ಅಲ್ಲಿ ತಪ್ಪಿಸಿಕೊಳ್ಳಿ ಇಲ್ಲಿ ಒಪ್ಪಿಸಿಕೊಳ್ಳಿ
Team Udayavani, Jan 17, 2017, 3:45 AM IST
ತಪ್ಪು ದಾರಿಯಲ್ಲಿ ಓಡುತ್ತಿದ್ದರೆ ಯಾವತ್ತೂ ಗುರಿ ಸೇರೋದು ಸಾಧ್ಯವೇ ಇಲ್ಲ. ಅದೇ ಕಷ್ಟವಾದರೂ ಸರಿ ದಾರಿಯಲ್ಲೇ ಸಾಗುತ್ತಿದ್ದರೆ ಒಂದಲ್ಲ ಒಂದು ದಿನ ನಗರ ಸಿಗಲೇಬೇಕು. ಯಾವನಿಗೂ ಕೂಡ ಮತ್ತೆ ಶುರುವಿಗೆ ಹೋಗಿ ಬದುಕನ್ನು ಸರಿ ಮಾಡ್ಲಿಕ್ಕೆ ಆಗುವುದಿಲ್ಲ. ಆದರೆ ಇವತ್ತಿಂದ ಸರಿ ಮಾಡ್ತಾ ಬಂದರೆ ಎಂಡಿಂಗನ್ನು ಹ್ಯಾಪ್ಪಿಯಾಗಿ ಮಾಡಬಹುದು. ಕಷ್ಟವೇನಲ್ಲ. ಸುಲಭವೂ ಅಲ್ಲ. ದೊಡ್ಡ ಕಲ್ಲನ್ನು ಕೆತ್ತಿ ಕೆತ್ತಿ ಮೂರ್ತಿ ಮಾಡುತ್ತಾರೆ. ಆ ಬಾಹುಬಲಿ ಮೂರ್ತಿ ಸಹಸ್ರಾರು ವರ್ಷಗಳ ನಂತರವೂ ನಗುತ್ತಾ ನಿಂತಿರುತ್ತಾನೆ. ನೀವು ಈಗ ಪೆಟ್ಟು ತಪ್ಪಿಸಿಕೊಳ್ಳಲಿಕ್ಕಾಗಿ ಬೇಡದ ಕೆಲಸಗಳನ್ನು ಮಾಡುತ್ತಿದ್ದೀರಿ. ಅದನ್ನು ಇವತ್ತಿಂದಲೇ ನಿಲ್ಲಿಸಿ. ಏನು ಮಾಡಬೇಕು ಅಂತ ಹೇಳುತ್ತಿಲ್ಲ, ಏನು ಮಾಡಬೇಡಿ ಅನ್ನೋದನ್ನು ಡೈರೆಕ್ಟಾಗಿ ಹೇಳ್ತಿದೇನೆ.
1. ವೇಸ್ಟ್ ಫೆಲೋಗಳನ್ನು ದೂರ ಇಡಿ
ಬದುಕು ಸಣ್ಣದು. ತುಂಬಾನೇ ಚಿಕ್ಕದು. ಅಂತದ್ದರಲ್ಲಿ ನಿಮ್ಮ ಸಂತೋಷವನ್ನು ಕಿತ್ತುಕೊಳ್ಳುವ ವ್ಯಕ್ತಿಗಳ ಜೊತೆ ಇದ್ದು ಟೈಮ್ ವೇಸ್ಟ್ ಮಾಡೋದು ಏನಕ್ಕೆ? ಜಗಳಾಗತ್ತೆ. ಕಿರಿಕಿರಿ ಆಗತ್ತೆ. ಒಂದಿಡೀ ದಿನ ವ್ಯರ್ಥಾವ್ಯರ್ಥ. ಬೇರೆ ಯಾರಿಗೋಸ್ಕರವೋ ಸಾಯೋದು ಜೀವನವಲ್ಲ. ನಿಮ್ಮ ಖುಷಿಯಲ್ಲಿರೋರನ್ನು ದೂರಾನೇ ಇಡಿ. ಕಷ್ಟದಲ್ಲಿ ಜೊತೆಯಾದವರಿಗೆ ಹೆಗಲು ಕೊಡಿ. ಸಾಕಷ್ಟು.
