ಇನ್‌ಕಮಿಂಗ್ ಕಾಲ್‌ನಂತೆ ಸುಖ ಸಂತೋಷ ಸದಾ ಇರಲಿ
Team Udayavani, Oct 16, 2018, 6:00 AM IST
ಗೇಮ್ಸ್ ಥರ ನಿನ್ನ ಜೀವನ ಕುತೂಹಲಕಾರಿಯೂ, ಫ್ಲಾಶ್‌ಲೈಟ್‌ನಂತೆ ಬೆಳಗುತ್ತಲೂ ಇರುವಂತೆ ನೋಡಿಕೊಳ್ಳುವೆ. ಯೂ ಟ್ಯೂಬ್‌ನಂತೆ ಸದಾ ನಿನ್ನನ್ನು ಮನರಂಜಿಸುತ್ತಾ, ಸ್ಟಾಪ್ ವಾಚ್‌ನಂತೆ ಪ್ರತಿ ಸೆಕೆಂಡ್‌ಅನ್ನೂ ನಿನಗೆ ಮೀಸಲಿಡುವೆ.
ಪ್ರೀತಿಯ ಹುಡುಗಿ,
ನನ್ನ ಪ್ರೀತಿಯ ಘಂಟೆ, ಮೊಬೈಲ್ ರಿಂಗ್ ಟೋನ್ ರೀತಿ ನಿನ್ನ ಜೀವನದಲ್ಲಿ ಸದಾ ಬಾರಿಸ್ತಾ ಇರಲಿ. ಇನ್‌ಕಮಿಂಗ್ ಕಾಲ… ಹಾಗೆ ಸುಖ-ಸಂತೋಷ ಯಾವತ್ತೂ ಒಳ ಬರ್ತಾ ಇರಲಿ. ಔಟ್‌ಗೊಯಿಂಗ್ ಕಾಲ್ ಹಾಗೆ ನಿನ್ನದುಃಖವೆಲ್ಲಾ ಹೊರಗೆ ಹೋಗಲಿ. ಅನ್‌ಲಿಮಿಟೆಡ್ ಆಫರ್ ರೀತಿ ಖುಷಿ ಯಾವತ್ತೂ ಕಡಿಮೆಯಾಗದಿರಲಿ.
ನನ್ನ ಜೀವನಕ್ಕೆ ನೀನು ಬ್ಯಾಟರಿ ಇದ್ದ ಹಾಗೆ. ಆಗಾಗ ಪ್ರೀತಿಯೆಂಬ ಚಾರ್ಜರ್‌ನಿಂದ ಚಾರ್ಜ್ ಮಾಡ್ತಾ ಇದ್ದರೆ ಬದುಕು ಸುಂದರ. ಕೆಲವೊಮ್ಮೆ ಇಯರ್ ಫೋನ್ ರೀತಿ ನಿನ್ನೊಡನೆ ಗುಟ್ಟಾಗಿ ಮಾತಾಡುವಾಸೆ. ಸ್ಯಾಮ್‌ಸಂಗ್, ರೆಡ್ ಮಿ, ವಿವೋ, ಓಪ್ಪೊ, ಮೈಕ್ರೋಮ್ಯಾಕ್ಸ್… ಹೀಗೆ ಹಲವು ವಿಧಗಳಲ್ಲಿ ನಾನು ನಿನ್ನ ಪ್ರೀತಿಸ್ತೇನೆ. ಫೇಸುºಕ್, ವಾಟ್ಸಾಪ್, ಟ್ವಿಟರ್, ಇನ್‌ಸ್ಟಾಗ್ರಾಂ, ಫೋಟೊ ಗ್ಯಾಲರಿಯಲ್ಲೂ ನಿನ್ನದೇ ನೆನಪುಗಳನ್ನು ಕಾಯ್ದಿರಿಸಿಕೊಂಡಿದ್ದೇನೆ.
