ಕ್ಲಾಸಿಕ್‌ ಫೋಟೋ ತೆಗೆಯುವುದು ಹೇಗೆ?


Team Udayavani, Jan 7, 2020, 5:48 AM IST

hr

ಈಗೇನು, ಕೈಯಲ್ಲಿ ಮೊಬೈಲ್‌ ಇದ್ದರೆ ಸಾಕು; ಕ್ಯಾಮರ ಕಿಸೆಯಲ್ಲಿ ಇದ್ದಂತೆ. ಕ್ಯಾಮರಾ ಇದೆ ಅಂತ ತೆಗೆದದ್ದೆಲ್ಲಾ ಚಿತ್ರವಾಗೋಲ್ಲ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಕ್ಯಾಮರಾ ಹಿಂದಿನ ಯೋಚನೆಯಷ್ಟೇ ಎಲ್ಲದರ ಮೆರುಗು ಹೆಚ್ಚಿಸುವುದು. ಹೀಗಾಗಿ, ಫೋಟೋಗ್ರಫಿ ಮಾಡೋದು ಹೇಗೆ, ಅದರ ತಂತ್ರಗಳೇನು ಎನ್ನುವುದರ ಬಗ್ಗೆ ಹಿರಿಯ ಛಾಯಾಚಿತ್ರಗ್ರಾಹಕರಾದ ರಾಜಾರಾಮ್‌ ಅಂಕಣದ ಮೂಲಕ ಹೇಳಿ ಕೊಡುತ್ತಿದ್ದಾರೆ.

ಅಬ್ಟಾ ! ಎಷ್ಟು ಚೆನ್ನಾಗಿ ಫೋಟೋಗಳು. ಇದನ್ನ ಯಾರು ತೆಗೆದ್ರಪ್ಪ ?
ಈ ಫೋಟೋಗಳನ್ನು ನೋಡಿದ ಕೂಡಲೇ ನಿಮ್ಮ ಬಾಯಲ್ಲೂ ಇಂಥದೇ ಉದ್ಗಾರ ಬರಬಹುದು. ಕ್ಯಾಮರಾ ಹಿಡಿದು ಧ್ಯಾನಕ್ಕೆ ಕೂತಿದ್ದರ ಪ್ರತಿಫ‌ಲ ಇದು. ಇಂದಿನ ಯುವಕರಿಗೆ ಫೋಟೋಗ್ರಫಿ ಅಂದರೆ ಪ್ಯಾಷನ್‌. ಕ್ಯಾಮರಾ ಹಿಡಿದು ಊರು, ಕೇರಿ, ಕಾಡುಗಳನ್ನೆಲ್ಲಾ ಅಲೆದಾಡುತ್ತಾರೆ. ಆದರೆ, ಧ್ಯಾನ ಮಾಡುವ ವ್ಯವಧಾನ ಮಾತ್ರ ಸ್ವಲ್ಪ ಕಡಿಮೆಯೇ. ಇಲ್ಲಿ ಧ್ಯಾನಕ್ಕೆ ಕೂರುವುದು ಅಂದರೆ, ತಲ್ಲೀನರಾಗುವುದು ಅಂತ; ಇಹವನ್ನು ಬಿಟ್ಟು ಪರಕ್ಕೆ ಹೋಗುವುದಲ್ಲ. ತಲ್ಲೀನತೆಯೇ ಫೋಟೋಗ್ರಾಫ‌ರ್‌ನ ಬೆಸ್ಟ್‌ ಫ್ರೆಂಡ್‌. ಅದರ ಮೈದಡವಿ, ಗೆಳೆತನ ಸಂಪಾದಿಸಿದರೆ, ನೀವು ಕೂಡ ಇಂಥ ಫೋಟೋಗಳನ್ನೆಲ್ಲಾ ತೆಗೆಯಬಹುದು. ಲಕ್ಷಾಂತರ ರೂ. ಕೊಟ್ಟು ಕೊಂಡ ಮಜಬೂತಾದ ಕ್ಯಾಮರ ಇದೆ ಅಂತ, ಕ್ಲಿಕ್ಕಿಸಿದ್ದೆಲ್ಲಾ ಇಂಥ ಫೋಟೋಗಳಾಗೋಲ್ಲ. ಅದೇ ಬೆಳಕು, ಅದೇ ನೆರಳು, ಅದೇ ವ್ಯಕ್ತಿ ನಮ್ಮ ಕಣ್ಣ ಮುಂದೆ ಬಂದರೂ ಈ ರೀತಿ ಚಿತ್ರ ಬರಲೊಲ್ಲದು. ಮನದ ಕಲ್ಪನೆಯನ್ನು ಮೆದುಳಿಗೆ ತಂದು ಕೊಂಡಾಗಲೇ ಚಿತ್ರ ಮೂಡುವುದು. ಇದಕ್ಕೆ ಸಾಕಷ್ಟು ಕಸರತ್ತು ನಡೆಯಬೇಕು. ಹೀಗಾಗಿ, ಇಲ್ಲಿರುವ ಒಂದೊಂದು ಚಿತ್ರಗಳು ಹೇಗಿವೆ, ಹೇಗೆ ತೆಗೆದಿದ್ದೇನೆ, ನೆರಳು-ಬೆಳಕನ್ನು ಹೇಗೆ ದುಡಿಸಿಕೊಂಡಿದ್ದೇನೆ ಅನ್ನೋದನ್ನು ವಿವರಿಸುತ್ತೇನೆ. ಮುಂದಿನವಾರದಿಂದ, ಕ್ಯಾಮರಾ ಹಿಡಿಯುವವರಿಗೆ ತಿಳಿದಿರಬೇಕಾದ ಅತ್ಯುಪಯುಕ್ತ ವಿಷಯಗಳ ಬಗ್ಗೆ ಹೇಳುತ್ತೇನೆ.

