ಮನೆಯೇ ಕಾರ್ಯಾಲಯ


Team Udayavani, Jan 2, 2018, 10:50 AM IST

02-17.jpg

ಬೆಳಗ್ಗಿನಿಂದ ಸಂಜೆವರೆಗೂ ಆಫೀಸಿನಲ್ಲಿ ದುಡಿಯುವ ಅನಿವಾರ್ಯತೆ ಈಗಿಲ್ಲ. “ದುಡಿಯುವ ಅನಿವಾರ್ಯತೆ ಇಲ್ಲವೇ?!’ ಎಂದು ಅಷ್ಟು ಬೇಗ ಖುಷಿಪಡದಿರಿ. ಇಲ್ಲಿ ಹೇಳ್ತಿರೋದು “ಆಫೀಸಿನಲ್ಲಿ’ ದುಡಿಯುವ ಅನಿವಾರ್ಯತೆ ಇಲ್ಲ ಎಂದು. ಅಂದರೆ, ಮನೆಯಲ್ಲಿ ನಿಮ್ಮವರ ಜೊತೆ ಇದ್ದುಕೊಂಡೇ ಕಚೇರಿ ಕೆಲಸ ಮಾಡಬಹುದು. ಹಾಜರಾತಿ ನೀಡಲೇಬೇಕಿದ್ದ ಮದುವೆಗೆ ಹೋಗಿಯೂ, ಅಲ್ಲಿಂದಲೇ ಫೈಲುಗಳನ್ನು ಮೂವ್‌ ಮಾಡಬಹುದು. “ವರ್ಕ್‌ ಫ್ರಂ ಹೋಂ’ ಎನ್ನುವ ಪದ್ಧತಿ ಹಳತೇ, ಆದರಿದು “ವರ್ಕ್‌ ಅವೇ ಫ್ರಂ ಆಫೀಸ್‌’. ಬಹಳಷ್ಟು ಎಂ.ಎನ್‌.ಸಿ ಕಂಪನಿಗಳು ತಮ್ಮ ನೌಕರರಿಗೆ ಈ ಸವಲತ್ತನ್ನು ದಯಾಲಿಸುತ್ತಿವೆ. ಕಾನ್‌ಫ‌ರೆನ್ಸ್‌ ಕಾಲ್‌, ವಾಟ್ಸಾಪ್‌, ಸ್ಕೈಪ್‌ನಂಥ ಹಲವು ತಂತ್ರಜ್ಞಾನಗಳಿಂದ ಇದು ಸಾಧ್ಯವಾಗುತ್ತಿದೆ. ಇಷ್ಟು ಒಳ್ಳೆಯ ಸವಲತ್ತು ಎಲ್ಲಾ ಕಂಪನಿಗಳಲ್ಲೂ ಇರಬಾರಾದಿತ್ತಾ ಅನ್ನೋ ಹಾಗಿಲ್ಲ. ಏಕೆಂದರೆ ಇದರ ಹಿಂದೆ ಒಂದು ಗುಟ್ಟೂ ಇದೆ. 

ಚಳಿಗಾಲದ ಚುಮು ಚುಮು ಬೆಳಗಿನಲ್ಲಿ ಬೇಗ ಎದ್ದು, 7 ಗಂಟೆಗೆಲ್ಲ ಆಫೀಸಿನಲ್ಲಿರಬೇಕಾದ ನಟರಾಜ, ಮನೆಯಿಂದಲೇ ಕೆಲಸ ಶುರು ಮಾಡಿ, ಬೆಳಗ್ಗೆ 9ರ ಸುಮಾರಿಗೆ ತಿಂಡಿ ಮುಗಿಸಿ ನಿರುಮ್ಮಳವಾಗಿ ಆಫೀಸಿಗೆ ಹೊರಡುತ್ತಾನೆ, ಅಷ್ಟು ಹೊತ್ತಿಗೆಲ್ಲ ಆಫೀಸಿನಲ್ಲಿ ಮಾಡಲೇಬೇಕಿದ್ದ ನಟರಾಜನ ಕೆಲವು ಕೆಲಸಗಳು ಮುಗಿದಿರುತ್ತವೆ. ಮಕ್ಕಳು ಶಾಲೆಯಿಂದ ಬಂದ ನಂತರ ಪರೀಕ್ಷೆಗೆ ಓದಿಸಬೇಕೆಂದು ಸಂಜೆ 5ರ ಹೊತ್ತಿಗೆ ಮನೆ ಸೇರುವ ಸುಧಾ, ಮಕ್ಕಳಿಗೆ ತಿಂಡಿ ಕೊಟ್ಟು, ಒಂದು ಸುತ್ತಿನ ಪಾಠ ಮುಗಿಸಿ, ಓದಲು, ಬರೆಯಲು ಹೇಳಿ, 6.30ಕ್ಕೆ ಕಚೇರಿಯ ಮೀಟಿಂಗ್‌ Join ಆಗುತ್ತಾಳೆ’. 

