ಹೈಯರ್‌ ಸ್ಟಡಿ ಲೈಫ್


Team Udayavani, Dec 17, 2019, 6:12 AM IST

haiyer-life

ಚೆನ್ನಾಗಿ ಓದಬೇಕು, ಹೆಚ್ಚು ಅಂಕ ಪಡೆಯಬೇಕು, ಒಳ್ಳೆ ಕೆಲಸ ಹಿಡಿಯಬೇಕು ಎಲ್ಲವೂ ಕನಸೇ. ಅತಿಯಾದರೆ ಅಮೃತವೂ ವಿಷ ಅಂತಾರಲ್ಲ, ಹಾಗೇನೇ, ಜೀವನ ಪರ್ಯಂತ ಬರೀ ಓದುತ್ತಲೇ ಇದ್ದರೆ ಗತಿ ಏನು? ಹೀಗೆ ಓದುತ್ತಲೇ ಇರುವವರ ಜಗತ್ತೇ ಬೇರೆ. ಎಲ್ಲ ಮುಗಿದ ಮೇಲೆ ನನಗೆಲ್ಲಾ ಗೊತ್ತಿದೆ ಅನ್ನೋ ಅಹಂ ಒಳಗೆ ಸೇರಿ, ಅವರಿಗೆ ಜಗತ್ತೇ ಬೇರೆ ರೀತಿ ಕಾಣುತ್ತಿರುತ್ತದೆ. ಇಂತಿಪ್ಪ, ಅತಿಯಾಗಿ ಓದಿಕೊಂಡಿರುವವರ ಬದುಕು ಹೇಗಿರುತ್ತೆ ಗೊತ್ತಾ?

ನಾಲ್ಕೈದು ಡಿಗ್ರಿ ಪಡೆದು, ದಪ್ಪದಪ್ಪ ಪದಕಗಳನ್ನು ಕೊರಳಿಗೆ ಹಾಕಿಕೊಂಡವರ ಬದುಕು ಕೂಡ ಪದಕದ ಮೇಲಿನ ಬಂಗಾರದಂತೆ ಚೆಂದವಾಗಿರುತ್ತದಾ? ಗೊತ್ತಿಲ್ಲ. ಅದು ಬಿಡಿ, ಓದುವುದು ಒಳ್ಳೆಯದು ತಾನೆ? ಹೌದು. ತುಂಬಾ ಜಾಸ್ತಿನೇ ಓದುವುದು? ಅದು ಕೂಡ ಒಳ್ಳೆಯದೇ.. ಆದರೆ.. ಒಂದೆರಡು ಉದಾಹರಣೆಗಳನ್ನು ಕೊಡದೆ ಹೇಳ ಹೊರಟ ಈ ವಿಷಯದ ಸಂಕಟ ನಿಮಗೆ ಅರ್ಥವಾಗಲಿಕ್ಕಿಲ್ಲ. ಆವತ್ತೂಂದಿನ ಮಗುವಿನ ಅಡ್ಮಿಷನ್‌ಗೆ ಅಂತ ಮಗುವನ್ನು ಕರೆದುಕೊಂಡು ಬಂದಿದ್ದ ವ್ಯಕ್ತಿ ಮತ್ತು ಅವರ ಪಕ್ಕದಲ್ಲಿದ್ದ ಮಗುವನ್ನು ನೋಡಿ, “ಏನು ಮೊಮ್ಮಗನನ್ನು ಸೇರ್ಸೋಕೆ ಬಂದ್ರಾ?’ ಅನ್ನುತ್ತಾ ನಕ್ಕೆ.

