ಬಾಹ್ಯಾಕಾಶ ವಿಜ್ಞಾನಿ ಆಗಲು ಏನು ಮಾಡಬೇಕು?


Team Udayavani, Mar 16, 2021, 7:00 PM IST

ಬಾಹ್ಯಾಕಾಶ ವಿಜ್ಞಾನಿ ಆಗಲು ಏನು ಮಾಡಬೇಕು?

ಸಾಂದರ್ಭಿಕ ಚಿತ್ರ

ಬಾಹ್ಯಾಕಾಶವೆಂಬುದು ಸದಾಕಾಲದ ಒಂದು ಬೆರಗಿನಂಗಳ. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ವಿವಿಧ ವಿಷಯಗಳಲ್ಲಿ ಪರಿಣತಿಯನ್ನು ಸಾಧಿಸಿರುತ್ತಾರೆ. ಅವರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗಗಳನ್ನು ನಡೆಸಲೆಂದು ಸ್ಪೇಸ್‌ ಷಟಲ್‌ ಮೂಲಕ ಪಯಣಿಸಿದ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಅವರಂಥವರು ಇದ್ದಾರೆ. ಮಂಗಳಗ್ರಹದಲ್ಲಿ ನೌಕೆಯೊಂದು ಯಶಸ್ವಿಯಾಗಿ ಇಳಿಯಲು ಪಥ ಮಾರ್ಗದರ್ಶನ ಮಾಡಿದ ಸ್ವಾತಿ ಮೋಹನ್‌ ಇದ್ದಾರೆ. ಭಾರತದ ಮಹತ್ತರ ಕ್ಷಿಪಣಿ ಯೋಜನೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿರುವ “ಅಗ್ನಿಪುತ್ರಿ’ ಟೆಸ್ಸಿ ಥಾಮಸ್‌ ಇದ್ದಾರೆ. ಅವರನ್ನು ವೃತ್ತಿಯಾರಂಭದಲ್ಲೇ ಗುರುತಿಸಿ ಪ್ರೋತ್ಸಾಹಿಸಿದ ಕ್ಷಿಪಣಿ ಪಿತಾಮಹ ಎ.ಪಿ.ಜೆ. ಅಬ್ದುಲ್‌ ಕಲಾಮ್‌ ಅವರಿದ್ದಾರೆ. ಅವರ ಗುರುಗಳಾಗಿದ್ದ ವಿಕ್ರಮ್‌ ಸಾರಾಭಾಯ್‌ ಅವರಿದ್ದಾರೆ. ಸಾರಾಭಾಯ್‌ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ. ಮಾಡಿ ಸ್ವದೇಶಿ ಉಪಗ್ರಹಗಳನ್ನು ನಿರ್ಮಿಸಿದ ಯು. ಆರ್‌.ರಾವ್‌ ಅವರೂ ಇದ್ದಾರೆ. ಸ್ವದೇಶಿ ಯುದ್ಧವಿಮಾನ ತೇಜಸ್‌ ಕಟ್ಟಿದ ಕೋಟಾ ಹರಿನಾರಾಯಾಣ ಅವರಿದ್ದಾರೆ, ಅದನ್ನು ಯಶಸ್ವಿಯಾಗಿ ಹಾರಿಸಿದ ಸಾಹಸ ಪೈಲಟ್‌ ಗಳಿದ್ದಾರೆ. ಹೈಪರ್‌ ಸಾನಿಕ್‌ ಕ್ಷಿಪಣಿಗಳ ಅಭಿವೃದ್ಧಿಗೆ ನಾಂದಿ ಹಾಡಿದ ಪ್ರಹ್ಲಾದ ರಾಮರಾವ್‌ ಇದ್ದಾರೆ. ಇವರೆಲ್ಲರ ವಿನ್ಯಾಸಗಳಿಗೆ ದ್ರವಚಲನ ವಿಜ್ಞಾನದ ಭಾಷ್ಯ ಬರೆದ ರೊದ್ದಂ ನರಸಿಂಹ ಅವರಿದ್ದಾರೆ. ಇಂಥ ನೂರಾರು ಮಹನೀಯರು ಕೇವಲ ಗಗನನೌಕೆ, ಉಪಗ್ರಹಗಳನ್ನಷ್ಟೇ ಉಡಾಯಿಸಲಿಲ್ಲ, ಭಾರತದ ಕೀರ್ತಿಯನ್ನೂ ಮುಗಿಲೆತ್ತರಕ್ಕೇರಿಸಿದ್ದಾರೆ.

