ಜಿರಳೆಗೆ ಅವನ ಹೆಸರು…
Team Udayavani, Mar 5, 2019, 12:30 AM IST
ಪ್ರೀತಿ ಪ್ರೇಮ ಪುಸ್ತಕದ ಬದನೇಕಾಯಿ ಅಂತ ಹೇಳಿದವರೇ ಲವ್ ಮ್ಯಾರೇಜಾದರು. ಹೀಗಂದಮೇಲೆ ಲವ್ ಬಗ್ಗೆ ಯಾರೇನೇ ಹೇಳಿದರೂ, ಕಿವಿ ಹಿಂಡಿದರೂ ಹುಡುಗ ಹುಡುಗಿಯರು ಕೇಳಬೇಕೆ? ಒಮ್ಮೆಯಾದರೂ ಪ್ರೀತಿಯ ಸಮುದ್ರದಲ್ಲಿ ಈಜಲೆಂದು ಇಳಿದು ಬ್ರೇಕಪ್ ಆದಾಗ ಮುಳುಗಿ ನೀರು ಕುಡಿದು ಹೇಗೋ ಮೇಲೆದ್ದು ಬರುತ್ತಾರೆ.
ಬ್ರೇಕಪ್ ಆದಾಗ ಕೆಲವರು ಉಗ್ರಮಾರ್ಗವನ್ನು ಹಿಡಿದರೆ ಇನ್ನು ಕೆಲವರು ತಮ್ಮನ್ನು ತಾವು ಶಿಕ್ಷಿಸಿಕೊಳ್ಳುವ ಸಲುವಾಗಿ ಅನಾಹುತಕ್ಕೂ ಇಳಿಯುತ್ತಾರೆ.
ಇವೆಲ್ಲಾ ಸಂಕಷ್ಟಗಳನ್ನು ನೋಡಿಯೇ ಇಂಗ್ಲೆಂಡಿನ ಒಂದು ಮೃಗಾಲಯ ಭಗ್ನಪ್ರೇಮಿಗಳಿಗೆ ನೆರವಾಗಲು ಒಂದೊಳ್ಳೆ ಉಪಾಯ ಮಾಡಿದೆ. ತಮ್ಮ ಪ್ರೀತಿಯನ್ನು ಮಾನ್ಯ ಮಾಡದ ಮಾಜಿ ಪ್ರಿಯತಮ ಅಥವಾ ಪ್ರಿಯತಮೆಯ ಹೆಸರನ್ನು ಜಿರಳೆಗೆ ಇಟ್ಟು ಸಮಾಧಾನ ಪಟ್ಟುಕೊಳ್ಳುವ ವಿನೂತನ ಉಪಾಯ ಇದು. ಭಗ್ನಪ್ರೇಮಿಗಳು ಮಾಡಬೇಕಿರುವುದಿಷ್ಟೆ. ಈ ಮೃಗಾಲಯಕ್ಕೆ ತೆರಳಿ ಎಕ್ಸ್(ಮಾಜಿ) ಲವರ್‌ಗಳ ಹೆಸರನ್ನು ಅಲ್ಲಿ ನೋಂದಾಯಿಸುವುದು. ಮೃಗಾಲಯದವರು ಆ ಹೆಸರನ್ನು ಜಿರಳೆಯೊಂದಕ್ಕೆ ನಾಮಕರಣ ಮಾಡಿ ಒಂದು ಸರ್ಟಿಫಿಕೆಟನ್ನು ಕೊಡುತ್ತಾರೆ. ಇದರಿಂದ ಭಗ್ನಪ್ರೇಮಿಗಳ ಮನಸ್ಸಿಗೆ ಸಮಾಧಾನ ಸಿಗುತ್ತಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.