ಚಿತ್ರ 1
ಡಿಸೆಂಬರ್‌ನ ಒಂದು ಮುಂಜಾನೆ. ಉತ್ತರ ಕನ್ನಡದ ಶಿರಸಿಯ ದೇವಿಮನೆ ಘಾಟಿ ಏರುತ್ತಿದ್ದಂತೆ ಎದುರಿಗೆ ಸೂರ್ಯನ ಪರಿಶುಭ್ರ ರಶ್ಮಿಗಳು ಬಿಚ್ಚಿಕೊಂಡವು. ನಿಧಾ® ಮುಸುಕಿದ್ದ ಮುಂಜಾನೆ ಕರಗುತ್ತಾ, ಬೃಹತ್‌ ವೃಕ್ಷಗಳ ಟಿಸಿಲುಗಳ ಮಧ್ಯದಿಂದ ಬಿಸಿಲು, ಕೋಲುಗಳಾಗಿ ನುಸುಳುತ್ತಾ ಭೂಸ್ಪರ್ಷಮಾಡುತ್ತಿದ್ದುದ್ದನ್ನು ನೋಡುವುದೇ ಅನನ್ಯ ಅನುಭವ. ನೋಡ ನೋಡುತ್ತಿದ್ದಂತೆ, ಅಲ್ಲೊಬ್ಬ ಹಳ್ಳಿಯವ ಬಂದವನೇ ಹಾಗೇ ಮುಂದೆ ಸಾಗುತ್ತಿದ್ದ. ಇದು ಇಡೀ ಪರಿಸರಕ್ಕೇ ಜೀವತುಂಬುವಂತೆ ಕಾಣಿಸಿತು. ವಾಹನವನ್ನು ಬದಿಗಿರಿಸಿ ಕ್ಯಾಮರಾ ಸಜ್ಜುಪಡಿಸಿ ನಾನೂ ನಿಧಾನವಾಗಿ ಆತನನ್ನು ಹಿಂಬಾಲಿಸಿದೆ. ಚಿತ್ರ-ಚೌಕಟ್ಟಿಗೆ ಸರಿ ಹೊಂದುವಂತೆ, ಎದುರು ಬದಿಯಿಂದ ನುಸುಳಿ ಬೀಳುತ್ತಿದ್ದ ಬಿಸಿಲು ಕೋಲುಗಳು ಆತನ ಹೆಜ್ಜೆಗಳನ್ನು ಸವರಲು ಮುಂದೆ ಬಂತು. ಬಿಡಲಿಲ್ಲ, ಆ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿಟ್ಟೆ.

