ಗ್ರಾಫಿಕ್ಸ್‌ ಗಮ್ಮತ್ತು! 

Team Udayavani, Dec 11, 2018, 11:55 AM IST

graphics.jpg

ಇದು ಬಣ್ಣಗಳಿಂದ ಝಗಮಗಿಸುವ ಲೋಕ. ಮನೆಯೊಳಗೂ, ಮನೆಯಿಂದ ಹೊರಕ್ಕೆ ಕಾಲಿಟ್ಟರೂ, ಮಾಲ್‌, ಸಿನಿಮಾ ಮಂದಿರ, ಅಂಗಡಿ ಮಳಿಗೆ, ರಸ್ತೆ, ಬಸ್‌ ನಿಲ್ದಾಣ ಎಲ್ಲಿಗೆ ಕಾಲಿಟ್ಟರೂ ಕಣ್ಣಿಗೆ ರಾಚುವುದು ಬಣ್ಣ ವಿನ್ಯಾಸಗಳು. ಜಾಹಿರಾತುಗಳು, ಸೂಚನಾ ಫ‌ಲಕಗಳು, ಪುಸ್ತಕ ಮುಖಪುಟಗಳು, ಪತ್ರಿಕೆಗಳು, ಬ್ರೋಚರ್‌ಗಳು, ಪೋಸ್ಟರ್‌ಗಳು ಇವೆಲ್ಲದರ ಹಿಂದಿರುವುದು ಗ್ರಾಫಿಕ್‌ ಡಿಸೈನರ್‌. 

ಗ್ರಾಫಿಕ್‌ ಡಿಸೈನರ್‌ಗೆನು ಕೆಲಸ?: ಯಾವುದೇ ಉತ್ಪನ್ನವಾದರೂ, ಲೋಗೋ, ಪೋಸ್ಟರ್‌, ಜಾಹಿರಾತು ಫ‌ಲಕವಾದರೂ ಮಾರುಕಟ್ಟೆಗೆ ಬಿಡುವ ಮುನ್ನ ಅತ್ಯಾಕರ್ಷಕವಾಗಿ ಡಿಸೈನ್‌ ಮಾಡಲಾಗುತ್ತದೆ. ಬ್ರ್ಯಾಂಡಿಂಗ್‌, ಮಾರ್ಕೆಟಿಂಗ್‌ ತಂತ್ರಗಳನ್ನು ಅನುಸರಿಸಿ ಡಿಸೈನ್‌ ರೂಪಿಸುವ ತಂತ್ರಜ್ಞನೇ ಗ್ರಾಫಿಕ್‌ ಡಿಸೈನರ್‌. ಆನ್‌ಲೈನ್‌ ಪ್ರಪಂಚದಲ್ಲೂ ಗ್ರಾಫಿಕ್‌ ಡಿಸೈನರ್‌ನ ಪ್ರಭಾವ ಗಾಢವಾಗಿದೆ.

ಫೇಸ್‌ಬುಕ್‌ನ ಬಣ್ಣ ಯಾವುದೆಂದು ಕೇಳಿದರೆ, “ನೀಲಿ’ ಎಂದು ಮಗು ಕೂಡಾ ಹೇಳುತ್ತದೆ. ಜಾಲತಾಣಗಳ ಬಣ್ಣ ಸಂಯೋಜನೆ, ಐಕಾನ್‌, ಸೆಲಿಗಳ ಹಿಂದಿರುವುದು ಕೂಡಾ ಗ್ರಾಫಿಕ್‌ ಡಿಸೈನರ್‌. ಅವನನ್ನು ಚಿತ್ರ, ಫೋಟೋ, ಅಕ್ಷರ, ಆಕಾರ ಮತ್ತು ಗ್ರಾಫಿಕ್‌ಗಳನ್ನು ಬಳಸಿ ಯಶಸ್ವಿಯಾಗಿ ಸಂವಹನ ನಡೆಸಬಲ್ಲ ಚತುರ ಕಲಾವಿದ ಎನ್ನಬಹುದು. ಗ್ರಾಫಿಕ್‌ ಡಿಸೈನರ್‌ ಕುಂಚ, ಕ್ಯಾನ್ವಾಸ್‌ ಜೊತೆ ಆಟವಾಡುವವನಲ್ಲ. ಈತ ಕಂಪ್ಯೂಟರ್‌ ಪರದೆಯೆದುರು ಕುಳಿತು ಕೆಲಸ ಮಾಡುವಾತ.