“ಹೌದು ಸಾರ್‌, ಆದರೆ ಇವನು ನನ್ನ ಮೊಮ್ಮಗನಲ್ಲ. ಮಗ!’ ಅಂದಿದ್ದರು ಅವರು. ಮುಂದೆ ಮಾತು ಬೆಳೆಯಲಿಲ್ಲ. ಆದರೆ, ನನ್ನ ತಲೆಯಲ್ಲಿ ನೂರು ವಿಚಾರಗಳು ಓಡಿದವು. ಡಬಲ್‌ ಪಿಎಚ್‌.ಡಿ ಮಾಡಿರುವ, ನಲವತ್ತೈದರ ಆಚೆಯ ಈ ವಯಸ್ಕನಿಗೆ ಎಲ್‌.ಕೆ.ಜಿ ಸೇರುವ ಮಗುವಿದೆ ಅಂದರೆ ಹೇಗೆ? ಬಹುಶಃ ಅವರನ್ನು ತಡೆದು ಇದೆಲ್ಲಾ ಏನು? ಅಂತ ಕೇಳಿದ್ದರೆ “ತುಂಬಾ ಓದಬೇಕು ಅಂತ ಚಟಕ್ಕೆ ಬಿದ್ದೆ ನೋಡಿ. ಓದ್ತಾ ಓದ್ತಾ ವಯಸ್ಸು ಕಳೆದುಹೊಯಿತು. ಓದು ಮುಗಿದು ಮದುವೆಯಾಗುವ ಹೊತ್ತಿಗೆ ಎಲ್ಲವೂ ಸಾಕಾಗಿ ಹೊಯಿತು’ ಅಂತ ಖಂಡಿತ ಉತ್ತರಿಸುತ್ತಿದ್ದ.

ನಲವತ್ತಾದರೂ ಮದುವೆಯಾಗದ ಹುಡುಗಿ, ಅದ್ದೂರಿಯಾಗಿಯೇ ಮದುವೆಯಾಗಿ ದಾಂಪತ್ಯ ಜೀವನ ಆರಂಭಿಸಿ, ಒಂದೇ ವರ್ಷಕ್ಕೆ ಬೀದಿಯಲ್ಲಿ ರಾದ್ಧಾಂತ ಮಾಡಿಕೊಳ್ಳುವ ಹೆಚ್ಚು ಮತ್ತು ಕಡಿಮೆ ಓದಿಕೊಂಡ ದಂಪತಿಗಳು, ಬರೀ ಓದು ಪರೀಕ್ಷೆಗಳಲ್ಲೇ ಬದುಕಿನ ಬಹುಪಾಲು ಸಮಯವನ್ನು ಕಳೆದುಕೊಂಡು, ಬದುಕಿನ ಒಂದು ಹಂತದಲ್ಲಿ ನಿರಾಶೆಗೊಳ್ಳುವ ವ್ಯಕ್ತಿಗಳು. ಇಂಥವರ ಬದುಕಿಗೆ ಶಾಪವಾಗಿ ಕಾಡಿಬಿಡುತ್ತಾ ಅನಿಸಿಬಿಡುತ್ತದೆ. ಈ ಓದಿಗೆ ಎರಡು ರೂಪಗಳಿವೆ.

ಒಂದು ಅಕಾಡೆಮಿಕ್‌, ಇನ್ನೊಂದು ನಾನ್‌ ಅಕಾಡೆಮಿಕ್‌. ಅಕಾಡೆಮಿಕ್‌ ಓದಿನಲ್ಲಿ ಸಿಲಬಸ್‌, ಪರೀಕ್ಷೆ, ಮಾರ್ಕ್ಸ್, ಫ‌ಲಿತಾಂಶ ಇರುತ್ತವೆ. ಆದರೆ, ನಾನ್‌ ಅಕಾಡೆಮಿಕ್‌ನಲ್ಲಿ ಅವರವರ ಭಾವದಂತೆ ಇಷ್ಟದ ವಿಚಾರಗಳನ್ನು ಓದಿಕೊಂಡು ತನ್ನಷ್ಟಕ್ಕೆ ತಾನಿರುವುದು. ಇಂಥ ನಾನ್‌ ಅಕಾಡೆಮಿಕ್‌ ಓದು, ಬದುಕಿನ ದಾರಿಗೆ ಬೆಳಕಾಗಿದ್ದೇ ಹೆಚ್ಚು. ಅಕಾಡೆಮಿಕ್‌ ಓದಿನಲ್ಲಿ ನಿಮಗೊಂದು ಜಿದ್ದು ಇರುತ್ತದೆ. ಮೂರು ಮೂರು ಡಿಗ್ರಿ, ರ್‍ಯಾಂಕ್‌, ಹೆಚ್ಚು ಓದಿಕೊಂಡೆ ಎಂಬ ಧಿಮಾಕು… ಇವುಗಳನ್ನು ದಕ್ಕಿಸಿಕೊಳ್ಳಲು ಹೆಣಗುತ್ತಿರುತ್ತಾರೆ. ಹೀಗೆ, ಒದ್ದಾಡುತ್ತಿರುವಾಗಲೇ ಬದುಕಿನ ವ್ಯಾಲಿಡಿಟಿ ಮುಗಿದುಬಿಡುತ್ತದೆ.

