ಎಕ್ಸಾಂ ಹಾಲ್‌ನ ಹಾರ್ಟ್‌ಬೀಟ್‌


Team Udayavani, Mar 13, 2018, 10:55 AM IST

exam-1.jpg

ಪ್ರಪಂಚದಲ್ಲಿ ವರ್ಷಗಳಂತೂ ಗೊತ್ತಾಗದೇ ಉರುಳುತ್ತಲೇ ಇರುತ್ತವೆ. ಆದರೆ, ಪರೀಕ್ಷೆಯೆಂಬ ಈ ಮೂರು ಗಂಟೆ ಮಾತ್ರ ಬಿದ್ದುಕೊಂಡೇ ಇರುತ್ತದೆ, ಬೇಗ ಮುಗಿದು ಹೋಗುವುದಿಲ್ಲ. ಕೆಲವರಿರುತ್ತಾರೆ ಬಿಡಿ ಮೂರು ಗಂಟೆಯೂ ಸಾಲದೆ, “ಅಯ್ಯೋ! ಇನ್ನೂ ಇತ್ತು’ ಅಂತ ಅವರಿಗೆ ಇನ್ನೂ ಮೂರು ಗಂಟೆ ಕೊಟ್ಟರೂ ಅದೇ ಮಾತು ಹೇಳ್ತಾರೆ!

ಪ್ರಪಂಚದಲ್ಲಿ ವರ್ಷಗಳಂತೂ ಗೊತ್ತಾಗದೇ ಉರುಳುತ್ತಲೇ ಇರುತ್ತವೆ. ಆದರೆ, ಈ ಮೂರು ಗಂಟೆ ಮಾತ್ರ ಬಿದ್ದುಕೊಂಡೇ ಇರುತ್ತದೆ, ಬೇಗ ಮುಗಿದು ಹೋಗುವುದಿಲ್ಲ. ಕೆಲವರಿರುತ್ತಾರೆ ಬಿಡಿ ಮೂರು ಗಂಟೆಯೂ ಸಾಲದೆ, “ಅಯ್ಯೋ! ಇನ್ನೂ ಇತ್ತು’ ಅಂತ ಅವರಿಗೆ ಇನ್ನೂ ಮೂರು ಗಂಟೆ ಕೊಟ್ಟರೂ ಅದೇ ಮಾತು ಹೇಳ್ತಾರೆ! ಈ ಮೂರು ಗಂಟೆಯಲ್ಲಿ ಅಕ್ಷರ ಗೀಚಲು ಕೂತಾಗ ಆಗುವ ಅವಾಂತರಗಳು ಒಂದೆರಡಲ್ಲ! ಸಖತ್‌ ಇಂಟೆರೆಸ್ಟಿಂಗ್‌.

ಸರಕ್‌ ಅಂತ ಪ್ಯಾಂಟ್‌ ಜೇಬಿಗೆ ಕೈ ಹಾಕುತ್ತಾನೆ ರೂಂ ಕಾಯುವ ಅಸಾಮಿ. ಆಗ ನಮ್ಮವು ಮತ್ತು ಅವರವು ಪತ್ತೇದಾರರ ತರಹ ಭಂಗಿಗಳು. ವಿಚಾರಣಾಧೀನ ಕೈದಿಗಳ ತರಹ ಎಲ್ಲವನ್ನೂ ಅವರಿಗೊಡ್ಡಿ ನಿಲ್ಲಬೇಕು. ಇಪ್ಪತ್ನಾಲ್ಕು ಮಂದಿ ಮಾತ್ರ ಕೂರಬೇಕಂತೆ ಒಂದು ರೂಂನ್ಯಾಗ! ಇನ್ನೂ ಜಾಗ ಇದ್ರೂ ಯಾರೂ ಬರಂಗಿಲ್ಲ. ರೂಂ ಕಾಯುವ ಅಸಾಮಿಗೆ ಅದೇನು ಗತ್ತು ಗಮ್ಮತ್ತು ಅಂತೀರಿ, ಅಬ್ಟಾ! ನಮ್‌ ಹೈಕೆÛàನು ಕಡಿಮೆ ಇಲ್ಲ. ಕೆಲವರಂತೂ ಪೇಪರ್‌ ಕೊಡುವ ಮೊದಲೇ ಆಕಳಿಕೆ ಆರಂಭಿಸುತ್ತಾರೆ.

