ಹೆಲ್ತ್ ಟಿಪ್ಸ್ : ನೀವು ಬೆಳ್ಳುಳ್ಳಿ ತಿನ್ನಲ್ವಾ?
Team Udayavani, Oct 6, 2020, 8:08 PM IST
ಅಡುಗೆಗೆ, ಅದರಲ್ಲೂ ಸಾಂಬಾರ್‌ಗೆ ವಿಶಿಷ್ಟ ರುಚಿ ಬರಬೇಕೆಂದರೆ ಒಗ್ಗರಣೆಗೆ ಅಥವಾ ಮಸಾಲೆಗೆ ಬೆಳ್ಳುಳ್ಳಿ ಹಾಕಬೇಕು ಎಂಬ ಮಾತಿದೆ. ಹಸಿಯಾಗಿ ತಿಂದರೆ ಖಾರ ಮತ್ತು ಕಹಿ ರುಚಿಯನ್ನು ಹೊಂದಿರುವ ಬೆಳ್ಳುಳ್ಳಿ, ಖಾರದ ಅಡುಗೆಗೆ ವಿಶಿಷ್ಟ ರುಚಿ ನೀಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈರುಳ್ಳಿಯ ಜೊತೆಜೊತೆಗೇ ನೆನಪಾಗುವ ಬೆಳ್ಳುಳ್ಳಿ, ಅಡುಗೆಯ ರುಚಿಗೆ ವಿಶಿಷ್ಟ ಪರಿಮಳ ನೀಡುವುದು ಮಾತ್ರವಲ್ಲ, ನಮ್ಮ ಆರೋಗ್ಯಕಾಪಾಡುವಲ್ಲಿಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ದಿನವೂ ಜಗಿಯುವುದರಿಂದ ಪಚನಕ್ರಿಯೆ ಚೆನ್ನಾಗಿ ನಡೆದು ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಇದರಿಂದ ಹಸಿವು ಹೆಚ್ಚುತ್ತದೆ. ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಅದರಲ್ಲಿರುವ ಕೆಲವೊಂದು ಖನಿಜಾಂಶ ಮತ್ತು ವಿಟಮಿನ್‌ಗಳು ಯಕೃತ್, ಮೂತ್ರನಾಳ ಮತ್ತು ಕಿಡ್ನಿಯ ಆರೋಗ್ಯ ಕಾಪಾಡಲು ನೆರವಾಗುತ್ತವೆ. ವೈದ್ಯರ ಸಲಹೆ ಪಡೆದು, ಅಲ್ಪ ಪ್ರಮಾಣದ ಬೆಳ್ಳುಳ್ಳಿಯನ್ನು ದಿನವೂ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಾಧ್ಯ ಎಂದೂ ಹೇಳಲಾಗುತ್ತದೆ.
ಆಯುರ್ವೇದ ವೈದ್ಯಪದ್ಧತಿಯಲ್ಲಿ ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಸಾಮಾನ್ಯ ಶೀತವಾದರೆ ಅದನ್ನು ಹೋಗಲಾಡಿಸಲು ಬೆಳ್ಳುಳ್ಳಿಯ ಬಳಕೆಯಾಗುತ್ತದೆ. ಗಂಟಲು ನೋವಿನಂಥ ಸಮಸ್ಯೆ ಜೊತೆಯಾದಾಗ, ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಹಾಕಿ, ರಸಂ ಮಾಡಿಕೊಂಡು ಕುಡಿಯುವ ಜನ ಎಲ್ಲೆಡೆಯೂ ಸಿಗುತ್ತಾರೆ. ಅಡುಗೆಯಲ್ಲಿ ನಿತ್ಯವೂ ಬೆಳ್ಳುಳ್ಳಿ ಬಳಸಿದರೆ, ಕೂದಲಿನ ಹೊಳಪು ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ. ಹುಳುಕಡ್ಡಿಯಂಥ ಚರ್ಮದ ತೊಂದರೆಕಾಣಿಸಿಕೊಂಡರೆ, ಬೆಳ್ಳುಳ್ಳಿಯ ರಸ ಹಚ್ಚಿ ಅದನ್ನು ವಾಸಿ ಮಾಡಿಕೊಳ್ಳುವ ಪದ್ಧತಿ ಈಗಲೂ ಹಳ್ಳಿಗಳಲ್ಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.