ಬೇಗ ಮನೆ ಬಿಡುತ್ತಿದ್ದ ಆರಾಮಾಗಿ ಮಲಗಿರ್ತಿದ್ದ

Team Udayavani, Jun 5, 2018, 6:00 AM IST

c-7.jpg

ನನಗೆ ಮೂರು ಮಂದಿ ಮಕ್ಕಳು. ಮೂರನೆಯವನು ಚಕ್ಕರ್‌ ಪಾರ್ಟಿ. ಹೊಟ್ಟೆನೋವು, ತಲೆನೋವು ಎಂದೆಲ್ಲಾ ಹಲವು ಬಗೆಯ ಕುಂಟು ನೆಪ ಹೇಳಿ ಸದಾ ಚಕ್ಕರ್‌ ಹೊಡೆಯುತ್ತಿದ್ದ. ಅವನ ಆಟ ನನ್ನ ಬಳಿ ನಡೆಯುತ್ತಿರಲಿಲ್ಲ. ಕೊನೆಗೆ ತನ್ನ ಆಟ ಅಮ್ಮನ ಬಳಿ ನಡೆಯುವುದಿಲ್ಲ ಎಂದು ಅವನಿಗೆ ಅರಿವಾಯಿತು. ಆದರೆ, ಅವನು ಕೂಡ ಸೋಲುವ ಪಾರ್ಟಿ ಅಲ್ಲ. “ಅಮ್ಮ ನಾನು ಬೇಗ ಶಾಲೆಗೆ ಹೋಗಬೇಕು. ನೀನು ತಿಂಡಿ ಮಾಡುವ ತನಕ ಕಾಯಲು ಸಾಧ್ಯವಿಲ್ಲ. ನನಗೆ ರಾತ್ರಿ ಅನ್ನ- ಸಾರು ಹಾಕಿ ಬಿಡು. ಅದನ್ನೇ ತಿಂದು ಶಾಲೆಗೆ ಹೊರಡುತ್ತೇನೆ. ಮನೆಯಲ್ಲಿ ಅಣ್ಣಂದಿರು ಗಲಾಟೆ ಮಾಡುತ್ತಾರೆ. ನಾನು ಶಾಲೆ ಶುರುವಾಗುವ ತನಕ ಅಲ್ಲೇ ಕುಳಿತು ಓದಿಕೊಳುತ್ತೇನೆ’ ಎಂದು ತಿಂಡಿಗೆ ಕಾಯದೆ ಅನ್ನ ಸಾರು ತಿಂದು ಹೆಗಲಿಗೆ ಬ್ಯಾಗು ನೇತುಹಾಕಿಕೊಂಡು ಓಡುತ್ತಿದ್ದ. 

ಆಗಿನ್ನೂ ಅವನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಉಳಿದಿಬ್ಬರು ಮಕ್ಕಳಿಗೂ ಅವನ ಉದಾಹರಣೆ ನೀಡಿ ಬಯ್ತಿದ್ದೆ. ನಿಮಗಿಂತ ಚಿಕ್ಕವನು. ಆದ್ರೆ, ಅವನಿಗೆ ಎಷ್ಟು ಜವಾಬ್ದಾರಿ ಇದೆ… ಅವನನ್ನು ನೋಡಿ ಕಲಿತುಕೊಳ್ಳಿ ಎನ್ನುತ್ತಿದ್ದೆ. ಹೀಗೆ ಸುಮಾರು ದಿನಗಳವರೆಗೆ ನಡೆದಿತ್ತು.

ನಮ್ಮ ಎದುರು ಮನೆಯ ಹಿರಿಯರೊಬ್ಬರು ಕೆಇಬಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲೇ ಕೆಇಬಿ ಕಚೇರಿ ಇತ್ತು. ಒಂದು ದಿನ ಆ ಹಿರಿಯರು ನಮ್ಮ ಮನೆಯ ಹತ್ತಿರ ಬಂದು, “ಮಕ್ಕಳು ಓದಲಿ ಎಂದು ಎಷ್ಟು ಕಷ್ಟಪಡುತ್ತೀಯಾ ನೀನು. ನಿನ್ನ ಮಗ ಮಠಕ್ಕೆ ಮಣ್ಣು ಹಾಕುತ್ತಿದ್ದಾನೆ ನೋಡು ಬಾ ಇಲ್ಲಿ’ ಎಂದು ಕರೆದರು. ನಾನು ಅಲ್ಲಿಗೆ ಹೋಗಿ ನೋಡಿದರೆ, ಜೋಡಿಸಿದ ಕೆಇಬಿ ಕಂಬಗಳ ಮೇಲೆ ಪುಸ್ತಕದ ಚೀಲವನ್ನು ತಲೆಯ ಕೆಳಗೆ ಹಾಕಿಕೊಂಡು ಸುಖವಾಗಿ ಮಲಗಿದ್ದ. ಆ ಕ್ಷಣದಲ್ಲಿ ನನಗೆ ಹೇಗಾಗಿರಬೇಡ? ಅನೇಕ ಬಾರಿ ಅವನು ಹೀಗೆ ಮಾಡುತ್ತಿದ್ದ ಎಂದು ಆ ಹಿರಿಯರಿಂದ ತಿಳಿಯಿತು. ಅಂದಿನಿಂದ ಅವನಿಗೆ ಸ್ವಲ್ಪ ತಿಳಿವಳಿಕೆ ಹೇಳಿ, ದಿನವೂ ನಾನೇ ಶಾಲೆಗೆ ಬಿಟ್ಟು ಬರಲು ಶುರು ಮಾಡಿದೆ. ಇವನ ಮೇಲೆ ಸ್ವಲ್ಪ ಗಮನ ಇಡುವಂತೆ ಶಿಕ್ಷಕರಲ್ಲಿಯೂ ಕೇಳಿಕೊಂಡಿದ್ದೆ. ಇದೆಲ್ಲದರ ಫ‌ಲವಾಗಿ ಮುಂದೆ ಅವನು ಕಷ್ಟ ಪಟ್ಟು ಓದಿ ಈಗ ವಿದೇಶದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾನೆ. 

ರತ್ನ ಅರಕಲಗೂಡು

ಟಾಪ್ ನ್ಯೂಸ್

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.