2. ಸಮಸ್ಯೆಗಳಿಗೆ ಎದುರಾಗಿ
ಕಷ್ಟ ಅಂತ ಸಮಸ್ಯೆಯಿಂದ ದೂರ ಓಡೋದು ಹೇಡಿತನ. ಎದುರಿಸಿ. ಫೈಟ್ ಮಾಡಿ. ಗೆಲ್ಲೋದು ಸುಲಭವೇನಿಲ್ಲ. ಅಟ್‌ಲೀಸ್ಟ್ ಟ್ರೈ ಮಾಡಿದೆ ಅನ್ನೋ ಖುಷಿಯಾದ್ರೂ ಇರತ್ತಲ್ಲ. ಆದರೆ ಒಂದು ವಿಷಯ ನೆನಪಿಡಿ ನಿಮಗಿರೋ ಶಕ್ತಿ ಅಪಾರ. ಎದುರಿಸಿದರೆ ಸಮಸ್ಯೆ ಶರಣಾಗಲೇಬೇಕು. ನೀವು ಮುಂದೆ ಹಾಕಿದಷ್ಟು ನೋವು ಜಾಸ್ತಿ. ದೂರ ತಳ್ಳಿದಷ್ಟೂ ಇರಿಟೇಷನ್ ಜಾಸ್ತಿ. ಏನೇ ಆಗ್ಲಿ, ಓಡೋದು ನಿಲ್ಸಿ. ನಿಜವಾದ ನೀವು ಕಾಣಿಸಿಕೊಳ್ತೀರಿ. ಒಳ್ಳೇದಾಗ್ಲಿ.
3. ನಿಮಗೇ ನೀವು ಸುಳ್ ಹೇಳ್ಕೊಬೇಡಿ
ಯಾರಿಗೆ ಬೇಕಾದ್ರೂ ಸುಳ್ಳು ಹೇಳಿ ಜಯಿಸಬಹುದು. ಆದ್ರೆ ನಿಮಗೆ ನೀವೇ ಸುಳ್ಳು ಹೇಳ್ತಾ ಇದ್ರೆ ನಿಮ್ಮನ್ನು ಗೆಲ್ಲಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಎಂಥಾ ಚಾನ್ಸ್ ಬೇಕಾದರೂ ತಗೋಬಹುದು. ಎಂಥಾ ರಿಸ್ಕ್ ಬೇಕಾದ್ರೂ ತಗೋಬಹುದು. ಅದು ಯಾವಾಗೆಂದರೆ ನಮಗೆ ನಾವು ಪ್ರಾಮಾಣಿಕರಾಗಿದ್ದಾಗ.
4. ಬಾಗಿದ್ದು ಸಾಕು, ಸೆಟೆದು ನಿಲ್ಲಿ
ಅತ್ಯಂತ ನೋವಿನ ವಿಷಯ ಇದು. ಪ್ರೀತಿಸುತ್ತಾ ಪ್ರೀತಿಸುತ್ತಾ ಪ್ರೀತಿಸುವ ಜೀವಕ್ಕೆ ಶರಣಾಗಿ ನಮ್ಮನ್ನು ನಾವು ಮರೆತುಬಿಡುವುದು. ಪರವಶ ಅನ್ನುವುದು ರೊಮ್ಯಾಂಟಿಕ್ಕು. ಅಷ್ಟೇ ಡೇಂಜರಸ್ಸು. ಶರಣಾಗತಿಯಿಂದ ನಮಗೆ ನಾವು ಸ್ಪೆಷಲ್ ಅನ್ನುವುದು ಮರೆತುಹೋದರೆ ಸಮಸ್ಯೆ ಶುರು. ಅವರಿಗೋಸ್ಕರ ನೀವು ನಿಮ್ಮ ಪ್ಯಾಶನನ್ನು ದೂರಮಾಡಿಕೊಳ್ಳೋದು ಸರಿಯಲ್ಲ. ಅಳ್ತೀರಿ ಕೊನೆಗೆ. ಅರ್ಥ ಮಾಡ್ಕೊಳ್ಳಿ.