ಬದುಕು ಒಂದು ; ಓದು ಹಲವು: ಓದು ಒಳ್ಳೆಯದು ಮತ್ತು ಮನುಷ್ಯ ಕಡ್ಡಾಯವಾಗಿ ಓದಲೇಬೇಕು. ಆದರೆ, ಅದು ನಮ್ಮ ಬದುಕುನ್ನು ಪಕ್ಕಕ್ಕೆ ಸರಿಸುವಷ್ಟಲ್ಲ. ಇರುವುದು ಒಂದೇ ಬದುಕು. ಅದಕ್ಕೆ ಪರ್ಯಾಯವಾದ್ದದ್ದು ಇಲ್ಲ. ಓದಿನ ಹೆಚ್ಚುಗಾರಿಕೆಯು ತನ್ನೊಂದಿಗೆ ತಂದು ಹಾಕುವ ವಿಚಿತ್ರ ಸಂಗತಿಗಳು ಓದಿದವನ ಬದುಕಿನ ರುಚಿಯನ್ನು ತೀರಾಸಪ್ಪೆಗೊಳಿಸಬಲ್ಲವು. ಹೆಚ್ಚಿನ ಓದುಗಾರಿಕೆ ಮತ್ತು ಬದುಕು ಈ ಎರಡನ್ನೂ ಸಮತೋಲಿಸಿಕೊಂಡವರು ಬಹಳ ಕಡಿಮೆ.

ಓದಿನ ಹುಚ್ಚಿನಲ್ಲಿ ಮುಳುಗಿ ಬದುಕನ್ನು ಸೈಡಿಗಿಟ್ಟವರು ಹಲವರು. ಬದುಕು ಮುಗಿದರೂ ಓದುವುದು ಮುಗಿಯುವುದಿಲ್ಲ. ಅದಕ್ಕಾಗಿ ಬದುಕನ್ನು ಮುಗಿಸಿಕೊಳ್ಳುತ್ತಾ ಓದುತ್ತಾ ಕೂರುವುದಲ್ಲ. ಆಸೆಬುರುಕತನಕ್ಕೆ ಬಿದ್ದು ಪರೀಕ್ಷೆಗಳ ಮೇಲೆ ಪರೀಕ್ಷೆಗಳನ್ನು ತೆಗೆದುಕೊಂಡು ರ್‍ಯಾಂಕ್‌ ಮೇಲೆ ರ್‍ಯಾಂಕ್‌ಗಳನ್ನು ಕೊರಳಿಗೆ ನೇತುಹಾಕಿಕೊಂಡು ಒಂದೊಳ್ಳೆ ಜಾಬ್‌ ಹುಡುಕುವಲ್ಲೇ ಬದುಕಿನ ಬಹುಪಾಲು ಸಮಯವನ್ನು ಮುಗಿಸಿಬಿಟ್ಟರೆ ಹೇಗೆ? ಓದು ಎಂದಿಗೂ ಮುಗಿಯುವುದಿಲ್ಲ.

