![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Nov 12, 2019, 5:45 AM IST
ಮುದ್ದಿನ ಹುಡುಗಿ ಚೆಂದ ,ಮೌನದ ರೂಪವೇ ಅಂದ. ಚಂದಕ್ಕೆ ಚಂದ ಅಂತೆ ನಿನ್ನ ಅಂದವೂ… ಈ ಹಾಡು, ನಿನ್ನನ್ನು ನೋಡಿದ ಕೂಡಲೇ ಮನದ ಮೂಲೆಯಲ್ಲಿ ಪಲ್ಲವಿಸುತ್ತದೆ.ಮೌನಂ ಸಮ್ಮತಿ ಲಕ್ಷ್ಮಣಂ ಎಂಬ ಮಾತಿನಂತೆ,ನಿನ್ನ ಪ್ರತಿಯೊಂದು ಮೌನವೂ ಸಾವಿರ ಅರ್ಥವನ್ನು ನೀಡಬಲ್ಲದು.
ಹೌದು, ನಿನ್ನ ಪರಿಚಯ ನಿನ್ನೆ ಮೊನ್ನೆಯದಲ್ಲ. ಬರೋಬ್ಬರಿ ಐದು ವರ್ಷಗಳಷ್ಟು ಹಳೆಯದು. ಯಾವತ್ತೂ ನಿನ್ನ ನೋಡಿದೆನೋ ಅವತ್ತೇ ನನ್ನ ಎದೆಯಾಳದಲ್ಲಿ ಪ್ರೀತಿಯ ಮೊದಲ ಪಲ್ಲವಿ ಚಿಗುರಿತು. ಅಲ್ಲಿಂದಲೇ ಶುರುವಾಯಿತು ನೋಡು, ನಿನ್ನ ಮಾತನಾಡಿಸಲೆಂದೇ ದಿನಕ್ಕೊಂದು ನೆಪವಿಡುತ್ತಿದ್ದೆ. ದಿನಕ್ಕೊಂದು ಬಗೆಯ ಸರ್ಕಸ್ ಮಾಡಿ ನಿನ್ನ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೆ. ಗೊತ್ತಿಧ್ದೋ ಗೊತ್ತಿಲ್ಲದೆಯೋ ನಿನ್ನ ಪ್ರೀತಿ ಎಂಬ ಮಾಯಾಜಾಲಕ್ಕೆ ಬಿದ್ದಿದ್ದೆ. ಆದರೆ, ಅದನ್ನೆಲ್ಲವೂ ಅರಿಯದಷ್ಟು ತೀರಾ ಮುಗೆª ನೀನಲ್ಲ. ನಿನ್ನ ಮುಗª ನಗು ಕೆಲವೊಮ್ಮೆ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಿತ್ತು. ಇಷ್ಟು ವರ್ಷಗಳ ನಂತರವೂ ನನ್ನನ್ನು ಕಾಯಿಸುವ ಹಠ ಯಾಕೆ ಎಂಬುದೇ ನನಗೆ ತಿಳಿಯಲಿಲ್ಲ. ಇಲ್ಲಿಯವರೆಗೂ ನನ್ನ ತಾಳ್ಮೆಯನ್ನು ಪರೀಕ್ಷೆಯಲ್ಲಿ ಜಯಶಾಲಿಯಾಗಿದ್ದೀಯಾ ಎಂದು ಭಾವಿಸಿದ್ದೇನೆ .
ಕೇಳು, ನಿನ್ನಷ್ಟು ಮೌನಿ ನಾನಲ್ಲ. ಏನೇ ಇದ್ದರೂ ಮರು ಮಾತಿಲ್ಲದೇ ಹೇಳಿ ಬಿಡುವ ವ್ಯಕ್ತಿತ್ವ ನನ್ನದು. ಆದರೆ, ನಿನ್ನ ಎದುರಲ್ಲಿ ನಿಂತು ಮಾತನಾಡುವ ಧೈರ್ಯ ನನಗೆ ಬರಲೇ ಇಲ್ಲ. ನಿನಗಾಗಿ ಮಾಡುತ್ತಿದ್ದ ಒಂದೊಂದು ಸರ್ಕಸ್‌ಗಳನ್ನು ನೆನಪಿಸಿಕೊಂಡರೆ ನಗು ಒತ್ತರಿಸಿಕೊಂಡು ಬರುತ್ತದೆ. ದಿನಕ್ಕೊಂದು ನೆಪವೊಡ್ಡಿ ನಿನ್ನ ಎದುರು ಬಂದು ನಿಲ್ಲುವ ಪರಿ ಬೇಜಾರಾಗಿದೆ. ನಿನ್ನ ಕಲರ್‌ಫುಲ್ ಕನಸುಗಳಿಗೆ ನಾನು ಬಣ್ಣ ಹಚ್ಚುವೆನು. ಇನ್ನಾದರೂ ಮೌನ ಮುರಿದು ಉತ್ತರಿಸಿ ಬಿಡು ಬಲು ಬೇಗ.
-ಸಾಯಿನಂದಾ ಚಿಟ್ಪಾಡಿ
You seem to have an Ad Blocker on.
To continue reading, please turn it off or whitelist Udayavani.