ಯಾರೆಲ್ಲಾ ವಿಜ್ಞಾನಿಯಾಗಬಹುದು? :

ಇವರ ಸಾಧನೆಗಳನ್ನು ಪತ್ರಿಕೆ, ಟೀವಿಗಳಲ್ಲಿ ಕಂಡಾಗಲೆಲ್ಲಾ ಅದೆಷ್ಟೋ ಮಕ್ಕಳಲ್ಲಿ ತಾವೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆನ್ನುವ ಆಸೆ ಚಿಗುರುತ್ತದೆ. ಅದು ಸಹಜ. ಎಲ್ಲರ ಬಾಲ್ಯದಲ್ಲೂ ಹಕ್ಕಿಯಂತೆ ಹಾರುವ ಕನಸು ಇದ್ದೇ ಇರುತ್ತದೆ. ವಿಮಾನ ಅಥವಾ ಬಾಹ್ಯಾಕಾಶ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕೆಂಬ ಇಚ್ಛೆಯುಳ್ಳವರು ಗಣಿತ ಮತ್ತು ಭೌತವಿಜ್ಞಾನದಲ್ಲಿ ಆಸಕ್ತರಾಗಿರಬೇಕಾಗುತ್ತದೆ. ಈ ವಿಷಯಗಳಲ್ಲಿ ಬಿ. ಎಸ್‌.ಸಿ, ಎಂ.ಎಸ್‌.ಸಿ., ಪಿಎಚ್‌ಡಿ. ಪಡೆದವರು ಐ.ಎಸ್‌.ಆರ್‌.ಒ., ಡಿ.ಆರ್‌.ಡಿ.ಒ., ಸಿ.ಎಸ್‌ .ಐ.ಆರ್‌.ನಂಥ ಸಂಶೋಧನಾ ಸಂಸ್ಥೆಗಳಲ್ಲಿ ವಿಜ್ಞಾನಿಗಳಾಗಿ ಕೆಲಸ ಮಾಡಬಹುದು. ಹಾಗೆಯೇ ಪಿ.ಯು. ವಿಜ್ಞಾನ ಕಲಿಕೆಯ ನಂತರ ಐ.ಐ.ಟಿ., ಎನ್‌.ಐ.ಟಿ. ಸೇರಿದಂತೆ ಉತ್ತಮ ಗುಣಮಟ್ಟದ ಎಂಜಿನಿಯರಿಂಗ್‌ ಕಾಲೇಜುಗಳಿಂದ ಯಾವುದೇ ಕೋಸ್‌ಗಳಲ್ಲಿ ಪದವಿ ಪಡೆದವರು ಸಹಾ ಇದೇ ಸಂಸ್ಥೆಗಳಲ್ಲಿ ಹಾಗೂ ಹೆಚ್‌.ಎ.ಎಲ್. ಸೇರಿದಂತೆ ವಿಮಾನ ಉದ್ದಿಮೆಗಳಲ್ಲಿ ಸಂಶೋಧಕರಾಗಬಹುದು, ಬಿಡಿಭಾಗಗಳ ನಿರ್ಮಾತೃಗಳಾಗಬಹುದು, ಜಟಿಲ ವ್ಯವಸ್ಥೆಗಳ ಪರೀಕ್ಷಕರಾಗಬಹುದು.

