ಹ್ಯಾಪಿ ಬರ್ತ್‌ ಡೇ ಟು ಯೂ…


Team Udayavani, May 15, 2018, 1:58 PM IST

n-8.jpg

ಇಂದು ನಿನ್ನ ಬರ್ತ್‌ಡೇ. ನೀನ್‌ ನಿನ್‌ ಬಗ್ಗೆ ಕಟ್ಕೊಂಡಿರೋ ಎಲ್ಲಾ ಕನಸೂ ನನಸಾಗ್ಲಿ. ನಿನ್‌ ಆರೋಗ್ಯ ಚೆನ್ನಾಗಿರ್ಲಿ. ನನ್‌ ಸಾಂಗತ್ಯದ ಬಯಕೆ ನಿನ್ನಲ್ಲಿ ನೂರ್ಮಡಿಯಾಗ್ಲಿ ಅಂತ ಬಯಸ್ತೀನಿ.

ಬದುಕಲ್ಲಿ ಕೆಲವರ ಆಗಮನವೇ ವಿಚಿತ್ರ ಅಲ್ವಾ? ಎಲ್ಲೋ ಹುಟ್ಟಿ ಎಲ್ಲೋ ಬೆಳೆವ ಎರಡು ಜೀವಗಳು ಒಂದನ್ನೊಂದು ವಿಪರೀತ ಅನ್ನೋವಷ್ಟು ಹಚ್ಕೊಂಡು ಎದೆಯುಸಿರ ಬಡಿತಾನೂ ತಿಳ್ಕೊಳ್ಳೋ ಮಟ್ಟಕ್ಕೆ ಹತ್ರ ಆಗೋದು ಇವತ್ತಿಗೂ ಆಶ್ಚರ್ಯಾನೇ. ನೆಪವಲ್ಲದ ನೆಪಕ್ಕೆ ಶುರು ಮಾಡಿದ ಮಾತು ಆಮೇಲೆ ನಗು, ಖುಷಿ, ದುಃಖ, ಅಳು, ಬೇಸರ, ಕೋಪ ಎಲ್ಲಾನೂ ದಾಟಿ ಸ್ನೇಹದ ಬೇಲೀನಾ ಗಟ್ಟಿ ಮಾಡಿದ್ದು ಸುಳ್ಳಲ್ಲ. ನಿಜ ಹೇಳ್ಬೇಕಂದ್ರೆ, ನಿಂಗೆ ಮೂಗ್‌ ತುದೀಲಿರೋ ಕೋಪಾನೇ ನಮ್ಮಿಬ್ರ ನಡುವಿನ ಗ್ಯಾಪನ್ನ ಕಮ್ಮಿ ಮಾಡಿದ್ದು. ಮೊದ್ಲಿಗೆ ನಯನಾಜೂಕಲ್ಲಿ ಆಡ್ತಿದ್ದ ಮಾತು ನಿನ್ನ ಹುಸಿಕೋಪಕ್ಕೆ ನಾ ಬೇಡುತ್ತಿದ್ದ ಕ್ಷಮೆ ನಿಮಿತ್ತಾನೇ ಸಲುಗೆ ಬೆಳೆಸ್ಕೊಂಡ್ವಿ.

“ಆ ನಿನ್ನ ಹುಸಿಮುನಿಸು ಕ್ಷಣಮಾತ್ರಕ್ಕೆ ಸೀಮಿತವಾಗುವುದೇ ಆದರೆ, ಅದಕ್ಕಿಂತ ಬಲುಸೊಗಸು ಬೇರೊಂದಿಲ್ಲ’ ಅಂತ ನಾನ್‌ ಹೇಳ್ತಿದ್ದಿದ್ದು ಇದ್ಕೆàನೇ. ಪ್ರತಿಸಲ ಕೋಪಿಸ್ಕೊಂಡಾಗ್ಲೂ “ನಂಗೆ ನೀನ್‌ ಬೇಡ ಹೋಗು’ ಅನ್ನೋ ಒರಟು ಮಾತಲ್ಲಿ “ನೀನಿಲೆªà ನಂಗೇನೂ ಇಲ್ಲ. ಪ್ಲೀಸ್‌, ನನ್ನ ಬಿಟ್‌ ಹೋಗ್ಬೇಡ್ವೋ’ ಅನ್ನೋ ಮೃದುವಾದ ನಿವೇದನೆಯೂ ನಿನ್ನ ಮಾತಲ್ಲಿ ಇರಿ¤ತ್ತು.