ನಿನ್ನ ಪರ್ಸನಲ್ ಗೂಗಲ… ಆಗಿ ಪ್ರತಿಯೊಂದಕ್ಕೂ ಉತ್ತರ ನೀಡೋಕೆ ಪ್ರಯತ್ನಪಡ್ತೀನಿ. ಬ್ಯಾಕ್ ಕವರ್ ಮತ್ತು ಫ್ರಂಟ್ ಕವರ್ ಹಾಗೆ ಯಾವತ್ತೂ ನಿನ್ನ ರಕ್ಷಣೆ ಮಾಡ್ತೀನಿ. ತವರು ಮನೆಯ ಎಲ್ಲ ನೆನಪುಗಳನ್ನು ಡೌನ್‌ಲೋಡ್ ಮಾಡಿಡುವೆ. ನೀನು ಹೇಳುವ ಪ್ರತಿ ಮಾತನ್ನೂ ಸೇವ್ ಮಾಡುತ್ತಾ, ಮೆಮೊರಿ ಕಾರ್ಡ್ ರೀತಿ ಪ್ರತಿ ಕ್ಷಣ ನಿನ್ನೊಂದಿಗೇ ಇರುವೆ. ಕ್ಯಾಮೆರಾದ ಹಾಗೆ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವೆ.
ನಿನ್ನ ಮುಖದ ಸೆಟ್ಟಿಂಗ್ಸ್‌ನಲ್ಲಿ ನಗು ಯಾವತ್ತೂ ಮಾಸುವುದಿಲ್ಲ. ಡ್ಯುಯಲ್ ಸಿಮ್‌ನಂಥ ಎರಡು ಮಕ್ಕಳು, ರೀಚಾರ್ಜ್‌ನಂತೆ ತಿಂಗಳಿಗೊಂದು ಉಡುಗೊರೆ. ಕ್ಯಾಲ್ಕುಲೇಟರ್ ಹಾಗೆ ಪ್ರತಿ ಕಣ್ಣೀರನ್ನೂ ಲೆಕ್ಕ ಹಾಕಿ, ಶಾಶ್ವತವಾಗಿ ಅಳಿಸಿಹಾಕುವೆ. ಮೈ ಫೈಲ್ಸ್ ರೀತಿ ನಿನಗೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ಸೇಫ್ ಆಗಿ ಇಡುವೆ.
ಪ್ಯಾಟರ್ನ್ ಲಾಕ್ ರೀತಿ ನಿನ್ನನ್ನು ನನ್ನ ಹೃದಯದಲ್ಲಿ ಲಾಕ್ ಮಾಡಿಬಿಡುವೆ. ವಾಯ್ಸ ರೆಕಾರ್ಡರ್‌ನ ಹಾಗೆ ನಿನ್ನ ನಗುವನ್ನು ರೆಕಾರ್ಡ್ ಮಾಡುವೆ. ನಿನಗೆ ಬೇಜಾರಾದಾಗ, ರೇಡಿಯೋದ ಹಾಗೆ ಹಾಡು ಹೇಳುವೆ. ನನ್ನೆಲ್ಲ ಖುಷಿಯನ್ನು ಶೇರ್‌ಇಟ್ ಹಾಗೆ ನಿನ್ನೊಂದಿಗೆ ಶೇರ್ ಮಾಡುವೆ.
ಗೇಮ್ಸ್‌ನ ಹಾಗೆ ನಿನ್ನ ಜೀವನ ಕುತೂಹಲಕಾರಿಯೂ, ಫ್ಲಾಶ್‌ಲೈಟ್‌ನಂತೆ ಬೆಳಗುತ್ತಲೂ ಇರುವಂತೆ ನೋಡಿಕೊಳ್ಳುವೆ. ಯೂ ಟ್ಯೂಬ್‌ನಂತೆ ಸದಾ ನಿನ್ನನ್ನು ಮನರಂಜಿಸುತ್ತಾ, ಸ್ಟಾಪ್ ವಾಚ್‌ನಂತೆ ಪ್ರತಿ ಸೆಕೆಂಡ್‌ಅನ್ನೂ ನಿನಗೆ ಮೀಸಲಿಡುವೆ. ಇಂಟರ್ನೆಟ್‌ನಂತೆ ನೀನು ಕೇಳಿದ್ದನ್ನೆಲ್ಲ ಕೊಡುತ್ತಾ, ಹಾಟ್‌ಸ್ಟಾರ್‌ನಲ್ಲಿ ನೆನಪುಗಳನ್ನು ಜೋಪಾನವಾಗಿಟ್ಟು, ಬೇಕೆಂದಾಗ ತೆಗೆದುಕೊಡುವೆ. ಗೂಗಲ್ ಮ್ಯಾಪ್‌ನ ಹಾಗೆ ಜೊತೆಗೆ ನಡೆಯುವೆ. ನಿನ್ನ ಪ್ರತಿ ಗೊಂದಲಗಳಿಗೂ ಡಿಕ್ಸ್ ನರಿಯಾಗಿ ಉತ್ತರ ನೀಡುವೆ.
ಅಕ್ಷತ್ ಮಿರಜಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.