5. ನೀವು ನೀವಾಗಿ
ಅವನ ಹತ್ತಿರ ಜಾಸ್ತಿ ದುಡ್ಡಿರಬಹುದು. ಅವನು ಚೆಂದಕ್ಕೆ ಮಾತಾಡಬಹುದು. ಅವನು ದೊಡ್ಡ ಜನ ಆಗಿರಬಹುದು. ಅವನು ಸ್ಮಾರ್ಟ್ ಆಗಿರಬಹುದು. ಆದರೆ ಕೊನೆಗೂ ನೀವು ನೀವೇ. ಜಗತ್ತು ನಿಮ್ಮನ್ನು ಅವನಂತಾಗಲು ಪ್ರೇರೇಪಿಸುತ್ತದೆ. ಪದೇಪದೇ ಪೀಡಿಸುತ್ತದೆ. ಒಂದು ಹಂತದಲ್ಲಿ ನಿಮಗೂ ಹಾಗನ್ನಿಸಬಹುದು. ನೋ ನೋ. ಜನರಿಗೆ ಇಷ್ಟವಾಗೋ ಥರ ನೀವು ಬದಲಾಗಬೇಡಿ ಪ್ಲೀಸ್. ನಿಮ್ಮ ಹಾಗೆ ನೀವಿರಿ, ನಿಮ್ಮನ್ನು ಇಷ್ಟಪಡೋರು ಈ ಜಗತ್ತಲ್ಲಿ ಇನ್ನೂ ಇದ್ದಾರೆ.
6. ಆಗೊØàಗಿದ್ದಕ್ಕೆ ಗೋಲಿ ಮಾರೋ
ನಿಮ್ಮ ಜೀವನದ ಹಳೆಯ ಅಧ್ಯಾಯವನ್ನು ಮತ್ತೆ ಮತ್ತೆ ಓದಿದ್ರೆ ಉದ್ಧಾರ ಆಗೋದಂತೂ ಸಾಧ್ಯವೇ ಇಲ್ಲ. ಅದು ಇದ್ದ ಹಾಗೆ ಇರಲಿ. ಹೊಸ ಅಧ್ಯಾಯವನ್ನು ಚೆಂದಕ್ಕೆ ಬರೆಯೋದು ನಿಮ್ಮ ಕರ್ತವ್ಯ.
7. ಧೈರ್ಯವಾಗಿ ಮಿಸ್ಟೇಕ್ ಮಾಡಿ
ಒಂದು ಸಿಂಪಲ್ ಎಕ್ಸಾಂಪಲ್. ಇಂಗ್ಲಿಷ್ ಮಾತಾಡೋಕೆ ಹೆದರ್ತಾರೆ ಕನ್ನಡ ಮಾಧ್ಯಮದ ಮಕ್ಕಳು. ಹೆದರೋ ಅಗತ್ಯಾನೇ ಇಲ್ಲ. ಇಂಗ್ಲಿಷ್ ಮಾತಾಡೋ ಪ್ರತಿಯೊಬ್ಬ ವ್ಯಕ್ತಿಯೂ ತಪ್ಪುತಪ್ಪಾಗಿ ಮಾತಾಡಿ ಇಂಗ್ಲಿಷ್ ಕಲಿತಿರುತ್ತಾರೆ. ತಪ್ಪು ಮಾಡಿದ ನಂತರವೇ ಸರಿ ಯಾವುದು ಅನ್ನೋದು ಅರ್ಥಾಗೋದು.
