ಆಟೋರಾಜ: ಕೊಪ್ಪಳ ಜನರ ಅಪತ್ಭಾಂಧವ ಈ ಆಟೋ ಪಾಷ..!
Team Udayavani, Feb 18, 2020, 5:12 AM IST
ಕೈ ತುಂಬಾ ಕಾಸು ಇದ್ದರೂ, ಅನ್ಯರ ಕಷ್ಟಕ್ಕೆ ತುಡಿಯುವ ಮನಸ್ಸು ಎಲ್ಲರಿಗೂ ಇರಲ್ಲ. ಹಣದಲ್ಲಿ ಶ್ರೀಮಂತಿಕೆ ಇದ್ದು, ಸಮಾಜಕ್ಕೆ ಅವರಿಂದ ನಯಾ ಪೈಸೆ ಅನುಕೂಲವಿಲ್ಲ ಎಂದ ಮೇಲೆ ಆ ಸಿರಿವಂತಿಕೆ ಇದ್ದರೆಷ್ಟು ಬಿಟ್ಟರೆಷ್ಟು, ಅಲ್ವಾ? ಮತ್ತೂಬ್ಬರ ಕಷ್ಟಗಳಿಗೆ ಸ್ಪಂದಿಸಲು ಕೈ ತುಂಬಾ ಹಣ ಬೇಕೇಬೇಕಾ? ಎಂದರೆ ಬೇಕಾಗಿಯೇ ಇಲ್ಲ!. ಹೌದು, ಹಣಕ್ಕಿಂತ ಮೊದಲು, ಸ್ಪಂದಿಸುವ ಮನಸ್ಸು ಇರಬೇಕಷ್ಟೆ. ನಿಮ್ಮ ನಿಮ್ಮ ಪರಿಮಿತಿಯಲ್ಲೇ ಸಮಾಜಕ್ಕೆ ಖಂಡಿತ ಅಳಿಲು ಸೇವೆ ಮಾಡಬಹುದು ಎನ್ನುವುದಕ್ಕೆ, ಕೊಪ್ಪಳದ ದೇವರಾಜ ಅರಸು ಕಾಲೋನಿಯ ವಾಸಿ ಮೆಹಬೂಬ್ ಪಾಷ ಉತ್ತಮ ನಿದರ್ಶನ.
ಪಾಷನದ್ದು ಆಟೋ ಚಾಲಕ ವೃತ್ತಿ. ಟಂಟಂ ಗಾಡಿ, ಸಿಟಿ ಬಸ್‌ಗಳ ಅಬ್ಬರದಿಂದ ಜನರು ಆಟೋಗಳನ್ನೇ ಆಶ್ರಯಿಸುವ ದಿನಗಳು ಈಗಿಲ್ಲ. ಈ ಕಾರಣಕ್ಕೆ ಅಲ್ಲಲ್ಲಿ ಅದೆಷ್ಟೋ ಆಟೋ ಚಾಲಕರು ಒಮ್ಮೊಮ್ಮೆ ನಯಾ ಪೈಸೆ ದುಡಿಮೆ ಇಲ್ಲದೆ ಖಾಲಿ ಕೈಲಿ ಮನೆಗೆ ಮರಳಿದ್ದೂ ಇದೆ. ಆಟೋ ನಂಬಿಕೊಂಡು ಹೊಟ್ಟೆ-ಬಟ್ಟೆಗೆ ದುಡಿಮೆಯೇ ಇಲ್ಲದೆ ಕೈಕೈ ಹಿಸಿಕಿಕೊಳ್ಳುವ ಅನೇಕ ಆಟೋ ಚಾಲಕರ ನಡುವೆ, ಈ ಪಾಷ ವಿಭಿನ್ನವಾಗಿ ಕಾಣಿಸುತ್ತಾನೆ. ಕಾರಣ ಇಷ್ಟೆ. ಇತರರಂತೆ ಈತನೂ ಸಹ ಅನೇಕ ಸಲ ಗಿರಾಕಿಗಳಲ್ಲದೇ ಬರಿಗೈ ಆಗಿದ್ದೂ ಉಂಟು. ಆದರೆ, ಅದೇ ವೇಳೆ ಅನ್ಯರು ಸಂಕಷ್ಟದಲ್ಲಿರುವ ಸುದ್ದಿ ಕಿವಿಗೆ ಬಿದ್ದಿದ್ದೇ ತಡ; ಸಾಲ ಮಾಡಿ, ಆಟೋಗೆ ಇಂಧನ ಹಾಕಿಸಿ ಅಂಥವರಿಗೆ ನೆರವಾಗುತ್ತಾನೆ. ಹೌದು, ದುಡ್ಡು ಇದ್ದರೂ ಬಿಟ್ಟರೂ, ಉಂಡರೂ- ಉಪವಾಸವಿದ್ದರೂ ಈತನ ಉಚಿತ ಸೇವೆ ಮಾತ್ರ ನಿತ್ಯ. ನಿರಂತರ ಆಗಿ ನಡೆಯುತ್ತಿದೆ. ಅದು ಹಗಲಿರುಳೆನ್ನದೆ…!