ಆದ್ಯತೆಗಳು ಬದಲಾಗಿವೆ: ಕಾಲ ಬದಲಾದಂತೆ, ಮನುಷ್ಯನ ಆದ್ಯತೆಗಳು ಕೂಡ ಬದಲಾಗುತ್ತವೆ. ಇದು ಹೆಚ್ಚು ಹೆಚ್ಚು ಓದಿಕೊಳ್ಳುತ್ತಿರುವ ಜಗತ್ತು. ಅದೇ ಓದು ಬದಲಾವಣೆಗೆ ಮತ್ತಷ್ಟು ವೇಗ ನೀಡಿದೆ. ಜಾಗತೀಕರಣ ಈಗ ಮನೆಯಂಗಳದ ಗಿಡ. ಹೆಚ್ಚು ಓದಿದ ಹುಡುಗ- ಹುಡುಗಿಯರು, ತಮ್ಮಿಷ್ಟದ ಬದುಕನ್ನು ತುಳಿಯಲು ಬಯಸುತ್ತಾರೆ. ಉದಾಹರಣೆಗೆ- ಮದುವೆ ಈಗ ಅವರಿಗೆ ಬದುಕಿನ ಮೊದಲ ಆದ್ಯತೆಯಾಗಿ ಉಳಿದಿಲ್ಲ. ಹಳೆಯ ಸಿಕ್ಕುಗಳಲ್ಲೇ ಉಳಿದುಬಿಡಲು ಅವರಿಗೆ ಮನಸ್ಸಿಲ್ಲ. ಪ್ರತಿಷ್ಠೆ ಮತ್ತು ಗುರುತಿಸಿಕೊಳ್ಳುವಿಕೆ ಮೊದಲ ಸಾಲಿನಲ್ಲಿ ಬಂದು ಕೂತಿದೆ. ನಾನು ಹೆಚ್ಚು ಓದಿಕೊಂಡಿದ್ದೇನೆ ಎನ್ನುವ ಭಾವವೇ ಬದುಕಿನ ಆದ್ಯತೆಗಳಲ್ಲಿ ಏರುಪೇರು ತಂದಿದೆ.

ಉದ್ಯೋಗದ ಕಳವಳಗಳು: ನಮ್ಮಲ್ಲಿ ಹೆಚ್ಚು ಹೆಚ್ಚು ಪದವಿ ಪಡೆದವರಿಗೆ ಬೇಗ ಒಂದು ನೌಕರಿ ಸಿಗುತ್ತದೆ ಅನ್ನೋದು ಅನುಮಾನ. ಗೆಳೆಯರಲ್ಲಿ ಕೆಲವರು ಕ್ಯಾಂಪಸ್‌ ಸೆಲೆಕ್ಷನ್‌ ಆಗಿ ಕೆಲಸ ಮಾಡಲು ಹೋದರೆನ್ನಿ, ಆಗ ಮನಸ್ಸು ನಾನು ಮಾತ್ರ ಹೈಯರ್‌ ಸ್ಟಡೀಸ್‌ ಅಂತ ಇದ್ದೇನೆ. ಓದು ಮುಗಿದ ಮೇಲೆ ಕೆಲಸ ಸಿಗದೇ ಹೋದರೆ ಅಂತ ಕೊರಗುತ್ತಿರುತ್ತದೆ. ಉದ್ಯೋಗ ಸಿಗದೇ ತನ್ನ ಬದುಕುನ್ನಾದ್ರೂ ಆತ ಹೇಗೆ ಕಟ್ಟಿಕೊಳ್ಳುವುದು? ಹೀಗಾಗಿ, ಆತ ಅಥವಾ ಅವಳು ಹೆಚ್ಚು ಓದಿದ್ದರೂ, ಕಡಿಮೆ ಓದಿಗೆ ಸಿಗಬಹುದಾದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರೊಳಗೊಂದು ವಿಚಿತ್ರ ತಳಮಳ ಏಳುವುದು ಆಗಲೇ.