 ನಿಜ ಹೇಳ್ಬೇಕಂದ್ರೆ, ನಿನ್ಮೆಲೆ ಮನಸಾಗಿದ್ದು ಆ ಸ್ಟೇಜಿನ ಮೇಲೆ ನಿನ್ನ ಡ್ಯಾನ್ಸ್‌ ನೋಡಿದ್‌ ದಿನಾನೇ. ಹಾnಂ, ಡ್ಯಾನ್ಸ್‌ ಅನ್ನೋ ದ್ಕಿಂತ ನಿನ್ನ ಮುಖದ ಹಾವಭಾವ ನೋಡೀನೇ ಅನ್ನಬಹುದು. ಹಾಗಂತ ನಾ ಬರೀ ನಿನ್ನ ಸೌಂದರ್ಯೋಪಾಸಕ ಮಾತ್ರ ಅಲ್ಲ. ನಿನ್ನ ಮುದ್ದಾದ ಅಕ್ಷರ, ನಿನ್‌ ಡ್ಯಾನ್ಸು, ನಿನ್‌ ಪೇಂಟಿಂಗ್ಸ್‌, ನಿನ್‌ ತುಂಟಾಟ, ನಿನ್‌ ಮೆಚೂರಿಟಿ, ನಿನ್‌ ವಿದ್ಯೆ ಎಲ್ಲಾನೂ ಕಂಡು ನಯವಾಗಿ ಅಸೂಯೆಪಡ್ತೀನಿ. ಆ ಅಸೂಯೇಲೂ ಇದೆಲ್ಲಾ ಇನ್ಮುಂದೆ ನಂದೇ ಅಲ್ವಾ ಅನ್ನಿಸಿ ಸಖತ್‌ ಖುಷಿ ಆಗುತ್ತೆ.

ಸ್ನೇಹ ಪ್ರೀತಿಯಾಗಿ ತಿರುಗಿದ್ಮೇಲೆ ಒಟ್ಟಿಗೆ ಕಳೆದ ಕ್ಷಣಗಳು ಲೆಕ್ಕಕ್ಕೆ ಸಿಗ್ದೆ ಇರೋವಷ್ಟಾದ್ರೂ ತಿರುಗಿ ನೋಡಿದ್ರೆ ಸೆಕೆಂಡಿಗೂ ಚಿಕ್ಕದೇನೋ ಅನ್ಸಿಬಿಡುತ್ತೆ. ನೀ ಕೈಗೆ ಕಟ್ಟಿದ ದಾರ, ನಿನ್ನ ಮುದ್ದಾದ ಅಕ್ಷರದಲ್ಲಿನ ಪ್ರೇಮಪತ್ರ, ನಿನ್ನ ಕೈಯ್ನಾರೆ ಅದ್ಭುತವಾಗಿ ಮೂಡಿಬಂದ ಚಿತ್ರಗಳು ನನ್ನೊಂದಿಗೆ ನನ್ನುಸಿರನ್ನೂ ಕದೀತಾ ನನ್‌ ಜೊತೇನೇ ಬದುಕ್ತವೆ. ಈ ನಡುವೆ ತುಂಬಾ ಸಿಟ್ಟು ಮಾಡ್ಕೊಳ್ತಾ ಇದ್ದೀನಿ. ನಿನ್ನ ಕಳ್ಕೊಳ್ತೀನೇನೋ ಅನ್ನೋ ಭೀತಿಯೇ ಅದಕ್ಕೆಲ್ಲಾ ಕಾರಣ ಇರಬಹುದು ಅನ್ಸುತ್ತೆ. ನಿಂಗೆ ಏನೇ ಕೇಳ್ಬೇಕು, ಏನೋ ಹೇಳ್ಬೇಕು ಅನ್ಸಿದ್ರೂ ಮೊದು ನೆನಪಾಗೋ ವ್ಯಕ್ತಿ ನಾನಾಗ್ಬೇಕು ಅನ್ನೋ ಆಸೆ ನನ್ನದು. ಅಕಸ್ಮಾತ್‌ ನೀನು ನನ್ನಿಂದ ದೂರ ಆದ್ರೆ ನಾನ್‌ ಅದ್ಹೇಗೆ ಖುಷಿಯಿಂದ ಇರಿನಿ? ಯೋಚೆ° ಮಾಡಿದ್ದೀಯಾ ಇಲ್ಲಿ ನನ್‌ ಪರಿಸ್ಥಿತಿ ಹೇಗಿರುತ್ತೆ ಅಂತ? 

ಇಂದು ನಿನ್ನ ಬರ್ತ್‌ಡೇ. ನೀನ್‌ ನಿನ್‌ ಬಗ್ಗೆ ಕಟ್ಕೊಂಡಿರೋ ಎಲ್ಲಾ ಕನಸೂ ನನಸಾಗ್ಲಿ. ನಿನ್‌ ಆರೋಗ್ಯ ಚೆನ್ನಾಗಿರ್ಲಿ. ನನ್‌ ಸಾಂಗತ್ಯದ ಬಯಕೆ ನಿನ್ನಲ್ಲಿ ನೂರ್ಮಡಿಯಾಗ್ಲಿ ಅಂತ ಬಯಸ್ತೀನಿ. ಹಾಗೇ ನಿಮ್ಮಪ್ಪ ಅಮ್ಮಂಗೆ ಥ್ಯಾಂಕ್ಸ್‌ ಹೇಳು, ನಂಗೆ ನಿನ್ನಂಥ ಕಿನ್ನರಿನ ಸೃಷ್ಟಿ ಮಾಡಿದ್ಕೆ…
ಐ ವಿಷ್‌ ಯೂ ಹ್ಯಾಪಿ ಬರ್ತ್‌ಡೇ … ನಿನಗಾಗಿ ಸರ್‌ಪ್ರçಸ್‌ಗಳು ಕಾಯ್ತಾ ಇವೆ.. ಬೇಗ ಓಡೋಡಿ ಬಾ..

ಅರ್ಜುನ್‌ ಶೆಣೈ

ಟಾಪ್ ನ್ಯೂಸ್

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.