8. ಮಿಸ್ಟೇಕ್ ಈಸ್ ಮಿಸ್ಟೇಕ್, ಕೊರಗೋದ್ಯಾಕೆ
ನಾವು ತಪ್ಪು ಜೀವಗಳನ್ನು ಇಷ್ಟ ಪಟ್ಟಿರಬಹುದು. ತಪ್ಪು ವಸ್ತುವಿನ ಹಿಂದೆ ಬಿದ್ದಿರಬಹುದು. ತಪ್ಪಾಗಿ ಹೋಗಿರಬಹುದು. ಆದರೆ ಒಂದಂತೂ ಸತ್ಯ. ತಪ್ಪುಗಳು ನಮ್ಮನ್ನು ಗಟ್ಟಿಯಾಗಿಸಿವೆ. ಮತ್ತೆ ಮತ್ತೆ ಗಟ್ಟಿಯಾಗು ಗಟ್ಟಿಯಾಗು ಅಂತ ಹೇಳುತ್ತವೆ. ಕೇಳಿಸ್ಕೊಳ್ಳಿ ಮತ್ತು ಕೊರಗೋದನ್ನು ಬಿಡಿ. ಪ್ರತಿಯೊಬ್ಬನೂ ತಪ್ಪು ಮಾಡಿರ್ತಾನೆ. ಪ್ರತಿಯೊಬ್ಬನೂ ಕಷ್ಟ ಪಟ್ಟಿರ್ತಾನೆ. ಅವೆಲ್ಲಾ ಗೊತ್ತಿರ್ಲಿ. ಕೊರಗೋದು ನಿಲ್ಸಿ ಕೆಲ್ಸ ಶುರು ಮಾಡಿ.
9. ಖುಷಿ ಅಂಗಡೀಲಿ ಸಿಗಲ್ಲ, ತಿಳ್ಕೊಳಿ
ನಾವು ಹಂಬಲಿಸೋ ವಸ್ತುಗಳು ಭಯಂಕರ ದುಬಾರಿ. ಮಾಲ್‌ಗಳಲ್ಲಿರೋ ಖುಷಿಗಳು ನಮ್ಮ ಕೈಯಳತೆಯಾಚೆ ನಿಂತಿದೆ. ಆದರೆ ಸತ್ಯ ಏನೆಂದರೆ ನಮ್ಮ ಖುಷಿ ಇರೋದು ಪ್ರೀತಿಯಲ್ಲಿ, ನಗುವಲ್ಲಿ, ಪ್ಯಾಶನ್ನಲ್ಲಿ, ಕೆಲಸದಲ್ಲಿ ಮತ್ತು ಬದುಕಲ್ಲಿ. ನಾವು ಖುಷಿಯಾಗಿರಲು ಶ್ರೀಮಂತಿಕೆ ಬೇಕು ಅಂದೊRàತೇವೆ. ಜಗತ್ತಿನ ಅತ್ಯಂತ ದೊಡ್ಡ ಸುಳ್ಳದು. ಖುಷಿ ಫ್ರೀಯಾಗಿ ಸಿಗುತ್ತದೆ.
10. ಕಿಂಡೀಲಿ ನೋಡೋದು ಬಿಡಿ
ನಿಮ್ಮ ಕುರಿತು ನೀವು ಖುಷಿಯಾಗದೇ ಇದ್ರೆ ಜಗತ್ತಿನಲ್ಲಿ ನೀವು ಯಾರನ್ನು ನೋಡಿದ್ರೂ ಖುಷಿಯಾಗಲು ಸಾಧ್ಯವಿಲ್ಲ. ಒಂದ್ಸಲ ನೋಡಿ ಹಾಗಿರಬೇಕು ಅಂದುಕೊಳ್ಳುವುದೇ ಪರಮ ಸುಖವಾದರೆ ಜೀವನ ಕಷ್ಟ ಇದೆ ಸಾರ್. ನಿಮ್ಮ ನೋಡಿ ನೀವು ಖುಷಿ ಪಡಿ. ಜಗತ್ತು ಸೂಪರಾಗಿರುತ್ತದೆ.
11. ನಾನೇ ಗ್ರೇಟ್- ಅಂದೊRಳಿ, ತೋರಿಸ್ಕೋಬೇಡಿ!
ಜಾಸ್ತಿ ಯೋಚಿಸ್ಬೇಡಿ. ಮತ್ತೂಂದು ಹೊಸ ಸಮಸ್ಯೆ ಶುರುವಾಗಿರುತ್ತದೆ. ಸಿಚುವೇಷನ್ನನ್ನು ನೋಡ್ಕೊಂಡು ಒಂದು ನಿರ್ಧಾರಕ್ಕೆ ಬನ್ನಿ. ನಿಮಗೆ ಇಷ್ಟವಾಗದ್ದನ್ನು ನೀವು ಬದಲಾಯಿಸಲು ಯಾವತ್ತೂ ಆಗ್ಲಿಕ್ಕಿಲ್ಲ. ಇರುವುದನ್ನು ಇದ್ದಂತೆ ಒಪ್ಪಿಕೊಳ್ಳಿ. ನಾನು ಎತ್ತರದಲ್ಲಿದ್ದೇನೆ ಅನ್ನೋ ಭ್ರಮೆಯನ್ನು ಸುಟ್ಟು ಹಾಕಿ.