ಇತ್ತೀಚೆಗೆ ಶುರು ಮಾಡಿದ ಹೊಸ ಪ್ರಾಜೆಕ್ಟ್ ಮುಗಿಯುವ ಹಂತದಲ್ಲಿರುವಾಗಲೇ ರಮೇಶ್‌ಗೆ ಆ್ಯಕ್ಸಿಡೆಂಟ್‌ ಆಗಿದೆ. ಆಫೀಸಿಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗದೇ, ಮನೆಯಿಂದಲೇ ಕೆಲಸ ಮಾಡಿ ಪ್ರೊಜೆಕ್ಟ್ ಮುಗಿಸಿದ್ದೇ ಅಲ್ಲದೆ ಬಾಸ್‌ನಿಂದ ಭೇಷ್‌ ಎನ್ನಿಸಿಕೊಂಡಿದ್ದಾನೆ. ತಾಯ್ತನದ ಖುಷಿಯನ್ನು ಅನುಭವಿಸುತ್ತಿರುವ ದಿವ್ಯಾ ತನ್ನ ಆರು ತಿಂಗಳಿಂದ ಮನೆಯಲ್ಲಿದ್ದುಕೊಂಡು ಮಗುವನ್ನು ನೋಡಿಕೊಳ್ಳುತ್ತಿದ್ದಾಳೆ. ಹಾಗೆಂದು ಕಚೇರಿ ಕೆಲಸಕ್ಕೆ ರಾಜಿನಾಮೆ ನೀಡಿಲ್ಲ. ಮಗುವನ್ನು ನೋಡಿಕೊಂಡೇ ಕಚೇರಿ ಕೆಲಸವನ್ನೂ ನಿರ್ವಹಿಸುತ್ತಿದ್ದಾಳೆ.

ಕಚೇರಿ ಕೆಲಸ ಆಫೀಸ್‌ನಿಂದಾಚೆಗೂ ವಿಸ್ತರಿಸುತ್ತಿದೆ. ತಮ್ಮ ಕೆಲಸದ ಅವಧಿಯ ನಂತರವೂ ಇವರು ಕೆಲಸದ ಬಗ್ಗೆ, ಜವಾಬ್ದಾರಿಯ ಬಗ್ಗೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ಅವರು ಎಲ್ಲಿರುತ್ತಾರೋ ಅಲ್ಲಿಯೇ ಒಂದು ಆಫೀಸ್‌ ಕ್ಯುಬಿಕಲ್‌ ನಿರ್ಮಿಸಿಕೊಂಡು ಬಿಡುತ್ತಾರೆ. ತಮ್ಮ ಕೆಲಸದಲ್ಲಿಯೇ ತಲ್ಲೀನರಾಗಿ ಹೋಗುತ್ತಾರೆ. ತಮಗೆ ನಿರ್ವಹಿಸಿದ ಕೆಲಸವನ್ನು ಜವಾಬ್ದಾರಿಯಿಂದ, ಅಚ್ಚುಕಟ್ಟಾಗಿ ನಿಭಾಯಿಸುವುದಲ್ಲದೇ, ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತಾರೆ. 