ಯಾವಾಗ ಪ್ರಶ್ನೆಪತ್ರಿಕೆ ಕೊಡ್ತಾರೋ ಅಂತ ಚಡಪಡಿಕೆ. ಕೊಟ್ಟ ಮೇಲೆ ತೂಕಡಿಕೆ. ಕೆಲವರದು ಮೈಮರೆತವರ ತರಹದ ಓಟದಂಥ ಬರವಣಿಗೆ, ಕೆಲವರದು ಅಲ್ಲೇ ಕೂತು ಒಂದಿಷ್ಟು ಸ್ಟಾಕ್‌ ಇರುವ ಕನಸು ಕಾಣುವುದು, ಕೆಲವರು ಅರ್ಧ ಗಂಟೆಯಾಗುವುದನ್ನೇ ಕಾದು ಕುಳಿತವರಂತೆ ಹೊರಟುಬಿಡುತ್ತಾರೆ. ರೂಂ ಕಾಯುವ ಅಸಾಮಿ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಬೋನಿನಲ್ಲಿನ ಹುಲಿಯಂತೆ ಅಲೆಯುತ್ತಾನೆ. “ಹೇ ಯಾರದು… ಆ ಕಡೆ ನೋಡೋದು?’ ಎಂಬ ಗರ್ಜನೆ ಬೇರೆ ಆಗಾಗ. ಮಸಣ ಮೌನ! ಬರೀ ಮೌನ. ಕೆಲವರಂತೂ ಮೌನ ಒಡೆಯಲು ಆಗಾಗ ಕೆಮ್ಮುವುದೂ ಉಂಟು. ನಾವು ಪಕ್ಕದ ಹುಡುಗಿಯ ಸೆಂಟ್‌ ಸೆ¾ಲ್‌, ಮುಂದಿನ ಹುಡುಗಿ ಮುಡಿದಿರುವ ಕೆಂಗುಲಾಬಿ, ಆ ಕಡೆಯವನ ಹರಿದ ಜೀನ್ಸ್‌… ಇವನ್ನೆಲ್ಲ ನೋಡುತ್ತಲೇ ಕಾಲ ತಳ್ಳುತ್ತೇವೆ.

ಕಲಿತಿದ್ದು ಹತ್ತೇ ಪ್ರಮೇಯ. ಇಲ್ಲಿ ನೋಡಿದ್ರೆ, ಹನ್ನೊಂದನೆಯದ್ದನ್ನು ಕೊಟ್ಟಿದ್ದಾರೆ. ಹಾಗಾದರೆ, ಆ ಹತ್ತಕ್ಕೆ ಬೆಲೇನೇ ಇಲ್ವಾ? ಕೊನೆಯ ಎರಡನೇ ಪಾಠ ನನ್ನ ಬಾಯಲ್ಲೇ ಇತ್ತು. ಆದರೆ, ಅದರಲ್ಲಿನ ಒಂದು ಪ್ರಶ್ನೆನೂ ಬಂದಿಲ್ವಲ್ಲಾ? ಆ ಪಾಠ ಇವರಿಗೆ ಲೆಕ್ಕಕ್ಕೇ ಇಲ್ವಾ? ನಂಗೆ ಇದೆಲ್ಲ ಏನೂಂತ ಅರ್ಥಾನೇ ಆಗಲ್ಲಪ್ಪ. ದಪ್ಪ ದಪ್ಪ ಸ್ಪೆಕ್ಸ್‌ ಹಾಕ್ಕೊಂಡು, ದೊಡ್ಡ ದೊಡ್ಡ ಬಿಲ್ಡಿಂಗ್‌ನಲ್ಲಿ ಕೂತೋರು ಈ ಮೂರು ಗಂಟೆಯಲ್ಲಿ ಬರಿಯೋದೇ ಅಂತಿಮ ಅಂತ ಯಾಕೆ ನಿರ್ಧರಿಸುತ್ತಾರೋ ಅಂತ ಯೋಚನೆ ಬರುತ್ತೆ. ನಾನ್ಯಾಕೆ ಪರೀಕ್ಷೆ ಬರೆಯೋದನ್ನು ಬಿಟ್ಟು, ಐನ್‌ಸ್ಟಿàನ್‌ ಥರ ಪರೀಕ್ಷೆ ಪದ್ಧತಿಯ ಲೋಪದೋಷದ ಯೋಚೆ° ಮಾಡ್ತಾ ಕೂತಿದ್ದೀನಿ ಅನಿಸುತ್ತೆ. ನಾನು ಓದದೇ ಇರೋದಕ್ಕೆ ಇದು ಪಲಾಯಾನವಾದವಾ? ಅಲ್ಲಲ್ಲ, ಓದಿದೀನಿ ಆದರೆ ಇಲ್ಲಿ ಕೊಟ್ಟಿರುವುದಕ್ಕೆ ಕೆಲವೊಂದನ್ನು ಬಿಟ್ಟು ಪೂರ್ತಿ ಓದಿದ್ದೀನಿ. ಕೆಲವೊಂದಕ್ಕೆ ಉತ್ತರ ಗೊತ್ತಿಲ್ಲ ನಿಜ, ಹಾಗಂತ ನನಗೆ ಕಲಿಕೆಯೇ ಆಗಿಲ್ಲ ಅಂತ ಇವ್ರು ಹೇಗೆ ನಿರ್ಧರಿಸುತ್ತಾರೋ ನಾ ಕಾಣೆ.

