಪ್ರಶಸ್ತವಾದ ಸಮಯ ಎನ್ನುವುದು ನನ್ನ ಭಾವನೆ.

ಮೈಕ್ರೋಸಾಫ್ಟ್, ನನ್ನ ಜೀವನದ ಅತಿ ಮುಖ್ಯವಾದ ಅಂಗ. ಸಂಸ್ಥೆಯ ಮುಂದಿನ ದಿನಗಳ ಬಗ್ಗೆ ಬಹಳ ಆಶಾವಾದವಿದೆ. ಸವಾಲುಗಳಿಲ್ಲವೆಂದು ನಾನು ಹೇಳುತ್ತಿಲ್ಲ, ಆದರೆ ಯಶ ಪಡೆಯಲು ಅದಕ್ಕಿಂತ ಹೆಚ್ಚು ಅವಕಾಶಗಳಿವೆ. ನಮ್ಮಷ್ಟು ಪರಿಣಾಮಕಾರಿಯಾಗಿ ಸಾಫ್ಟ್ವೇರ್‌ ಕೌಶಲ್ಯ, ಕ್ಲೌಡ್‌ ಕಂಪ್ಯೂಟಿಂಗ್‌, ಹಾರ್ಡ್‌ವೇರ್‌ ಕೌಶಲ್ಯಗಳಂಥ ಹಲವು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಸಂಸ್ಥೆ ಜಗತ್ತಿನಲ್ಲಿ ಇನ್ನೊಂದಿಲ್ಲ. ಪ್ರತಿಭಾಶಾಲಿಗಳನ್ನು ಬರಸೆಳೆಯುವಲ್ಲಿ ನಾವೆಂದೂ ಹಿಂದೆ ಬಿದ್ದಿಲ್ಲ. ಭವಿಷ್ಯದ ಯಾವುದೇ ಯೋಜನೆಗಳಿಗೆ ಬೇಕಾದಷ್ಟು ಸಂಪನ್ಮೂಲ ನಮ್ಮಲ್ಲಿ ದಂಡಿಯಾಗಿದೆ. ಹೀಗಾಗಿ ಎಂಥ ಸವಾಲುಗಳನ್ನೂ ನಾವು ಎದುರಿಸಬಲ್ಲೆವು.

ಮೈಕ್ರೋಸಾಫ್ಟ್ನಲ್ಲಿದ್ದಷ್ಟು ಸಮಯ ನಿವೃತ್ತಿ ದಿನಗಳ ಕುರಿತು ನಾನು ಯೋಚಿಸಿರಲಿಲ್ಲ. ಆದರೆ ಈಗ ತಲೆಯಲ್ಲಿ ಒಂದೆರಡು ಯೋಜನೆಗಳಿವೆ. ಒಂದು, ಶಿಕ್ಷಕನಾಗಿ ಪಾಠ ಮಾಡುವುದು. ಎರಡನೆಯದು, ಬಹಳ ಮುಖ್ಯವಾದುದು ನನ್ನ ಮಾಲೀಕತ್ವದ ಎನ್‌ಬಿಎ ಬಾಸ್ಕೆಟ್‌ಬಾಲ್‌ ತಂಡದ ಕಡೆ ಗಮನ ಹರಿಸುವುದು. ನಿನಗೆ ಗೊತ್ತಿದ್ದಂತೆ, ಎನ್‌ಬಿಎ ಬಾಸ್ಕೆಟ್‌ಬಾಲ್‌ ಪಂದ್ಯಾವಳಿಯ ಹೊಸ ಸೀಸನ್‌ ಇನ್ನೇನು ಶುರುವಾಗಲಿದೆ. ಅದಕ್ಕೆ ತಯಾರಾಗುತ್ತಿದ್ದೇನೆ. ಯಾವುದೇ ರೀತಿಯಲ್ಲಿ ಸಂಸ್ಥೆಗೆ ಅಗತ್ಯ ಬಿದ್ದಲ್ಲಿ ನನ್ನ ಸಲಹೆ- ಸಹಕಾರ ಸದಾ ಇರುತ್ತದೆ.

ಆಲ್‌ ದ ಬೆಸ್ಟ್‌
ಸ್ಟೀವ್‌ ಬಾಲ್ಮರ್‌

ಸವಿ ಸವಿ ನೆನಪು
ತನಗೆ ಸಿಹಿ ನೆನಪುಗಳನ್ನೇ ಕೊಟ್ಟ ಸಂಸ್ಥೆಗೆ ವಿದಾಯ ಹೇಳುವಾಗ ನೀಲ್‌ ಬೆರೆಟ್‌ ಎಂಬ ಆಸಾಮಿ ಸಿಹಿ ಸಿಹಿ ಕೇಕಿನಲ್ಲಿ ವಿದಾಯ ಪತ್ರವನ್ನು ಬರೆದ…

ಪ್ರೀತಿಯ ಬೋವರ್,
ಕಳೆದ ಮೂರು ವರ್ಷಗಳಿಂದ ನಿಮ್ಮ ಜೊತೆ ಹಂಟರ್ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಅವಧಿ ಬಹಳ ಆನಂದದಾಯಕವಾಗಿತ್ತು ಎಂದು ಹೇಳಲು ನಾನು ಇಚ್ಛಿಸುತ್ತೇನೆ. ಈಗ ನಾನು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದುಕೊಂಡಿದ್ದೇನೆ. ಜೊತೆಗೆ ಅನಾರೋಗ್ಯ ಎದುರಾಗಿರುವುದರಿಂದ ದೀರ್ಘ‌ ಕಾಲ ಚಿಕಿತ್ಸೆ ಪಡೆದುಕೊಳ್ಳಬೇಕೆಂದುಕೊಂಡಿದ್ದೇನೆ. ಒಂದು ಉತ್ತಮ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ನನಗಿಲ್ಲಿ ಸಿಕ್ಕಿದೆ. ನಿಮ್ಮ ನಾಳೆಗಳು ಉಜ್ವಲವಾಗಿರಲಿವೆ ಎಂಬ ನಂಬಿಕೆ ನನಗಿದೆ.

ನನಗೆ ಸಂಸ್ಥೆ ನೀಡಿದ ಮಧುರ ಸಿಹಿ ನೆನಪುಗಳ ದ್ಯೋತಕವಾಗಿ ಈ ಕೇಕನ್ನು ನೀಡುತ್ತಿದ್ದೇನೆ. ಇದನ್ನೇ ರಾಜಿನಾಮೆಯೆಂದು ಪರಿಗಣಿಸಿ, ದಯವಿಟ್ಟು ನನ್ನನ್ನು ನಗುತ್ತಾ ಬೀಳ್ಕೊಡಿ.

ಇತೀ ತಮ್ಮ ವಿಶ್ವಾಸಿ
ನೀಲ್‌ ಬೆರೆಟ್‌

– ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.