  ಆಧುನಿಕ ಸಂವಹನ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೆಲಸವನ್ನು ಆಫೀಸಿನಿಂದಾಚೆಗೆ ವಿಸ್ತರಿಸುವಲ್ಲಿ ಐ.ಟಿ. ಕಂಪನಿಗಳದ್ದೇ ಸಿಂಹಪಾಲು. ಇತ್ತೀಚೆಗೆ ಈ ಒಂದು ಸೌಲಭ್ಯ ಉದ್ಯೋಗಿಗಳನ್ನು ಜವಾಬ್ದಾರಿಗಳನ್ನಾಗಿ ಮಾಡಲು ಮತ್ತು ಅವರಿಂದ ಉತ್ತಮ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಕಂಪನಿಗಳಿಗೆ ಸಹಕಾರಿಯಾಗಿದೆ. ಹಾಗೆಂದು ಎಲ್ಲಾ ಐ.ಟಿ. ಕಂಪನಿಗಳು ಈ ಸೌಲಭ್ಯ ಒದಗಿಸುವುದಿಲ್ಲ. ಈ ಕಂಪನಿಗಳಲ್ಲಿ ಎರಡು ಬಣಗಳಿವೆ. ಆಫೀಸಿನಿಂದಾಚೆಗೆ ಮಾಡುವ ಕೆಲಸ ಯಾವುದೇ ಉಸ್ತುವಾರಿಯಿಲ್ಲದೇ, ಬೇಜವಾಬ್ದಾರಿಯಿಂದ ಕೂಡಿರುತ್ತದೆಂದೂ, ಉದ್ಯೋಗಿಯು ಹೆಚ್ಚಿನ ಸಮಯವನ್ನು ತನ್ನ ಖಾಸಗಿ ಕೆಲಸಗಳಿಗೆ ವ್ಯಯಿಸುತ್ತಾನೆಂದೂ ಒಂದು ಬಣ ವಾದಿಸುತ್ತದೆ. ಆದರೆ, ಮನೆಯಲ್ಲಿದ್ದೇ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಉದ್ಯೋಗಿಯು ಸಂತೃಪ್ತಿಯಿಂದ, ಹೆಚ್ಚಿನ ಒತ್ತಡವಿಲ್ಲದೆ, ಮಾನಸಿಕ ನೆಮ್ಮದಿಯಿಂದ ದುಡಿಮೆಗೆ ನಿಲ್ಲುತ್ತಾನೆ. ಇದರಿಂದ ಉದ್ಯೋಗಿಯ ಸಾಮರ್ಥಯ ಮತ್ತು ಜವಾಬ್ದಾರಿ ಹೆಚ್ಚಾಗುತ್ತದೆಂದೂ ಇನ್ನೊಂದು ಬಣ ವಾದಿಸುತ್ತದೆ. 

ಖಾಸಗಿತನ ಇರೋಲ್ಲ
“ಝಿಂದಗಿ ನಾ ಮಿಲೇಗಿ ದುಬಾರಾ’ ಹಿಂದಿ ಸಿನಿಮಾದಲ್ಲಿ ಮೂವರು ಸ್ನೇಹಿತರು ಐರೋಪ್ಯ ದೇಶಗಳಿಗೆ ಪ್ರವಾಸ ಹೋದಾಗ ಕಾರಿನಲ್ಲಿ ಪ್ರಯಾಣಿಸುವ ದೃಶ್ಯವೊಂದು ಬರುತ್ತದೆ. ಸುತ್ತಲೂ ಕಣಿವೆ, ಬೆಟ್ಟ ಗುಡ್ಡಗಳ ಹಸಿರು ಪ್ರದೇಶ. ನಡುವೆ ಕಾರು ಗಕ್ಕನೆ ನಿಲ್ಲುತ್ತದೆ. ಒಬ್ಬ ಸ್ನೇಹಿತ ಕಾರಿನಿಂದಿಳಿದು ಲ್ಯಾಪ್‌ಟಾಪ್‌ ಹೊರತೆಗೆಯುತ್ತಾನೆ. ಮಿಕ್ಕ ಇಬ್ಬರು ಗೆಳೆಯರು ಆಶ್ಚರ್ಯದಿಂದ ಏನಾಗುತ್ತಿದೆಯೆಂದು ನೋಡುತ್ತಿದ್ದರೆ, ಸ್ನೇಹಿತ ಮಹಾಶಯ ಜಪಾನಿ ಬಾಸ್‌ನೊಂದಿಗೆ ಕಚೇರಿ ವಿಚಾರವಾಗಿ ಸಂವಹನದಲ್ಲಿ ತೊಡಗುತ್ತಾನೆ. 