ಕನ್ನಡದಲ್ಲಿ ಒಂದೂ ಬಿಟ್ಟಿಲ್ಲ, ಇಂಗ್ಲಿಷ್‌ನಲ್ಲೂ ಬಿಟ್ಟಿಲ್ಲ, ಸಮಾಜವೂ ಔಟ್‌ ಆಫ್ ಔಟ್‌ ಬರುತ್ತೆ. ಗಣಿತದಲ್ಲಿ ಪಾಸ್‌ ಆಗಲಿಲ್ಲ ಅಂದ್ರೆ ಇವರ್ಯಾಕೆ ನನ್ನ ಫೇಲ್‌ ಮಾಡ್ತಾರೆ? ಕನ್ನಡದಲ್ಲಿ ಬಂದ ನೂರಕ್ಕೆ ನೂರು ಅಂಕಕ್ಕೂ ಫೇಲ್‌ ಅಂಕಪಟ್ಟಿಯೊಂದಿಗೆ ಕುಳಿತುಕೊಳ್ಳಬೇಕಾ? ಈ ಮೂರು ಗಂಟೆ ಇಷ್ಟೊಂದು ಅರ್ಥವಾಗದೇ ಕಗ್ಗಂಟಾಗಿದೆಯಾ? ಅದರ ಬಗ್ಗೆ ಯಾರೂ ಯೋಚಿಸಲೇ ಇಲ್ಲ ಅನಿಸುತ್ತೆ. ಎಲ್ಲರೂ ಮೂರು ಗಂಟೆಯ ಹಿಂದೆ ಓಡುವವರೇ ನನ್ನನ್ನು ಸೇರಿದಂತೆ. ನಾನು ಮೂರು ಗಂಟೆಯಲ್ಲಿ ಒಳ್ಳೆಯ ವಿಚಾರ ಮಾಡಿಬಂದೆ. ಅದನ್ನು ಹೋಗಿ ಅವರ ಹತ್ರ ಹೇಳಿದರೆ “ಆಯ್ತು ನಡಿಯಪ್ಪ’ ಅಂತಾರೆ ಅಷ್ಟೇ!

