ಲೇ, ಮಳೆ ಹುಡ್ಗೀ
Team Udayavani, Dec 3, 2019, 12:07 PM IST
ಮಳೆ ಎಂದರೆ ಮನುಷ್ಯರಿಗಷ್ಟೇ ಅಲ್ಲ, ಪರಿಸರದ ಜೀವ ಸಂಕುಲಗಳಿಗೆಲ್ಲ ಸಂಭ್ರಮ. ಕಪ್ಪೆಗಳು ನೀರಿನಲ್ಲಿ ಕುಳಿತು ಗಾಳಿಯೊಂದಿಗೆ ರಾಗ ಭಾವವನ್ನು ತೇಲಿ ಬಿಡುತ್ತವೆ. ಮಿಡತೆಗಳು ಚಿರ್ ಎಂದು ಚೀರುತ್ತವೆ. ಗಂಡು ಹಕ್ಕಿಗಳು ಪುಕ್ಕಮುದುರಿ ಟೊಂಗೆಯ ಮೇಲೆ ಕುಳಿತರೆ, ಹೆಣ್ಣು ಹಕ್ಕಿಗಳು ಗೂಡು ಸೇರಿ ಮರಿಗಳಿಗೆ ಕಾವು ಕೊಡುತ್ತವೆ. ಜಿನುಗುವ ಹನಿಗೆಗಿಡ ಗಂಟೆಗಳೆಲ್ಲ ಪುಳಕಿತವಾಗಿ ನಮಗೂ ಜೀವವಿದೆ ಎಂಬುದನ್ನು ಸಾಬೀತು ಪಡಿಸುತ್ತವೆ.
ತೊಟ್ ತೊಟ್ ಎಂದು ತೊಟ್ಟಿಕ್ಕುವ ಹನಿಗಳ ಶಬ್ದ. ಹಳ್ಳಗಳ ಜುಳು ಜುಳುನಾದವನ್ನು ಕೇಳಿ ಪಶ್ಚಿಮ ಘಟ್ಟಗಳ ಸೊಬಗಿಗೆ ನಾನಂತೂ ಫೀದಾ ಆಗಿದ್ದೇನೆ. ಮಳೆ ಸುರಿಯುವ ಸಂದರ್ಭದಲ್ಲಿ ಹೆಂಚಿನ ಮನೆಯ ಚಿಮಣಿಗಳಿಂದ ಹೊರ ಬರುವ ಹೊಗೆ, ನೋಡುಗರ ಕಣ್ಣಿಗೆ ಬೆಚ್ಚನೆಯ ಅನುಭವನನ್ನು ನೀಡುತ್ತವೆ. ತಲೆಮಾರುಗಳು ಬದುಕುಳಿದ ಮಲೆನಾಡಿನ ಮನೆಯ ವಾಡೆಗಳಲ್ಲಿ ಅದೆಷ್ಟು ಬುತ್ತಿಬುತ್ತಿ ನೆನಪುಗಳು ಅಡಗಿವೆಯೋ.. ಅರಿತವರಾರು?ಹಲಸಿನ ಮರದಿಂದ ಕೆತ್ತಿಸಿದ ಮನೆಯ ಕಂಬಗಳು, ಗಾರೆಯ ಜಗುಲಿ, ವರಾಂಡದಲ್ಲಿ ಮುರಿದು ಬಿದ್ದ ಎತ್ತಿನ ಬಂಡಿ, ಹೋಳಾದ ಖಾಲಿ ಮಜ್ಜಿಗೆ ಸೋರೆ, ಜೇಡರ ಬಲೆಗೆ ಆಸರೆಯಾದ ಉಪ್ಪಿನಕಾಯಿ ಜಾಡಿ, ಗೋಡೆಯ ಮೇಲೆ ನೇತಾಡುವ ಧೂಳಿಡಿದ ಛತ್ರಿ, ಮೂಲೆ ಸೇರಿದ ಚರ್ಮದ ಚಪ್ಪಲಿಗಳು ಸಾಲು ಸಾಲು ಕತೆಗಳನ್ನು ಹೇಳುತ್ತವೆ.