ಆತನ ಎದುರು ಓರೆಯಾಗಿ ಸಾಗುತ್ತಿದ್ದ ರಸ್ತೆಯ ತಿರುವನ್ನೂ ಬಳಸಿಕೊಂಡಿದ್ದರಿಂದ ಚಿತ್ರ ಸಂಯೋಜನೆಯ ಮೆರುಗು ಮಗದಷ್ಟು ಹೆಚ್ಚಾಯಿತು. ಬೆಳಕು- ನೆರಳಿನ ಮೋಡಿ ಇಡೀ ಚಿತ್ರಕ್ಕೆ ಚೈತನ್ಯವನ್ನು ಚಿಮ್ಮಿಸಿತು. ಒಂದೊಮ್ಮೆ, ಆ ಸ್ಥಳಕ್ಕೆ ಸ್ವಲ್ಪ ಹೊತ್ತು ತಡವಾಗಿ ಬಂದಿದ್ದರೆ, ಆ ಬೆಳಕಿನಾಟದಿಂದ ಮೂಡಿದ್ದ ಸೌಂದರ್ಯಾನುಭೂತಿ ದಕ್ಕುತ್ತಿರಲಿಲ್ಲ. ಅಂದರೆ, ಸಮಯ, ಪ್ರಕೃತಿಯ ವೈಚಿತ್ರ, ನಮ್ಮ ಯೋಚನೆ ಈ ಮೂರರ ಸಂಯೋಜನೆ ಇದರಲ್ಲಿದೆ.

ಬಳಕೆ: 1/ 800 ಸೆಕೆಂಡ್‌ ಕವಾಟ ವೇಗದ ಪ್ರಯಾರಿಟಿ , 86 ಎಂ.ಎಂ. ಫೋಕಲ್‌ ಲೆಂಗ್‌¤ನ ಜೂಂ ಲೆನ್ಸ್‌, ಅಪಚರ್‌ì ಎಫೈ4 ಮತ್ತು ಐ.ಎಸ್‌.ಒ 400 ಅಳವಡಿಸಲಾಗಿದೆ.

ಚಿತ್ರ 2
ಈ ಜೇಡನ ಚಿತ್ರ ನೋಡಿದ್ರಾ? ಒಂದು ಮುಂಜಾನೆ, ಬೆಂಗಳೂರಿನ ಜೆ.ಪಿ.ನಗರ ಅರಣ್ಯ ಸಂಶೋಧನಾಲಯದ ಸಂರಕ್ಷಿತ ಕಾಡು ಪ್ರದೇಶದಲ್ಲಿ “ಸೆರೆ’ ಹಿಡಿದ ಸೂಕ್ಷ್ಮಜೀವಿ ಇದು. ಇಂಥ ಜೀವಿಗಳನ್ನು ಹಿಡಿದಿಡುವುದಕ್ಕೆ ಮ್ಯಾಕ್ರೋ ಛಾಯಾಗ್ರಹಣ ಅಂತಾರೆ. ಬೆಳಕು ಹರಿಯುವ ಮೊದಲೇ ಅಲ್ಲೆಲ್ಲಾ ಸುತ್ತಾಡಿ, ಜೇಡ, ಚಿಟ್ಟೆ, ಪತಂಗ, ಕಣಜ, ಮೊಟ್ಟೆ- ಮರಿ ಇತ್ಯಾದಿ ಜೀವಿಗಳನ್ನು ಗುರುತಿಸಿಟ್ಟು ಕೊಳ್ಳಬೇಕು. ಕ್ಯಾಮರಾ ಹಿಡಿದಿದ್ದೇನೆ ಅಂತ ಎಲ್ಲವೂ ನಮ್ಮ ಮುಂದೆ ಬರೋಲ್ಲ. ನೆಂಟರಂತೆ ಹೋಗುವ ನಾವು, ಅವುಗಳ ಬದುಕಿನ ಬಗ್ಗೆ ಸ್ವಲ್ಪ ತಿಳಿದುಕೊಂಡಿರಬೇಕು. ಅನುಭವಿಗಳ ಮಾರ್ಗದರ್ಶನ ಇಲ್ಲಿ ಮುಖ್ಯ. ಮುಂಜಾನೆಯ ಸೂರ್ಯನ ಬೆಳಕು ಮೇಲೇರುತ್ತಿದ್ದಂತೆ, ಈ ಜೀವಿಗಳ ಕ್ರಿಯೆಗಳಿಗೆ ಚಾಲನೆ ದೊರೆಯುತ್ತದೆ. ಅಂತೆಯೇ, ಅವುಗಳ ಜೀವನ ಕ್ರಮಕ್ಕೆ ಧಕ್ಕೆ ಬಾರದಂತೆ ಕ್ಯಾಮರಾದಲ್ಲಿ ಸೆರೆಹಿಡಿಯುವಲ್ಲಿ ಛಾಯಾಗ್ರಾಹಕರ ಕ್ಯಾಮೆರಾ- ಫ್ಲಾಶ್‌ ಉಪಕರಣಗಳು, ಚಾಕಚಕ್ಯತೆ, ವೇಗ ಮತ್ತು ನೈಪುಣ್ಯತೆಗೆ ಸವಾಲೆಸೆಯುವುದಂತೂ ಸತ್ಯ!