ಆ ಸಂದರ್ಭದಲ್ಲಿ ಒಬ್ಬ ಗೆಳೆಯ ಹೇಳುತ್ತಾನೆ “ಮೊದಲು ಸುತ್ತಲಿನ ಸುಂದರ ಪ್ರಕೃತಿಯನ್ನು ನೋಡು. ಆಮೇಲೆ ಅದರ ನಡುವೆ ನಿಂತು ಲ್ಯಾಪ್‌ಟಾಪ್‌ ಎದುರುಗಡೆ ಬಾಸ್‌ಗೆ ಸಲಾಮು ಹಾಕುತ್ತಿರುವ ನಮ್ಮ ಗೆಳೆಯನನ್ನು ನೋಡು!’ ಒಂದು ರೀತಿಯಲ್ಲಿ ನಮ್ಮ ಔದ್ಯೋಗಿಕ ಬದುಕಿನ ಅನಿವಾರ್ಯತೆಯನ್ನು ಅಣಕ ಮಾಡುತ್ತಿರುವಂತಿದೆ ಈ ದೃಶ್ಯ. ಈ ದೃಷ್ಟಿಯಿಂದ ನೋಡುವುದಾದರೆ ಖಾಸಗಿತನವನ್ನು(ಪ್ರೈವೇಟ್‌ ಸ್ಪೇಸ್‌) ಆಕ್ರಮಿಸಿಕೊಂಡುಬಿಟ್ಟಿದೆ ಎಂದೆನಿಸುವುದೂ ಸುಳ್ಳಲ್ಲ.

ಮಾನವ ಗಂಟೆಗಳ ಲೆಕ್ಕಾಚಾರ
ಕಂಪನಿಗಳು ಸಮ್ಮ ನೌಕರರಿಗೆ ವರ್ಕ್‌ ಫ್ರಂ ಹೋಂ ಸೌಲಭ್ಯವನ್ನು ನೀಡುವುದರ ಹಿಂದೆ ಭಾರಿ ಲೆಕ್ಕಾಚಾರವಿದೆ. ಬೆಂಗಳೂರಿನಂಥ ನಗರಗಳಲ್ಲಿ ಮನೆಯಿಂದ ಆಫೀಸಿಗೆ ಮತ್ತು ಆಫೀಸಿನಿಂದ ಮನೆಗೆ ಇರುವ ಪ್ರಯಾಣದ ಅವಧಿ ಸುಮಾರು ಎರಡೂವರೆ ಗಂಟೆ ಅಂದುಕೊಳ್ಳೋಣ. ಕಂಪನಿಯಲ್ಲಿ 40 ಉದ್ಯೋಗಿಗಳಿದ್ದಾರೆಂದರೆ, ಸುಮಾರು 100 ಮಾನವ ಗಂಟೆಗಳು ಬರೀ ಪ್ರಯಾಣಕ್ಕೇ ವ್ಯಯವಾಗುತ್ತದೆ. ಇದು ಒಬ್ಬ ಉದ್ಯೋಗಿಯ 12 ದಿನಗಳ ಕೆಲಸದ ಅವಧಿ. ಪ್ರತಿ ಉದ್ಯೋಗಿಯು ಪ್ರತಿ ತಿಂಗಳು, ಒಂದು ವಾರದಷ್ಟು ಕೆಲಸದ ಅವಧಿಯನ್ನು ಪ್ರಯಾಣದಲ್ಲಿಯೇ ಕಳೆಯಬೇಕಾದ ಪರಿಸ್ಥಿತಿ. 

