ಅಪ್ಪಾ ಹುಡುಗ್ರಾ, ನಾ ಹೇಳ್ಳೋದ್ ಸ್ವಲ್ಪ ಕೇಳಿಸ್ಕೊಳ್ಳಿ…
Team Udayavani, Mar 7, 2017, 3:45 AM IST
“ಈ ಪ್ರೀತಿ ಅನ್ನೋದೊಂದು ಹುಚ್ಚು ರೀ..! ಈ ಪ್ರೀತಿ, ಪ್ರೇಮ ಬರೀ ಪುಸ್ತಕದ ಬದನೆಕಾಯಿ’ ಎಂಬ ಉಪ್ಪಿಮಾತು ನೆನಪಾಗಿ ಆ ಕ್ಷಣ ಯೋಚಿಸಿದೆ. ಮನಸ್ಸು ಒಳಗೊಳಗೇ ನನ್ನನ್ನು ಪ್ರಶ್ನಿಸಿತು. ಈ ಪ್ರೀತೀಲಿ ನನಗೆ ಒಂದು ವಿಷಯ ಅರ್ಥ ಆಗ್ತಿಲ್ಲ. ನೀವು ಹುಡುಗ್ರು ಪೂರ್ವಾಗ್ರಹ ಪೀಡಿತರಾಗಿ ಹುಡುಗೀರೇ ಮೋಸ ಮಾಡೋದು ಅಂತ ಯಾಕೆ ಪದೇ ಪದೆ ಸಮರ್ಥನೆ ಮಾಡಿಕೊಳ್ಳುತ್ತೀರಾ..? ಅಲಿÅà, ಮೋಸಗಾರ ತಾನು ಮೋಸ ಮಾಡಿದ್ದೀನಿ ಅಂತ ಒಪ್ಪಿಕೊಳ್ತಾನಾ. ತಮ್ಮ ತಪ್ಪುಗಳನ್ನ ಮರೆ ಮಾಚೋಕೆ ಯಾಕ್ರೀ ಹುಡುಗೀರ್ ಮೇಲೆ ತಪ್ಪು ಹಾಕ್ತೀರಿ? ಹೌದು.. ನೀವು ನಡುರಾತ್ರೀಲಿ ಕೈ ಬಿಟ್ಟು ಹೋಗೋರಲ್ಲ, ಹಗಲಲ್ಲೇ ಹೇಳದೇ ಕೇಳದೆ ಕೈ ಕೊಟ್ಟು ಹೋಗೋರು.
ಪ್ರೀತ್ಸಲ್ಲ ಅಂದ್ರೂ ಪ್ರಾಣ ತಿಂತೀರಿ, ಬೂಟಾಟಿಕೆ ಮಾತಾಡಿ ಬುಟ್ಟಿಗೆ ಹಾಕ್ಕೋತೀರಿ, ಮಾತಲ್ಲೇ ಮನೆ ಕಟ್ಟಿ ಅಂಗೈಲಿ ಆಕಾಶ ತೋರಿಸ್ತೀರಿ, ಹುಡುಗಿ ರಿಜೆಕ್ಟ್ ಮಾಡಿದ ಮೇಲೂ ಅವಳನ್ನ ಅವಳ ಪಾಡಿಗೆ ಇರೋಕೆ ಬಿಡಲ್ಲ ನೀವು, ಅವಳು ನಿಮ್ಮ ಪ್ರೀತಿಗೆ ನೋ… ಅಂದ್ರೇ ಮುಗೀತು…
“ಲೋ ಮಗಾ ಅವಳು ಸರಿ ಇಲ್ಲ’ ಅಂತ ಕತೆ ಕಟಿ¤àರಿ. ಕ್ಯಾಂಟೀನ್, ಪಾರ್ಕ್, ಸಿನಿಮಾಗೆ ಕರೆದುಕೊಂಡು ಹೋಗಬೇಕೆನ್ನುವ… ಆಸೆಗಳು ಬರೋದು ನಿಮ್ಮಂಥ ಮಹಾಭೂಪರಿಗೇ ಹೊರತು, ಹುಡುಗಿಯರಿಗಲ್ಲ.
ಕೈಯಲ್ಲಿ ಒಂದು ರುಪಾಯಿ ಇಲ್ಲದಿದ್ದರೂ ಫ್ರೆಂಡ್ಸ್ ಹತ್ತಿರ ಹೋಗಿ “ಮಗಾ, ನಮ್ಮ ಹುಡುಗಿ ಜೊತೆ ಇವತ್ತು ಸಿನಿಮಾಕ್ಕೆ ಹೋಗಬೇಕು ಅನ್ಕೊಂಡಿದ್ದೀನಿ’ ಅಂತ ಸಾಲ ಮಾಡಿ, ಪ್ರೀತಿಸಿದ ಹುಡುಗಿಗೆ ಸಿನಿಮಾ ತೋರಿಸೋರು ನೀವು. ಬರೀ ಸಿನಿಮಾ ತೋರಿಸೋಕೆ ಬೇರೆಯವರ ಹತ್ತಿರ ಕೈ ಚಾಚೋರ ಜೊತೆ ಯಾವ ಹುಡುಗಿ ತಾನೇ ನಂಬಿಕೆ ಇಟ್ಟು ಬರ್ತಾಳೆ ಹೇಳಿ?
ಒಂದು ವಿಷಯ ತಿಳ್ಕೊಳ್ಳಿ: ಯಾವ ಹುಡುಗೀನೂ ಟೈಮ್ ಪಾಸ್‌ಗೆ ಹುಡುಗನ್ನ ಪ್ರೀತ್ಸಲ್ಲ. ಯಾವ ಹುಡ್ಗಿಗೂ ಒಂದು ಹುಡುಗನ ಜೀವನ ಹಾಳು ಮಾಡಬೇಕು ಅನ್ನೋ ಮನಸ್ಸಿರಲ್ಲ. ಅವಳಿಗೂ ಅವಳದೇ ಆದ ಆಸೆಗಳು, ಭಾವನೆಗಳು ಇರುತ್ತವೆ. ತಾನು ಪ್ರೀತಿಸಿದ ಹುಡುಗನ ಬಿಟ್ಟು ಅಪ್ಪ ಅಮ್ಮ ತೋರಿಸಿದ ಹುಡುಗನ್ನ ಮದುವೆ ಆದ್ರೂ ಪ್ರೀತಿ ಮತ್ತು ಪ್ರೀತಿಯ ಹುಡುಗನನ್ನು ಮಕ್ಕಳು, ಮೊಮ್ಮಕ್ಕಳಾದ್ರೂ ಮರೆಯೋದಿಲ್ಲ. ಹಾಗೆಂದು ಎಲ್ಲಾ ಹುಡುಗ್ರೂ ಮೋಸ ಮಾಡುವವರು ಎಂದು ನಾನು ಹೇಳಲಾರೆ..!
– ಲಲಿತಾ ಎಂ. ಎಂ., ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.