ಈ ಜೇಡ ಕೆಂಪು ಬಣ್ಣದ ಎಲೆಯೊಂದರ ಮೇಲೆ ನಿಧಾನ ಗತಿಯಲ್ಲಿ ನಡೆದಾಡುವಾಗ ಛಕ್ಕನೆ ನಿಂತಿತು, ಏನಪ್ಪ ಮಾಡ್ತಿದೆ ಅಂತ ನೋಡಿದರೆ, ಒಂದರ್ಧ ಸೆಕೆಂಡ್‌ನ‌ಲ್ಲಿ ತ್ಯಾಜ್ಯ ವಿಸರ್ಜನೆ ಮಾಡುತ್ತಿದೆ. ಗೋಲಾಕಾರದ ಆ ತ್ಯಾಜ್ಯ ಕೂಡಲೇ ಕಳಚಿ ನೆಲಕ್ಕೆ ಬಿದ್ದಾಯ್ತು! ಆ ಕ್ಷಣ ನನ್ನ ಕ್ಯಾಮರ ಸುಮ್ಮನಿರಲಿಲ್ಲ. ತಟಕ್ಕಂತೆ ಪ್ರೊಫೆಷನ್‌ ಮುಂದುವರಿಸಿತು. ಆ ಕಡೆ ಗಮನ ಕೊಟ್ಟು, ಈ ಕಡೆ ತಟಸ್ತವಾಗಿಬಿಟ್ಟಿದ್ದರೆ, ಈ ವಿಶೇಷ ಚಿತ್ರಣ ಮೂಡುತ್ತಿರಲಿಲ್ಲ. ಈ ಚಿತ್ರವನ್ನು ಹಿಂಬದಿಯ ಫ್ಲಾಶ್‌ ಬಳಸುವ ಮೂಲಕ (backlighting ) ಎಲೆಯ ಬಣ್ಣವನ್ನು ವೃದ್ಧಿಗೊಳಿಸಿ, ಸೂರ್ಯನ ಸಹಜ ಬೆಳಕಲ್ಲಿ ಜೇಡವನ್ನು ಸೆರೆಹಿಡಿಯಲಾಗಿದೆ.

ಬಳಕೆ: 105 ಎಂ.ಎಂ. ಮ್ಯಾಕ್ರೋ ಲೆನ್ಸ್‌ ಜೋಡಿಸಿ, ಅಪಾರ್ಚರ್‌-28, ಕವಾಟವೇಗ 1/160 ಸೆಕೆಂಡ್‌, ಐ.ಎಸ್‌.ಒ. 400 ಜೊತೆಗೆ, ಕ್ಲಿಕ್ಕಿಸಿದಾಗ ಫ್ಲಾಶ್‌ ಬೆಳಗಲು ರಿಮೋಟ್‌ ಟ್ರಿಗರ್‌ ಬಳಸಲಾಗಿದೆ.