ನಾಳೆ ಬಗ್ಗೆ ಚಿಂತೆ ಇಲ್ಲ
ಪಾಷ, ಈ ಕಾರಣಕ್ಕೇ ಕೊಪ್ಪಳದಲ್ಲಿ ಪಾಪ್ಯುಲರ್! ಮನೆಯಲ್ಲಿ ವಯಸ್ಸಾದ ತಂದೆ-ತಾಯಿ, ಹೆಂಡತಿ-ಮಕ್ಕಳಿದ್ದು ಅವರೆಲ್ಲರಿಗೂ ಈತನ ಈ ಚಿಕ್ಕ ದುಡಿಮೆಯೇ ಆಸರೆ. ಈತ ದುಡಿದು ತಂದರಷ್ಟೇ ಅಂದು ಮನೆಯ ಒಲೆ ಉರಿಯೋದು. ಹೊಟ್ಟೆ ತುಂಬೋದು. ಹೀಗಿದ್ದರೂ ಪಾಷನಲ್ಲಿ ನಾನು ಮತ್ತು ನನ್ನ ಕುಟುಂಬವಷ್ಟೇ ಚೆನ್ನಾಗಿರಬೇಕು ಎನ್ನುವ ಸ್ವಾರ್ಥವಿಲ್ಲ. ನಾಳೆಗಳ ಬಗ್ಗೆ ಚಿಂತೆ ಇಲ್ಲ. ಗರ್ಭಿಣಿಯರಿಗೆ, ವಯೋವೃದ್ಧ ರೋಗಿಗಳಿಗೆ, ಅಪಘಾತಕ್ಕೆ ತುತ್ತಾದವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸುತ್ತಾರೆ! ಉಚಿತವಾಗಿ. ಅಷ್ಟೇಕೆ ಅನಾಥ ಶವಗಳನ್ನು ಆಟೋದಲ್ಲಿ ಸಾಗಿಸಿ ಮುಕ್ತಿ ಕಾಣಿಸುತ್ತಾರೆ. ಅಂದಹಾಗೆ, ಈತನ ಸೇವೆಯ ಸದುಪಯೋಗ ಮಾಡಿಕೊಳ್ಳುತ್ತಿರುವುದು ಈ ಭಾಗದ ಬಡ ಬಗ್ಗರು, ನಿರ್ಗತಿಕರು ಎನ್ನುವುದು ವಿಶೇಷ. ಇಂತಹ ವರ್ಗದ ಜನರಲ್ಲಿ ಸರಕಾರಿ ಆಸ್ಪತ್ರೆ, 108 ಅಂಬುಲೆನ್ಸ್‌ಗಿಂತ ಪಾಷನ ಮೊಬೈಲ್ ನಂಬರ್ ಇರುತ್ತೆ. ಒಮ್ಮೊಮ್ಮೆ ಸರಕಾರಿ ಸೇವೆ ಯಾವುದೋ ಕಾರಣಕ್ಕೆ ಅಲಭ್ಯವಾಗಿರುತ್ತೆ. ಆದರೆ, ಪಾಷನ ಸರ್ವಿಸ್ ಮಾತ್ರ ಮಿಸ್ ಆಗಲ್ಲ.
“ನನ್ನ ಅಕ್ಕ ಮುನ್ನಿ ಬೇಗಂಗೆ ಒಂದು ರಾತ್ರಿ ಹೆರಿಗೆ ನೋವು ಕಾಣಿಸಿತು. ಆಗ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೋ ಸೇರಿದಂತೆ ವಾಹನಗಳಿಗೆ ಹುಡುಕಾಡಿದೆ. ಆದರೆ, ನನ್ನ ದುರಾದೃಷ್ಟಕ್ಕೆ ಯಾವುದೂ ಸಿಗಲಿಲ್ಲ. ನಾನು ಅಂದು ಪಟ್ಟಕಷ್ಟ ಮತ್ಯಾರು ಪಡಬಾರದು ಎಂದು ನಿರ್ಧರಿಸಿದೆ. ನಾನು ಬಾಡಿಗೆ ಆಟೋ ಕೊಂಡು, ದುಡಿಮೆ ಪ್ರಾರಂಭಿಸಿದೆ. ಇದರೊಟ್ಟಿಗೆ ಈ ಸೇವೆಯನ್ನೂ ಪ್ರಾರಂಭಿಸಿದೆ’ ಎನ್ನುತ್ತಾರೆ ಪಾಷ. ಬಾಡಿಗೆ ಆಟೋಕ್ಕೆ ದುಡಿಮೆ ಆದರೂ, ಬಿಟ್ಟರೂ ದಿನಕ್ಕೆ 100 ರೂ ಅದರ ಮಾಲೀಕರಿಗೆ ಕೊಡಬೇಕಿತ್ತಂತೆ. ಇದರಲ್ಲೂ ಅವರು ಉಚಿತ ಆಟೋ ಸೇವೆಯನ್ನು ಮುಂದುವರೆಸಿದ್ದು ಇವರ ಸೇವಾ ಬದ್ಧತೆ ತೋರಿಸುತ್ತದೆ. ” ಹೊಟ್ಟೆ-ಬಟ್ಟೆ ಕಟ್ಟಿ ಕಷ್ಟಪಟ್ಟೇ ಒಂದು ಆಟೋ ಕೊಂಡೆ. ಅದೇ ಇದು. ಅದರ ಹಿಂದೆ ಉಚಿತ ಸೇವೆಯ ಕುರಿತು ಮೊಬೈಲ್ ನಂಬರ್ ಸಮೇತ ಈ ಬ್ಯಾನರ್ ಹಾಕಿದ್ದೇನೆ. ಇದರಿಂದ ಸಾಕಷ್ಟು ಜನಕ್ಕೆ ಅನುಕೂಲ ಆಗಿದೆ’ ಎಂದರು.
