ಮನೆ ತಲುಪಿಸಿದ ಪುಣ್ಯಾತ್ಮ
Team Udayavani, Jun 19, 2018, 3:19 PM IST
ಸುಮಾರು 13 ವರ್ಷಗಳ ಹಿಂದಿನ ಘಟನೆ. ನಾನಾಗ ತುಮಕೂರಿನ ಸಿದ್ಧಗಂಗಾ ಮಠದಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದೆ. ಬೇಸಿಗೆ ರಜೆಯ ಸಲುವಾಗಿ ನನ್ನೂರಾದ ವಿಜಯಪುರಕ್ಕೆ ಬಸ್ಸಿನಲ್ಲಿ ಹೊರಟೆ. ಬಸ್ಸು ತುಂಬಾ ರಶ್ ಇದ್ದಿದ್ದರಿಂದ ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಕಳೆಯಬೇಕಾಯಿತು. ಬೆಳಗ್ಗೆ ವಿಜಯಪುರ ಬಸ್ ನಿಲ್ದಾಣಕ್ಕೆ ತಲುಪಿದಾಗ ತುಂಬಾ ಸುಸ್ತಾಗಿ ಹೋಗಿದ್ದೆ. ಇರುವ ಹಣವನ್ನೆಲ್ಲಾ ಬಸ್ ಚಾರ್ಜ್‌ಗೆ ಕೊಟ್ಟಿದ್ದರಿಂದ ಕೈಯಲ್ಲಿ ಒಂದು ರೂಪಾಯಿಯೂ ಇರಲಿಲ್ಲ. ಮನೆಗೆ ಬರುತ್ತಿರುವ ಸುದ್ದಿಯನ್ನು ನಮ್ಮ ತಂದೆಗೆ ಹೇಳಿರಲಿಲ್ಲ.
ಆಗೆಲ್ಲಾ ಈಗಿನಷ್ಟು ಮೊಬೈಲ್ ಬಳಕೆ ಇರಲಿಲ್ಲ. ಒಂದೆಡೆ ಆಯಾಸ, ಹಸಿವು, ನಿದ್ರೆಯಿಲ್ಲದೆ ಬಳಲಿ ಬೆಂಡಾಗಿ ಹೋಗಿದ್ದೆ. ಮತ್ತೂಂದೆಡೆ ಭಾರವಾದ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗುವಷ್ಟು ಶಕ್ತಿ ನನ್ನಲ್ಲಿರಲಿಲ್ಲ. ಹೀಗಾಗಿ ದಿಕ್ಕು ತೋಚದೆ ಬಸ್ ನಿಲ್ದಾಣದ ಹೊರಗೆ ಕುಳಿತುಬಿಟ್ಟೆ. ದಾರಿಹೋಕರು ನನ್ನತ್ತ ಕನಿಕರದ ನೋಟ ಬೀರುತ್ತಾ ಹೋಗುತ್ತಿದ್ದರೇ ಹೊರತು ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಆಗ ನನ್ನನ್ನು ಗಮನಿಸಿದ ಆಟೋ ಚಾಲಕರೊಬ್ಬರು ಬಳಿ ಬಂದು ನನ್ನ ಬಗ್ಗೆ ವಿಚಾರಿಸಿದರು. ಸುಸಾಗಿದ್ದ ನನ್ನನ್ನು ಅವರೇ ಸ್ವತಃ ಆಟೋದಲ್ಲಿ ಕುಳ್ಳಿರಿಸಿದರು. ನಂತರ ವಿಳಾಸ ಕೇಳಿ ಮನೆಯತ್ತ ಕರಕೊಂಡು ಹೋದರು. ಅಲ್ಲಿ ನೋಡಿದರೆ ನಮ್ಮ ಮನೆಯವರು ಮನೆ ಖಾಲಿ ಮಾಡಿ ಬೇರೊಂದು ಮನೆಗೆ ಶಿಫ್ಟ್ ಆಗಿದ್ದರು. ಈ ಸಂಬಂಧವಾಗಿ ಅಪ್ಪ ಬರೆದಿದ್ದ ಪತ್ರ ತಲುಪುವ ಮೊದಲೇ ನಾನು ಹೊರಟು ಬಂದಿದ್ದೆ.
ಇಷ್ಟು ವಿಷಯ ತಿಳಿದಾಗ, ಆಟೋಚಾಲಕರು ಅಕ್ಕಪಕ್ಕದವರನ್ನು ವಿಚಾರಿಸಿ ನಮ್ಮ ಕುಟುಂಬದವರು ಇದ್ದ ಮನೆಯ ಹೊಸ ವಿಳಾಸ ಪಡೆದುಕೊಂಡರು. ನನ್ನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ, ನನ್ನ ತಂದೆಗೆ ಕಿವಿಮಾತು ಹೇಳಿ, ಯಾವುದೇ ಹಣ ತೆಗೆದುಕೊಳ್ಳದೇ ಹೊರಟುಹೋದರು. ಆ ಮಹಾನುಭಾವನ ಹೆಸರು ನನಗೆ ಗೊತ್ತಿಲ್ಲ. ಆದರೆ, ಅವರು ಮಾಡಿದ ಉಪಕಾರ ಇವತ್ತಿಗೂ ನನಗೆ ನೆನಪಿದೆ. ಮಾನವೀಯತೆ ಜೀವಂತವಿದೆ ಎಂಬುದಕ್ಕೆ ಇಂಥ ಪುಣ್ಯಾತ್ಮರೇ ದೊಡ್ಡ ಉದಾಹರಣೆ.
– ಹನಮಂತ ಕೊಪ್ಪದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.