ಕಣ್ರೆಪ್ಪೆಯ ಮೇಲೆ ಕವಿತೆ ಬರೆಯಬೇಕು!


Team Udayavani, Oct 9, 2018, 6:00 AM IST

shutterstock1033169995.jpg

ನಿನಗೆ ವಾರಕ್ಕೊಂದು ಪತ್ರ ಬರೆಯದಿದ್ದರೆ ಎದೆಯಲ್ಲೊಂದು ನಿರಂತರ ಚಡಪಡಿಕೆ ಶುರುವಾಗಿಬಿಡುತ್ತೆ. ಕಾಡುವ ಹುಡುಗ ನೀನು. ಮತ್ತೆ ಮತ್ತೆ ಬೇಕೆನಿಸುವ ಬಯಕೆಯ ಪ್ರೀತಿ ನಿನ್ನದು. ಮಾಸದ ಹೆಜ್ಜೆಯ ಅನುಭೂತಿ ನಿನ್ನೊಲವು. ನಿನ್ನ ಕಣ್ರೆಪ್ಪೆಯ ಮೇಲೆ ನನ್ನ ಉಸಿರಿನಿಂದ ಒಂದು ಪ್ರೇಮ ಕಾವ್ಯ ಬರೆಯಬೇಕೆನಿಸುತ್ತಿದೆ. ಬದುಕನ್ನು ಈಗೀಗ ಸಂಭ್ರಮಿಸುತ್ತಿದ್ದೇನೆ. ಖುಷಿಯಿಂದ ಇದ್ದೇನೆ ಎನ್ನುವುದೇ ಒಂದು ಸಂತಸ ಕಣೋ. 

ಪ್ರೀತಿಯ ಅ ಆ ಇ ಈ ಕಲಿಸಿದ ನಿರತ ಪ್ರೇಮಿಯೂ ನೀನೇ, ಪ್ರೇಮದ ಗುರುವು ನೀನೇ. ಪ್ರೇಮ ಭಾಷೆಯನ್ನು, ಬದುಕಿನ ಭಾಷೆಯ ಅರ್ಥ, ಭಾವಾಂಶಗಳನ್ನು ಎದೆಗೆ ಬಿತ್ತಿರುವೆ. ಇಲ್ಲಿ ಬಂದೊಮ್ಮೆ ನನ್ನ ಕಣ್ಗಳಲ್ಲಿ ಇಣುಕಿ ನೋಡು, ನನ್ನ ಕನಸುಗಳಿಗೆ ರೆಕ್ಕೆ ಬಂದಿದೆ. ಆ ರೆಕ್ಕೆಗಳಿಗೆ ಶಕ್ತಿ ಮತ್ತು ಬಣ್ಣ ತುಂಬುತ್ತಿರುವವನು ನೀನು. ಬದುಕು ಅಲೆಮಾರಿಯಾಗಿದ್ದರೆ ಅದೆಷ್ಟು ಚೆಂದ ಅಲ್ವ? ಅಲ್ಲಿ ಹೀರಲಾಗದಷ್ಟು ಅನುಭವಗಳು ದಕ್ಕುತ್ತವೆ. ಅಲ್ಲಿ ತಂಗಾಳಿ ಜೋರು ಮಳೆಯಾಗಿ ಕಾಡುವ ಅಬ್ಬರವುಂಟು. ಬೆಂಗಾಡಿನಲ್ಲಿ ದಿಕ್ಕುದೆಸೆಯಿಲ್ಲದೆ ಸುತ್ತುವಾಗಲೇ ಆಕಸ್ಮಿಕವಾಗಿ ಪತ್ತೆಯಾಗಿ ಬಾಯಾರಿಕೆ ತಣಿಸುವ ತಿಳಿನೀರ ಕೊಳವುಂಟು. ಬದುಕೆಂದರೆ ನೀವು ತಿಳಿದಿರುವುದು ಮಾತ್ರವಲ್ಲ ಎಂದು ಎಚ್ಚರಿಸುವ ಗಿಡಮರ ಬಳ್ಳಿಗಳ ಹಸಿರು ಸಾಮ್ರಾಜ್ಯವುಂಟು…

ಎಲ ಎಲಾ, ಇದೇನೋ ಹೊಸದಾಗಿ ಪುರಾಣ ಹೇಳ್ತಿದಾಳಲ್ಲ, ಇದನ್ನೆಲ್ಲ ಎಲ್ಲಿ, ಯಾವಾಗ ನೋಡಿದ್ಲು  ಇವಳು ಅಂತ ಯೋಚಿಸ್ತಿದೀಯ ದೊರೆ? ಅಂದಹಾಗೆ ನಿನಗೆ ಹೇಳದೆಯೇ ಬಡವರ ಸಾವಿರ ಚಕ್ರಗಳ ಬಂಡಿಯಲ್ಲಿ ಇಡೀ ರಾತ್ರಿ-ಹಗಲು ಪ್ರಯಾಣ ಬೆಳೆಸಿದ್ದೆ. ಅಲ್ಲಿ ದಕ್ಕಿದ ಸುಮಧುರ ಭಾವಗಳಿವು. ಅವತ್ತು ನನ್ನೊಂದಿಗೆ ನೀನೂ ಇದ್ದಿದ್ರೆ ಇರುಳಿಗೆ ಮತ್ತಷ್ಟು ಮೆರುಗು ಬರುತ್ತಿತ್ತು ನೋಡು. ನಿನ್ನೊಂದಿಗೆ ಇನ್ನಷ್ಟು ಚೆಂದದ ಅಲೆಮಾರಿಯಾಗಿ ಬದುಕಬೇಕು ಅನಿಸುತ್ತಿದೆ. ಬೇಗನೆ ಬಂದು ಸೇರಿಕೊಂಡು ಬಿಡೋ ಹುಡುಗ, ಪರ್ವತದಂಥ ಬದುಕು ಕಟ್ಟಬೇಕಿದೆ.
ಇಂತಿ ನಿನ್ನವಳು
ಪಲ್ಲವಿ

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.