ಲಗೂನ ಹೊರಡ್ರೀ..
ಅಂದಹಾಗೆ, ಪಾಷ ಇವರ ಈ ಉಚಿತ ಸೇವೆ ದಶಕಗಳಿಂದ ನಡೆಯುತ್ತಾ ಬಂದಿದೆ. ಸುಮಾರು 80 ಗರ್ಭಿಣಿಯರು, 150 ಜನ ವಯೋವೃದ್ಧ ರೋಗಿಗಳು, 40-50 ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದ ಹತ್ತಾರು ಜನರ ಪ್ರಾಣ ಉಳಿಸಿದ ಸಂತೃಪ್ತಿ ಇವರಲ್ಲಿದೆ. ಇದರೊಂದಿಗೆ 10-15 ಅನಾಥ ಶವಗಳನ್ನು ಪೊಲೀಸರ ಸೂಚನೆ ಮೇರೆಗೆ ದಫನ್ ಮಾಡಲು ನೆರವಾಗಿದ್ದಾರೆ. “ಮೊಬೈಲ್ ಫೋನ್ ರಿಂಗ್ ಆದರೆ ಸಾಕು, ಮನೆಯಲ್ಲಿ ಕರೆ ಬಂತು ನೋಡಿ, ಪಾಪ ಯಾರಿಗೆ ಏನು ಆಗಿದೆಯೋ ಏನೋ. ಲಗೂನಾ ಹೊರಡ್ರಿ’ ಎಂದು ಹೆಂಡತಿ ಶರಿಫಾಬಿ ಎಚ್ಚರಿಸುತ್ತಾಳೆಂದು ಫಾಷ ನೆನಪು ಮಾಡಿಕೊಳ್ಳುತ್ತಾರೆ. ” ಒಮೊಮ್ಮೆ ರೇಷನ್‌ಗೆ, ಮಕ್ಕಳ ಫೀ ಕಟ್ಟಲಿಕ್ಕೆ, ದುಡ್ಡು ಇರಲ್ಲ. ಆದರೂ ಮನೆಯಲ್ಲಿ ಬೇಜಾರ್ ಆಗಲ್ಲ. ಅವರ ಸಹಕಾರದಿಂದಲೇ ಈ ಸೇವೆ ನಡೆಯುತ್ತಿದೆ.. ಎಂದು ಕುಟುಂಬದ ಸಹಕಾರವನ್ನು ಸ್ಮರಿಸುತ್ತಾರೆ. ಫೋನ್ ಕರೆ ಬಂದರೆ ಸಾಕು ಅದು ಎಷ್ಟೇ ದೂರವಿದ್ದರೂ ಮಧ್ಯರಾತ್ರಿಯಲ್ಲಿ ಹೋಗುತ್ತೇನೆ. ಒಮ್ಮೊಮ್ಮೆ ಏಕ ಕಾಲಕ್ಕೆ ಎರಡೆರಡು ಕರೆಗಳೂ ಬಂದಿದ್ದು ಇವೆ. ಆಗ ನಾನೇ ಮತ್ತೂಂದು ಆಟೋವನ್ನು ಬಾಡಿಗೆ ಮಾಡಿ ಕಳುಹಿಸುತ್ತೇನೆ. ಇಂಥ ಸಂದರ್ಭಗಳಲ್ಲಿ ನಮ್ಮ ಆಟೋದವರು ಸಹಕರಿಸುತ್ತಾರೆ ಎಂದು ಭಾವುಕರಾಗುತ್ತಾರೆ ಪಾಷ.
ಪಾಷ ಮೊ ನಂ 900875300
ಸ್ವರೂಪಾನಂದ ಎಂ. ಕೊಟ್ಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.