ಅದೇ ವರ್ಕ್‌ ಅವೇ ಫ್ರಂ ಆಫೀಸ್‌ ಕೊಟ್ಟುಬಿಟ್ಟರೆ ಅಷ್ಟು ಅವಧಿ ಉಳಿಸಿದಂತಾಯಿತಲ್ಲ. ನೆನಪಿರಲಿ, ಕಂಪನಿಗಳ ಲೆಕ್ಕದಲ್ಲಿ “ಟೈಮ್‌ ಈಸ್‌ ಮನಿ’ ಅಂದರೆ “ಸಮಯ ಎಂದರೆ ಹಣ’. ಆಫೀಸ್‌ ಕ್ಯಾಬ್‌, ಕಚೇರಿ ಜಾಗ, ರಜಾದಿನಗಳು, ವಿದ್ಯುತ್‌ ಬಾಡಿಗೆ, ಆಫೀಸ್‌ ಸಪ್ಲೆ„ಸ್‌ ಎಲ್ಲದರ ಲೆಕ್ಕಾಚಾರವನ್ನೂ ಸಂಸ್ಥೆ ಮಾಡುತ್ತೆ. ಒಂದೇ ಆಫೀಸಾದರೆ ಈ ಮೊತ್ತ ಹೆಚ್ಚು ಎಂದೆನಿಸಲಿಕ್ಕಿಲ್ಲ. ಆದರೆ ನೂರಾರು ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಸಂಸ್ಥೆಯಾದರೆ ಈ ಮೊತ್ತ ತುಂಬಾ ದೊಡ್ಡದಿರುತ್ತೆ.

ಕಚೇರಿ ಬದುಕು
“ವರ್ಕ್‌ ಅವೇ ಫ್ರಂ ಆಫೀಸ್‌’ ನಿಂದಾಗುವ ಒಂದು ತೊಡಕೆಂದರೆ ಕಚೇರಿ ಕೆಲಸ ಯಾಂತ್ರಿಕವಾಗಿಬಿಡುವ ಅಪಾಯ. ಅಂದರೆ ವಿಡಿಯೊ ಕಾಲ್‌, ಫೋನ್‌ ಕಾಲ್ಸ್‌ ಮುಂತಾದ ಸಂವಹನ ತಂತ್ರಜ್ಞಾನಗಳಿದ್ದರೂ ಮುಖತಃ ಸಂವಹನೆಯಲ್ಲಿರುವ ಮಾನವೀಯ ಸ್ಪರ್ಶ ಇಲ್ಲವಾಗಿ, ತಪ್ಪಾಗಿ ವಿಷಯಗಳನ್ನು ಅಧೈìಸಿಕೊಳ್ಳಬಹುದು. ಅಥವಾ ಸಂವಹನೆಗೇ ಹೆಚ್ಚಿನ ಸಮಯ ವ್ಯಯವಾಗಬಹುದು. ಅಲ್ಲದೆ ಕಚೇರಿ ವಾತಾವರಣವನ್ನು ನೌಕರರು ಮಿಸ್‌ ಮಾಡಿಕೊಳ್ಳಬಹುದು. ತಮ್ಮ ಜೊತೆಗೆ ಯಾರು ಯಾರು ಕೆಲಸ ಮಾಡುತ್ತಿದ್ದಾರೆ, ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಏನೇನು ಪ್ರಗತಿಯಾಗಿದೆ ಮುಂತಾದ ಸಂಗತಿಗಳು ತಿಳಿಯದೇ ಹೋಗಬಹುದು. ಅದೇ ಕಚೇರಿಯಲ್ಲಾದರೆ ವಿರಾಮದ ವೇಳೆ ಸಹೋದ್ಯೋಗಿಗಳೊಂದಿಗೆ ಮಾತಾಡುತ್ತಾ ಅಂಥ ವಿಚಾರಗಳು ಕಿವಿಗೆ ಬೀಳುತ್ತವೆ.