12. ಐಯಾಮ್ ರೆಡಿ, ಸದಾ.
ಅವಕಾಶ ಬಂದಾಗ ಯಾವನು ಕೂಡ ಹಂಡ್ರೆಡ್ ಪರ್ಸೆಂಟ್ ಸಿದ್ಧನಾಗಿರುವುದಿಲ್ಲ. ಗೂಳಿ ಅಟ್ಟಿಸಿಕೊಂಡು ಬಂದಾಗ ಓಡೋಕೆ ರೆಡಿಯಾಗಿರಲ್ಲ. ಓಡ್ಬೇಕಷ್ಟೇ. ನಾನು ರೆಡಿ ಇಲ್ಲ ಅನ್ನೋ ನೆಪಗಳನ್ನೆಲ್ಲಾ ಮೂಟೆ ಕಟ್ಟಿ ಅಟ್ಟಕ್ಕೆ ಬಿಸಾಕಿ. ನಿಧಾನಕ್ಕೆ ಎಲ್ಲಾ ಸರಿಯಾಗತ್ತೆ.
13. ಕೆಟ್ಟೋರನ್ನ ಮುಟ್ಟಲೇಬೇಡಿ
ಕೆಟ್ಟೋರ ಜೊತೆಗಿರುವುದಕ್ಕಿಂತ ಒಬ್ಬರೇ ಇರುವುದು ಲೇಸು. ಸಂಬಂಧ ಪವಿತ್ರವಾದದ್ದು. ಅದು ಖುಷಿ ಕೊಡಬೇಕು. ಬೆಳೆಸಬೇಕು. ಕೈ ಹಿಡಿದು ನಡೆಸಬೇಕು. ಅದಾಗದೇ ಇದ್ದರೆ ಸಂಬಂಧವೇ ಬೇಡ. ಯಾವುದಕ್ಕೂ ಅವಸರ ಮಾಡಬೇಡಿ. ಒಂದೊಳ್ಳೆ ಟೈಮಲ್ಲಿ ಒಂದು ಒಳ್ಳೆ ಜೀವ ಒಂದೊಳ್ಳೆ ಕಾರಣಕ್ಕೆ ಸಿಕ್ಕೇ ಸಿಗುತ್ತದೆ. ಆ ಕ್ಷಣ ಬರಬೇಕಷ್ಟೇ. ಒಂದು ಮಾತು ನೆನಪಿಡಿ. ನೀವು ಒಂಟಿಯಾಗಿದ್ದೀರಿ ಅನ್ನೋ ಕಾರಣಕ್ಕೆ ಪ್ರೀತಿಯಲ್ಲಿ ಬೀಳ್ಳೋದು ಬೇಡ. ಸಿದ್ಧರಿದ್ದರೆ ಮಾತ್ರ ಪ್ರೀತಿಸಿ.
14. ಎಲ್ಲಾ ದೋಸೇನೂ ಸುಟ್ಟಿರೋಲ್ಲ!
ತುಂಬಾ ಜನ ಮಾಡೋ ತಪ್ಪಿದು. ಯಾವುದೋ ಒಂದು ಜೀವ ಕೆಟ್ಟದಾಗಿ ವರ್ತಿಸಿತು ಅಂತ ಎಲ್ಲರನ್ನೂ ದೂರ ಇಡೋದು. ಯಾರೂ ಬೇಡ ಅಂತ ನಂಬಿಕೆ ಕಳ್ಕೊàಳ್ಳೋದು. ಇದರಿಂದ ಏನೂ ಸಾಧಿಸಲ್ಲ. ನಂಬಿಕೆ ಬೇಕು. ಯಾವುದಾದರೊಂದು ಜೀವ ನಿಮ್ಮ ತುಟಿ ಮೇಲೆ ನಗು ಅರಳಿಸುವುದು ಶತಃಸಿದ್ಧ. ನಂಬಿ ಅಷ್ಟೇ.