ಹೆಚ್ಚು ಓದುವುದೇ ಬೇಡ್ವ?: ಬೇಡ ಅಂತ ಹೇಳಿದರೆ ಅದು ಮೂರ್ಖತನವಾದೀತು. ಓದು ಬೇಕು ಬದುಕಿಗೆ ಆದರೆ ಅದೇ ಬದುಕಾಗಬಾರದು ಅಲ್ವಾ? ಬದುಕು ಬೇಡುವ ಹಲವು ಕಾರ್ಯರೂಪಕಗಳ ನಡುವೆಯೂ ಓದನ್ನು ಒಂದು ಕಡೆ ಜತನವಾಗಿ ಸಾಕಿಕೊಳ್ಳ­ ಬಹುದು. ಬದುಕು ಅನ್ನೋದು ಇರೋದು ಒಂದೇ. ಇಡೀ ಬದುಕನ್ನು ಪರೀಕ್ಷೆ ಮತ್ತು ಫ‌ಲಿತಾಂಶಗಳಲ್ಲೇ ಮುಗಿಸಿ ಬಿಟ್ಟರೆ ಹೇಗೆ? ಎರಡನ್ನೂ ಬ್ಯಾಲೆನ್ಸ್‌ ಮಾಡು­ವುದು ಗೊತ್ತಿದ್ದರೆ ತುಂಬಾ ಒಳ್ಳೆಯದು. ಒಂದು ಹಂತದ­ ವರೆಗೆ ಬದುಕು ಕಟ್ಟಿಕೊಳ್ಳಲು ಓದಿ. ನಂತರ ಕಟ್ಟಿಕೊಂಡ ಬದುಕನ್ನು ಇನ್ನಷ್ಟು ಸುಂದರಗೊಳಿಸಿಕೊಳ್ಳಲು ನಾನ್‌ ಅಕಾಡೆಮಿಕ್‌ ಆಗಿ ಓದಿ. ತುಂಬಾ ತಿಳಿದಕೊಂಡವನ ಕಣ್ಣಿನಲ್ಲಿ ಬದುಕು ಮತ್ತು ಜಗತ್ತು ಸುಂದರವಾಗಿಯೇ ಕಾಣಿಸುತ್ತವೆ. ಬದುಕಿಗಾಗಿ ಓದನ್ನು ದೂರ ಇಡುವುದು, ಓದಿಗಾಗಿ ಬದುಕನ್ನು ಪಕ್ಕಕ್ಕಿಡುವುದು ಎರಡೂ ಸರಿ ಅಲ್ಲ. ಎರಡನ್ನೂ ಸರಿದೂಗಿಸಿಕೊಳ್ಳುವುದನ್ನು ಕಲಿಯಬೇಕು. ಆಗ ಮಾತ್ರ ಲೈಫ್ ಈಸ್‌ ಬ್ಯೂಟಿಫ‌ುಲ್‌ ಅನಿಸುತ್ತದೆ.

ಮದುವೆ ತಡವಾಗುತ್ತೆ!: ಇಷ್ಟದ ಓದಿನ ಬೆನ್ನು ಹತ್ತಿದಾಗ ಅದು ಸಾಕಷ್ಟು ಸಮಯ ಕೇಳುತ್ತದೆ. ಉದಾಹರಣೆಗೆ- ಪಿಎಚ್‌.ಡಿ, ಅದರಲ್ಲೂ ವಿಜ್ಞಾನದ ವಿಷಯಗಳಲ್ಲಿ ತೆಗೆದು ಕೊಂಡರೆ ಐದು ವರ್ಷದಲ್ಲಿ ಮುಗಿಯೋದು 7-8 ವರ್ಷ ಆಗಬಹುದು. ಎಷ್ಟೋ ಸಲ ಗೈಡ್‌ಗಳ ಸಮಸ್ಯೆಯಾಗಿ ಡಿಗ್ರಿ ಪಡೆಯೋದೇ ಲೇಟಾಗಬಹುದು. ಎಲ್ಲ ಅಗತ್ಯಗಳನ್ನು ಪಕ್ಕಕ್ಕೆ ಸರಿಸಿ, ಇವನ್ನು ಓದಿ ಮುಗಿಸುವುದರೊಳಗೆ ಮದುವೆ ವಯಸ್ಸು ನಿಮ್ಮನ್ನು ಬಿಟ್ಟು ಓಡಿ ಹೋಗಿರುತ್ತದೆ. ಮದುವೆಯೊಂದೇ ಬದುಕಲ್ಲ. ಆದರೆ, ಅದಿಲ್ಲದೆ ಯಶಸ್ವಿ ಬದುಕಿಲ್ಲ. ತೀರಾ ತಡವಾದ ಮದುವೆಗಳು ಒಳ್ಳೆಯ ಬದುಕಿನ ಲಕ್ಷಣದಂತೆ ತೋರಲಾರವು.