ಪರಿಶ್ರಮಕ್ಕೆ ಪರ್ಯಾಯವಿಲ್ಲ  : ಗಗನಕ್ಕೇರಬಲ್ಲ ಯಾವುದೇ ವಸ್ತುವಿನ ತೂಕ ಕಡಿಮೆಯಿರಬೇಕು. ಅದು ಸುದೀರ್ಘ‌ ಕಾಲ ಬಾಳಿಕೆ ಬರಬೇಕು. ಅದನ್ನು ಸುಲಭವಾಗಿ ತಯಾರಿಸುವಂತಿರಬೇಕು. ಎಲ್ಲಕ್ಕಿಂತ ಮಿಗಿಲಾಗಿ ಅದರ ಬೆಲೆ ಅಗ್ಗವಿರಬೇಕು. ಇಂಥದೊಂದು ವೈರುಧ್ಯಗಳ ಸಂಗಮದಲ್ಲಿ ಈಜಬೇಕೆಂದರೆ, ಇಲ್ಲಿ ದುಡಿಯುವ ಕೆಲಸಗಾರರು ಅತ್ಯಂತ ಚುರುಕುಮತಿಯವರಾಗಿರಬೇಕು. ಹಾಗೆಯೇ ವಿಮಾನ, ಬಾಹ್ಯಾಕಾಶ ನೌಕೆಗಳನ್ನು ಚಲಾಯಿಸಬಲ್ಲವರು ಕ್ಷಣಾರ್ಧದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಚಾಣಾಕ್ಷರಾಗಿ ರಬೇಕು. ಹಾಗೆಂದ ಮಾತ್ರಕ್ಕೆ ಈ ಕ್ಷೇತ್ರಗಳಲ್ಲಿ ದುಡಿಯುವವರು ಶ್ರೀಮಂತ ಕುಟುಂಬದವ ರಾಗಿರಬೇಕು. ಓದಿಗೆಂದೇ ಅಪಾರ ಪ್ರಮಾಣದಲ್ಲಿ ಹಣ ಸುರಿಯಬೇಕೆಂದು ತಿಳಿಯಬೇಕಿಲ್ಲ. ಶಾಲಾದಿನಗಳಲ್ಲಿ ಸೈಕಲ್‌ ಮೇಲೆ ಪತ್ರಿಕೆಗಳನ್ನು ಹಂಚುತ್ತಿದ್ದ ಅಬ್ದುಲ್‌ ಕಲಾಮ್‌ ಓರ್ವ ಶ್ರೇಷ್ಠ ಎಂಜಿನಿಯರ್‌ ಆಗಿದ್ದು ಕಠಿಣ ಪರಿಶ್ರಮದಿಂದ. ಹಾಗೆಯೇ ಪುಟಾಣಿ ಹೋಟೆಲ್‌ ನಡೆಸುತ್ತಿದ್ದ ಬಡ ಕುಟುಂಬದಲ್ಲಿ ಜನಿಸಿದ ಯು. ಆರ್‌.ರಾವ್‌ ಅವರೂ ಸಹಾ ಶ್ರಮ ಹಾಗು ಬುದ್ಧಿಮತ್ತೆಯಿಂದ ಉಪಗ್ರಹ ಪಿತಾಮಹ ಪಟ್ಟವನ್ನೇರಿ ದವರು. ಟೆಸ್ಸಿ ಥಾಮಸ್‌, ಪ್ರಹ್ಲಾದ, ವಾಸುದೇವ ಆತ್ರೆ, ಹರಿ ನಾರಾಯಣರಂಥವರು ನಮ್ಮೆಲ್ಲರಂತೆ ಸಾಮಾನ್ಯ ಕುಟುಂಬ ವರ್ಗದಿಂದ ಬಂದವರು. ಆದರೆ, ಪರಿಶ್ರಮಕ್ಕೆ ಪರ್ಯಾಯ ಮತ್ತೂಂದಿಲ್ಲ ಎಂದು ಬಲವಾಗಿ ನಂಬಿದವರು.

ಅಸಾಮಾನ್ಯ ಸಾಧಕರು :