15. ಜಗದ ಜೊತೆ ಜಗಳ ಬೇಕಾ?
ಯಾರಾದರೂ ನಿಮಗಿಂತ ವೇಗವಾಗಿ ಬೆಳೆಯುತ್ತಿದ್ದರೆ ತಲೆಕೆಡಿಸ್ಕೋಬೇಡಿ. ಪ್ರತಿಯೊಬ್ಬರಿಗೂ ಒಂದು ದಿನ ಬರುತ್ತದೆ. ಸೋ ನಿಮ್ಮ ರೆಕಾರ್ಡನ್ನು ನೀವು ಮುರಿಯುತ್ತಾ ಹೋಗಿ. ನಿಮ್ಮನ್ನು ನೀವು ಪರಿಶುದ್ಧಗೊಳಿಸಿ. ನಿಮ್ಮನ್ನು ನೀವು ಗೆಲ್ಲಿ. ಅದೇ ನಿಜವಾದ ಗೆಲುವು.
16. ಹೊಟ್ಟೆಯ ಕಿಚ್ಚಿಗೆ ತಣ್ಣೀರ್ ಸುರಿಸು
ನಿಮ್ಮನ್ನು ನೀವು ನೋಡುವುದಕ್ಕಿಂತ ಜಾಸ್ತಿ ಬೇರೆಯವರನ್ನು ನೋಡಿದ್ದಕ್ಕೆ ಮನಸ್ಸು ನಿಮಗೆ ಕೊಟ್ಟ ಕೆಟ್ಟ ಕೊಡುಗೆ ಜೆಲಸ್. ಇದುವರೆಗೆ ಜೆಲಸ್‌ನಿಂದಾಗಿ ಯಾರೂ ಉದ್ಧಾರವಾಗಿಲ್ಲ. ಪಾಸಿಟಿವ್ ಆಗಿ ತಗೊಂಡು ಬೇರೆಯೋರು ಜೆಲಸ್ ಪಡೋ ಥರ ಬೆಳೀರಿ.
17. ನೋ ಕಂಪ್ಲೇಂಟ್ಸ್ ಪ್ಲೀಸ್
ಬದುಕು ತಿರುವುಮುರುವಿರುವ ಉದ್ದಾನುದ್ದ ರಸ್ತೆ. ತಗ್ಗೂ ಇದೆ ಎತ್ತರಾನೂ ಇದೆ. ಹಂಗಾಯ್ತು ಹಿಂಗಾಯ್ತು ಅನ್ನೋ ಕಂಪ್ಲೇಂಟ್ಸು ನಿಮ್ಮನ್ನೇ ಕರಗಿಸ್ತದೆ. ಆಗೋದು ಆಗೇ ಆಗುತ್ತದೆ. ಅದಕ್ಕೋಸ್ಕರ ಒದ್ದಾಡೋದು ಬಿಡು. ಅಲ್ಲಲ್ಲೇ ಬಿಟ್ಟು ಮುಂದೆ ನಡಿ. ಒಂದು ಹಂತದಲ್ಲಿ ಏನೋ ಆಯ್ತು ಅಂತ ಅದರ ಕುರಿತಾಗಿ ಯೋಚೆ° ಮಾಡೋದು ವೇಸ್ಟ್. ತಿಳ್ಕೊಳ್ಳಿ, ನೀವು ಇವತ್ತು ನಿನ್ನೆಗಿಂತ ಸ್ಟ್ರಾಂಗ್ ಇದೀರಿ.