ಹುಡುಗಿಯರ ಪಾಲಿಗಂತೂ ಈ ವಿಚಾರ ದೊಡ್ಡ ಸವಾಲೇ ಸರಿ! ನಿನ್ನ ಗೆಳತಿಯರೆಲ್ಲಾ ಮದುವೆಯಾಗುತ್ತಿದ್ದಾರೆ. ನೀನೂ ಆಗು ಅಂತಾರೆ. ಆದರೆ ಈ ಹುಡುಗಿಗೆ, ಕಣ್ಣ ಮುಂದಿರುವ ಹೈಯರ್‌ಸ್ಟಡಿ/ ಪ್ರಮೋಷನ್‌ನ ಕನಸು ಹೊಳೆಯುತ್ತಿರುತ್ತದೆ. ಹೀಗಾಗಿ, ಹೆತ್ತವರು ತೋರಿಸಿದ ಗಂಡನ್ನು ಮನಸ್ಸು ಒಪ್ಪೊಲ್ಲ, ತಾವು ನೋಡಿಕೊಳ್ಳಲು ಸಮಯ ಇರೋಲ್ಲ. ತೀರಾ ಡಬ್ಬಲ್‌, ಥ್ರಿಬಲ್‌ ಡಿಗ್ರಿ, ಡಾಕ್ಟರಿಕೆ ಓದಿಕೊಂಡಿರುವ ವಧು, ತನಗಿಂತ ಕಡಿಮೆ ಓದಿದವನನ್ನು ಒಪ್ಪಲಾರಳು. ಗಂಡಿನ ವಯಸ್ಸು ಹೆಣ್ಣಿಗಿಂತ ಕಡಿಮೆ ಇರಬೇಕು ಅನ್ನೋ ನಿಯಮದಂತೆ, ಅವಳ ಓದಿಗಿಂತ ಹೆಚ್ಚಿಗೆ ಓದಿದ ವರನನ್ನೇ ಹುಡುಕುವುದು ಅಲಿಖೀತ ನಿಯಮವಾಗಿದೆ. ಎಷ್ಟೋ ಸಲ, ವಯಸ್ಸು, ಜಾತಕ ಹೊಂದಾಣಿಕೆ ಆದರೂ, ಓದುಗಳು ಹೊಂದಾಣಿಕೆ ಆಗೋಲ್ಲ.

ಯಾರ ಜೊತೆಗೂ ಸೇರಲ್ಲ: ಹೆಚ್ಚು ಓದಿಕೊಂಡಿರುವವರು ಒಂಥರಾ “ಬುದ್ಧಿಜೀವಿ’ಗಳಂತಾಗಿ ಬಿಟ್ಟಿರುತ್ತಾರೆ. ತಮಗೆ ಎಲ್ಲವೂ ತಿಳಿದಿದೆ. ನಾವು ತಿಳಿದಿರುವುದೇ ಎಲ್ಲರಿಗಿಂತ ಶ್ರೇಷ್ಠ. ಏಕೆಂದರೆ, ಹೆಚ್ಚಿಗೆ ಓದಿದ್ದೇನೆ ಎಂಬ ಮನೋ ಧೋರಣೆಯ ಬೇಲಿ ಹಾಕಿಕೊಂಡಿರುತ್ತಾರೆ. ಇದು ಅವನನ್ನು ಬೇರೆಯ­ವರೊಂದಿಗೆ ಮುಕ್ತವಾಗಿ ಬೆರೆಯಲು ಅಡ್ಡಿಪಡಿಸುತ್ತದೆ. ಬುದ್ಧಿವಂತ ಅನ್ನೋ ಅತಿಯಾದ ಅಹಂ ಅವನನ್ನು ಒಂಟಿ ಮಾಡುತ್ತದೆ. ಆಗ ಭಾವನಾತ್ಮಕವಾಗಿ ಕೆಲವು ವಿಚಾರಗಳು ಸವಾಲಾಗಬಹುದು. ಸಾಧನೆ ಮಾಡಲಿಕ್ಕೆ ದೊಡ್ಡ ದೊಡ್ಡ ಓದಿನ ಪದವಿಗಳೇ ಬೇಕು ಅಂತೇನೂ ಇಲ್ಲ. ಸ್ಟೀವ್‌ ಜಾಬ್ಸ್, ಮಾರ್ಕ್‌ ಜುಗರ್‌ ಬರ್ಗ್‌ ಅವರು ಸಾಧನೆ ಮಾಡುವ ಹೊತ್ತಿಗೆ ತುಂಬಾ ದೊಡ್ಡ ಓದಿನ ಪದವಿಗಳನ್ನೇನೂ ಪಡೆದಿರಲಿಲ್ಲ.

* ಸದಾಶಿವ ಸೊರಟೂರು

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.