ಜೀವನದಲ್ಲಿ ಎಲ್ಲರಿಗೂ ಟರ್ನಿಂಗ್‌ ಪಾಯಿಂಟ್‌ ಎನ್ನುವುದು ಇರುತ್ತದೆ. ಆ ಎಲ್ಲ ತಿರುವುಗಳೂ ಒಮ್ಮೆಲೆ ಯಶಸ್ಸನ್ನು ತಂದುಕೊಡು ವುದಿಲ್ಲ. ಕಲಾಮ್‌ ಅವರು ವಿಮಾನ ಪೈಲಟ್‌ ಆಗಬೇಕೆಂದು ಆಶಿಸಿದ್ದರು. ಆಯ್ಕೆಯಾಗದ ನಿರಾಶೆಯಿಂದ ಕೆಲಕಾಲ ಕೆಲಸದಿಂದ ವಿಮುಖರಾಗಿದ್ದರು. ಡಿ.ಆರ್‌.ಡಿ.ಒ.ಗೆ ಎಂಜಿನಿಯರ್‌ ಆಗಿ ಆಯ್ಕೆಯಾಗಿ, ಬೆಂಗಳೂರಿಗೆ ಬಂದು ನಮ್ಮ ಹೈಗ್ರೌಂಡ್ ಆವರಣದಲ್ಲಿದ್ದ ಎ.ಡಿ.ಇ. ಪ್ರಯೋಗಶಾಲೆಯಲ್ಲಿ ಕೆಳಮಟ್ಟದಲ್ಲಿ ಹಾರಾಟ ನಡೆಸುವ ನಂದಿ ಎಂಬ ಹೋವರ್‌ ಕ್ರಾಫ್ಟ್ ನಿರ್ಮಿಸಿದರು. ಅಂದಿನ ರಕ್ಷಣಾ ಸಚಿವ ವಿ.ಕೆ.ಕೃಷ್ಣಮೆನನ್‌ ಅವರ ಕಣ್ಣಿಗೆ ಬಿದ್ದರು. ಭಾರತದಲ್ಲಿ ಬಾಹ್ಯಾಕಾಶ ಯೋಜನೆಗಳಿಗೆ ಅಡಿಪಾಯ ಹಾಕುತ್ತಿದ್ದ ಹೋಮಿ ಜಹಾಂಗೀರ್‌ ಭಾಭಾ-ವಿಕ್ರಮ್‌ ಸಾರಾಭಾಯ್‌ ಜೋಡಿಯ ಗಮನಕ್ಕೆ ತಂದರು.

ಮುಂದಿನದು ಇತಿಹಾಸ. ಕೇರಳದ ಕಡಲತೀರ ತುಂಬಾ ಎಂಬ ಬೆಸ್ತರ ಹಳ್ಳಿಯಲ್ಲಿ ಕಲಾಮ್‌ ರಾಕೆಟ್‌ಗಳನ್ನು ನಿರ್ಮಿಸಿ ಹಾರಿಸಿದರು. ಇಸ್ರೋದ ಯಶಸ್ಸನ್ನು ಡಿ.ಆರ್‌.ಡಿ.ಒ.ಗೆ ಧಾರೆಯೆರೆದು ಉತ್ತಮ ಕ್ಷಿಪಣಿಗಳನ್ನು ನಿರ್ಮಿಸಿದರು. ಅವರು ಸಾಂಪ್ರದಾಯಿಕವಾಗಿ ಕಲಿತದ್ದು ಕೇವಲ ಬಿ.ಎಸ್‌.ಸಿ. ಪದವಿ ಹಾಗೂ ಏರೋನಾಟಿಕಲ್‌ ಎಂಜಿನೀರಿಂಗ್‌ನಲ್ಲಿ ಡಿಪ್ಲೊಮಾ ಅಷ್ಟೆ. ತೇಜಸ್‌ ವಿಮಾನ ನಿರ್ಮಿಸಿದ ಕೋಟಾ ಹರಿನಾರಾಯಣ ಅವರಿಗೆ ಯಾವುದೇ ವಿದೇಶಿ ಡಿಗ್ರಿಗಳಿಲ್ಲ. ಬಿ.ಎಸ್‌ .ಸಿ., ಬಿ.ಇ., ಎಂ.ಇ., ಪಿ.ಎಚ್‌ಡಿ.ಗಳೆಲ್ಲವನ್ನೂ ಭಾರತದ ವಿದ್ಯಾಸಂಸ್ಥೆಗ ಳಿಂದಲೇ ಪಡೆದವರವರು. ತಂದೆಯಂತೆಯೇ ಭೌತವಿಜ್ಞಾನದಲ್ಲಿ ಎಂ.ಎಸ್‌.ಸಿ. ಕಲಿಯ ಬೇಕೆಂದಿದ್ದ ರೊದ್ದಂ ನರಸಿಂಹ ಕುಟುಂಬದವರ ಪ್ರೇರಣೆಯಿಂದ ಮೆಕ್ಯಾನಿಕಲ್‌ ಎಂಜಿನಿಯರ್‌ ಆದರು. ವಿಮಾನ ಹಾಗೂ ಬಾಹ್ಯಾಕಾಶ ಕ್ಷೇತ್ರ ವಿಶಾಲವಾದದ್ದು, ಇದರಲ್ಲಿ ವಿವಿಧ ವಿಷಯಗಳ ಪರಿಣತರು ಒಗ್ಗೂಡಿ ಕೆಲಸ ಮಾಡುತ್ತಾರೆ. ಇಲ್ಲಿ ಕೆಲಸ ಮಾಡುವವರಿಗೆ ಉನ್ನತ ತಂತ್ರಜ್ಞಾನದ ಪರಿಚಯ ಉಳಿದೆಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗಿಂತಲೂ ಮೊದಲು ಆಗುತ್ತದೆ.