18. ಸಿಟ್ಟಿರ್ಲಿ, ದ್ವೇಷ ಬೇಡ
ಮನಸ್ಸಲ್ಲಿ ದ್ವೇಷ ಇಟ್ಕೊಂಡೇ ಜೀವನ ಸಾಗಿಸಿದ್ರೆ ಹೇಗ್ರಿ ಬೆಳೆಯೋದು? ದ್ವೇಷ ನೀವು ದ್ವೇಷಿಸೋರನ್ನು ನೋಯಿಸೋದಕ್ಕಿಂತ ಜಾಸ್ತಿ ನಿಮ್ಮನ್ನು ಸಾಯಿಸ್ತದೆ. ಯಾವತ್ತೋ ಒಂದು ದಿನ ನೀವು ಅವರಿಗೆ ನೋಯಿಸ್ಬೇಕು ಅಂತಿರ್ತೀರಿ. ಆ ಭಾವ ನಿಮ್ಮನ್ನು ಕ್ಷಣ ಕ್ಷಣ ನೋಯಿಸತ್ತೆ. ಅಂಥಾ ದ್ವೇಷ ಬೇಕಾ? ಕರುಣೆ ನಂದಾದೀಪ ಅನ್ನೋದು ಪರಮ ಸತ್ಯ. ಬಿಟಿºಡಿ. ಮರೆತಿºಡಿ. ಖುಷಿಯಾಗಿ. ಯಾವತ್ತೋ ಒಂದಿನ ಅವರೇ ಬೇಜಾರಾಗಿ ನಿಮ್ಮ ಕ್ಷಮೆ ಕೇಳ್ತಾರೆ. ನಿಮಗೆ ಖುಷಿ ಬೇಕು ಅನ್ನೋದಾದ್ರೆ ಕ್ಷಮಿಸಿ. ಒದ್ದಾಡಿ ಸಾಯ್ತಿàರಿ ಅನ್ನೋದಾದ್ರೆ ದ್ವೇಷಿಸಿ. ಚಾಯ್ಸ ಇಸ್ ಯುವರ್ಸ್.
19. ನಿಮ್ಮ ಕತೆ ನೀವೇ ಹೇಳ್ಬೇಡಿ
ನಿಮ್ಮ ಬಗ್ಗೆ ನೀವು ಎಷ್ಟು ಹೇಳಿದ್ರೂ ವೇಸ್ಟೇ. ನಿಮ್ಮ ಕೆಲಸ, ನಿಮ್ಮ ವರ್ತನೆ, ನಿಮ್ಮ ಗುಣ, ನಿಮ್ಮ ನಗು ನಿಮ್ಮನ್ನು ಜಗತ್ತಿಗೆ ಪರಿಚಯಿಸುತ್ತದೆ. ನಾನು ಹಾಗೆ ಮಾಡಿದೆ, ಹೀಗೆ ಮಾಡಿದೆ ಅಂತ ಹೇಳ್ತಾ ಇದ್ರೆ ಕಾಮಿಡಿಯಾಗ್ತಿàರಿ. ತುಂಬಿದ ಕೊಡ ಯಾವತ್ತೂ ತುಳುಕೋದಿಲ್ಲ.
20. ಸಿನಿಕತನ ಬೇಡಾರೀ
ಪ್ರತಿ ಕ್ಷಣವನ್ನೂ ಅಚ್ಚರಿಯೆಂಬಂತೆ ಬದುಕಿ. ಇದು ನಂಗೊತ್ತಿತ್ತು ಅನ್ನೋ ಬುದ್ಧಿವಂತಿಕೇನಾ ಮನಸ್ಸಲ್ಲಿಟ್ಕೊಳ್ಳಿ. ದೊಡ್ಡವರು ಅಂತ ಹೇಳಿಕೊಂಡವರಾರೂ ದೊಡ್ಡವರಲ್ಲ. ಭಯಂಕರ ಮೇಧಾವಿ ಋಷಿಗಳು ಮೌನವಾಗಿರುತ್ತಾರೆ. ಮಕ್ಕಳ ಮುಗ್ಧತೆ ಜಗತ್ತಿನ ಅತ್ಯಂತ ಶ್ರೇಷ್ಠ ಖುಷಿ. ಪ್ರತಿ ಕ್ಷಣವನ್ನೂ ಮಕ್ಕಳಂತೆ ಆಸ್ವಾದಿಸಿ. ನೀವು ಜಗತ್ತಿನ ಅತ್ಯಂತ ಖುಷಿಯ ಜೀವವಾಗುತ್ತೀರಿ. ಹ್ಯಾಪ್ಪಿಯಾಗಿರಿ. ಕ್ಲೈಮ್ಯಾಕ್ಸ್ ಹ್ಯಾಪ್ಪಿಯಾಗಿದ್ರೆ ಮನಸ್ಸು ಹಾರಾಡ್ತಿರತ್ತೆ.
– ಡಾ. ಸುಮಲತಾ ಜೋಶಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.