ಮೂರು ಗಂಟೆಯ ಜಗತ್ತಿಗೆ ವಾಪಸು ಬಂದು ಬಿಡೋಣ. ಕಣ್ಣಲ್ಲಿ ಮಾತಾಡುವವರು. ಕಣ್ಣಂಚಿನಲ್ಲಿ ಒಂದೇ ನೋಟಕ್ಕೆ ದೃಷ್ಟಿ ಚೆಲ್ಲಿ, ಚಕ್ಕನೆ ಉತ್ತರ ಕದ್ದು ಬರೆಯುವವರು, ಸಾಕ್ಸ್‌ ಒಳಗಿನಿಂದ ಕಳ್ಳ ಬೆಕ್ಕಿನಂತೆ ಕಾಪಿ ತಗೆಯುವವರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ರೂಂ ಕಾಯುವ ಅಸಾಮಿಯೇ ಉತ್ತರ ಹೇಳಲು ನಿಲ್ಲುವುದು, ಆಗಾಗ ಮೇಲಿನವರು ಗತ್ತಿನಿಂದ ಬಂದು ಹೋಗುವುದು, ಚೆನ್ನಾಗಿ ಬರೆಯುವವರ ಧಿಮಾಕು, ಏನೂ ಬರೆಯವದವರ ದೈನ್ಯತೆ! ಮಧ್ಯಮ ವರ್ಗದವರ ನಿರ್ಲಿಪ್ತತೆ, ರಾತ್ರಿಯಿಡೀ ಓದಿದವರ ನಿದ್ದೆಗಳು, ಟೈಮ್‌ ಎಷ್ಟಿದೆ ಅಂತ ಹೇಳ್ಳೋಕೆ ಹೊಡೆಯುವ ಗಂಟೆಗಳು… ಪುಣ್ಯಾತಿYತ್ತಿ ಶೀಲ ಅರ್ಧ ಗಂಟೆಗೊಮ್ಮೆ ಕೇಳುವ ಅಡಿಷನಲ್‌ ಶೀಟ್ಸ್‌, ಪರೀಕ್ಷೆ ಬರೆಯುವ ಬದಲು ಪರೀಕ್ಷೆ ಪದ್ಧತಿಯನ್ನೇ ಹಿಡಿದು ನೀನು ಸರೀನಾ? ತಪ್ಪಾ? ಅಂತ ಕೆದಕುವ ನನ್ನಂಥ ಮರುಳರು, ಪೇಪರ್‌ ನೋಡಿ ತಲೆ ತಿರುಗಿ ಬೀಳುವವರು, ತುಂಬಾ ಸುಲಭವಿದ್ದರೆ ಮೆಲ್ಲನೆ ಶಿಳ್ಳೆ ಹಾಕುವವರು, ಹಾಲ್‌ ಟಿಕೆಟ್‌ ಮರೆತು ಬಂದು ಅದರ ಟೆನ್ಸನ್‌ನಲ್ಲಿ ಓದಿದ್ದನ್ನೇ ಮರೆಯುವವರು, ಪೆನ್ನಿನ ಇಂಕ್‌ ಖಾಲಿ ಅಂತ ಬೆವರುವವರು, ಉತ್ತರ ಬರೆಯುವ ಬುಕ್‌ಲೆಟ್‌ ಅನ್ನು ಬುಕ್‌ನಂತೆ ಬರೆದು ದಾರ ಪೋಣಿಸುವವರು, ಇರುವ ಬುಕ್‌ಲೆಟ್‌ ಅನ್ನು ವ್ಯರ್ಥಮಾಡದೇ ಹಾಗೇ ವಾಪಸು ಕೊಡುವ ಉದಾರ ಗುಣದವರು ಎಲ್ಲರೂ ಸೇರಿರುತ್ತಾರೆ.

ಅದೊಂದು ಅದ್ಭುತ ಜಗತ್ತು, ಹೊಸ ಜಗತ್ತು. ಕೆಲವರಿಗೆ ಮಾತ್ರವೇ ಸಿದ್ಧಿಸುವ ಜಗತ್ತು. ಬರೀ ಮೌನದಲ್ಲಿ ಲಕ್ಷೊàಪಲಕ್ಷ ಮಾತುಗಳು ಅಲ್ಲಿ ಸುಳಿದಿರುತ್ತವೆ. ನಮ್ಮನ್ನು ಕಾಯುವವನು ಮೂರು ಗಂಟೆ ಕೂತು ತನ್ನ ತಾಳ್ಮೆ ಪರೀಕ್ಷಿಸಿಕೊಂಡು ಕೊನೆಯ ಬೆಲ್‌ ಆದಾಗ, ಬಿಡುಗಡೆಯ ಉಸಿರು ಬಿಡುವಾಗಿನ ಮುಖದ ನಿರಾಳತೆ ಅದ್ಭುತ. ಹಾಗೂ ಹೀಗೂ ಮಾಡಿ ಮೂರು ಗಂಟೆ ಮುಗಿಸಿಬಂದರೆ ಮುಗಿಯಿತು. ಅಮೇಲೆ ನಾವುಂಟು, ನಮ್ಮ ಫ‌ಲಿತಾಂಶವುಂಟು, ನಮ್ಮ ಮುಂದಿನ ಜೀವನವುಂಟು, ನಮ್ಮ ಜೀವನ ನಿರ್ಧರಿಸುವುದು ಬೇರೆ ಯಾವುದೂ ಅಲ್ಲ, ಆ ಮೂರು ಗಂಟೆಗಳು. ಬೇರೆ ಏನಿದ್ದರೂ ಅದೆಲ್ಲ ಸೈಡಿಗೆ, ಈ ಗಂಟೆಯೇ ಮೈನಿಗೆ!

– ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.