ಟೆಕ್ಕಿಗಳು ಮಾತ್ರವಲ್ಲ
ವರ್ಕ್‌ ಅವೇ ಪ್ರಂ ಆಫೀಸ್‌ ಸವಲತ್ತು ಕೇವಲ ಎಂ.ಎನ್‌.ಸಿ ಅಥವಾ ಸಾಫ್ಟ್ವೇರ್‌ ಕಂಪನಿಗಳಲ್ಲಿ ಮಾತ್ರವೇ ಇಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಇದೆ. ಆಯಾ ತರಗತಿಗಳದೇ ಒಂದೊಂದು ಪ್ರತ್ಯೇಕ ವಾಟ್ಸಾಪ್‌ ಗ್ರೂಪ್‌ಗ್ಳಿರುತ್ತವೆ. ಆ ದಿನದ ಪಠ್ಯಗಳನ್ನು, ಹೋಂವರ್ಕ್‌ಗಳನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿನಿಮಯ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಕಲಿಕೆಗೆ ಸಂಬಂಧಿಸಿದ ಯಾವುದೇ ಸಂದೇಹವನ್ನು ಯಾವ ಹೊತ್ತಿನಲ್ಲಿ ಬೇಕಾದರೂ ವಾಟ್ಸಾಪ್‌ ಗ್ರೂಪಿನಲ್ಲಿ ಹಂಚಿಕೊಂಡು ಪರಿಹರಿಸಿಕೊಳ್ಳಬಹುದು. ಇದರಿಂದ ಇತರೆ ವಿದ್ಯಾರ್ಥಿಗಳೂ ಆ ವಿಷಯದ ಕುರಿತು ತಿಳಿದುಕೊಂಡಂತಾಗುತ್ತದೆ. ಹೀಗಾಗಿ ಅನೇಕ ಶಿಕ್ಷಣ ಸಂಸ್ಥೆಗಳು ವಾಟ್ಸಾಪ್‌ ಕಲಿಕೆಗೆ ಒತ್ತು ನೀಡುತ್ತಿವೆ. 

ವಾಟ್ಸಾಪ್‌ ಬೇಡವೇ ಬೇಡ
ಕೆಲವು ಕಂಪನಿಗಳು ವಾಟ್ಸಾಪ್‌, ಸ್ಕೈಪ್‌, ಟೀಮ್‌ವ್ಯೂವರ್‌ ಮುಂತಾದ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಅದಕ್ಕೆ ಕಾರಣ ಕಾನ್ಫಿಡೆನ್ಷಿಯಾಲಿಟಿ, ಅರ್ಥಾತ್‌ ಗೌಪ್ಯತೆ. ವಾಟ್ಸಾಪಿನಲ್ಲಿ ಹಂಚಿಕೊಳ್ಳುವ ಯಾವ ಮಾಹಿತಿಗಳೂ ಜಗಜ್ಜಾಹೀರಾಗುವುದಿಲ್ಲ ಎಂಬುದಕ್ಕೆ ಯಾವ ಖಾತರಿಯೂ ಇಲ್ಲ. ಅಲ್ಲದೆ ಈ ಮಾಹಿತಿಗಳನ್ನು ತಂತ್ರಜ್ಞಾನ ಸಂಸ್ಥೆ ಯಾವುದೇ ರೀತಿಯಲ್ಲಿಯೂ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೆಲ ಕಂಪನಿಗಳು ಕಚೇರಿ ಕೆಲಸಕ್ಕೆ ತಮ್ಮದೇ ಸ್ವಂತ ಸರ್ವರ್‌ ಮತ್ತು ಇಮೇಲ್‌ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಈ ಕಂಪನಿಗಳು ವರ್ಕ್‌ ಅವೇ ಫ್ರಂ ಆಫೀಸ್‌ ಸವಲತ್ತು ನೀಡುವುದಿಲ್ಲವೆಂದಲ್ಲ. ಆದರೆ ಅವರದೇ ಪ್ರತ್ಯೇಕ ಇಂಟರ್‌ನೆಟ್‌ ಸಂಪರ್ಕ, ಪ್ರತ್ಯೇಕ ಲ್ಯಾಪ್‌ಟಾಪ್‌ಗ್ಳನ್ನು ಒದಗಿಸುತ್ತವೆ.

ಬಲರಾಜ್‌

ಟಾಪ್ ನ್ಯೂಸ್

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.