ಎಲ್ಲೆಲ್ಲಿದೆ ಅವಕಾಶ? :

ಸದ್ಯಕ್ಕೆ ಭಾರತದಲ್ಲಿ ಸರ್ಕಾರಿ ಸಂಸ್ಥೆಗಳಾದ ಐ.ಎಸ್‌.ಆರ್‌.ಒ., ಡಿ.ಆರ್‌.ಡಿ.ಒ., ಸಿ. ಎಸ್‌.ಐ.ಆರ್‌. (ಎನ್‌.ಎ.ಎಲ್.), ಎಚ್‌ .ಎ.ಎಲ್ ನಂಥ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯ ನೇಮಕಗಳಾಗುತ್ತಿವೆ. ಇದರ ಜತೆಗೆ ವಿದೇಶಿ ವಿಮಾನ ಕಂಪನಿಗಳಿಗೆ ಎಂಜಿನಿಯರಿಂಗ್‌ ಸರ್ವೀಸ್‌ ನೀಡುವ ಟಿ.ಸಿ.ಎಸ್‌., ಇನ್ಫೋಸಿಸ್‌, ವಿಪ್ರೊ ಎಚ್‌ .ಸಿ.ಎಲ್., ಎಲ್ ಅಂಡ್‌. ಟಿ., ಕ್ವೆಸ್ಟ್ ಗ್ಲೋಬಲ್‌ ಕಂಪನಿಗಳೂ ಎಂಜಿನಿಯರ್‌ ಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಬೆಳಗಾವಿಯ ಏಕಸ್‌ ಕಂಪನಿ ವಿಮಾನ ಎಂಜಿನ್‌ಗಳಿಗೆ ಬಿಡಿಭಾಗಗಳನ್ನು ತಯಾರಿಸಿಕೊಡುತ್ತಿದ್ದರೆ, ದೇವನಹಳ್ಳಿ ಸಮೀಪ ದಲ್ಲಿರುವ ವಿಪ್ರೋ ಕಂಪನಿಯ ವಿಭಾಗವೊಂದು ವಿಮಾನಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿ ಕೊಡುತ್ತದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೂಗ್‌ ಕಂಪನಿಯು ನಿಯಂತ್ರಣ ವ್ಯವಸ್ಥೆಗಳ ನಿರ್ಮಾಣದಲ್ಲಿ ಪರಿಣತವಾಗಿದೆ. ಏರ್‌ ಬಸ್‌, ಹನಿವೆಲ್‌ನಂಥ ಅಂತಾರಾಷ್ಟ್ರೀಯ ವೈಮಾಂತರಿಕ್ಷ ಕಂಪನಿಗಳು ತಮ್ಮ ವಿನ್ಯಾಸ ಕೇಂದ್ರಗಳನ್ನು ಬೆಂಗಳೂರಿನಲ್ಲಿ ತೆರೆದಿವೆ.

 

– ಹಾಲ್ದೋಡ್ಡೇರಿ ಸುಧೀಂದ್ರ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.