ಗ್ರಾಹಕನ ನಾಡಿಮಿಡಿತ: ಗ್ರಾಫಿಕ್‌ ಡಿಸೈನರ್‌ನ ಕೆಲಸ ಮೀಟಿಂಗ್‌ನಿಂದ ಶುರುವಾಗುತ್ತದೆ. ಗ್ರಾಹಕನಿಗೆ ಏನು ಬೇಕೆನ್ನುವುದನ್ನು ಮೊದಲು ಆತ ಗ್ರಹಿಸುತ್ತಾನೆ. ಅದು ಬಹಳ ಮುಖ್ಯವಾದ ಕೆಲಸ. ತನಗೇನು ಬೇಕು ಎನ್ನುವುದಕ್ಕಿಂತಲೂ ಗ್ರಾಹಕ ಏನು ಬಯಸುತ್ತಿದ್ದಾನೆ ಎನ್ನುವುದನ್ನು ಗೊಂದಲಗಳಿಲ್ಲದಂತೆ ಸ್ಪಷ್ಟ ಪಡಿಸಿಕೊಳ್ಳಬೇಕು. ಗ್ರಾಹಕನ ಅಮೂರ್ತ ಭಾವನೆಗಳಿಗೆ ಒಂದು ರೂಪ ಕೊಡಲು ಪ್ರಯತ್ನಿಸಬೇಕು. ಚಿತ್ರಕ್ಕೆ ಸೂಕ್ತವಾದ ಅಕ್ಷರ ಶೈಲಿ (ಫಾಂಟ್‌), ಬಣ್ಣ, ಡಿಸೈನ್‌ ಲೇಔಟ್‌ ಬಳಕೆ ಆತನದೇ ಕೈಚಳಕ. 

ಗ್ರಾಫಿಕ್‌ ಡಿಸೈನರ್‌ನ ವಿದ್ಯಾರ್ಹತೆ: ವಿದ್ಯಾರ್ಹತೆಗಿಂತ ಮುಖ್ಯವಾಗಿ ಸೃಜನಶೀಲ ಮನಸ್ಸು ಮೊದಲ ಅರ್ಹತೆ. ಇಂದು ಅನೇಕ ಖಾಸಗಿ ಡಿಸೈನ್‌ ಸ್ಕೂಲ್‌ಗ‌ಳು, ಆನ್‌ಲೈನ್‌ ಕೋರ್ಸ್‌ಗಳು, ಸರ್ಕಾರಿ ಕಲಾ ಶಾಲೆಗಳಲ್ಲಿ ಗ್ರಾಫಿಕ್‌ ಡಿಸೈನಿಂಗ್‌ ತರಬೇತಿ ಪಡೆಯಬಹುದು. ಇದಲ್ಲದೆ ವಿಶುವಲ್‌ ಆರ್ಟ್ಸ್, 2ಡಿ, 3ಡಿ, ಡಿಜಿಟಲ್‌ ಫೋಟೋಗ್ರಫಿ ಮುಂತಾದವನ್ನೂ ಈ ತರಗತಿಗಳಲ್ಲಿ ಕಲಿಯಬಹುದು.

ಗ್ರಾಫಿಕ್‌ ಡಿಸೈನರ್‌ಗೆ ಹತ್ತು ಹಲವು ಸಾಫ್ಟ್ವೇರ್‌ಗಳ ಪರಿಣತಿ ಬೇಕಾಗುತ್ತದೆ. ಅಡೋಬ್‌ ಇಲ್ಲಸ್ಟ್ರೇಟರ್‌, ಫೋಟೋಶಾಪ್‌, ಕೋರೆಲ್‌ ಡ್ರಾ, ಕ್ವಾರ್ಕ್‌ ಎಕ್ಸ್‌ಪ್ರೆಸ್‌, ಇನ್‌ಡಿಸೈನ್‌ ಮೊದಲಾದ ಡಿಸೈನ್‌ ಟೂಲ್‌ಗ‌ಳ ಪರಿಚಯ ಇರಬೇಕಾಗುತ್ತದೆ. ಕಾಲೇಜನ್ನು ಆಯ್ಕೆ ಮಾಡುವಾಗ, ಇಂಟರ್ನ್ಶಿಪ್‌ ದೊರೆಯುವಂತಹ ಕಾಲೇಜುಗಳನ್ನು ಸೇರುವುದು ಉತ್ತಮ. 

ಎಲ್ಲೆಲ್ಲಾ ಕೆಲಸ ಗಿಟ್ಟಿಸಬಹುದು?
-ಜಾಹೀರಾತು ವಿಭಾಗ 
-ಸಾರ್ವಜನಿಕ ಸಂಪರ್ಕ ವಿಭಾಗ(ಪಬ್ಲಿಕ್‌ ರಿಲೇಷನ್ಸ್‌ )
-ಪುಸ್ತಕ ಮುದ್ರಣ 
-ದಿನಪತ್ರಿಕೆ, ವಾರಪತ್ರಿಕೆಗಳು
-ಆನ್‌ಲೈನ್‌ ಸಂಸ್ಥೆಗಳು
-ಸಿನಿಮಾ ಕಲಾ ನಿರ್ದೇಶಕ
-ಇಂಡಸ್ಟ್ರಿಯಲ್‌ ಡಿಸೈನರ್‌
-ಆರ್ಕಿಟೆಕ್ಟ್
-ಮಲ್ಟಿಮೀಡಿಯಾ ಡಿಸೈನರ್‌

* ರಘು. ವಿ., ಪ್ರಾಂಶುಪಾಲರು

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.