ಕಾಫೀ ಕೊಡುವ ನೆಪದಲ್ಲಿ ಹೂವಿನ ನಗೆ ಬೀರುವ ಮತ್ತು ಕಣ್ಣುಗಳನ್ನೇ ದಿಟ್ಟಿಸಿ ನೋಡುವ ಕೇರಳದ ನನ್ನ ಸುಂದರಿಪ್ರತ್ಯಕ್ಷವಾಗಿ, ಈ ಬಯಲು ಸೀಮೆ ಹುಡುಗನಮುಂಗುರುಳನ್ನು ನೇವರಿಸಿ ಹೋದರೆ ಎಷ್ಟು ಚೆನ್ನ. ಅವಳೇ ವಾರೆಗಣ್ಣ ಸುಂದರಿ ಶರೋನ ಟ್ರೀಸಾ. ಒಮ್ಮೆನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ರೂಪು. ಆಕೆಯನ್ನು ನೋಡಲೆಂದೇ ಪಡ್ಡೆ ಹುಡುಗರ ತಂಡ ಕಟ್ಟಿಕೊಂಡು ಪ್ರತಿ ಮಧ್ಯಾಹ್ನ ಆಲದಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಿದ್ದೆ. ಎದುರಿಗೆ ಬಂದ ತಕ್ಷಣವೇ.. ನಗು ಚೆಲ್ಲುತ್ತಿದ್ದಳು. ಆಗ ನನ್ನ ಹೃದಯವನ್ನು ಮೀಟಿದಂತಾಗುತ್ತಿತ್ತು.. ಶರೋನಾಳ ಆ ಒಂದು ಸ್ಮೈಲ್ ನನ್ನ ಪ್ರಯತ್ನಕ್ಕೆ ಮತ್ತಷ್ಟು ಹುಮ್ಮಸ್ಸನ್ನು ನೀಡುತ್ತಿತ್ತು. ಕ್ಯಾಂಪಸ್‌ನಲ್ಲಿರುವ ಸ್ನೇಹಿತರನ್ನೆಲ್ಲ ವಿಚಾರಿಸಿದನಂತರ ಅವಳ ಕುಲಗೋತ್ರ ತಿಳಿಯಿತು. ಪ್ರವಾಸೋದ್ಯಮ ಅಧ್ಯಯನ ಮಾಡಲು, ನಮ್ಮ ವಿಶ್ವ ವಿದ್ಯಾಲಯಕ್ಕೆ ಬಂದಿದ್ದಾಳೆ ಎಂದು.
ಬೇಟೆಗಾರರ ವಂಶದವನು ನಾನು. ಇಟ್ಟ ಗುರಿಯನ್ನು ಎಂದೂ ಮಿಸ್ ಮಾಡಿಲ್ಲ. ಸಧ್ಯಕ್ಕೆ ಆ ಹಕ್ಕಿಯನ್ನು ಬಲೆ ಇಲ್ಲದೆ ಹಿಡಿಯಲು ಪ್ರಯತ್ನಿಸುತ್ತಿದ್ದೇನೆ. ಸಿಕ್ಕಿದರೂ ಸಂತೋಷ. ಸಿಗದೆ ಹಾರಿಹೋಗುವ ಸ್ವಾತಂತ್ರ್ಯವೂ ಅವಳಿಗಿದೆ. ಬಯಸಿ ಬಂದರೆ ನನ್ನ ಪ್ರೇಮವನ್ನು ಧಾರೆ ಎರೆಯುತ್ತೇನೆ. ಬೇಟೆಗಾರ ಎಂದ ಮಾತ್ರಕ್ಕೆ.. ಯಾರನ್ನೂ, ಯಾವುದನ್ನೂ ಪಳಗಿಸುವ
ಮನೋಭಾವ ನನ್ನದಲ್ಲ. ಇಚ್ಚೆ ಪಟ್ಟರೆ ಇದೇ ಮಲೆನಾಡಿನಲ್ಲಿ ಸ್ವಚ್ಚಂದವಾಗಿ ಹಾರಬಹುದು. ಇಲ್ಲದಿದ್ದರೆ ಹಂಚಿ ಹೋಗಬಹುದು. ನಾಳೆಯೂ ಅದೇ ಆಲದ ಮರದ ಕೆಳಗೆ, ಕಟ್ಟೆಯ ಮೇಲೆ ಕಾದು ಕುಳಿತಿರುತ್ತೇನೆ. ಅವಳ ನಿಷ್ಕಲ್ಮಷ ನಗುವಿಗಾಗಿ.
–ಹರೀಶ್ ಕಮ್ಮನಕೋಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.