ಚಿತ್ರ 3
ಇದೊಂದು ಟೇಬಲ್‌-ಟಾಪ್‌ ಮಾದರಿಯ ಛಾಯಾಚಿತ್ರ. ಪರಿಣಿತ ವಿನೋದ್‌ ಸುಂದರ್‌ ಜೊತೆ ಬೆಂಗಳೂರಿನ ಮನೆಯಲ್ಲೇ ಸ್ಟುಡಿಯೋ ಮಾಡಿಕೊಂಡು ಸೆರೆಹಿಡಿದ ಜಡವಸ್ತು (Still Life) ಚಿತ್ರಣ. ಇದರಲ್ಲಿ ಹಿಂಬದಿಯ ರಿಮೋಟ್‌ ಫ್ಲಾಶ್‌ ಲೈಟ್‌ ಮಾತ್ರ ಬೆಳಕಿನ ಮೂಲ. ಆ ಬೆಳಕಿನ ವ್ಯವಸ್ಥೆಯೇ ಬಹಳ ವಿಶೇಷ. ಟೇಬಲ್‌ ಮೇಲೆ 4 – 5 ಎಂ.ಎಂ. ದಪ್ಪದ 2 ಟ x 4 ಅಡಿ ಅಳತೆಯ ಕಪ್ಪು ಬಣ್ಣದ ಅಕ್ರಲಿಕ್‌ ಶೀಟ್‌ ಇಡುವುದು. ಅದರ ಹಿಂಬದಿಯಲ್ಲಿ 1 ಅಡಿ ದೂರಕ್ಕೆ ಹಿನ್ನೆಲೆಗಾಗಿ 3 x 5 ಅಡಿ ಪರದೆಯೊಂದನ್ನು ಗಟ್ಟಿಯಾಗಿ ಇಳಿ ಬಿಡುವುದು. ಆ ಹಿನ್ನೆಲೆಗೆ ಕೆಂಪು – ನೀಲಿ ಬಣ್ಣದ ಡ್ರಾಯಿಂಗ್‌ ಶೀಟ್‌ಗಳನ್ನು ಒಂದಕ್ಕೊಂದು ಅಂಟಿಸಿ, ಕ್ಲಿಪ್ಸ್‌ನಲ್ಲಿ ಜೋಡಿಸುವುದು. ರಿಮೋಟ್‌ ರಿಸೀವರ್‌ ಅಳವಡಿಸಿದ ಉತ್ತಮವಾದ ಎಲೆಕ್ಟ್ರಾನಿಕ್‌ ಪ್ಲಾಶ್‌ ಅನ್ನು ಅದರ ಬೆಳಕಿನ ಮುಖವನ್ನು ತಿರುಗಿಸಿ ಟೇಬಲ್‌ ಅಂಚಿನಿಂದ 6 ಇಂಚು ಕೆಳಗಿನಿಂದ ಹಿನ್ನೆಲೆಯ ಬಣ್ಣದ ಶೀಟ್‌ಗಳೆಡೆ ಇಡುವುದು. ಸುಂದರ ಬಳುಕಿನ ವೈನ್‌ ಗ್ಲಾಸ್‌ಗಳನ್ನು ನೀರು ತುಂಬಿ ಅಕ್ರಲಿಕ್‌ ಶೀಟ್‌ ಮೇಲೆ ಜೋಡಿಸುವುದು. ನಂತರ ಎದುರಿನಿಂದ ಉತ್ತಮವಾದ ಪಸ್ಪೆìಕ್ಟಿವ್‌ ನಲ್ಲಿ ಸಂಯೋಜಿಸಿ ಕ್ಯಾಮರಾಕ್ಕೆ ರಿಮೋಟ್‌ ಟ್ರಿಗರ್‌ ಅಳವಡಿಸಿ ಕ್ಲಿಕ್ಕಿಸಿದರೇ ಇಂಥದೇ ಅದ್ಬುತ ಚಿತ್ರ ನಿಮ್ಮ ಕೈಸೇರುತ್ತದೆ. ಈ ಛಾಯಾಗ್ರಹಣದ ಬೆಳಕು ಫ್ಲಾಶ್‌ ಲೈಟ್‌ ಆಗಿರುವುದರಿಂದ ರೂಮಿನ ಸಹಜವಾದ ಇತರೆ ಬೆಳಕು ಛಾಯಾಗ್ರಹಣಕ್ಕೆ ಅಡ್ಡಿ ಬರುವುದಿಲ್ಲ! ಬಳಕೆ: 60 ಎಂ.ಎಂ. ಫೋಕಲ್‌ ಲೆಂಗ್‌¤ನಲ್ಲಿ, ಅಪಾಚರ್‌ì -16, ಐ.ಎಸ್‌.ಒ. 100, ಕವಾಟ ವೇಗ 1/160 ಸೆಕೆಂಡ್‌, ವೈಟ್‌ ಬ್ಯಾಲೆನ್ಸ್‌ ಫ್ಲಾಶ್‌ ಮೋಡ್‌.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.